ಬಂಟ್ವಾಳ: ಎಫ್ ಇ ಆರ್ ಡಿ ಟ್ರಸ್ಟ್ (ರಿ) ಆಶ್ರಯದಲ್ಲಿ ಪರಿಸರ ಜಾಗೃತಿಗಾಗಿ
ಮೀನು ಉತ್ಸವ ಕಾರ್ಯಕ್ರಮ ಆದಿತ್ಯವಾರ ಬಾಳ್ತಿಲ ಕೆರೆಯಲ್ಲಿ ಜರಗಿತು.
Advertisement
Advertisement
Advertisement
ಈ ಸಂದರ್ಭದಲ್ಲಿ ಮೀನುಗಳ ಅವಶ್ಯಕತೆ ಹಾಗೂ ಅವುಗಳು ಪರಿಸರದಲ್ಲಿ ಉಂಟು ಮಾಡುವ ಸಮತೋಲನದ ಬಗ್ಗೆ ವಿಚಾರ ವಿನಿಮಯವನ್ನು ನಡೆಸಲಾಯಿತು. ಮೀನುಗಳು ನೀರಿನ ಶುದ್ಧೀಕರಣವನ್ನು ಹೇಗೆ ನಡೆಸುತ್ತವೆ ಎಂಬುದನ್ನು ಮಾದರಿಯ ಮೂಲಕ ಜಾಗೃತಿ ಮೂಡಿಸಲಾಯಿತು. ಕೃಷಿ ಹೊಂಡ, ಇಂಗು ಗುಂಡಿಯ ಮಹತ್ವ ಹಾಗೂ ಅಂತರ್ಜಲ ಹೆಚ್ಚಿಸಲು ನಾವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಟ್ರಸ್ಟ್ ವತಿಯಿಂದ ಬಾಳ್ತಿಲ ಗ್ರಾಮದ ಸರಕಾರಿ ಕೆರೆಗಳಿಗೆ ಹಾಗೂ ಸುತ್ತ ಮುತ್ತಲಿನ ಕೆರೆಗಳಿಗೆ ಮೀನು ಮರಿ ಬಿಡಲಾಯಿತು. ಕಾರ್ಯಕ್ರಮದಲ್ಲಿ ಟಸ್ಟ್ನ ಪದಾಧಿಕಾರಿಗಳು, ಸ್ಥಳೀಯರು, ರೈತ ಸಂಘದ ನಾಯಕರು ಭಾಗವಹಿಸಿದ್ದರು.
Advertisement