
ಬಂಟ್ವಾಳ: ಫೆ.23 ರಂದು ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪನವರ ಜಯಂತಿ ಆಚರಿಸಲು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿ ಸಭೆ ತೀರ್ಮಾನಿಸಿದೆ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಕೊಂಡು, ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದ.ಕ. ಜಿಲ್ಲೆಯ ನೇತಾರ ಡಾ.ಅಮ್ಮೆಂಬಳ ಬಾಳಪ್ಪನವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಜೊತೆಗೆ ಅವರ ಬಗ್ಗೆ ಯುವ ಸಮುದಾಯ ಸಮಾಜ ಅಧ್ಯಯನಶೀಲರಾಗ ಬೇಕು ಎಂಬ ಬೇಡಿಕೆಯನ್ನು ವಿವಿಯ ಸಿಂಡಿಕೇಟ್ ಸದಸ್ಯ, ವಕೀಲ ಸುರೇಶ್ ಕುಮಾರ್ ನಾವೂರು ಸೆನೆಟ್ ಸಮಿತಿಯ ಸಭೆಯಲ್ಲಿ ಮುಂದಿಟ್ಟಿದ್ದರು. ಅಂತೆಯೇ ಚರ್ಚೆ ನಡೆಸಿ ಮುಂದಿನ ಫೆ.23 ರಂದು ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ರವರ ಜಯಂತಿ ಆಚರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಡಾ. ಅಮ್ಮೆoಬಳ ಬಾಳಪ್ಪ ರವರ ಜಯಂತಿ ಆಚರಣೆಯನ್ನು ವಿಶ್ವ ವಿದ್ಯಾನಿಲಯ ಮಟ್ಟದ ಎಲ್ಲಾ ಕಾಲೇಜುಗಳಲ್ಲಿ ಸರಕಾರದ ವತಿಯಿಂದ ಆಚರಿಸುವಲ್ಲಿ ಕ್ರಮ ಕೈಗೊಳ್ಳುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ


Advertisement







