Author: admin

ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ಉದ್ಘಾಟನಾ ಸಮಾರಂಭ ಬಂಟ್ವಾಳ: ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ಉದ್ಘಾಟನಾ ಸಮಾರಂಭ ಮಂಗಳವಾರ ಸಂಜೆ ಲೊರೆಟ್ಟೋ ಪದವಿನಲ್ಲಿರುವ ಲೊರೆಟ್ಟೋ ಮಾತಾ ಸಭಾಂಗಣದಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ರಾಜಗೋಪಾಲ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಕ್ಯಾಟರಿಂಗ್ ವೃತ್ತಿನಿರತರು ಸಂಘಟಿತರಾದಾಗ ಕಷ್ಟ ಸಂದರ್ಭವನ್ನು ಎದರಿಸಲು ಸಾಧ್ಯವಿದೆ ಎಂದು ತಿಳಿಸಿದರು. ನಾಲ್ಕು ವರ್ಷದ ಹಿಂದೆ ಜಿಲ್ಲಾ ಸಂಘ ಆರಂಭಗೊಂಡಿತ್ತು, ಇದೀಗ ಮೊದಲ ವಲಯವಾಗಿ ಬಂಟ್ವಾಳ ವಲಯ ಉದ್ಘಾಟನೆಗೊಂಡಿರುವುದು ಅಭಿನಂದನೀಯ, ವಲಯದ ಸ್ಥಾಪನೆಗೆ ಕ್ಯಾಟರಿಂಗ್ ಮಾಲಕರು ಹಲವು ತಿಂಗಳಿನಿಂದ ಪರಿಶ್ರಮ ಪಡುತ್ತಿದ್ದು ಇದೊಂದು ಬಲಿಷ್ಠ ಸಂಘಟನೆಯಾಗಿ ಮೂಡಿ ಬರಲಿ ಎಂದು ಆಶಿಸಿದರು. Advertisement Advertisement ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಅಡುಗೆ ಕೆಲಸ ಸುಲಭವಾಗಬೇಕು ಎನ್ನುವ ಉದ್ದೇದಿಂದ ಕ್ಯಾಟರಿಂಗ್ ಉದ್ಯಮ ಅಸ್ಥಿತ್ವಕ್ಕೆ ಬಂತು. ಈಗ ಪ್ರತಿಯೊಂದು ಕಾರ್ಯಕ್ರಮಕ್ಕೂ ಕ್ಯಾಟರಿಂಗ್…

Read More

ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಣೆ ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಧವಸ ಧಾನ್ಯ ವಿತರಣ ಕಾರ್ಯಕ್ರಮ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಬುಧವಾರ ನಡೆಯಿತು. Advertisement ಬೆಂಗಳೂರಿನ ಉದ್ಯಮಿ ಏರ್ಯಬೀಡು ಬಾಲಕೃಷ್ಣ ಹೆಗ್ಡೆ ಆಹಾರದ ಕಿಟ್ ವಿತರಿಸಿ ಮಾತನಾಡಿ ರೋಗ ಬಂದ ಕೂಡಲೇ ತಕ್ಷಣ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡಬೇಕು ಆಗ ರೋಗ ಗುಣಮುಖವಾಗಲು ಸಾಧ್ಯವಿದೆ. ಕ್ಷಯರೋಗಿಗಳು ರೋಗ ಗುಣಮುಖವಾಗಲು ಔಷಧಿಯೊಂದಿಗೆ ಸೂಕ್ತ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ತಿಳಿಸಿದರು. ಸೇವಾಂಜಲಿ ಸಂಸ್ಥೆ ನಿರಂತರವಾಗಿ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದು ಕೃಷ್ಣ ಕುಮಾರ್ ಪೂಂಜ ಅವರು ಅರ್ಹರಿಗೆ ಇದನ್ನು ತಲುಪಿಸುತ್ತಿದ್ದಾರೆ ಎಂದರು. ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಣೆ ಬಂಟ್ವಾಳ ರೋಟರಿ ಕ್ಲಬ್ ಸದಸ್ಯ ಬಸ್ತಿ ಮಾಧವ ಶೆಣೈ ಶುಭಹಾರೈಸಿದರು. ವೇದಿಕೆಯಲ್ಲಿ ಉದ್ಯಮಿ ಸಂತೋಷ್ ಹೆಗ್ಡೆ ಬೆಂಗಳೂರು, ಸುರೇಶ್ ರೈ ಪೆಲಪಾಡಿ, ಎಂ.ಕೆ. ಖಾದರ್, ಡಾ…

Read More

ಮಂಗಳೂರು: -ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.4ರ ಮಂಗಳವಾರ ಮಂಗಳೂರು, ಮೂಲ್ಕಿ, ಉಲ್ಲಾಳ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಶಾಲೆಗಳು‌ ಹಾಗೂ‌ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ. Advertisement Advertisement

Read More

ವರಮಹಾಲಕ್ಷ್ಮೀ ವೃತಾಚರಣೆ ಬೆಳ್ಳಿ ಹಬ್ಬ ಮಹೋತ್ಸವ, ಬಂಟ್ವಾಳ ವಲಯದ ಸಭೆ ಬಂಟ್ವಾಳ: ಮಾಣಿಲ ಶ್ರೀಧಾಮದ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ ಬಂಟ್ವಾಳ ವಲಯದ ಪೂರ್ವಭಾವಿ ಸಭೆ ಭಾನುವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ನಡೆಯಿತು. Advertisement ವರಮಹಾಲಕ್ಷ್ಮೀ ವೃತಾಚರಣೆ ಬೆಳ್ಳಿ ಹಬ್ಬ ಮಹೋತ್ಸವ, ಬಂಟ್ವಾಳ ವಲಯದ ಸಭೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನ ಮಾಡಿ ಕಾರ್ಯಕ್ರಮದ ಯಶಸ್ಸಿ ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ವಿಶ್ವ ಹಿಂದು ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಪ್ರಮುಖರಾದ ಜಗನ್ನಾಥಚಚೌಟ ಬದಿಗುಡ್ಡೆ, ಚಂದ್ರಹಾಸ ಶೆಟ್ಟಿನಾರಾಯಣ ಸಿ. ಪೆರ್ನೆ, ತಾರಾನಾಥ ಕೊಟ್ಟಾರಿ, ಸುರೇಶ್ ಕುಲಾಲ್, ದೇವಪ್ಪ ಕುಲಾಲ್, ಮಚ್ಚೇಂದ್ರ ಸಾಲ್ಯಾನ್ ಮೊದಲಾದವರು ಭಾಗವಹಿಸಿದ್ದರು. ಬೆಳ್ಳಿ ಹಬ್ಬ ಸಂಭ್ರಮದ ಸಾಮೂಹಿಕ ವರಮಹಾಲಕ್ಷ್ಮಿ ವೃತಾಚರಣೆ ಜು.16 ರಿಂದ ಆರಂಭಗೊಂಡು ಆ. 25 ರವರೆಗೆ…

Read More

ಲಯನ್ಸ್ ಕ್ಲಬ್ ವತಿಯಿಂದ ಸಾಲುಮರಗಳ ಪೋಷಣೆ ಬಂಟ್ವಾಳ: ಕಳೆದ ಎರಡು ವರ್ಷಗಳ ಹಿಂದೆ ಲಯನ್ಸ್ ಕ್ಲಬ್ ವತಿಯಿಂದ ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಾಲು ಗಿಡಗಳನ್ನು ನಾಟಿ ಮಾಡಲಾಗಿದ್ದು ಇದೀಗ ಗಿಡಗಳು ಬೆಳೆದು ನಿಂತಿದೆ. ಗಿಡಗಳನ್ನು ಲಯನ್ಸ್ ಕ್ಲಬ್ ವತಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದ್ದು ಲಯನ್ಸ್ ಕ್ಲಬ್ ಬಂಟ್ವಾಳದ ಸದಸ್ಯರು ಉದ್ದವಾಗಿ ಬೆಳೆದ ಗಿಡಗಳ ಕೊಂಬೆಗಳನ್ನು ಕತ್ತರಿಸಿ ಗಿಡದ ಪೋಷಣೆ ಮಾಡಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಸದಸ್ಯರಾಧ ಶ್ರೀನಿವಾಸ ಪೂಜಾರಿ, ಸುನೀಲ್ ಬಿ, ಪ್ರಶಾಂತ್ ಉಪಸ್ಥಿತರಿದ್ದರು. Advertisement Advertisement

Read More

ಬಿರುವೆರ್ ಸೇವಾ ಟ್ರಸ್ಟ್ ವತಿಯಿಂದ ಗುರುಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಬಂಟ್ವಾಳ ಇದರ ವತಿಯಿಂದ ಗುರುಪೂರ್ಣಿಮೆಯ ಪ್ರಯುಕ್ತ ಗುರುಪೂಜೆ ಸೋಮವಾರ ಮೊಗರ್ನಾಡುವಿನಲ್ಲಿರುವ ಟ್ರಸ್ಟ್‌ನ ಕಚೇರಿಯಲ್ಲಿ ನಡೆಯಿತು. Advertisement Advertisement ಕೇಶವ ಶಾಂತಿ ಅವರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗುರುಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಇದೇ ಸಂದರ್ಭ ಬಿರುವೆರ್ ಸೇವಾ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವೂ ನಡೆಯಿತು.ಗೌರವಾಧ್ಯಕ್ಷರಾಗಿ ದಿನೇಶ್ ಭಾಗೀರಥಿಕೊಡಿ, ಶ್ರೀಧರ ಮೇಸ್ತ್ರಿ ಸಜನ್ಕಪಲ್ಕೆ, ಕೃಷ್ಣಪ್ಪ ಪೂಜಾರಿ ನಾಟಿ, ಗೌರವ ಸಲಹೆಗಾರರಾಗಿ ಜಗನ್ನಾಥ ಬಂಗೇರ ನಿರ್ಮಾಲ್, ಪುರುಷೋತ್ತಮ ಸಾಲ್ಯಾನ್ ದಿಂಡಿಕೆರೆ, ಮಾಧವ ಕರ್ಬೆಟ್ಟು, ಅಧ್ಯಕ್ಷರಾಗಿ ಸೀತಾರಾಮ್ ಪೂಜಾರಿ ಬೋಳಂತೂರು, ಉಪಾಧ್ಯಕ್ಷರಾಗಿ ಹರೀಶ್ ಮರ್ದೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಪೂಜಾರಿ ನಿರ್ಮಾಲ್, ಜೊತೆ ಕಾರ್ಯದರ್ಶಿಯಾಗಿ ಮೋಹಲತಾ ಮರ್ದೋಳಿ, ಕೋಶಾಧಿಕಾರಿಯಾಗಿ ಉಮೇಶ್ ನೆಲ್ಲಿಗುಡ್ಡೆ, ಟ್ರಸ್ಟಿಗಳಾಗಿ ನಾರಾಯಣ ಪೂಜಾರಿ ದರ್ಕಸ್, ಪುಷ್ಪಾವತಿ ದೇಜಪ್ಪ ದರ್ಕಸ್, ವೀಣಾ ಸಂಜೀವ ಎನ್, ಹರೀಶ್ ಕೆದ್ದೇಲು, ಭಾರತಿ ನಾಯಿಲ, ಮಮತಾ…

Read More

ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ ಶೈಲಜಾ ರಾಜೇಶ್ ಆಯ್ಕೆ ಬಂಟ್ವಾಳ: ತಾಲೂಕು ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ, ನ್ಯಾಯವಾದಿ ಶೈಲಜಾ ರಾಜೇಶ್ ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರವ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಮಹಿಳಾ ಸಮಿತಿಯ ಅಧ್ಯಕ್ಷೆ ರೇವತಿ ಬಡಗಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು. Advertisement Advertisement ಉಪಾಧ್ಯಕ್ಷರಾಗಿ ರಾಗಿಣಿ, ಕಾರ್ಯದರ್ಶಿಯಾಗಿ ರಶ್ಮಿ ಸತೀಶ್ಜತೆ ಕಾರ್ಯದರ್ಶಿಯಾಗಿ ಸರೋಜಿನಿ ಖಜಾಂಚಿಯಾಗಿ ಸುಜಾತಾ ದಿನೇಶ್ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಮಾಜಿ ಅಧ್ಯಕ್ಷರಾದ ನಯನ, ಮಾಲತಿ, ಭಾರತಿ ಕುಂದರ್, ಜಯಲಕ್ಷ್ಮಿ ಸೇರಿದಂತೆ ಬಿಲ್ಲವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭವಾನಿ ಸ್ವಾಗತಿಸಿದರು, ಕಾರ್ಯದರ್ಶಿ ಲಲಿತಾ ವಂದಿಸಿದರು.

Read More

ರೈತ ಸಂಘದ ಸದಸ್ಯರಿರೊಂದಿಗೆ ವಕೀಲ ಧನಂಜಯ ಶೆಟ್ಟಿ ಸಮಾಲೋಚನೆ ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಂಟ್ವಾಳ ತಾಲೂಕು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಧನಂಜಯ ಶೆಟ್ಟಿ ಇವರೊಂದಿಗೆ ಸಮಾಲೋಚನೆಯನ್ನು ಪಾಣೆಮಂಗಳೂರು ಬಂಗಲೆಗುಡ್ಡೆ ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಎಮ್. ಸುಬ್ರಹ್ಮಣ್ಯ ಭಟ್, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳ ಗುತ್ತು, ತಾಲೂಕು ಕಾರ್ಯದರ್ಶಿ ಸುದೇಶ ಮಯ್ಯ, ಜಿಲ್ಲಾ ವಕ್ತಾರ ದಯಾನಂದ ಶೆಟ್ಟಿ, ಮಹಿಳಾ ಸಂಚಾಲಕಿ ವಿಲ್ಮ ಪ್ರಿಯ ಅಲ್ಬುಕರ್ಕ್ ಉಪಸ್ಥಿತರಿದ್ದರು. ತುಂಬೆ ಡ್ಯಾಂ ಸವಕಳಿ ಪ್ರದೇಶದ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸುವ ಬಗ್ಗೆ ರೈತರ ಕುಮ್ಕಿ ಹಕ್ಕಿನ ಬಗ್ಗೆ, ತುಂಬೆ ಡ್ಯಾಮ್ ಸಂತ್ರಸ್ತ ರೈತರಿಗೆ ಒರತೆ ಭೂಮಿಗೆ ಪರಿಹಾರ ಒದಗಿಸುವ ಬಗ್ಗೆ, ನದಿ ತೀರದ ರೈತರ ಪಂಪ್ ಸೆಟ್‌ಗಳ ವಿದ್ಯುತ್ ಶಕ್ತಿ ನಿರ್ಬಂಧಿಸಿ ಜಿಲ್ಲಾಧಿಕಾರಿಗಳ ಆದೇಶ ರದ್ದತಿ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲು…

Read More

ಬಂಟ್ವಾಳ: ಇಲ್ಲಿನ ಖ್ಯಾತ ಫೈಬರ್ ಆರ್ಟ್ ಕಲಾವಿದ ಮನೋಜ್ ಕನಪಾಡಿ ಅವರ ಕೈ ಚಳಕದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರ ತ್ಯಾಗ ಮಾಡಿದ ಅರ್ಜುನನಿಗೆ ಗೀತೋಪದೇಶ ಮಾಡುವ ಶ್ರೀ ಕೃಷ್ಣನ ಬೃಹತ್ ಕಲಾಕೃತಿಯೊಂದು ರಚನೆಗೊಂಡಿದೆ. ಈ ಕಲಾಕೃತಿಯನ್ನು ಮಂಗಳೂರು ಹೊರ ವಲಯದ ಕಿನ್ನಿಗೋಳಿಯ ಎಳತ್ತೂರಿನಲ್ಲಿರುವ ಶ್ರೀ ಶಕ್ತಿ ದರ್ಶನ ಯೋಗಾಶ್ರಮದ ನೂತನ ಮುರಳೀವನದಲ್ಲಿ ಸ್ಥಾಪಿಸಲಾಗಿದೆ.10 ಅಡಿ ಎತ್ತರದ ನಿಂತ ಭಂಗಿಯಲ್ಲಿರುವ ಶ್ರೀ ಕೃಷ್ಣನ ವಿಗ್ರಹ, 6 ಅಡಿ ಎತ್ತರದ ಗೀತೋಪದೇಶವನ್ನು ವಿಧೇಯತೆಯಿಂದ ಆಲಿಸುತ್ತಿರುವ ಅರ್ಜುನನ ವಿಗ್ರಹ, 14 ಅಡಿ ಎತ್ತರದ ಅಶ್ವರೂಢ ರಥ, ನೈಜ ಅಳತೆಯ ಕುದುರೆ, ರಥದ ಮೇಲೆ ಭಗವಾಧ್ವಜ ಹಿಡಿದು ಕುಳಿತಿರುವ ಹನುಮಂತನ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು ನೈಜತೆಯ ಪ್ರತಿರೂಪದಂತಿದೆ. Advertisement Advertisement ಕಳ್ಳಿಗೆಯ ಕುಕ್ಕೆಶ್ರೀ ಕಲಾ ಕುಟೀರದಲ್ಲಿ ಈ ಕಲಾಕೃತಿ ರೂಪು ತಳೆದಿದ್ದು ಕಲಾವಿದನ ಸುಮಾರು ಎರಡು ತಿಂಗಳ ಸತತ ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಆರಂಭದಲ್ಲಿ ಈ ಎಲ್ಲಾ ವಿಗ್ರಹಗಳ ಮಣ್ಣಿನ ಪ್ರತಿರೂಪ ರಚಿಸಿ ಅದರ ಮೂಲಕ ಮೋಲ್ಡ್ ತಯಾರಿಸಿ ಫೈಬರ್…

Read More

ಬಂಟ್ವಾಳ: ಎಫ್ ಇ ಆರ್ ಡಿ ಟ್ರಸ್ಟ್ (ರಿ) ಆಶ್ರಯದಲ್ಲಿ ಪರಿಸರ ಜಾಗೃತಿಗಾಗಿಮೀನು ಉತ್ಸವ ಕಾರ್ಯಕ್ರಮ ಆದಿತ್ಯವಾರ ಬಾಳ್ತಿಲ ಕೆರೆಯಲ್ಲಿ ಜರಗಿತು. Advertisement ಈ ಸಂದರ್ಭದಲ್ಲಿ ಮೀನುಗಳ ಅವಶ್ಯಕತೆ ಹಾಗೂ ಅವುಗಳು ಪರಿಸರದಲ್ಲಿ ಉಂಟು ಮಾಡುವ ಸಮತೋಲನದ ಬಗ್ಗೆ ವಿಚಾರ ವಿನಿಮಯವನ್ನು ನಡೆಸಲಾಯಿತು. ಮೀನುಗಳು ನೀರಿನ ಶುದ್ಧೀಕರಣವನ್ನು ಹೇಗೆ ನಡೆಸುತ್ತವೆ ಎಂಬುದನ್ನು ಮಾದರಿಯ ಮೂಲಕ ಜಾಗೃತಿ ಮೂಡಿಸಲಾಯಿತು. ಕೃಷಿ ಹೊಂಡ, ಇಂಗು ಗುಂಡಿಯ ಮಹತ್ವ ಹಾಗೂ ಅಂತರ್ಜಲ ಹೆಚ್ಚಿಸಲು ನಾವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಟ್ರಸ್ಟ್ ವತಿಯಿಂದ ಬಾಳ್ತಿಲ ಗ್ರಾಮದ ಸರಕಾರಿ ಕೆರೆಗಳಿಗೆ ಹಾಗೂ ಸುತ್ತ ಮುತ್ತಲಿನ ಕೆರೆಗಳಿಗೆ ಮೀನು ಮರಿ ಬಿಡಲಾಯಿತು. ಕಾರ್ಯಕ್ರಮದಲ್ಲಿ ಟಸ್ಟ್‌ನ ಪದಾಧಿಕಾರಿಗಳು, ಸ್ಥಳೀಯರು, ರೈತ ಸಂಘದ ನಾಯಕರು ಭಾಗವಹಿಸಿದ್ದರು. Advertisement

Read More