Author: admin

ಬಂಟ್ವಾಳ: ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಸಾಮಂತ್ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಅವರ ಶವ ಪತ್ತೆಯಾಗಿದೆ.ವಾಮದಪದವಿನ ಅವರ ಮನೆ ಬಳಿಯ ಗುಡ್ಡದಲ್ಲಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವಿವಿಧ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಪದ್ಮನಾಭ ಸಾಮಂತ್ ಅವರ ಸಾವು ಅನೇಕ ಊಹಪೋಹಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದುಕೊಂಡಿದ್ದರು ಎನ್ನುವ ಆರೋಪದಡಿ ಪದ್ಮನಾಭ ಸಾಮಂತ್ ವಿರುದ್ದ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಟ್ವಾಳದ ಅನೇಕ ಹಗರಣಗಳನ್ನು ಬಯಲಿಗೆಳೆದು ಸಾಮಾಜಿಕ ಜಾಲಾತಾಣದಲ್ಲಿ ಹರಡುತ್ತಿದ್ದರು, ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಅನೇಕ ಮಂದಿ ವಿರೋಧಿಗಳನ್ನೂ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಪದ್ಮನಾಭ ಸಾಮಂತ್ ಅವರು ಆತ್ಮಹತ್ಯೆ ಮಾಡಿಕೊಂಡರೋ? ಅಥವಾ ಇನ್ಯಾವುದೋ ಕಾರಣಕ್ಕೆ ಕೊಲೆ ನಡೆದಿದೆಯೊ? ಎನ್ನುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

Read More

ಬಂಟ್ವಾಳ: ತಾಲೂಕಿನ ಗ್ರಾಮೀಣ ಪ್ರದೇಶವಾದ ಸಜೀಪಮೂಡ ಗ್ರಾಮದಲ್ಲಿ ಸ್ಥಾಪನೆಗೊಂಡ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಕನಿಷ್ಠ ಅವಧಿಯಲ್ಲಿಯೇ ಗರಿಷ್ಠ ಸಾಧನೆಯನ್ನು ಮಾಡಿಕೊಂಡು ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಿಕೊಂಡು ಮುನ್ನಡೆಯುತ್ತಿದೆ. ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮುಂದಾಳತ್ವದಲ್ಲಿ, ಅನುಭವಿ ನಿರ್ದೇಶಕರ ಮಾರ್ಗದರ್ಶನದಲ್ಲಿ, ಕ್ರಿಯಾಶೀಲ ಸಿಬ್ಬಂದಿಗಳ ಸಹಕಾರದೊಂದಿಗೆ ಸಂಘ ಲಾಭದಾಯಕವಾಗಿ ಪ್ರಗತಿಯ ಹೆಜ್ಜೆ ಇಟಿದ್ದು ಸಂಘದ 14ನೇ ಶಾಖೆ ಉದ್ಘಾಟನೆಗೆ ಸಜ್ಜುಗೊಂಡಿದೆ.ಮಾ.31ರಂದು ಭಾನುವಾರ ಬೆಳಿಗ್ಗೆ 9.30ಗಂಟೆಗೆ ಸರಿಯಾಗಿ ಬಂಟ್ವಾಳ ತಾಲೂಕು ಕೇಂದ್ರವಾದ ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಜಿ.ಕೆ. ಸ್ಮಾರ್ಟ್ ಸಿಟಿ ಕಟ್ಟಡದ ಒಂದನೇ ಮಹಡಿಯಲ್ಲಿ ಸಂಘದ ನೂತನ 14ನೇ ಶಾಖೆಯನ್ನು ಆರ್ಯ ಈಡಿಗ ಸಂಸ್ಥಾನ ಸೋಲೂರು ಮಠದ ತೀರ್ಥಾಧಿಪತಿ, ಹೊಸ್ಮಾರು ಬಲ್ಯೊಟ್ಟು ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಬಿ.ಸಿ.ರೋಡಿನ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್…

Read More

ಬಂಟ್ವಾಳ: ಬಿ.ಸಿ.ರೋಡ್ ನ ಅಜ್ಜಿಬೆಟ್ಟುವಿನಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ರಚನೆಯಾಗಿದ್ದು, ಅಧ್ಯಕ್ಷರಾಗಿ ಪಿಡಬ್ಲ್ಯುಡಿ ಗುತ್ತಿಗೆದಾರ ಗಣೇಶ್ ಕಾಮಾಜೆ ಆಯ್ಕೆಯಾಗಿದ್ದಾರೆ. ಶಾಲೆಯಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳ ಸಭೆ ನಡೆದಿದ್ದು, ಗೌರವಾಧ್ಯಕ್ಷರಾಗಿ ಡಾ. ರಮೇಶಾನಂದ ಸೋಮಯಾಜಿ, ಅಧ್ಯಕ್ಷರಾಗಿ ಗಣೇಶ್ ಕಾಮಾಜೆ, ಉಪಾಧ್ಯಕ್ಷರಾಗಿ ಗುರುದತ್ತ ಹೆಗ್ಡೆ, ಕಾರ್ಯದರ್ಶಿಯಾಗಿ ಕಿಶೋರ್ ಕುಲಾಲ್ ಆಯ್ಕೆಗೊಂಡರು. ಒಟ್ಟು 19 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭ ಸಂದೀಪ್ ಸಾಲ್ಯಾನ್, ಸತೀಶ್ ಕುಲಾಲ್ ಮತ್ತು ಕಿಶೋರ್ ಅವರು ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ ಮಾಂಬಾಡಿ, ಸದಸ್ಯರಾದ ದೇವದಾಸ್, ಸಹಶಿಕ್ಷಕರಾದ ತಾಹಿರಾ, ಸುಶೀಲಾ, ಹೇಮಾವತಿ ಉಪಸ್ಥಿತರಿದ್ದರು.

Read More

ಬಂಟ್ವಾಳ: ದಿ.ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ನಿರ್ಮಾಣ ಸಮಿತಿ ಇದರ ವತಿಯಿಂದ ಬೆಂಜನಪದವು ಸಮೀಪದ ಕಲ್ಪನೆಯಲ್ಲಿ ಸೇಸಪ್ಪ ಕೋಟ್ಯಾನ್ ಸ್ಮಾರಕವೃತ್ತದ ಲೋಕಾರ್ಪಣೆ ಹಾಗೂ ಅವರ ಪುತ್ತಳಿ ಅನಾವರಣ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀವಿವೇಕಾ ಚೈತನ್ಯಾನಂದ ಸ್ವಾಮೀಜಿ, ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರುಗಳಾದ ವಂ. ಆಂಟನಿ ಲೋಬೋ, ಉದ್ದೊಟ್ಟು ಮಸೀದಿ ಧರ್ಮಗುರು ಕೆ.ವಿ. ಮಜೀದ್ ಧಾರಿಮಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸೇಸಪ್ಪ ಕೋಟ್ಯಾನ್ ಅವರು ವಿಶೇಷವಾದ ಜೀವನ ನಡೆಸಿದ್ದಾರೆ. ವಿದ್ಯಾಭ್ಯಾಸ ಇಲ್ಲದೆ ಇದ್ದರೂ ಕೂಡ ಉದಾರ ಮನಸ್ಸಿನ ವ್ಯಕ್ತಿತ್ವ ಹಾಗೂದೈವಿಕ ಗುಣ ಅವರಲ್ಲಿತ್ತು, ಯಾವುದೇ ಜಾತಿ ಧರ್ಮದವರು ಕೈ ಚಾಚಿದಾಗ ನೆರವು ನೀಡುವ ಧೀಮಂತ ವ್ಯಕ್ತಿ ಅವರಾಗಿದ್ದರು ಎಂದರು.‌ ಇಲ್ಲಿನ ಪುತ್ತಳಿಗೆ ಅವಮಾನ ಆಗಬಾರದು, ಉತ್ತಮವಾಗಿ ನಿರ್ವಹಣೆ ಹಾಗೂ ರಕ್ಷಣೆ ಮಾಡುವ ಜವಬ್ದಾರಿ ನಮ್ಮೆಲ್ಲರದ್ದಾಗಿದ್ದು ಅದು ನಾವು…

Read More

ಬಂಟ್ವಾಳ: ಕೇಂದ್ರ ಜುಮಾ ಮಸೀದಿ ನಂದಾವರ ಇದರ ನೂತನ ಆಡಳಿತ ಸಮಿತಿ ರಚನೆಯಾಗಿದ್ದು ಅಧ್ಯಕ್ಷರಾಗಿ ಇದಿನಬ್ಬ ನಂದಾವರ, ಉಪಧ್ಯಕ್ಷರಾಗಿ ಡಿ.ಎ. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆರಿಫ್ ನಂದಾವರ, ಜೊತೆ ಕಾರ್ಯದರ್ಶಿಯಾಗಿ ಇಮ್ರಾನ್ ಅಬ್ದುಲ್ ಜಬ್ಬಾರ್, ಮಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ದಾವೂದ್ ಖಾನ್ ನಂದಾವರ ಆಯ್ಕೆಯಾಗಿದ್ದಾರೆ.

Read More

ಬಂಟ್ವಾಳ : ಹೋಟೆಲ್ ರಂಗೋಲಿಯ ಹೊರಾಂಗಣದಲ್ಲಿ ಯಕ್ಷಮಿತ್ರರು ಕೈಕಂಬ ಬಿ. ಸಿ. ರೋಡು ಆಶ್ರಯದಲ್ಲಿ 15 ನೇ ವರ್ಷದ ಯಕ್ಷಗಾನ ಕಾರ್ಯಕ್ರಮ ನಡೆಯಲಿದ್ದು ಹನುಮಗಿರಿ ಮೇಳದವರಿಂದನಮೋ ರಘುವಂಶ ದೀಪಎಂಬ ಪ್ರಸಂಗ ಪ್ರದರ್ಶನಗೊಳ್ಳಲಿದೆ.ಮಾರ್ಚ್ 24 ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಯಕ್ಷಗಾನ ನಡೆಯಲಿದ್ದು.ಸನ್ಮಾನ ಕಾರ್ಯಕ್ರಮ ನೆರವೇರಲಿದೆ.ಕಲಾವಿದಶ್ರೀ ದಿವಾಕರ ರೈ ಸಂಪಾಜೆಅವರನ್ನು ಸನ್ಮಾನಿಸಲಾಗುವುದು. ಶ್ರೀಚಂದ್ರಹಾಸ ರೈ ಬಾಲಾಜಿ ಬೈಲು ಅವರು ಸನ್ಮಾನ ಕಾರ್ಯ ನೆರವೇರಿಸುವರು.ಅಥಿತಿಗಳಾಗಿಡಾ.ಅಜಕ್ಕಲ ಗಿರೀಶ್ ಭಟ್.ಮಾಜಿ ಅಧ್ಯಕ್ಷರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಭಾಗವಹಿಸುವರು ಎಂದು ಯಕ್ಷಮಿತ್ರರು ಕೈಂಕಬ ಪ್ರಕಟಣೆ ತಿಳಿಸಿದೆ

Read More

ಬಂಟ್ವಾಳ: ಬಿಜೆಪಿ ಮಂಗಳೂರು ಮಂಡಲ ವ್ಯಾಪ್ತಿಗೊಳಪಟ್ಟ ಪುದು ಮಹಾಶಕ್ತಿ ಕೇಂದ್ರದ ಚುನಾವಣ ಕಾರ್ಯಲಯದ ಉದ್ಘಾಟನ ಸಮಾರಂಭ ಹಾಗೂ ಕಾರ್ಯಕರ್ತರ ಸಂಪರ್ಕ ಸಭೆ ಶುಕ್ರವಾರ ಸಂಜೆ ಕಡೆಗೋಳಿಯಲ್ಲಿ ನಡೆಯಿತು. ಕಡೆಗೋಳಿಯ ಕಾಂಪ್ಲೆಕ್ಸ್‌ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂತೀಶ್ ಕುಂಪಲ ಅವರು ದೀಪ ಪ್ರಜ್ವಲಿಸಿ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ನಡೆದ ಕಾರ್ಯಕರ್ತರ ಸಂಪರ್ಕ ಸಭೆಯಲ್ಲಿ ಮಾತನಾಡಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಕಾರ್ಯಕರ್ತರ ಉತ್ಸಾಹ ನೋಡಿದಾಗ ಗೆಲುವು ನಿಶ್ಚಿತವಾಗಿದೆ, ಕನಿಷ್ಠ ೪ ಲಕ್ಷ ಮತದ ಅಂತರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿಯ ಕೈ ಬಲಪಡಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಜೇಶ್ ಚೌಟ ಭಾಗವಹಿಸಿ ಮಾತನಾಡಿ ಈ ಬಾರಿಯ ಚುನಾವಣೆ ವಿಶೇಷವಾಗಿದ್ದು ನಿರ್ಣಾಯಕ ಚುನಾವಣೆಯಗಲಿದೆ, ತುಳುನಾಡಿನಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ. ಗಟ್ಟಿಯಾದ ಕೌಟುಂಬಿಕ ವ್ಯವಸ್ಥೆ ಇದ್ದರೆ ಅದು ತುಳುನಾಡಿನಲ್ಲಿ. ತುಳುನಾಡನ್ನು ಪ್ರತಿನಿಧಿಸುವ ಜವಾಬ್ದಾರಿ ನನಗೆ ಸಿಕ್ಕಿದ್ದು,…

Read More

ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಯಕ್ಷಗಾನದತ್ತ ಯುವ ಸಮುದಾಯ ಆಕರ್ಷಿತಗೊಳ್ಳುತ್ತಿದೆ. ಆದರೆ ಇಂತಹ ಶ್ರೇಷ್ಠ ಎಲ್ಲರಿಗೂ ಒಲಿಯವುದಿಲ್ಲ.‌ ನಿರಂತರ ಅಭ್ಯಾಸ, ಅಧ್ಯಯನ ಶೀಲತೆ, ಕಲೆಯ ಮೇಲಿನ ಒಲುಮೆ, ಪ್ರೀತಿ, ಅಭಿಮಾನ ಆ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಮಾಡುತ್ತದೆ. ಬಂಟ್ವಾಳದ ಎಂಜಿನಿಯರ್ ವಿದ್ಯಾರ್ಥಿಯೋರ್ವನಿಗೆ ಯಕ್ಷಗಾನ ಕಲೆ ಒಲಿದಿದೆ. ಬಾಲ್ಯದಿಂದಲೂ ಯಕ್ಷಗಾನ ಮೇಲಿನ ಆಸಕ್ತಿ ಇಂದು ಈ ಕಲಾವಿದನನ್ನು ಯಕ್ಷ ಲೋಕದಲ್ಲಿ ಸಾಧನೆ ಮಾಡುವಂತೆ ಮಾಡಿದೆ. ಯಕ್ಷಗಾನದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಬಾಚಿಕೊಳ್ಳುತ್ತಾ ವಿದ್ಯಾಭ್ಯಾಸದೊಂದಿಗೆ ಯಕ್ಷಗಾನ ಕ್ಷೇತ್ರದಲ್ಲೂ ಪರಿಣತಿಯನ್ನು ಪಡೆದುಕೊಳ್ಳುತ್ತಿದ್ದಾನೆ.‌ ಆತನೇ ಅನ್ವೇಶ್ ಆರ್.ತಾಂತ್ರಿಕ ಪದವಿ (ಇಂಜಿನೀಯರಿಂಗ್) ಶಿಕ್ಷಣದ ಜತೆ ಕಲೋಪಾಸನೆಯಲ್ಲಿ ತೊಡಗಿಸಿಕೊಂಡಿರುವ ಕೆಲವೇ ಮಂದಿ ವಿದ್ಯಾರ್ಥಿಗಳಲ್ಲಿ ಅನ್ವೇಷ್ ಆರ್.ಶೆಟ್ಟಿ ಓರ್ವರು.ಯಕ್ಷಗಾನ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅನ್ವೇಷ್ ವಿದ್ಯಾರ್ಥಿ ಯಕ್ಷ ಸಾಧಕ. . ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ತನ್ನನ್ನು ಗುರುತಿಸಿಕೊಂಡು ಯಶಸ್ಸು ಪಡೆಯುತ್ತಿರುವುದು ಇವರ ಸಾಧನೆಯಾಗಿದೆ. ಮೂಲತ: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಪತ್ರಕರ್ತ, ಕಲಾವಿದ ರತ್ನದೇವ್ ಶೆಟ್ಟಿ ಮತ್ತು ಶಿಕ್ಷಕಿ ಸುಜಾತಾ ದಂಪತಿಯ ಪುತ್ರ ಅನ್ವೇಷ್…

Read More

ಬಂಟ್ವಾಳ: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರು ಬುಧವಾರ ಬಿ.ಸಿ.ರೋಡಿನಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ಮನೆಗೆ ಭೇಟಿ ನೀಡಿ ಅವರ ಕಾಲಿಗೆ ಅಡ್ಡ ಬಿದ್ದು ಆಶೀರ್ವಾದ ಪಡೆದುಕೊಂಡರು.ಕೆಲ ಹೊತ್ತುಗಳ ಕಾಲ ಚರ್ಚೆ ನಡೆಸಿದ ಪದ್ಮರಾಜ್ ಅವರಿಗೆ ಜನಾರ್ದನ ಪೂಜಾರಿಯವರು ಜಾತಿ, ಧರ್ಮ ನೋಡದೆ ಬಡವರ ಸೇವೆ ಮಾಡಿ, ಕುದ್ರೋಳಿ ಗೋಕರ್ಣನಾಥೇಶ್ವರ ನಿಮ್ಮ ಕೈ ಬಿಡುವುದಿಲ್ಲ ಎಂದು ಆಶೀರ್ವಾದ ಮಾಡಿದರು. ಮನೆ ಮನೆ ತೆರಳಿ ಪದ್ಮರಾಜ್ ಪರವಾಗಿ ಮತಯಾಚಿಸಿ ಅವರನ್ನು ಗೆಲ್ಲಿಸುವ ಜವಬ್ದಾರಿ ನಿಮ್ಮದು ಎಂದು ಅಲ್ಲಿ ನೆರೆದಿದ್ದ ಪಕ್ಷದ ಪ್ರಮುಖರು ಹಾಗೂ ಕಾಯಕರ್ತರಿಗೆ ತಿಳಿಸಿದರು. ಈ ಸಂದರ್ಭ ಪದ್ಮರಾಜ್ ಆರ್. ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಾನು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಜನಾರ್ದನ ಪೂಜಾರಿಯವರೇ ಪ್ರೇರಣೆ. ಬಡವರ ಸೇವೆ ಮಾಡಲು ಇಲ್ಲಿ ಸಾಧ್ಯವಿದೆ ಎನ್ನುವ ನಂಬಿಕೆಯಿಂದ ರಾಜಕೀಯಕ್ಕೆ ಬಂದಿದ್ದೇನೆ. ಜನರ್ದಾನ ಪೂಜಾರಿಯವರು ಕೇಂದ್ರ ಸಚಿವರಾಗಿದ್ದಾಗ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ದೇಶಾದ್ಯಂತ ಜನರು ಈಗಲೂ ನೆನೆಯುತ್ತಾರೆ, ಅವರು…

Read More

ಬಂಟ್ವಾಳ: ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ಸಂಭ್ರಮಾಚರಣೆಯ ಪ್ರಯುಕ್ತ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮಾ.24ರಂದು ಇಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು. ಮುಂಬಯಿ ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಮದುವೆ ಮಂಟಪದವರೆಗೆ ವೈಭವಪೂರ್ವಕವಾಗಿ ವಧು-ವರರ ದಿಬ್ಬಣ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 11.21ರ ಶುಭ ಮುಹೂರ್ತದಲ್ಲಿ 6 ಜೋಡಿ ವಧು-ವರರಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಮಾಡಲಾಗುವುದು ಎಂದು ಅವರು ತಿಳಿಸಿದರು.ನವದೆಹಲಿ ಅನಾರೋಕ್ ಸಂಸ್ಥೆಯ ವೈಸ್‌ಚೆಯರ್‌ಮೇನ್ ಸಂತೋಷ್ ಕುಮಾರ್ ಜೆ.ಪಿ.…

Read More