
ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ವಾರ್ಷಿಕೋತ್ಸವ ಡಿ.26ರಂದು ಶುಕ್ರವಾರ ನಡೆಯಿತು.
ಅಂದು ಬೆಳಿಗ್ಗೆ 5ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆದು ಗಣಹೋಮ, ಬಳಿಕ ಸೂರ್ಯೋದಯದಿಂದ ಸೂರ್ಯೋಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಬೆಳಿಗ್ಗೆ 10 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 11ರಿಂದ ನಾಗದೇವರಿಗೆ ನಾಗತಂಬಿಲ, ಆಶೇಷಬಲಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಶ್ರೀ ಓಂಕಾರೇಶ್ವರಿ ದೇವಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಸಂಜೆ 6.30ಕ್ಕೆ ಭಜನಾ ಸಂಕೀರ್ತನೆಯ ಭಜನಾ ಮಂಗಳ, 7.30ರಿಂದ 8.30ರವರೆಗೆ ಭಜನೆ ರಾತ್ರಿ 8.30ಕ್ಕೆ ಓಂಕಾರೇಶ್ವರಿ ದೇವಿಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ 9.30ಕ್ಕೆ ಭಗವತಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಸೋಣ ಸಂಕ್ರಾಂತಿ ಎಂಬ ಬಯಲಾಟ ನಡೆಯಿತು ಈ ಸಂದರ್ಭದಲ್ಲಿ ಪ್ರಸಂಗ ಕರ್ತ ವಸಂತ ಬಂಟ್ವಾಳ ಹಾಗೂ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ಮಹಾದಾನಿ ಲತಿನ್ ಇವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಶ್ರೀ ಓಂಕಾರೇಶ್ವರೀ ದೇವಿ ಭಜನಾ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಮಣಿಹಳ್ಳ, ಶ್ರೀ ಓಂಕಾರೇಶ್ವರೀ ದೇವಿ ಭಜನಾ ಆಡಳಿತ ಸಮಿತಿ ಅಧ್ಯಕ್ಷ ಶ್ರೀನಿಧಿ ಬಂಗೇರ,ಕೋಶಾಧಿಕಾರಿ ಧರ್ಮಣ ಬಂಗೇರ, ಕಾರ್ಯದರ್ಶಿ ಸಂದೇಶ್, ಅರ್ಚಕರು ಹೊನ್ನಪ್ಪ, ಕೃಷ್ಣಪ್ಪ ಹಾಗೂ ಸದಸ್ಯರಾದ ತಿಮ್ಮಪ್ಪ ಆಚಾರ್ಯ, ಜಗದೀಶ್ ಸುವರ್ಣ,ಸಂತೋಷ್ ಸುವರ್ಣ ಉಪಸ್ಥಿತರಿದ್ದರು .


Advertisement







