ಬಂಟ್ವಾಳ : ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ೪ ನೇ ಕಡೆಗೋಳಿ ಶಾಖೆಯ ಉದ್ಘಾಟನೆ ತುಂಬೆ, ಕಡೆಗೋಳಿಯ ಸಾಯಿ ಕಾಂಪ್ಲೆಕ್ಸ್ನ ನೂತನ ಕಟ್ಟಡದಲ್ಲಿ ರವಿವಾರ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ನೂತನ ಶಾಖೆಯನ್ನು ಹಾಗೂ ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಾಮಾಣಿಕ ಸೇವೆಯಿಂದಾಗಿ ದ.ಕ.ಜಿಲ್ಲೆಯಲ್ಲಿ ಸಹಕಾರಿ ಚಳುವಳಿಗಳು ಪರಿಣಾಮಕಾರಿಯಾಗಿ ಬೆಳೆದು ಬಂದಿದೆ. ಸಹಕಾರಿ ಕ್ಷೇತ್ರ ಬೆಳೆಯಬೇಕಾದರೆ ಜನರ ಸಹಕಾರ ಅಗತ್ಯ ಎಂದ ಅವರು, ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ರೈತರಿಗೆ ಶೂನ್ಯ ಬಡ್ಡಿ ದರದ ಸಾಲವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸುವ ಚಿಂತನೆ ಹೊಂದಿದೆ ಎಂದರು.
ತುಂಬೆ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್ ಬಿ.ತುಂಬೆ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಅಮ್ಟಾಡಿ ಸಹಕಾರಿ ಸಂಘವು ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹ ನೀಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಕಾರ್ಯ ಎಂದರು.
ಸಂಘದ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಹಿರಿಯ ಸಹಕಾರಿಗಳ ದೂರದರ್ಶಿತ್ವದಿಂದ ಆರಂಭಗೊಂಡ ಸಂಘವು ಇಂದು ಸ್ವಂತ ಬಂಡವಾಳದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.ಮುಂದಕ್ಕೆ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಅವರು ಶುಭ ಹಾರೈಸಿದರು. ಫರಂಗಿಪೇಟೆ ಸಿಎ ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಬಂಟ್ವಾಳ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿಸೋಜಾ, ಸಹಕಾರ ಅಭಿವೃದ್ಧಿ ಅಧಿಕಾರಿ ಎನ್.ಜೆ.ಗೋಪಾಲ್, ಕಟ್ಟಡದ ಮಾಲಕ ವಿನಯಕುಮಾರ್ ಕಡೆಗೋಳಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ ಕುಮಾರ್ ಅಜಿಲ, ಎಸ್ಸಿಡಿಸಿಸ ಬ್ಯಾಂಕ್ ವಲಯ ಮೇಲ್ವಿಚಾರಕ ಎಚ್.ಕೇಶವ ಕಿಣಿ, ನಿರ್ದೇಶಕರಾದ ನರಸಿಂಹ ಹೊಳ್ಳ, ಪದ್ಮನಾಭ ರಾವ್, ತೋಮಸ್ ಸಲ್ಢಾನಾ, ಅನಿಲ್ ಪಿಂಟೋ, ಶಿವಪ್ರಸಾದ್ ಕನಪಾಡಿ, ಕಮಲಾಕ್ಷ, ರಮೇಶ್, ಪೂರ್ಣಿಮಾ ಕೆಂಪುಗುಡ್ಡೆ, ಫ್ಲೋಸಿ ಡಿಸೋಜ, ಪೂರ್ಣಿಮಾ ಬೆದ್ರಗುಡ್ಡೆ, ವಿವಿಧ ಶಾಖೆಗಳ ಪ್ರಬಂಧಕರು, ಸಿಬಂದಿ ವರ್ಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಥಮ ಠೇವಣಿ ಪತ್ರವನ್ನು ರಾಮಣ್ಣ ಪೂಜಾರಿ ಕಂಗಿತ್ತಿಲು ಅವರಿಗೆ ವಿತರಿಸಲಾಯಿತು. ಆರ್ಡಿ ಖಾತೆಗಳ ಪಾಸ್ ಬುಕ್ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಆಲ್ವಿನ್ ವಿನಯ್ ಲೋಬೊ ಸ್ವಾಗತಿಸಿದರು. ನಿರ್ದೇಶಕ ಬಿ.ಸುರೇಶ್ ಭಂಡಾರಿ ಅರ್ಬಿ ವಂದಿಸಿದರು. ಲೊರೆಟ್ಟೊ ಶಾಖೆಯ ಪ್ರಬಂಧಕ ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.