
ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಜಂಕ್ಷನ್ ನಲ್ಲಿರುವ ಸಿರಿಮುಡಿ ಕಾಂಪ್ಕೆಕ್ಸ್ ನಲ್ಲಿ ಜಯಶಂಕರ್ ಕಾನ್ಸಲೆ ಹಾಗೂ ಝಾಕೀರ್ ನಂದಾವರ ಮಾಲಕತ್ವದ ಜಝ್ ಕಾರ್ಸ್ ಎನ್ನುವ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮತ್ತು ಲ್ಯಾಂಡ್ ಲಿಂಕ್ಸ್ ಸಂಸ್ಥೆ ಶುಭಾರಂಭಗೊಂಡಿತು.
ಕಿಸ್ ಮಸ್ ಶುಭದಿನದಂದು ಸರ್ವಧರ್ಮಗಳ ಗ್ರಂಥಗಳಾದ ಭಗವದ್ಗೀತೆ, ಕುರಾನ್, ಬೈಬಲ್ ಗಳನ್ನು ಇಟ್ಟು ಎಳೆಯ ಮಕ್ಕಳು ಬಲೂನನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ಬಳಿಕ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಿಠಲ ಬೆಳ್ಚಾಡ ಮತ್ತಿತರರು ರಿಬ್ಬನ್ ಕತ್ತರಿಸಿ, ಬಳಿಕ ದೀಪ ಪ್ರಜ್ವಲಿಸಿ ನೂತನ ಸಂಸ್ಥೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಸಂಸ್ಥೆಯ ಆಡಳಿತ ಪಾಲುದಾರರಾದ ಜಯಶಂಕರ್ ಕಾನ್ಸಲೆ ಹಾಗೂ ಝಾಕೀರ್ ನಂದಾವರ ಮಾತನಾಡಿ ಸರ್ವಧರ್ಮದ ಗ್ರಾಹಕರ ಅನುಕೂಲಕ್ಕಾಗಿ ಮಾರ್ನಬೈಲಿನಲ್ಲಿ ಜಝ್ ಕಾರ್ಸ್ ಸಂಸ್ಥೆಯನ್ನು ಆರಂಭಿಸಿದ್ದೇವೆ. ಇಲ್ಲಿ ಗ್ರಾಹಕರಿಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ, ಲ್ಯಾಂಡ್ ಲಿಂಕ್ಸ್, ವಾಹನ ಇನ್ಶುರೆನ್ಸ್, ಕಾರು ಲೋನ್ ವ್ಯವಸ್ಥೆ, ಡ್ರೈವಿಂಗ್ ಲೈಸೆನ್ಸ್, ಮತ್ತಿತರ ಸೇವೆಗಳು ಲಭ್ಯವಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಉದ್ಘಾಟನಾ ಸಮಾರಂಭದ ವೇಳೆ ಜಯಶಂಕರ್ ಲಾನ್ಸಲೆ ಅವರ ಮಾತೃಶ್ರೀ ಸರಸ್ವತಿ ಪ್ರಮುಖರಾದ ರಮೇಶ್ ಅಗರ ಬೈಲು, ರಾಮಪ್ಪ ಮಾಸ್ಟರ್, ಸದಾಶಿವ ಭಟ್, ರಮೇಶ್ ಅನ್ನಪ್ಪಾಡಿ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ,
ಸುಧಾಕರ ಆಚಾರ್ಯ ಮಾರ್ನಬೈಲು,ರಮೇಶ್ ಕುಲಾಲ್ ಪಣೋಲಿಬೈಲು, ವಸಂತ್ ಆಚಾರ್ಯ ಮಾರ್ನಬೈಲ, ಅಶೋಕ್ ಪೂಜಾರಿ ಪೆರ್ವ, ರವಿ ಪೂಜಾರಿ ಕುಚ್ಚಿಗುಡ್ಡೆ
ಸುಶೀಲ ಕಾರಾಜೆ ಮತ್ತಿತರ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಇಬ್ಬರೂ ಪಾಲುದಾರರ ಕುಟುಂಬ ವರ್ಗದವರು ಭಾಗವಹಿಸಿದ್ದರು.
Advertisement







