
ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ವತಿಯಿಂದ 15 ನೇ ವರ್ಷದ ಸಾಂಸ್ಕೃತಿಕ ಕಲರವ ರಾರಾಸಂಭ್ರಮ ಡಿ.25 ರಂದು ಗುರುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಮಾಜಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು, ಅತಿಥಿಗಳಾಗಿ ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ಎಚ್. ಪೆರಾಜೆ, ಯುವವಾಹಿನಿ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ, ಜೆಸಿಐ ಮಡಂತ್ಯಾರಿನ ಅಧ್ಯಕ್ಷೆ ಸಾಯಿಸುಮ ಭಾಗವಹಿಸುವರು.

ಸಂಜೆ 4 ಕ್ಕೆ ಸಮಾರೋಪ ನಡೆಯಲಿದ್ದು ಬಂ.ತಾ. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್. ನಾಯಕ್ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಪುರಂದರ ಎ., ಲಯನ್ಸ್ ಪೂರ್ವಾಧ್ಯಕ್ಷ ಜಯಂತ ಶೆಟ್ಟಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ. ರೋಹಿತಾಶ್ವ, ಸಿವಿಲ್ ಗುತ್ತಿಗೆದಾರ ಗಣೇಶ್ ಕಾಮಾಜೆ, ಸುಧೀರ್ ಕುಲಾಲ್, ಜೆಸಿಐ ಬಂಟ್ವಾಳ ದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಭಾಗವಹಿಸುವರು.


ಬಹುಮುಖ ಪ್ರತಿಭೆ ನಿನಾದ್ ಕೈರಂಗಳ ಅವರಿಗೆ ರಾರಾಸಂ ಪುರಸ್ಕಾರ ಹಾಗೂ ಪ್ರವೀಣ್ ಕುಮಾರ್ ದೋಟ ಅವರಿಗೆ ಗೌರವಾಭಿನಂದನೆ ನಡೆಯಲಿದೆ. ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ರಾರಸಂ ಫೌಂಡೇಶನ್ ಅಧ್ಯಕದಷ ರಾಧಕೃಷ್ಣ ಬಂಟ್ವಾಳ ಹಾಗೂ ಕಾರ್ಯಕ್ರಮ ಸಂಯೋಜಕ ಕೇಶವ ಮಾಸ್ಟರ್ ಮಾರ್ನಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement







