Author: admin

ಬಂಟ್ವಾಳ: ಬಿ.ಕಸ್ಟ ಗ್ರಾಮದ ನೇರಂಬೋಳು ಶ್ರೀ ರಕೇಶ್ವರಿ ಯುವಕ ಸಂಘದ ರಜತ ಸಂಭ್ರಮ ಕಾರ್ಯಕ್ರಮ ಏ.5 ಮತ್ತು 6 ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹರೀಶ ಕುಲಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. Advertisement ಸಂಘದ ಗೌರವಾಧ್ಯಕ್ಷ ಮನೋಹರ ನೇರಂಬೋಳು ಮಾತನಾಡಿ, ಈಗಾಗಲೇ 30ಕ್ಕೂ ಮಿಕ್ಕಿ ಮಂದಿ ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಯಕ್ಷಗಾನ ತರಬೇತಿ ನೀಡಲಾಗಿದ್ದು, ಪ್ರತಿವರ್ಷ ಓರ್ವ ವಿದ್ಯಾರ್ಥಿಯನ್ನು ದತ್ತು ಸ್ವೀಕರಿಸಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಬ್ಬರು ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಉಚಿತ ಶಿಕ್ಷಣ ನೀಡಲು ಚಿಂತನೆ ನಡೆಸಲಾಗಿದೆ ಎಂದರು. ರಜತ ಮಹೋತ್ಸವ ಪ್ರಯುಕ್ತ 5ಮತ್ತು 6ರಂದು ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಮತ್ತು ಯಕ್ಷಗಾನ ಹಾಗೂ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಯಶೋಧರ ಪೂಜಾರಿ, ರವೀಂದ್ರ ಕುಲಾಲ್, ಹರಿಶ್ಚಂದ್ರ ಪೂಜಾರಿ, ಪದ್ಮನಾಭ ಪೂಜಾರಿ, ಗಣೇಶ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Read More

ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಗುರುವಾರ ಸಂಜೆ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಂದಾಯವಾಯಿತು.ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ಸಮಾವೇಶಗೊಂಡ ಹೊರೆಕಾಣಿಕೆ ಮೆರವಣಿಗೆಗೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ಚಾಲನೆ ನೀಡಿದರು. ಬಳಿಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಭವ್ಯ ಮೆರವಣಿಗೆಯಲ್ಲಿ ಹಸಿರುವಾಣಿಯನ್ನು ಕ್ಷೇತ್ರಕ್ಕೆ ತರಲಾಯಿತು. ಗೊಂಬೆ ಕುಣಿತ, ಬಣ್ಣದ ಕೊಡೆಗಳು, ಕುಣಿತ ಭಜನೆ, ಚೆಂಡೆ ವಾದಾನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ರಾಜೇಶ್ ನಾಕ್ ಮೆರವಣಿಗೆಯಲ್ಲಿ ಭಾಗವಹಿಸಿದರು. Advertisement ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ಹಸಿರು ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಬೇಬಿ ಕುಂದರ್, ದೇವದಾಸ್ ಶೆಟ್ಟಿ, ಸಹಸಂಚಾಲಕರಾದ ಚಂದ್ರಹಾಸ ಪಲ್ಲಿಪ್ಪಾಡಿ, ಲೋಕೇಶ್ ಸುವರ್ಣ ಅಲೆತ್ತೂರು, ವಿವಿಧ ಸಮಿತಿಗಳ ಪ್ರಮುಖರಾದ ಸಂಜೀವ ಪೂಜಾರಿ ಗುರುಕೃಪಾ, ಸತೀಶ ಭಂಡಾರಿ, ಚಂದ್ರಹಾಸ ಡಿ. ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಪಿ. ಚಂದ್ರಪ್ರಕಾಶ್ ಶೆಟ್ಟಿ, ಎನ್.…

Read More

ಬಂಟ್ವಾಳ : ಇಲ್ಲಿನ ಕುಕ್ಕಿಪಾಡಿ ಗ್ರಾಮದ ಪೆಲತ್ತಕಟ್ಟೆ ಎಂಬಲ್ಲಿ ಚಿರತೆ ದಾಳಿ ನಡೆಸಿ ಒಂದು ತಿಂಗಳ ಕರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.ಇಲ್ಲಿನ ನಿವಾಸಿ, ಕೋಟ್ಯಪ್ಪ ಪೂಜಾರಿ ಎಂಬವರ ಹಟ್ಟಿಯಲ್ಲಿ ನಾಲ್ಕು ದನಗಳಿದ್ದು, ಒಂದು ತಿಂಗಳ ಕರುವನ್ನು ಸ್ವಲ್ಪ ದೂರ ಕಟ್ಟಿ ಹಾಕಿದ್ದರು ಎನ್ನಲಾಗಿದೆ.ಸೋಮವಾರ ತಡರಾತ್ರಿ ಚಿರತೆ ಬಂದಿದ್ದು, ನಾಯಿ ಬೊಗಳಿದಾಗ ಕರುವನ್ನು ಕೊಂದು ಹೊಟ್ಟೆ ಭಾಗ ಮಾಂಸ ಕಚ್ಚಿ ತಿಂದು ಪರಾರಿಯಾಗಿದೆ . ಬಂಟ್ವಾಳ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ದೂರು ನೀಡಲಾಗಿದೆ. Advertisement

Read More

ಬಂಟ್ವಾಳ: ಬಂಟ್ವಾಳ ತಾ. ಕಾವಳಮೂಡೂರು ಗ್ರಾಮದ ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕಾವಳಪಡೂರು ಗ್ರಾ.ಪಂ.ಸದಸ್ಯ ವೀರೇಂದ್ರ ಕುಮಾರ್ ಅಮೀನ್ ಅವರು ಆಯ್ಕೆಯಾಗಿದ್ದಾರೆ.ದೇಗುಲದ ಕಚೇರಿಯಲ್ಲಿ ಆಡಳಿತಾಧಿಕಾರಿ ಸಚಿನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು.ಪ್ರಧಾನ ಅರ್ಚಕರಾಗಿ ಮಿಥುನ್ ರಾಜ್ ನಾವಡ, ಸಮಿತಿಯ ಸದಸ್ಯರಾಗಿ ಪ್ರಶಾಂತ್, ರಾಧಾ ಆಚಾರ್ಯ, ಧನಲಕ್ಷ್ಮಿ ಸಿ.ಬಂಗೇರ,ಎಂ.ಉದಯ ನಾಯಕ್, ಪ್ರೇಮನಾಥ, ಜನಾರ್ದನ ಆಚಾರ್ಯ, ದಯಾನಂದ ಶೆಟ್ಟಿ ಅಮೈ ಅವರು ಆಯ್ಕೆಯಾಗಿದ್ದಾರೆ. Advertisement ಈ ಸಂದರ್ಭದಲ್ಲಿ ದೇಗುಲದ ಆಡಳಿತವನ್ನು ಆಡಳಿತಾಧಿಕಾರಿ ಅವರು ನೂತನ ಸಮಿತಿಗೆ ಹಸ್ತಾಂತರಿಸಿದರು. ಸಾರ್ವಜನಿಕರ ಪರವಾಗಿ ನೂತನ ಸಮಿತಿಯನ್ನು ಅಭಿನಂದಿಸಲಾಯಿತು.ಪ್ರಮುಖರಾದ ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಬಾಲಕೃಷ್ಣ ಆಚಾರ್ಯ, ಪ್ರಭಾಕರ ಆಚಾರ್ಯ, ಬಾಲಕೃಷ್ಣ ಅಂಚನ್, ವಿಶ್ವನಾಥ ಪೂಜಾರಿ ಪೀರ್ಯಗುತ್ತು, ಸತೀಶ್ ಪಡಂತ್ರ್ಯಬೆಟ್ಟು, ರಾಜ್ ಪ್ರಸಾದ್ ಆರಿಗ, ಗೋಪಾಲ ಶೆಟ್ಟಿ ಕೆದ್ದಳಿಕೆ, ಕುಶಲ್ ಶೆಟ್ಟಿ ಕೆದ್ದಳಿಕೆ, ದಾಮೋದರ ಮನ್ಯಗುತ್ತು, ಉಮೇಶ್…

Read More

Advertisement ಬಂಟ್ವಾಳ: ಇಲ್ಲಿನ ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುರಕ್ಷಾಧಿಕಾರಿಯಾಗಿ 39 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಮಮತ ಕೆ. ಇವರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್. ಆರ್ ತಿಮ್ಮಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ|| ಅಶೋಕ್ ಕುಮಾರ್ ರೈ, ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಡಾ. ರಾಜೇಶ್, ಡಾ. ದೀಪಾ ಪ್ರಭು ಮತ್ತಿತರರು ಮಮತಾ ಅವರನ್ನು ಗೌರವಿಸಿದರು. ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಬಂಟ್ವಾಳ: ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಎ.4ರಿಂದ ಎ.9ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ತಿಳಿಸಿದರು.ಮಂಗಳವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಎ.3ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಶ್ರೀ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ. ಎ. 4ರಂದು ಬೆಳಿಗ್ಗೆ ಉಗ್ರಾಣ ಪೂಜೆ, ಸೇವಾ ಕಚೇರಿ ಉದ್ಘಾಟನೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸನ್ನಿಧಿಗೆ ತಂತ್ರಿಗಳ ಆಗಮನವಾಗಲಿದ್ದು ರಾತ್ರಿ 7.30ಕ್ಕೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಎ.5ರಂದು ವಿವಿಧ ಪೂಜಾದಿ ಕಾರ್ಯಕ್ರಮಗಳು, ಎ.6ರಂದು ಸಂಜೆ 6 ಗಂಟೆಗೆ ಶ್ರೀ ಚಕ್ರಪೂಜೆ ನಡೆಯಲಿದೆ. ಎ.8ರಂದು ಸಂಜೆ 7.15ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ, ಎ.9ರಂದು ಬೆಳಿಗ್ಗೆ 8.29ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ರಕ್ತೇಶ್ವರೀ ದೇವಿ…

Read More

ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆಯ ಆರಾಧ್ಯ ದೇವರಾದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ವಠಾರದಲ್ಲಿ ಜರಗಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಭಾನುವಾರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಗಣಪತಿ ಹೋಮ, ಅತಿಮಹಾರುದ್ರ ಪಾರಾಯಣ ವಿದ್ವಾನ್ ವೇದಮೂರ್ತಿ ಅನಂತ ಭಟ್ ಓಣಿ ಬೈಲು ನೇತೃತ್ವದಲ್ಲಿ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಈ ಪಾರಾಯಣ ಮೇ 4 ರಂದು ನಡೆಯುವ ಯಾಗದವರೆಗೂ ಪ್ರತಿನಿತ್ಯ ನಡೆಯಲಿದೆ. ವಾರಾಣಾಸಿ ಕಾಶಿಮಠದ ಶ್ರೀಮದ್ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಅತಿ ರುದ್ರ ಮಹಾಯಾಗ ನಡೆಯಲಿದೆ. ಇಂದಿನ ಕಾರ್ಯಕ್ರಮದಲ್ಲಿ ಗೌರವಧ್ಯಕ್ಷ ರಘುನಾಥ ಸೋಮಯಾಜಿ, ಕಾರ್ಯಧ್ಯಕ್ಷ ಜಗನ್ನಾಥ ಚೌಟ ಭಾಗವಹಿಸಿದ್ದರು.

Read More

ಬಂಟ್ವಾಳ: ಶ್ರೀ ಶಾರದ ಸೇವಾ ಪ್ರತಿಷ್ಠಾನ ತುಂಬೆ ಇದರರಜತ ಮಹೋತ್ಸವದ ಹಿನ್ನಲೆಯಲ್ಲಿ ರಜತ ಮಹೋತ್ಸವ ಆಚರಣಾ ಸಮಿತಿ ರಚನೆ ಹಾಗೂ ವಿಸ್ತೃತ ಸಭಾಭವನ ನಿರ್ಮಾಣಕ್ಕೆ ಪೂರ್ವಭಾವಿ ಸಮಾಲೋಚನಾ ಸಭೆ ಭಾನುವಾರ ತುಂಬೆಯ ಶಾರದಾ ಪ್ರತಿಷ್ಠಾನದಲ್ಲಿ ಅಧ್ಯಕ್ಷ ಗಣೇಶ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭ ರಜತ ಮಹೋತ್ಸವ ಆಚರಣಾ ಸಮಿತಿಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿ ಶಾರದಾ ಪ್ರತಿಷ್ಠಾನ ಶಾಶ್ವತವಾದ ನೆಲೆ ಕಂಡುಕೊಳ್ಳಬೇಕು ಎನ್ನುವ ಉದ್ದೇಶದಿಂದ‌ ದಶಮಾನೋತ್ಸವ ಸುಸಂದರ್ಭದಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಇಲ್ಲಿ ಸೇವೆ ಸಲ್ಲಿಸುವ ಯುವಕರಲ್ಲಿ ಬದ್ಧತೆಯಿರುವುದರಿಂದ ಈ ಸಂಘಟನೆ ಇಷ್ಟು ಎತ್ತರಕ್ಕೆ ಬೆಳೆದಿದೆ. ಇದೀಗ ರಜತ ವರ್ಷಾಚರಣೆಗೆ ಪಾದಾರ್ಪಣೆ ಮಾಡಿದ್ದು ಶಾಶ್ವತ ಯೋಜನೆಯಾಗಿ ವಿಸ್ತೃತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮುಂದಿನ ಆರು ತಿಂಗಳ ಒಳಗಾಗಿ ಸುಂದರ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು. ಈ ಸಂದರ್ಭ ನೂತನ ರಜತಮಹೋತ್ಸವ ಆಚರಣಾ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸಂಸದ ಬ್ರಿಜೇಶ್ ಚೌಟ, ಅಧ್ಯಕ್ಷರಾಗಿ ರಾಘವ…

Read More

ಬಂಟ್ವಾಳ: ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಹಾಗೂ ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆಯಲಿರುವ ವಿಶೇಷ ಪಂಚಾರತಿ ಸೇವೆಗೆ ಗುರುವಾರ ರಾತ್ರಿ ಮಂದಿರದಲ್ಲಿ ಚಾಲನೆ ನೀಡಿಲಾಯಿತು. Advertisement ಭಜನಾ ಮಂಗಳದ ಬಳಿಕ ಪಂಚ ಅತಿಥಿ ಅಭ್ಯಾಗತರಾದಸಜೀಪ ಮಾಗಣೆಯ ತಂತ್ರಿ ವೇದಮೂರ್ತಿ ಎಂ. ಸುಬ್ರಹ್ಮಣ್ಯ ಭಟ್, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ ಭಟ್, ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಪರಮೇಶ್ವರ ಮಯ್ಯ, ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಈಶ್ವರ ಭಟ್, ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಪ್ರಧಾನ ವೈದಿಕರಾದ ವೇದಮೂರ್ತಿ ಶಿವಾನಂದ ಐತಾಳ್ದೇವರಿಗೆ ಪಂಚಾರತಿ ಬೆಳಗಿದರು. ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಮಾತನಾಡಿ ದೇವಳದ ಅಭಿವೃದ್ದಿ ಕಾರ್ಯಕ್ಕಾಗಿ ಪಂಚಾರತಿ ಸೇವೆ ಆರಂಭಿಸಿರುವುದು ಹೊಸ ಕಲ್ಪನೆಯಾಗಿದೆ. ಗಂಗಾರತಿ ಯಂತೆ ಪಂಚಾರತಿ ಸೇವೆಯೂ ಯಶಸ್ವಿಯಾಗಿ…

Read More

ಬೆಂಗಳೂರು: ಕುಲಾಲ ಸಂಘ ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ದಿವಾಕರ ಮೂಲ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಭಾನುವಾರ ನಡೆದ ಸಂಘದ ಜಂಟಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.ಪ್ರಥಮ ಉಪಾಧ್ಯಕ್ಷರಾಗಿ ದಿನೇಶ್ಚಂದ್ರ , ದ್ವಿತೀಯ ಉಪಾಧ್ಯಕ್ಷರಾಗಿ ರಮಾನಾಥ್ ಏತಡ್ಕ, ಪ್ರಧಾನ ಕಾರ್ಯದರ್ಶಿ ಯಾಗಿ ಆಶಾನಂದ್ ಕುಲಶೇಖರ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಕಣ್ವತೀರ್ಥ, ಕೋಶಾಧಿಕಾರಿಯಾಗಿ ರಮಾನಂದ್, ಜೊತೆ ಕೋಶಾಧಿಕಾರಿಯಾಗಿ ವೆಂಕಟೇಶ್ ರಟ್ಟಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸೇಸಪ್ಪ ಪೊಸಳ್ಳಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಹಿಮಕರ್ ಬಂಜನ್, ಮಹಿಳಾ ಘಟಕ ಸಂಚಾಲಕರಾಗಿ ಅನುಸೂಯ ಕೃಷ್ಣಪ್ಪ , ಯುವ ಘಟಕ ಸಂಚಾಲಕರಾಗಿ ಪ್ರಥಮ್ ಚೇಂಡ್ಲಾ, ಕ್ರೀಡಾ ಕಾರ್ಯದರ್ಶಿಯಾಗಿ ರಾಘವೇಂದ್ರ ಕುಲಾಲ್, ಕ್ರೀಡಾ ಜೊತೆಕಾರ್ಯದರ್ಶಿ ಯಾಗಿ ತಿಮ್ಮಪ್ಪ ಕುಲಾಲ್ ಆಯ್ಕೆಯಾದರು. —

Read More