
ಬಂಟ್ವಾಳ: ಫಾದರ್ ಮುಲ್ಲರ್ ಆಸ್ಪತ್ರೆ ವತಿಯಿಂದ ತುಂಬೆ ಜಂಕ್ಷನ್ನಲ್ಲಿ ನಿರ್ಮಿಸಿದ ಬಸ್ ತಂಗುದಾಣವನ್ನು ತುಂಬೆ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್ ಬಿ ತುಂಬೆ ಉದ್ಘಾಟಿಸಿದರು. ಅವರು ಮಾತನಾಡಿ ತುಂಬೆ ಗ್ರಾಮವು ಸ್ಮಾರ್ಟ್ ಸಿಟಿ ಆಗುವಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಹಾಗೂ ಬಿ.ಎ ಗ್ರೂಪ್ನ ಕೊಡುಗೆ ಅಪಾರವಾದದ್ದು. ನಾವೆಲ್ಲರು ಪ್ರೀತಿಯಿಂದ, ಸಹಬಾಳುವೆಯಿಂದ ಕೆಲಸ ಮಾಡುವುದು ಬಹು ಮುಖ್ಯ ಎಂದರು.



ಬಿ.ಎ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕರಾದ ಬಿ ಅಬ್ದುಲ್ ಸಲಾಂ, ತುಂಬೆ ಪಂಚಾಯತಿ ಪಿಡಿಓ ಚಂದ್ರಾವತಿ , ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ರಿಚ್ಚರ್ಡ್ ಅಲೋಷಿಯಸ್ ಕೊವೆಲ್ಲೋ, ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಶೆಟ್ಟಿ, ಪಂಚಾಯತಿಸದಸ್ಯ ಮಹಮ್ಮದ್ ವಳವೂರು ಉಪಸ್ಥಿತರಿದ್ದರು.
ಜೇಸನ್ ಕರ್ಕಡ ವಂದಿಸಿದರು. ಸುಷ್ಮಾ ಪ್ರಶಾಂತ್ ಕಾರ್ಯಕ್ರಮವನ್ನು ನಿರೂಪಿಸಿದರು
