Author: admin

ಬಂಟ್ವಾಳ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಇಂದು ಆದಿತ್ಯವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಆಚರಣೆಯನ್ನು ಆಚರಿಸಲಾಯಿತು.ಚುನಾವಣೆ ಶಾಖೆಯ ವಿಷಯ ನಿರ್ವಾಹಕ ನಾರಾಯಣ ಗೌಡಅವರು ದೀಪ ಬೆಳಗಿಸಿಶಾಂತಿ, ಸಹಬಾಳ್ವೆ ಮತ್ತು ಸಮಾನತೆಯ ಮಹತ್ವವನ್ನು ರೇಣುಕಾಚಾರ್ಯರು ಬಹಳಷ್ಟು ಹಿಂದೆಯೇ ಅರಿತಿದ್ದರು.ಭೇಧ ಭಾವಗಳನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆಯನ್ನು ಸಾರಿದ ರೇಣುಕಾಚಾರ್ಯರರ ತತ್ವಗಳನ್ನು ಪಾಲಿಸಿದರೆ ಶಾಂತಿ ನೆಲೆಸುತ್ತದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಕಚೇರಿ ಸಿಬ್ಬಂದಿಗಳು,ಗ್ರಾಮ ಆಡಳಿತ ಆಧಿಕಾರಿಗಳು,ಗ್ರಾಮ ಸಹಾಯಕರು ಉಪಸ್ಥಿತರಿದ್ದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ಸ್ವಾಗತಿಸಿ ವಂದಿಸಿದರು. promotion

Read More

ಬಂಟ್ವಾಳ: ಕಂಬಳ ಹಾಗೂ ಯಕ್ಷಗಾನ ನಮ್ಮ ಜಿಲ್ಲೆಯ ಜಾನಪದ ಕ್ಷೇತ್ರದ ಕಣ್ಣುಗಳು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ವಿಧಾನಸಭೆಯ ವಿರೋದ ಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದರು. ಮಾಝಿ ಸಚಿವ ಬಿ. ರಮನಾಥ ರೈ ಗೌರವಾಧ್ಯಕ್ಷತೆಯಲ್ಲಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲುವಿಲ್ಲಿ ಬಂಟ್ವಾಳ ಕಂಬಳ ಹೆಸರಿನಲ್ಲಿ ನಡೆಯುತ್ತಿರುವ 12ನೇ ವರ್ಷದ ಮೂಡೂರು ಪಡೂರು ಜೊಡುಕರೆ ಬಯಲು ಕಂಬಳದ ಪ್ರಯುಕ್ಯ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೂಡೂರು ಪಡೂರು ಕಂಬಳ ಆಯೋಜಿಸುವ ಮೂಲಕ ತುಳುನಾಡಿನ ಕಂಬಳ ಸಂಸ್ಕೃತಿಯನ್ನು ಯುವಕರಿಗೆ ಪರಿಚಯಿಸುವ ಕಾರ್ಯ ಬಿ. ರಮನಾಥ ರೈ ಅವರಿಂದ ಆಗುತ್ತಿದೆ, ಕಂಬಳ ಕ್ರೀಡೆಯನ್ನು ನಿಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದಾಗ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ರಮಾನಾಥ ರೈ ಹಾಗೂ ಶಾಸಕರು ಸರ್ಕಾರದ ಮೂಲಕ ನ್ಯಾಯಲಯಕ್ಕೆ ಮನವರಿಕೆ ಮಾಡಿ ಕಂಬಳ ಪುನಾರಂಭಗೊಳ್ಳಲು…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 121ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. ಫರಂಗಿಪೇಟೆ ಸೇವಾಂಜಲಿಯಲ್ಲಿ 121 ನೇ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಉದ್ಘಾಟಿಸಿದರು. ಅವರು ಮಾತನಾಡಿ ದೇವರ ಈ ಸಾಮ್ರಾಜ್ಯದಲ್ಲಿ ದೀನ, ದುರ್ಬಲರ ಸೇವೆ ಮಾಡುವುದೇ ನಾವು ದೇವರಿಗೆ ಸಲ್ಲಿಸುವ ತೆರಿಗೆಯಾಗಿದೆ. ಸೇವಾಂಜಲಿ ಸಂಸ್ಥೆ ಈ ಭಾಗದಲ್ಲಿ ಮುಂಚೂಣಿಯಲ್ಲಿ ನಿಂತು ಜನರ ಪರಮೋಚ್ಛ ಸೇವೆ ಮಾಡುತ್ತಿದೆ ಎಂದು ತಿಳಿಸಿದರು.‌ ನಿರಂತರ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಪ್ರೇರೆಪಣೆ ನೀಡುವ ಕಾರ್ಯ ಕೃಷ್ಣ ಕುಮಾರ್ ಪೂಂಜ ಅವರ ಮೂಲಕ ನಡೆಯುತ್ತಿದೆ, ಇಂದು ಹೊಸ ಆವಿಷ್ಕಾರದ ಮೂಲಕ ಒಂದು ಯುನಿಟ್ ರಕ್ತದಾನ ಮಾಡುವುದರಿಂದ 4 ಮಂದಿಯ ಜೀವ ಉಳಿಸಬಹುದಾಗಿದೆ ಎಂದರು.ಮೊಡಮಕಾಪು ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಕ್ತದಾನ ಶಿಬಿರ…

Read More

ಬಂಟ್ವಾಳ: ರೈತರ ವಿರೋಧದ ನಡುವೆಯೂ ಕೃಷಿ ಭೂಮಿಯನ್ನು ನಾಶಪಡಿಸಿ, ರೈತರ ಹಿತಾಸಕ್ತಿ ಕಾಪಾಡದೆ ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹಾದುಹೋಗಲು ಶತಾಯ ಗತಯ ಪ್ರಯತ್ನ ಪಡುತ್ತಿರುವ ಕಂಪೆನಿ ಹಾಗೂ ಜಿಲ್ಲಾಡಳಿತದ ವಿರುದ್ಧ ಮಾ. 8ರಂದು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಮುಂದಾಳತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಉಡುಪಿ ಕಾಸರಗೋಡು 400 ಕೆ.ವಿ. ವಿದ್ಯುತ್‌ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಕೋಚೋಡಿ ತಿಳಿಸಿದರು. ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ ದ.ಕ. ಜಿಲ್ಲೆಯಲ್ಲಿ 400 ಕೆ.ವಿ. ಮಾರ್ಗ ಹಾದು ಹೋಗುವ ದಾರಿಯ ಮಾಹಿತಿಯನ್ನು ನೀಡದೆ ಸ್ಯಾಟಲೈಟ್ ಹಾಗೂ ಹೆಲಿಕಾಪ್ಟರ್ ಬಳಸಿ ಸರ್ವೆ ಕಾರ್ಯವನ್ನು ಕಂಪೆನಿ ಮಾಡಿದ್ದು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಭೂಸುಧಾರಣೆ ಕಾಯ್ದೆ ಮೂಲಕ ರೈತರಿಗೆ ಸಿಕ್ಕ…

Read More

ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದಲ್ಲಿರುವ ಮಂಗಳೂರಿಗೆ ನೀರು ಸರಬರಾಜಾಗುವ ಶುದೀಕರಣ ಘಟಕದಿಂದ ಹೊರಚೆಲ್ಲುವ ಕಲ್ಮಶ ನೀರು ಹರಿದು ಸ್ಥಳೀಯ ರೈತರಾದ ದಿಲೀಪ್ ರೈ, ಸಂಜೀವ ಪೂಜಾರಿ, ಶೇಖರ್ ಪೂಜಾರಿ ಎಂಬವರ ಕೃಷಿ ನಾಶವಾಗಿದ್ದು ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಹಾಗೂ ದ.ಕ. ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗದೇ ಇದ್ದಾಗ ೨೦೧೫ರಲ್ಲಿ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಬಳಿಕ ಪರಿಹಾರ ಘೋಷಣೆಯಾಯಿತು. ಅದೇ ಸಂದರ್ಭ ನ್ಯಾಯಾಲಯವು ಭೂಮಿಯನ್ನು ಯಥಾಸ್ಥಿತಿಗೆ ತರುವಂತೆ ಆದೇಶಿಸಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಆದೇಶ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆರೋಪಿಸಿದರು. ಈ ಬಗ್ಗೆ ರಾಜ್ಯ ಉಚ್ಛನ್ಯಾಯಾಲಯಕ್ಕೆ ಮತ್ತೊಂದು ಅಪೀಲು ಸಲ್ಲಿಸಲಾಗಿದೆ ಎಂದು ಸುದಿಗೋಷ್ಟಿಯಲ್ಲಿ ತಿಳಿಸಿದರು. ತುಂಬೆಯ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಆಗ್ರಹ ತುಂಬೆ ವೆಂಟೆಡ್ ಡ್ಯಾಂನಿಂದ ಹೊರ…

Read More

https://youtu.be/wV74isvO_iI ನಾವೂರಿನ ಕೂಡಿಬೈಲುವಿನಲ್ಲಿ ಬಂಟ್ವಾಳ ಕಂಬಳ (ಮೂಡೂರು-ಪಡೂರು)ಕ್ಕೆ ಅದ್ಧೂರಿ ಚಾಲನೆ ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಕೂಡಿಬೈಲುವಿಲ್ಲಿ ಬಂಟ್ವಾಳ ಕಂಬಳ ಹೆಸರಿನಲ್ಲಿ ನಡೆಯುತ್ತಿರುವ 12ನೇ ವರ್ಷದ ಮೂಡೂರು ಪಡೂರು ಜೊಡುಕರೆ ಬಯಲು ಕಂಬಳಕ್ಕೆ ಮಾಜಿ ಸಚಿವ, ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ಶನಿವಾರ ಬೆಳಿಗ್ಗೆ ಅದ್ದೂರಿಯ ಚಾಲನೆ ನೀಡಿದರು.ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಸಾಮಾಜಿಕ ಕಾರ್ಯಕ್ರಮ ಎಲ್ಲಾ ವರ್ಗದ ಜನರನ್ನು ಕೈ ಬೀಸಿ ಕರೆಯುವಂತಿರಬೇಕು, ಆ ನಿಟ್ಟಿನಲ್ಲಿ ಮೂಡುರು ಪಡೂರು ಕಂಬಳ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ನಡೆಯುತ್ತಿರುವುದು ಗಮನಾರ್ಹ. ಕೂಡಿಬೈಲಿನಲ್ಲಿ ಕೂಡಿ ಬಾಳುವ ಎನ್ನುವ ಸಂದೇಶವನ್ನು ನೀಡುವ ಮೂಲಕ ಈ ಕಂಬಳ ನಡೆಯುತ್ತಿದೆ ಎಂದರು. ಅಲ್ಲಿಪಾದೆ ಸಂತ ಅಂಥೋನಿ ಚರ್ಚ್ ಧರ್ಮಗುರು ವಂದನೀಯ ಫೆಡ್ರಿಕ್ ಮೊಂತೆರೋ ಅವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ ಜಾತಿ ಧರ್ಮದ ಚೌಕಟ್ಟನ್ನು ಮೀರಿ ಎಲ್ಲಾ ಸಮುದಾಯದ ಜನರು ಬರುವ ಕಂಬಳ ಮೂಡುರು ಪಡೂರು ಕಂಬಳ. ಕಂಬಳ ಸಮಿತಿ…

Read More

ಬಂಟ್ವಾಳ: ಇಚ್ಚಾಶಕ್ತಿಯ ಮೂಲಕ ಕೆಲಸ ಮಾಡಿದ್ದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಜನರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದ ತೃಪ್ತಿ ಇದೆ. ರಾಜಕೀಯವಾಗಿ ಯಾರಲ್ಲೂ ವೈಯಕ್ತಿಕ ದ್ವೇಷವಿಲ್ಲ, ಪಕ್ಷದ ತತ್ವ ಸಿದ್ದಾಂತದ ಮೂಲಕ ರಾಜಕೀಯ ಮಾಡಿದ್ದು ಈ ಹಿಂದಿಗಿಂತ ನಾಲ್ಕು ಪಾಲು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಈಗ ಕ್ಷೇತ್ರದಲ್ಲಿ ಆಗಿದೆ ಎಂದು ಬಂಟ್ವಾಳ ಆಸಕ ರಾಜೇಶ್ ನಾಯ್ಕ್ ಹೇಳಿದರು. ಪಿತ್ತಿಲು ಅಶ್ವತ್ಥ ಕಟ್ಟೆ ಎಂಬಲ್ಲಿ ನಡೆದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದ ಸುಮಾರಿ 10 ಕೋಟಿ ರೂಪಾಯಿ ಅನುದಾನದ ವಿವಿಧ ರಸ್ತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಲೋಕರ್ಪಾಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾಂಗ್ರೆಸ್ ನೀರಿನಿಂದ ಮೇಲೆತ್ತಿದ್ದ ಮೀನಿನಂತೆ ಅಧಿಕಾರವಿಲ್ಲದೆ ಒದ್ದಾಡುತ್ತಿದೆ. ಇತ್ತೀಚಿನ ಸರ್ವೆಯಂತೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾಯಛ ನಿರಂತರವಾದುದು. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳು ಆಗಲಿದೆ ಎಂದು ತಿಳಿಸಿದರು. ಹೆಚ್ಚಿನ ಬೇಡಿಕೆಯ…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರಿಂದ 121ನೇ ರಕ್ತದಾನ ಶಿಬಿರ ಮಾ.5ರಂದು ಭಾನುವಾರ ಬೆಳಿಗ್ಗೆ 9 ರಿಂದ 1ರವರೆಗೆ ಫರಂಗಿಪೇಟೆಯ ಸೇವಂಜಲಿ ಸಭಾಗೃಹದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್‌ಸಿಂಗ್ ಥೋರಾಟ್ ಭಾಗವಹಿಸಲಿದ್ದಾರೆ ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ತಿಳಿಸಿದ್ದಾರೆ

Read More

ಮೂಡೂರು – ಪಡೂರು ಜೋಡಕರೆ ಬಯಲು ಕಂಬಳ ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ಮೂಡೂರು – ಪಡೂರು ಜೋಡಕರೆ ಬಯಲು ಕಂಬಳ ಕಳೆದ ವರ್ಷದಿಂದ ಬಂಟ್ವಾಳ ಕಂಬಳವಾಗಿ ಪುನಾರಂಭಗೊಂಡಿದ್ದು ಮಾಜಿ ಸಚಿವ ಬಿ. ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಅವರ ಕಾರ್ಯಧ್ಯಕ್ಷತೆಯಲ್ಲಿ ಪದ್ಮಶೇಖರ್ ಜೈನ್ ಅವರ ಸಂಚಾಲಕತ್ವದಲ್ಲಿ 12ನೇ ವರ್ಷದ ಹೊನಲು ಬೆಳಕಿನ ಮೂಡೂರು- ಪಡೂರು ಜೋಡುಕರೆ ಬಯಲು ಕಂಬಳ ನಾಳೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲುವಿನಲ್ಲಿ ನಡೆಯಲಿದೆ. ಕಂಬಳಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿದ್ದು ಬೆಳಿಗ್ಗೆ ಗಂಟೆ 8.45ಕ್ಕೆ ಕಂಬಳ ಉದ್ಘಾಟನೆಗೊಳ್ಳಲಿದೆ. ಕೂಟದಲ್ಲಿ ಪೀಠಾಧಿಪತಿಗಳು, ಧರ್ಮಗುರುಗಳು, ರಾಜಕೀಯ ನಾಯಕರು, ಸಾಮಾಜಿಕ ಕ್ಷೇತ್ರದ ಸಾಧಕರು, ಭಾಗವಹಿಸಲಿದ್ದಾರೆ. ಸಂಜೆ 7.೦೦ ರಿಂದ ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ವಿಧಾನ ಪರಿಷತ್…

Read More

ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ರಾಮಲ್ ಕಟ್ಟೆ ನಿವಾಸಿ ಮೈಮುನಾ ಎಂಬವರ ಮನೆಗೆ ಯಾರು ಇಲ್ಲದ ವೇಳೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ವಾಚುಗಳು ಹಾಗೂ ನಗದು ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.ಮೈಮೂನಾ ಅವರು ಫೆ.27 ರಂದು ತನ್ನ ತಂಗಿ ಮಗಳ ಹುಟ್ಟುಹಬ್ಬದ ನಿಮಿತ್ತ ಮದ್ಯರಾತ್ರಿ 12.30 ಗಂಟೆಗೆ ಉಪ್ಪಿನಂಗಡಿ ಮೂರುಗೋಳಿಗೆ ಮನೆಯವರೊಂದಿಗೆ ಹೋಗಿ ಅಲ್ಲೇ ಉಳಿದುಕೊಂಡಿದ್ದು, ಮಾ.1 ರಂದು ಬೆಳಿಗ್ಗೆ 7.30 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗವನ್ನು ತೆರೆಯಲು ನೋಡಿದಾಗ ಬಾಗಿಲಿಗೆ ಅಳವಡಿಸಿದ ಲಾಕ್ ಮುರಿದಿದ್ದು ಕಂಡು ಬಂದಿದ್ದು ಬಾಗಿಲನ್ನು ದೂಡಿದಾಗ ಬಾಗಿಲು ಒಳಗೆ ಹೋಗಿದೆ. ಇದರಿಂದ ಗಾಬರಿಗೊಂಡು ಮೈಮೂನಾ ವಿಷಯವನ್ನು ಗಂಡ ಮತ್ತು ತಾಯಿಗೆ ಹೇಳಿ ಎಲ್ಲರೂ ಒಟ್ಟಿಗೆ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಒಳಗೆ ಮಲಗುವ ಕೋಣೆಯಲ್ಲಿದ್ದ 4 ಗೋದ್ರೇಜ್ ಕಪಾಟಿನ ಬೀಗವನ್ನು ತೆರೆದು ಅದರೊಳಗಿದ್ದ ಬಟ್ಟೆ ಬರೆಗಳು ಇತ್ಯಾದಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಮಂಚದ ಮೇಲೆ ಬಿಸಾಡಿದ ಸ್ಥಿತಿಯಲ್ಲಿತ್ತು.…

Read More