Author: admin
ಬಂಟ್ವಾಳ: ತನ್ನ ಕೆಲಸದ ಸಹಾಯಕನೇ ಮನೆಯಲ್ಲಿ ಕಳ್ಳತನ ಮಾಡಿ ನಗ ನಗದು ದೋಚಿ ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುದುವಿನಲ್ಲಿ ನಡೆದಿದೆ.ಇಲ್ಲಿನ ನಿವಾಸಿ ಮೊಹಮ್ಮದ್ ಝಫರುಲ್ಲಾ (36) ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು ಅವರ ಕಟ್ಟಡ ಕಾಮಗಾರಿಯ ಸಹಾಯಕ ಅಲಿ ಎಂಬಾತನೇ ಮಾಲಕನಿಗೆ ವಿಶ್ವಾನದ್ರೋಹ ಎಸಗಿ ಕಳವು ನಡೆಸಿದ ಆರೋಪಿ. ಮೊಹಮ್ಮದ್ ಝಫರುಲ್ಲಾ (36) ಅವರು ಬಿಲ್ಡರ್ ವ್ಯವಹಾರ ಮಾಡಿಕೊಂಡಿದ್ದು ಅವರ ಜೊತೆ ಸುಮಾರು 7-8 ತಿಂಗಳಿಂದ ಕಟ್ಟಡ ಕಾಮಗಾರಿಯ ಸಹಾಯಕನಾಗಿ ಆಲಿ ಎಂಬಾತನು ಕೆಲಸ ಮಾಡಿಕೊಂಡಿದ್ದು ಮಾಲಕನ ಜೊತೆ ವಿಶ್ವಾಸದಿಂದ ಇದ್ದ. ಅ. 18 ರಂದು ಝಪರುಲ್ಲಾ ಅವರ ಮನೆಯಲ್ಲಿದ್ದ ಅವರ ತಂದೆ, ತಾಯಿ, ಅಕ್ಕ, ತಂಗಿ ಯವರು ಅವರ ತಮ್ಮನ ಮನೆಗೆ ಹೋಗಲು ತಮ್ಮ ಮನೆಗೆ ಬೀಗ ಹಾಕಿ ಮನೆಯ ಕೀಯನ್ನು ಆಲಿಗೆ ನೀಡಿದ್ದಾರೆ. ಅ. 23 ರಾತ್ರಿ ಝಪರುಲ್ಲಾ ಮನೆಯವರು ಮನೆಗೆ ಹಿಂತಿರುಗಿ, ಮನೆಯ ಕೀಯನ್ನು ಪಡೆಯಲು ಆಲಿಗೆ ಪೋನ್ ಕರೆ ಮಾಡಿದಾಗ ಮೊಬೈಲ್…
ಬಂಟ್ವಾಳ: ಕುರಿಯಾಳ ಗ್ರಾಮ ದುರ್ಗಾ ನಗರದ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದಲ್ಲಿ ನವರಾತ್ರಿ ದುರ್ಗಾಷ್ಟಮಿಯ ಪ್ರಯುಕ್ತ ಶ್ರೀ ದೇವರಿಗೆ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ಸಂಪನ್ನಗೊಂಡಿತು.ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಸುದರ್ಶನ್ ಬಲ್ಲಾಳ್ ಪೌರೋಹಿತ್ಯ ನೆರವೇರಿಸಿದರು.ಈ ಸಂದರ್ಭ ಭಜನೆ ಮಂಗಳ, ನವರಾತ್ರಿ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ವೇಷಗಳ ಪ್ರದರ್ಶನ:ಅ. 23ರಂದು ಸೋಮವಾರ ಬೆಳಗ್ಗೆ 8ಕ್ಕೆ ಶ್ರೀ ದೇವಿಗೆ ಪೂಜೆ, ವಾಹನ ಪೂಜೆ, ಸಂಜೆ 6.30ರಿಂದ ಭಜನೆ ಪ್ರಾರಂಭಗೊಂಡು ರಾತ್ರಿ 8.30ಕ್ಕೆ ಭಜನೆ ಮಂಗಳ, ನವರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9.30ರಿಂದ ವೇಷಗಳ ಪ್ರದರ್ಶನ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ತುಳಸಿಕಲಾ ತಂಡ ಕುರಿಯಳದಿಂದ ‘ಪೊಣ್ಣು ಬಾಲೆ’ ನಾಟಕ ಪ್ರದರ್ಶನಗೊಳ್ಳಲಿದೆ
ಬಂಟ್ವಾಳ: ಕರಾವಳಿಯ ಜನರು ಗೌರವಿಸಿ, ಅರಾಧಿಸುವ ತುಳುನಾಡಿನ ಶ್ರೇಷ್ಠ ಜಾನಪದ ಕಲೆ ಯಕ್ಷಗಾನದ ವೇಷ ಧರಿಸಿ ದಸರ ವೇಷವೆಂದು ಜನರಲ್ಲಿ ಭಿಕ್ಷೆ ಬೇಡುವುದನ್ನು ಆಕ್ಷೇಪಿಸಿದ ಹಿರಿಯ ಯಕ್ಷಗಾನ ಕಲಾವಿದರು ಸ್ಥಳದಲ್ಲೇ ವೇಷಧಾರಿಯೊಬ್ಬನ ವೇಷವನ್ನು ಕಳಚಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ದಸರ ಹಬ್ಬದ ನೆಪದಲ್ಲಿ ದಾವಣಗೆರೆಯ ವ್ಯಕ್ತಿಯೊಬ್ಬ ಯಕ್ಷಗಾನದ ವೇಷ ಧರಿಸಿ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡುತ್ತಿದ್ದ. ಇದನ್ನು ಗಮನಿಸಿದಂತಹ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿಯವರು ವೇಷಧಾರಿಯನ್ನು ನಿಲ್ಲಿಸಿ ಯಕ್ಷಗಾನದ ವೇಷಕ್ಕೆ ತನ್ನದೇ ಆದ ಗೌರವ ಇದೆ. ಅದು ಅನೇಕ ಮಂದಿ ಕಲಾವಿದರಿಗೆ ಬದುಕು ನೀಡಿದೆ. ಯಕ್ಷ ವೇಷ ಧರಿಸಿ ಭಿಕ್ಷೆ ಬೇಡುವುದು, ಯಕ್ಷಗಾನವನ್ನು ಅವಮಾನಿಸುವುದು ಸರಿಯಲ್ಲ. ತಕ್ಷಣ ವೇಷ ಕಳಚುವಂತೆ ಒತ್ತಾಯಿಸಿದ್ದಲ್ಲದೆ ವೇಷ ಕಳಚುವರೆಗೂ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಯಕ್ಷಗಾನ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಕೊನೆಗೂ ವೇಷ ಕಳಚಿ, ಕ್ಷಮೆ ಕೇಳಿ ತೆರಳ ಬೇಕಾಯಿತು.
ಬಂಟ್ವಾಳ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡು ಶತಮಾನ ಪೂರೈಸಿರುವ ಪಾಣೆಮಂಗಳೂರಿನ ಹಳೆ ಉಕ್ಕಿನ ಸೇತುವೆಯಲ್ಲಿ ಘನವಾಹನಗಳ ಸಂಚಾರ ನಿಷೇಧಿಸುವ ಉದ್ದೇಶದಿಂದ ಮೇಲ್ಭಾಗಕ್ಕೆ ಹಾಕಿರುವ ತಡೆಬೇಲಿ ಒಂದೇ ದಿನದಲ್ಲಿ ಕಿತ್ತು ಬಿದ್ದಿದೆ. ಶುಕ್ರವಾರ ಸೇತುವೆಯ ಎರಡೂ ಬದಿಗಳಲ್ಲೂ ಕಬ್ಬಿಣದ ತಡೆಬೇಲಿ ಅಳವಾಡಿಸಲಾಗಿತ್ತು. ಶನಿವಾರ ಬೆಳಿಗ್ಗೆ ಸರಕು ಸಾಗಿಸುವ ಗೂಡ್ಸ್ ಟೆಂಪೊವೊಂದು ತಡೆಬೇಲಿಯ ಅರಿವಿಲ್ಲದೆ ಸಂಚರಿಸಿದ ಕಾರಣ ಒಂದು ಪಾರ್ಶ್ವದ ಕಬ್ಬಿಣದ ಬೀಮ್ ಕೆಳಕ್ಕುರುಳಿದೆ. ಕಳೆದ ಕೆಲ ದಿನಗಳ ಹಿಂದೆ ಪಾಣೆಮಂಗಳೂರಿನ ಉಕ್ಕಿನ ಸೇತುವೆಯಲ್ಲಿ ಡಾಮರು ಕಿತ್ತು ಹೋಗಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹಬ್ಬಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಸಹಿತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘನವಾಹನಗಳ ಸಂಚಾರದಿಂದ ಬಿರುಕು ಕಾಣಿಸಿದೆ ಎನ್ನುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದ ಹಿನ್ನಲೆಯಲ್ಲಿಘನ ವಾಹನಗಳ ಸಂಚಾರವನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸೇತುವೆಯ ಮೇಲ್ಬಾಗದಲ್ಲಿ ಅಡ್ಡಲಾಗಿ ತಡೆಬೇಲಿಯನ್ನು ಅಳವಡಿಸಲು ತೀರ್ಮಾನಿಸಲಾಗಿತ್ತು. ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಇನ್ನು ಮುಂದೆ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರುಗಳ ಸಂಚಾರಕ್ಕೆ…
ಉಳ್ಳಾಲ: ತಾಲೂಕಿನ ಪಾವೂರು, ಹರೆಕಳ, ಅಂಬ್ಲಮೊಗರು, ಗ್ರಾಮ ವ್ಯಾಪ್ತಿಗೊಳಪಟ್ಟ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದ್ದು ಹರೇಕಳ ಸಂಪಿಗೆದಡಿ ಮನೆತನದವರಿಂದ ಶ್ರೀ ದೇವರಿಗೆ ಸರ್ವಾಲಂಕರ ಪೂಜೆ ನಡೆಯಿತು. ಬೆಳಿಗ್ಗೆ 7.30ಕ್ಕೆ ದೇವರಿಗೆ ನಿತ್ಯ ಪೂಜೆ ನಡೆಯಿತು. 8.30ರಿಂದ ಗಣಹೋಮ, ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳಿಗೆ ಪಂಚಪರ್ವ ನಡೆಯಿತು. ಬಳಿಕ ಕ್ಷೇತ್ರದ ಮಹಿಳಾ ಭಕ್ತರಿಂದ ಲಲತಾ ಸಹಸ್ರನಾಮ ಪಠಣ ನೆರವೇರಿತು. ಮಧ್ಯಾಹ್ನ 12.15ಕ್ಕೆ ಸಂಪಿಗೆದಡಿ ಮನೆತನದವರಿಂದ ಸರ್ವಾಲಂಕರ ಪೂಜೆ ಹಾಗೂ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮೋಕ್ತೇಸರ ಮೋಹನದಾಸ ರೈ, ಗೌರವಾಧ್ಯಕ್ಷ ರಾಜೀವ ಆಳ್ವ, ಭಾಸ್ಕರ ರೈ ಸಹಿತ ಸಂಪಿಗೆದಡಿ ಮನೆತನದ ಕುಟುಂಬಿಕರು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು. ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 6 ಗಂಟೆಯಿಂದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಭಜನಾ ಸಂಕೀರ್ತನೆ, ಬಳಿಕ ಟಿ. ಆರ್ ಪೂಂಜ ಮತ್ತು ಕುಟುಂಬಸ್ಥರಿಂದ ಶ್ರೀ ದೇವರಿಗೆ ರಂಗಪೂಜೆ…
ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಬಾಂಬಿಲ, ತಲೆಂಬಿಲ ನಿವಾಸಿ ವಿಲ್ಮಾ ಪ್ರಿಯಾ ಅಲ್ಬುಕರ್ಕ್ ಸಮಗ್ರ ಕೃಷಿಯ ಮೂಲಕ ಖುಷಿ ಕಂಡು ಕೊಂಡಿದ್ದಾರೆ. ಎಂಎಸ್‌ಡಬ್ಲ್ಯು ಪದವೀಧರೆಯಾಗಿರುವ ವಿಲ್ಮಾ ಕೃಷಿಯಲ್ಲಿ ಆಸಕ್ತಿ ಕಂಡು ಕೊಂಡು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.ಸ್ನಾತಕೋತ್ತರ ಪದವಿಧರೆಯಾಗಿದ್ದ ವಿಲ್ಮಾ ಉದ್ಯೋಗವನ್ನು ಅರಸಿಕೊಂಡು ಹೋದರು ಸೂಕ್ತವಾದ ಕೆಲಸ ಕೈ ಹಿಡಿಯದೇ ಇದ್ದಾಗ ಕೃಷಿ ಕ್ಷೇತ್ರದತ್ತ ಆಸಕ್ತಿ ಹೊಂದಿದರು. ಇವರ ಪತಿ ಟೆರೆನ್ಸ್ ಅರುಣ್ ಡಿಸೋಜಾ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಿಯಾಗಿದ್ದು ಬಳಿಕ ಊರಿಗೆ ಮರಳಿ ಇತರ ಉದ್ಯೋಗದತ್ತ ಗಮನ ಹರಿಸದೇ ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಕ್ರಾಂತಿ ಮಾಡಲು ಮುಂದಡಿ ಇಟ್ಟರು. ಪತ್ನಿ ವಿಲ್ಮಾ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದು ಪತ್ನಿಯ ಕೃಷಿ ಸಾಧನೆಗೆ ಪತಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಮನೆ ಆವರಣವೇ ಕೃಷಿ ಕ್ಷೇತ್ರ: ಸಮಗ್ರ ಕೃಷಿಯನ್ನು ಅವಲಂಬಿಸಿಕೊಂಡಿರುವ ವಿಲ್ಮಾ ಅವರ ಮನೆ ಆವರಣವೇ ಕೃಷಿ ಸಾಧನೆಯ ಕ್ಷೇತ್ರ. ವಾಣಿಜ್ಯ ಬೆಳೆಗಳಾಗಿ ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್ ಇದ್ದರೆ ಬೆಂಡೆ,…
ಬಂಟ್ವಾಳ: ತೆಂಗಿನ ಗೆರಟೆಯ ಮೂಲಕ ಕಲಾಕೃತಿಗಳನ್ನು ತಯಾರಿಸುವ ಇರಾ ಗ್ರಾಮದ ಸಚ್ಚೀಂದ್ರ ಅವರು ದಸರಾ ಹಬ್ಬದ ಸುಸಂದರ್ಭದಲ್ಲಿ ಗೆರಟೆಯಿಂದಲೇ ಆಕರ್ಷಕ ಹುಲಿ ಮುಖವರ್ಣಿಕೆಯನ್ನು ರಚಿಸಿದ್ದಾರೆ. ತೆಂಗಿನ ಗೆರಟೆ, ಗೆರಟೆ ಹುಡಿ, ಅಂಟು ಬಳಸಿ ಹುಲಿ ಮುಖವಾಡ ರಚಿಸಿದ್ದಾರೆ. ಸುಮಾರು 17 ದಿನಗಳ ಪರಿಶ್ರಮದಿಂದ ಸುಂದರವಾದ ಘರ್ಜಿಸುವ ಹುಲಿ ಮುಖ ಸಿದ್ದಗೊಂಡಿದೆ. ವ್ಯರ್ಥ ವಾಗಿ ಹೋಗುವ ತೆಂಗಿನ ಗೆರಟೆಳನ್ನು ಬಳಸಿಕೊಂಡು ಆಕರ್ಷಕ ಕಲಾಕೃತಿಗಳನ್ನು ಸಚ್ಚೀಂದ್ರ ಅವರು ರಚಿಸುವ ಬಗ್ಗೆ ಇತ್ತೀಚೆಗೆ ವಿಜಯವಾಣಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದೀಗ ಸಚ್ಚೀಂದ್ರ ಅವರ ಕೈಚಳಕದಲ್ಲಿ ಪ್ರಥಮ ಬಾರಿಗೆ ಹುಲಿ ಮುಖವರ್ಣಿಕೆ ತಯಾರಾಗಿದ್ದು, ಜನರನ್ನು ತನ್ನತ್ತ ಸೆಳೆಯುತ್ತಿದೆ.
ಬಂಟ್ವಾಳ: ಹಣಕಾಸಿನ ತೊಂದರೆಯಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದೇ ಅರ್ಧದಲ್ಲೇ ಬಾಕಿ ಉಳಿದಿದ್ದ ಬಡ ಮಹಿಳೆಯ ಮನೆ ನಿರ್ಮಾಣದ ಕೆಲಸವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್ ನಗರ ಸಜೀಪಮೂಡ ಇದರ ಬೊಳ್ಳಾಯಿ ಉಪ ಸಮಿತಿ ಪೂರ್ಣಗೊಳಿಸಿ ಮಾನವೀಯತೆ ಮೆರೆದಿದೆ. ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೃಹಪ್ರವೇಶ ಮಾಡಿ ಗಣ್ಯರ ಉಪಸ್ಥಿತಿಯಲ್ಲಿ ಮನೆಯನ್ನು ಮನೆಯೊಡತಿಗೆ ಹಸ್ತಾಂತರಿಸಿದೆ. ಸಜೀಪಮೂಡ ಗ್ರಾಮದ ನಿವಾಸಿ ವಿಮಲ ಎಂಬವರ ಪತಿ ಎರಡೂವರೆ ವರ್ಷಗಳ ಹಿಂದೆ ನಿಧನರಾಗಿದ್ದರು. ಕೂಲಿ ಕೆಲಸ ಮಾಡಿ ತನ್ನೋರ್ವ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ಬಡತನದಲ್ಲಿ ಜೀವನ ನಡೆಸುತ್ತಿದ್ದ ಅವರು ಸ್ವಂತ ಸೂರು ನಿರ್ಮಿಸಬೇಕು ಎನ್ನುವ ಕನಸಿನೊಂದಿಗೆ ಮಿತ್ತಮಜಲು ಬಳಿಯ ನೈಪಾಡಿ ಎಂಬಲ್ಲಿ ೩ ಸೆಂಟ್ಸ್ ಜಮೀನು ಖರೀದಿಸಿ ಸ್ಥಳೀಯ ಪಂಚಾಯತಿ ಮುಖಾಂತರ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮುಂದಾಗಿದ್ದರು. ಆದರೆ ಹಣಕಾಸಿನ ಅಡಚಣೆಯಂದ ಮನೆ ಪೂರ್ಣಗೊಳಿಸಲು ಸಾಧ್ಯವಾಗದೆ ಪರಿತಪಿಸಬೇಕಾಯಿತು. ಈ ಬಗ್ಗೆ ಮಾಹಿತಿ ಪಡೆದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್ ನಗರ ಸಜೀಪಮೂಡ…
ಬಂಟ್ವಾಳ: ಪ್ರಾದೇಶಿಕವಾರು ಜಾತಿ ವಿಂಗಡನೆಯಲ್ಲಿ ನಾವು ಸೋತಿದ್ದೇವೆ. ವಿಶ್ವದಲ್ಲಿ ನಾವು ಗರಿಷ್ಠ ಸಂಖ್ಯೆಯಲ್ಲಿದ್ದರೂ ಜಾತಿಗಣತಿಯಲ್ಲಿ ನಾವು ಕನಿಷ್ಟರಾಗಿದ್ದೇವೆ ಅದಕ್ಕೆ ಕಾರಣ ನಮ್ಮ ಕುಲ ಕಸುಬು ಒಂದೇ ಆಗಿದ್ದರೂ ಬೇರೆ ಬೇರೆ ಜಾತಿ ಹೆಸರಲ್ಲಿ ನಮ್ಮ ಕುಲ ಬೇರ್ಪಡಿಸಿದೆ, ನಮ್ಮ ಒಗ್ಗಟ್ಟಿನ ಶಕ್ತಿ ಇನ್ನೂ ಹೆಚ್ಚ ಬೇಕು ಎಂದು ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಅವರು ಬಿ.ಸಿ.ರೋಡು ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಕುಲಾಲ- ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ೨೦೨೩-೨೫ ರ ಸಾಲಿನ ನೂತನ ಆಡಳಿತ ಸಮಿತಿಯ ಪದ ಪ್ರದಾನ, ನೂತನ ಕಛೇರಿಯ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ಒಸರ್ದ ಕಂಡೊಡು ಕೆಸರ್ದ ಗೊಬ್ಬುಲು ಎನ್ನುವ ಕೆಸರುಗದ್ದೆ ಪಂದ್ಯಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಮುಳಿಯ ಶ್ರೀ ವೈಷ್ಣವಿ ಆದಿಶಕ್ತಿ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದ ಸಂಘಟನೆಗಳು ದುಂದುವೆಚ್ಚವನ್ನು ಬಿಟ್ಟು…
ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪ ಮೂಡ ಇದರ ಪ್ರೌಢಶಾಲಾ ವಿಭಾಗದ ಮೂರು ದಿನಗಳ ಚಿಗುರು ವ್ಯಕ್ತಿತ್ವ ವಿಕಸನ ಶಿಬಿರವನ್ನು ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಅಧ್ಯಕ್ಷೆ ರಮಾ ಜಿ. ಆಚಾರ್ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿ ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ., ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್, ಎಸ್ ಡಿಎಂ ಸಿ ಸದಸ್ಯ ಸೀತಾರಾಮ ಅಗೋಳಿಬೆಟ್ಟು, ಸಂಪನ್ಮೂಲ ವ್ಯಕ್ತಿ ಶೀನ ನಾಡೋಳಿ ಮೊದಲಾದವರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ ಆಲಿಸ್ ಪಾಯಿಸ್ ಸ್ವಾಗತಿಸಿದರು, ಶಿಬಿರ ಸಂಯೋಜಕ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಚಕರಾದ ಸುಲೋಚನ ಭಟ್ ವಂದಿಸಿದರು, ವೆಂಕಟರಮಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು.








