Author: admin

Advertisements ಬಂಟ್ವಾಳ: ಇಲ್ಲಿನ ಲೋಕೋಪಯೋಗಿ ಇಲಾಖೆ ಉಪವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಪದೋನ್ನತಿಗೊಂಡಿರುವ ಪ್ರೀತಂ ಅವರಿಗೆ ಬೀಳ್ಕೊಡುಗೆ ಸಮಾರಂಭ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಲೋಕೋಪಯೋಗಿ ಇಲಾಖೆಯ ಬಂಟ್ವಾಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜೈಪ್ರಕಾಶ್ ಸಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಪಿಡಬ್ಲ್ಯುಡಿ ಎಇಇ ರಾಜೇಶ್ ರೈ, ಸುಳ್ಯ ಎಇಇ ಗೋಪಾಲ್ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಎಇಇ ತಾರಾನಾಥ ಸಾಲ್ಯಾನ್ ಉಪಸ್ಥಿತರಿದ್ದರು. ಇಂಜಿನಿಯರ್ ಅರುಣ್ ಪ್ರಕಾಶ್ ಡಿಸೋಜಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು ಇಂಜಿನಿಯರ್ ದಿಲೀಪ್ ವಂದಿಸಿದರು. ಈ ಸಂದರ್ಭ ಕಚೇರಿ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಹಾಜರಿದ್ದರು.

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ನಡೆಯುತ್ತಿರುವ ಭರತನಾಟ್ಯ ತರಗತಿಯವಾರ್ಷಿಕ ಸಂಭ್ರಮ ಭಾನುವಾರ ಸಂಜೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು. ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕವಿತಾ ದೇವದಾಸ್ ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿ ಪ್ರಾಚೀನ ನೃತ್ಯ ಕಲೆಯಾದ ಭರತನಾಟ್ಯದ ಹುಟ್ಟು ಹಾಗೂ ದೇವಸ್ಥಾನದ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಭಾವ, ರಾಗ, ತಾಳದ ಸಮ್ಮಿಲನ ಭರತನಾಟ್ಯ. ಇದು ಕೇವಲ ನೃತ್ಯಕಲೆಯಲ್ಲದೆ ಭಗವಂತನನ್ನು ಸಾಕ್ಷತ್ಕರಿಸುವ ಸಾಧನವಾಗಿದೆ. ಮನೋರಂಜನೆಯ ಜೊತೆಗೆ ಸಂಸ್ಕಾರವನ್ನು ನೀಡುತ್ತದೆ, ಇದರಲ್ಲಿರುವ ಮುದ್ರೆಗಳಿಗೆ ವಿಶಿಷ್ಠವಾದ ಅರ್ಥವಿದೆ ಎಂದು ತಿಳಿಸಿದರು. Advertisement ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ತೇವು ತಾರಾನಾಥ ಕೊಟ್ಟಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದು ಗುರು ಪರಂಪರೆ ಉಳಿದಿರುವುದು ಕಲಾಕ್ಷೇತ್ರದಲ್ಲಿ ಮಾತ್ರ. ಕಲೆಗಳು ಆರಾಧನ ಪದ್ದತಿಯಲ್ಲಿದ್ದು ಭರತನಾಟ್ಯದಂತಹ ಕಲೆಯಿಂದ‌ ಸಂಸ್ಕೃತಿ ಉಳಿಯಲು ಸಾಧ್ಯವಿದೆ. ಇದರಿಂದ ಶಾರದೆಯ ಅನುಗ್ರಹವಾಗುವುದರ ಜೊತೆಗೆ ಅಂತಃ ಸತ್ವ ಮಕ್ಕಳಲ್ಲಿ ಜಾಗೃತವಾಗುತ್ತದೆ ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮಾತನಾಡಿ ಕಳೆದ…

Read More

ಬಂಟ್ವಾಳ: ಪಾಣೆಮಂಗಳೂರಿನ ಹಳೇಯ ಉಕ್ಕಿನ ಸೇತುವೆಯ ಅಡಿಭಾಗದಲ್ಲಿ ನೇತ್ರಾವತಿ ನದಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಪ್ಯಾಂಟ್, ಟೀ ಶರ್ಟ್ ಧರಿಸಿದ ಗಂಡಸಿನ ಶವ ಇದಾಗಿದ್ದು ನೀರಿನಲ್ಲಿ ತೇಲಾಡುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಶವ ಮೇಲೆತ್ತುವ ಕಾರ್ಯ ಆರಂಭಿಸಿದ್ದಾರೆ. ಸ್ಥಳದಲ್ಲಿ ಕುತೂಹಲಿಗರ ದಂಡು ಜಮಾಯಿಸುತ್ತಿದೆ Advertisement

Read More

Advertisement ಬಂಟ್ವಾಳ: ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ದಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆಯುತ್ತಿರುವ ವಿಶೇಷ ಪಂಚಾರತಿ ಸೇವೆಯ 3ನೇ ಗುರುವಾರದ ಪಂಚಾರತಿ ಸೇವೆಯು ನಡೆಯಿತು. ಪಂಚ ಅಭ್ಯಾಗತರಾಗಿ ಮುನ್ನೂರು ಮಾಗಣೆಯ – ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ ಆಳ್ವರಪಾಲು, ಟೆಲಿಕಾಂ ಇಲಾಖೆಯ ನಿವೃತ್ತ ಸಬ್ ಡಿವಿಜನಲ್ ಇಂಜಿನಿಯರ್ – ಜನಾರ್ಧನ ಬಂಗೇರ ನಾಗನವಳಚ್ಚಿಲು, ಮಾಣಿಲ ಕುಕ್ಕಾಜೆಯ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕಾರಾಜೆ, ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಗೌರವ ಅಧ್ಯಕ್ಷ ಎನ್. ಕೆ. ಶಿವ ಖಂಡಿಗ, ಸಜೀಪ ಮಾಗಣೆ ಗಟ್ಟಿ ಬಾಂಧವರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಗಟ್ಟಿ ಅಂದಾಡಿ ಭಾಗವಹಿಸಿ ಶ್ರೀ ಅಯ್ಯಪ್ಪ ದೇವರಿಗೆ ಪಂಚಾರತಿ ಬೆಳಗಿದರು. ಎನ್. ಕೆ. ಶಿವ ಖಂಡಿಗ ಮಾತನಾಡಿ ಭೂಮಿ ಖರೀದಿಯಂತಹ ದೊಡ್ಡ ಕಾರ್ಯಕ್ಕೆ ದೇವರ ಅನುಗ್ರಹ ಅತೀ ಅವಶ್ಯ. ಅದಕ್ಕಾಗಿ ಪಂಚಾರತಿ…

Read More

ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯಲ್ಲಿ ನಡೆಯುವ ಮಾರಿಪೂಜೆಯು ಎ.11ರಂದು ಶುಕ್ರವಾರ ರಾತ್ರಿ ನಡೆಯಲಿದೆ. ಬಂಟ್ವಾಳದ ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ನೇಮೋತ್ಸವದ ಬಳಿಕ ವರ್ಷಂಪ್ರತಿಯಂತೆ ಮಾರಿಪೂಜೆಯು ನಡೆಯುತ್ತಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ Advertisement

Read More

Advertisement ಬಂಟ್ವಾಳ: ಸಜೀಪ ಮಾಗಣೆಗೊಳಪಟ್ಟ ಮಿತ್ತಮಜಲು ಕ್ಷೇತ್ರದಲ್ಲಿ ನಡೆಯುವ ವಿಷು ಜಾತ್ರೆಯ ಪ್ರಯುಕ್ತ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಎ‌.8 ರಿಂದ ಎ.15 ರವರೆಗೆ ಆಗೇಲು ಮತ್ತು ಕೋಲ ಸೇವೆ ನಡೆಯುವುದಿಲ್ಲ. ಎ.18 ರಿಂದ ಎಂದಿನಂತೆ ಸೇವೆಗಳು ಮುಂದುವರಿಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ಸರಕಾರದ ಸೌಲಭ್ಯಗಳು ಕಾರ್ಯರೂಪಕ್ಕೆ ಬರ ಬೇಕಾದರೆ ಸೇವಾಂಜಲಿಯಂತಹ ಸ್ಥಳೀಯ ಸಂಘ ಸಂಸ್ಥೆಗಳ ನಿಸ್ವಾರ್ಥ ಸೇವೆಯಿಂದ ಮಾತ್ರ ಸಾಧ್ಯ. ಭಾರತ ಉದ್ಧಾರವಾಗಬೇಕಾದರೆ ಯೋಜನೆಗಳನ್ನು ಡೆಲ್ಲಿಯಲ್ಲಿ ಮಾಡಿದರೆ ಮಾತ್ರ ಸಾಲುವುದಿಲ್ಲ, ಅದು ಹಳ್ಳಿ ಹಳ್ಳಿಗೂ ತಲುಪಿ, ಎಲ್ಲರೂ ಕೈ ಜೋಡಿಸಿದಾಗ ಸಾಧ್ಯವಾಗುತ್ತದೆ ಎಂದು ದೇರಳಕಟ್ಟೆಯ ಜ.ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮೆಡಿಕಲ್ ಸುಪರಿಡೆಂಟ್ ಡಾ. ಸುಮಲತಾ ಆರ್. ಶೆಟ್ಟಿ ಹೇಳಿದರು.ಅವರು ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಶನಿವಾರ ಕ್ಷಯರೋಗಿಗಳಿಗೆ ಆಹಾರ ದವಸಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ಮುಕ್ತ ಭಾರತ ನಮ್ಮ ಪ್ರಧಾನಿಯವರ ಕನಸು. ಅದು ಸಾಕಾರಗೊಳ್ಳಬೇಕಾದರೆ ಕೇವಲ ಕ್ಷಯ ರೋಗಿಗಳು ಮಾತ್ರವಲ್ಲದೆ ಸಾರ್ವಜನಿಕರು, ಸಂಘಟನೆಗಳು, ಆಶಾಕಾರ್ಯಕರ್ತೆಯರು ಜೊತೆಗೂಡಬೇಕು. ಕ್ಷಯ ರೋಗಳ ಸಂಖ್ಯೆ ಕಡಿಮೆಯಾಗಿ ಶೂನ್ಯಕ್ಕೆ ತಲುಪಬೇಕು ಎಂದು ಆಶಿಸಿದರು.ಉದ್ಯಮಿ ವಿನಯ್ ಎನ್. ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷಯ ರೋಗದಿಂದ ಮುಕ್ತವಾಗಲು ಔಷದ ತುಂಬಾ ಮುಖ್ಯ ಅದರ ಜೊತೆಗೆಸರಿಯಾದ ಆಹಾರ ಸೇವನೆಯೂ…

Read More

ಬಂಟ್ವಾಳ: ಲಕ್ಕೇಸಿರಿ ಹಾಗೂ ರಕ್ತೇಶ್ವರೀ ವಿಭಿನ್ನವಾದುದು, ರಕ್ತೇಶ್ವರೀ ದೇವಿಯ ಸ್ವರೂಪ. ಇಲ್ಲಿ ಶಿಲಾ ವಿಗ್ರಹದಲ್ಲಿ ಪೀಠ ಸಹಿತ, ಶಾಸ್ತ್ರೀಯವಾಗಿ ನಿತ್ಯ ಪೂಜೆಯೊಂದಿಗೆ ಶ್ರೀ ರಕ್ತೇಶ್ವರೀಯನ್ನು ಆರಾಧನೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಹೇಳಿದರು.ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನೀದಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯ ಜಿಜ್ಞಾಸು, ಮನುಷ್ಯ ಆವಿಷ್ಕಾರ ಅನುಭೂತಿ ಪಡೆಯುವ, ಅನ್ವೇಷಣೆ ಮಾಡುವ ಚಾಕಚಕ್ಯತೆಯನ್ನು ಇಟ್ಟುಕೊಂಡು ಇತರ ಜೀವಿಗಳಿಗೆ ಭಿನ್ನವಾಗಿದ್ದಾನೆ ಎಂದು ತಿಳಿಸಿದರು. ಧರ್ಮ ದೇವರು, ಪ್ರಕೃತಿಯ ಬಗ್ಗೆ ನಿರಂತರವಾದ ಅಧ್ಯಯನ ನಡೆಯುತ್ತಿದೆ, ಅಧ್ಯಯನ ಮಾಡುತ್ತಲೇ ಅದು ಹೆಚ್ಚು ನಿಗೂಡವಾಗುತ್ತಿದೆ ಎಂದು ತಿಳಿಸಿದರು. Advertisement ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹಿಂದುಗಳು ಈ ಭೂಮಿಯನ್ನು ತಾಯಿಯೆಂದು ಆರಾಧನೆ ಮಾಡುತ್ತಾರೆ. ಇದು ಹಿಂದೂಗಳಿಗೆ ಮಾತೃಭೂಮಿ,…

Read More

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಸೇವಾ ಕಚೇರಿ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ನಡೆಯಿತು.ಬಂಟ್ವಾಳ ತಹಶೀಲ್ದಾರ್ ಸೇವಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಬಂಟ್ವಾಳದ ಜನರನ್ನು ಕಾಯುವ ಶ್ರೀ ರಕ್ತೇಶ್ವರಿ ತಾಯಿಯ ಬ್ರಹ್ಮಕಲಶಾಭಿಷೇಕ ವಿಜ್ರಂಭಣೆಯಿಂದ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಸೇವಾ ಕಚೇರಿ ಉದ್ಘಾಟನೆಯಾಗಿದೆ. ಈ ಉತ್ಸವ ಯಶಸ್ವಿಯಾಗಿ ನಡೆಯಲಿ, ಜಗದಂಬೆ ಎಲ್ಲರಿಗೂ ಒಳಿತು ಮಾಡಲಿ ಎಂದು ಶುಭ ಹಾರೈಸಿದರು. Advertisement ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯಪ್ರಸಾದ್ ಮಾತನಾಡಿ ದೇವಿಯ ಬ್ರಹ್ಮಕಲಶಾಭಿಷೇಕ ಸಂಭ್ರಮದಲ್ಲಿ ಎಲ್ಲರೂ ಸಮಾನ ಮನಸ್ಕಾರಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸೋಣ ಎಂದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ, ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ವಿವಿಧ ಸಮಿತಿಗಳ ಪ್ರಮುಖರಾದ ಸಂಜೀವ ಪೂಜಾರಿ ಗುರುಕೃಪಾ, ಬೇಬಿ ಕುಂದರ್, ಭುವನೇಶ್ ಪಚ್ಚಿನಡ್ಕ, ಎನ್. ಶಿವಶಂಕರ್, ಅಶ್ವನಿ ಕುಮಾರ್ ರೈ, ಐತಪ್ಪ ಪೂಜಾರಿ, ಕೆ. ನಾರಾಯಣ ಹೆಗ್ಡೆ, ಬಿ.ಮೋಹನ್, ಗೋಪಾಲ ಸುವರ್ಣ, ಸತೀಶ್ ಶೆಟ್ಟಿ ಮೊಡಂಕಾಪು,…

Read More

ಬಂಟ್ವಾಳ: ಮಾರ್ನಬೈಲು ಶ್ರೀ ಅಯ್ಯಪ್ಪ ಮಂದಿರದ ಅಭಿವೃದ್ದಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ ೧೮ ಗುರುವಾರ ಪರ್ಯಂತ ನಡೆಯಲಿರುವ ವಿಶೇಷ ಪಂಚಾರತಿ ಸೇವೆಯ ಎರಡನೇ ಗುರುವಾರದ ಪಂಚಾರತಿ ಸೇವೆ ನಡೆಯಿತು. ಉದ್ಯಮಿಗಳಾದ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಜಯರಾಮ ಹೆಗ್ಡೆ ಕುಡ್ವಪಾಲು, ಶ್ರೀ ಕ್ಷೇತ್ರ ನಂದಾವರದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರಾಧಕೃಷ್ಣ ಆಳ್ವ ಕಂಚಿಲ, ಬಂಟ್ವಾಳತಾಲೂಕು ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಉದ್ಯಮಿ ಗೋಪಾಲ ಮೂಲ್ಯ ನೆಲ್ಲಿ ಭಾಗವಹಿಸಿ ಶ್ರೀ ದೇವರಿಗೆ ಪಂಚಾರತಿ ಬೆಳಗಿದರು. Advertisement ಈ ಸಂದರ್ಭ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟಿನ ಗೌರವಾಧ್ಯಕ್ಷರಾದ ಸಂಜೀವ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್ ಬಟ್ಟಡ್ಕ, ಭಜನಾ ಸಮಿತಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ ಪದಾಧಿಕಾರಿ ಪ್ರಮುಖರಾದ ಯಾದವ ಬಂಗೇರ ಕಂಚಿಲ,…

Read More