Author: admin

ಬಂಟ್ವಾಳ: ರೋಟರಿ ಜಿಲ್ಲೆ ೩೧೮೧ರ ಪ್ರಸ್ತತ ಸಾಲಿನ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರೊಂದಿಗೆ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಈ ವರ್ಷದ ಅಮೋಘ ಯಶಸ್ಸಿಗೆ ಕಾರಣಿಕರ್ತರಾದ ರೋಟರಿ ಜಿಲ್ಲೆಯ ಪದಾಧಿಕಾರಿಗಳಿಗೆ, ರೋಟರಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಧನ್ಯೋಸ್ಮಿ ಶನಿವಾರ ಸಂಜೆ ಬೆಂಜನಪದವಿನ ಶುಭ ಆಡಿಟೋರಿಯಂನಲ್ಲಿ ನಡೆಯಿತು. Advertisement Advertisement ಕಾರ್ಯಕ್ರಮವನ್ನು ಜಿಲ್ಲಾ ಸಹಾಯಕ ತರಬೇತುದಾರ ಎಂ. ಎಂ. ಸುರೇಶ್ ಚೆಂಗಪ್ಪ ಹಾಗೂ ಪೂರ್ವ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಸಹಾಯಕ ತರಬೇತುದಾರ ಎಂ. ಎಂ. ಸುರೇಶ್ ಚೆಂಗಪ್ಪ ಮಾತನಾಡಿ ಪ್ರಕಾಶ್ ಕಾರಂತ್ ಅವರ ಮುಖದಲ್ಲಿ ಒಂದು ನಗುವಿದೆ, ಆ ನಗುವಿನ ಹಿಂದೆ ಆಕಾಂಕ್ಷೆ ಇದೆ. ತಾನು ಮಾಡುವ ಪ್ರತಿಯೊಂದು ಕೆಲಸ ವಿಭಿನ್ನವಾಗಿರಬೇಕು ಎನ್ನುವ ಕಲ್ಪನೆಯಿಟ್ಟುಕೊಂಡು ಅದಕ್ಕಾಗಿ ಅವಿರತ ಶ್ರಮ ಪಟ್ಟು ಯಶಸ್ವಿಯಾಗಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ 3182 ಪೂರ್ವ ಗವರ್ನರ್ ಅಭಿನಂದನ್ ಶೆಟ್ಟಿ ಮಾತನಾಡಿ ನಮ್ಮ ಕಲ್ಪನೆಗೂ ಮೀರಿದ ನಾಯಕತ್ವ ಪ್ರಕಾಶ್ ಕಾರಂತ್ ಅವರನ್ನು…

Read More

ಬಂಟ್ವಾಳ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಯಥಾಸ್ಥಿತಿ ಮುಂದುವರಿಸಲು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ತೋಟಗಾರಿಕಾ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ರಾಜ್ಯ ಸರಕಾರ ದ ಪಾಲುದಾರಿಕೆಯಲ್ಲಿ ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನ ಗೊಂಡು ಹವಾಮಾನ ವೈಫಲ್ಯರೀತ್ಯಗಳಿಂದ ಬೆಳೆಗಳು ಹಾನಿಗೋಳಗಾಗಿ ನಷ್ಟ ಅನುಭವಿಸಿದಾಗ ರೈತರಿಗೆ ಸ್ವಲ್ಪ ಮಟ್ಟಿನಲ್ಲಿ ಸಂಕಷ್ಟ ಪರಿಹಾರ ಗೊಂಡು ಜೀವನಕ್ಕೆ ಒಂದಷ್ಟು ವರದಾನ ವಾಗುತ್ತಿತ್ತು. ಈ ಯೋಜನೆ ಯಿಂದ ಕರಾವಳಿಯ ಅಡಿಕೆ ಮತ್ತು ಕರಿಮೆಣಸು ಬೆಳೆಯುವ ರೈತರಿಗೆ ತುಂಬಾ ಅನುಕೂಲವಾಗುತ್ತಿತ್ತು. ಈ ಯೋಜನೆಯ ಒಟ್ಟು ಪ್ರೀಮಿಯಂ ಮೊತ್ತದ ಶೇ ೧೦ ರಷ್ಟು ಪಾಲು ರೈತ ಪಾವತಿ ಮಾಡುತ್ತಿದ್ದು, ಉಳಿದಂತೆ ಶೇ ೯೦ ರಷ್ಟು ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಗಳ ಸಹಯೋಗದಲ್ಲಿ ಭರಿಸಿಕೊಂಡು ರೈತರ ಸಂಕಷ್ಟಕ್ಕೆ ಕೇಂದ್ರ ಮತ್ತು…

Read More

ಜೆಸಿಐ ಬಂಟ್ವಾಳದ ವತಿಯಿಂದ ಹಣ್ಣಿನ ಗಿಡ ನಾಟಿ ಬಂಟ್ವಾಳ: ಜೆಸಿಐ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಜೆಸಿಐ ಬಂಟ್ವಾಳದ ವತಿಯಿಂದ ಬ್ರಹ್ಮರಕೂಟ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನಡೆಲಾಯಿತು. ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ., ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಪೂರ್ವಾಧ್ಯಕ್ಷ ಸದಾನಂದ ಬಂಗೇರ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. Advertisement Advertisement

Read More

ಬಂಟ್ವಾಳ: ಕರಾವಳಿ ಭಾಗದಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕೊಯ್ಲು ಆದ ಬಳಿಕ ಅಡಿಕೆಯನ್ನು ಒಣಗಿಸುವುದು ಹಾಗೂ ಒಣ ಅಡಿಕೆಯನ್ನು ಸುಲಿಯುವುದು ಹಾಗೂ ಆಯುವುದು ತ್ರಾಸದ ಕೆಲಸವಾಗುತ್ತಿದೆ. ಕಾರ್ಮಿಕರ ಕೊರತೆಯಿಂದಾಗಿ ಒಣ ಅಡಿಕೆಯನ್ನು ಸಂಸ್ಕರಿಸಲು ಅನೇಕ ಅಡಿಕೆ ಬೆಳೆಗಾರರು ಪರದಾಡುತ್ತಿರುತ್ತಾರೆ. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಬಂಟ್ವಾಳ ತಾಲೂಕಿನ ವಗ್ಗ ಬಳಿಯ ಬಾಂಬಿಲದ ಕುಕ್ಕರೋಡಿ ಎಂಬಲ್ಲಿ ಒಣ ಅಡಿಕೆಯ ಸಂಸ್ಕರಣ ಘಟಕವಾಗಿರುವ ‘ಕಲ್ಪತರು ಅಡಿಕೆ ಮಿಲ್’ ಕಾರ್‍ಯರಂಭಗೊಂಡಿದೆ. Advertisement Advertisement ಸ್ಥಳೀಯ ನಿವಾಸಿ ರಮೇಶ್ ಪೂವಪ್ಪ ಕಲ್ಪತರು ಅಡಿಕೆ ಮಿಲ್‌ನ ನಿರ್ಮಾತೃ. ಕೆಲ ಸಮಯ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ರಮೇಶ್ ಪೂವಪ್ಪ ಬಳಿಕ ಕೆಲ ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಿಯಾಗಿದ್ದರು. ಇತ್ತೀಚೆಗೆ ಊರಿಗೆ ಮರಳಿದ ಇವರು ಏನಾದರೂ ಉದ್ಯಮವನ್ನು ಕೈಗೊಳ್ಳಬೇಕು ಎಂದು ಯೋಚಿಸುತ್ತಿದ್ದಾಗ ಇವರಿಗೆ ಹೊಳೆದದ್ದು ಯಾಂತ್ರೀಕೃತ ಒಣ ಅಡಿಕೆ ಸಂಸ್ಕರಣ ಘಟಕ. ಮೂಲತಃ ಕೃಷಿಕರೇ ಆಗಿದ್ದ ರಮೇಶ್ ಅವರು ಅಡಿಕೆಯಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಇರುವುದುನ್ನು ಅರಿತು ತನ್ನ…

Read More

ಕಾರ್ಮೆಲ್ ವಿದ್ಯಾರ್ಥಿ ಸಂಘ ಉದ್ಘಾಟನೆ ಮೊಡಂಕಾಪು: ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮೋಡಂಕಾಪು ಇದರ 2023-24 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಸಂಸ್ಥೆಯ ಹಳೆ ವಿದ್ಯಾರ್ಥಿನಿ ಜೋಶ್ನ ವಾಸ್ ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡು ಬರಬೇಕು ಎಂದು ಅಭಿಪ್ರಾಯಪಟ್ಟರು. Advertisement Advertisement ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ನವೀನ ಎ.ಸಿ ಪ್ರತಿಜ್ಞಾ ವಿಧಿ ಬೋಧಿಸಿದರು.ವಿದ್ಯಾರ್ಥಿ ಸಂಘದ ಸಲಹೆಗಾರರಾದ ಭಗಿನಿಫೆಲ್ಸಿಟ ಎ.ಸಿ, ಶ್ರೀ ವಿದ್ಯಾ ಹಾಗೂ ಸುರೇಶ್ ನಂದೊಟ್ಟು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಾನ್ಸ್ ಸನ್ ಸ್ವಾಗತಿಸಿ, ಕಾರ್ಯದರ್ಶಿ ಕೃಪಾ ವಂದಿಸಿದರು.

Read More

ಬಂಟ್ವಾಳ: ನಾಗರಹಾವಿನ ಹೊಟ್ಟೆ ಸೇರಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದು 15 ದಿನಗಳ ಆರೈಕೆಯ ಬಳಿಕ ಯಶಸ್ವಿಯಾಗಿ ಅರಣ್ಯ ಬಿಡಲಾಗಿದೆ. ಉರಗ ತಜ್ಞ ಸ್ನೇಕ್ ಕಿರಣ್ ಹಾಗೂ ಪಶುವೈದ್ಯ ಡಾ. ಯಶಸ್ವಿ ನಾರಾವಿ ಹಾಗೂ ಅರಣ್ಯ ಇಲಾಖೆಯ ಸಕಾಲಿಕ ಕಾರ್ಯಚರಣೆಯಿಂದ ಪಾಣ ಸಂಕಟದಲ್ಲಿ ನರಳುತ್ತಿದ್ದ ನಾಗರ ಹಾವು ಬದುಕುಳಿದಿದೆ. ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ವಗ್ಗದಲ್ಲಿರುವ ಸಾಲು ಮರ ತಿಮ್ಮಕ್ಕ ಉದ್ಯಾನವನ ಸಮೀಪದಲ್ಲಿರುವ ಕಾವಳಪಡೂರು ಗ್ರಾ,.ಪಂ. ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿಯ ಬಿಲವೊಂದರಲ್ಲಿ ಒಳನುಗ್ಗಿದ ನಾಗರ ಹಾವು ಹೊರಬರಲಾಗದೆ ಒದ್ದಾಡುತ್ತಿತ್ತು. ಮೂರು ದಿನಗಳಿಂದ ಅದನ್ನು ಗಮನಿಸುತ್ತಿದ್ದ ಮನೆಯವರು ಕಳೆದ ಜೂ. 6ರಂದು ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಿರಣ್ ಅವರು ಹಾವನ್ನು ಬಿಲದಿಂದ ಹೊರ ತೆಗೆದು ಮೂರು ದಿನಗಳ ಕಾಲ ಪ್ರಾಥಮಿಕ ಆರೈಕೆ ನೀಡಿ ರಕ್ಷಿಸಿದ್ದಾರೆ. Advertisement Advertisement ಹಾವಿನ ತಲೆ ಭಾಗದಲ್ಲಿ ಗಾಯಗಳಾಗಿರುವುದು ಹಾಗೂ ಚರ್ಮ ಹರಿದಿರುವುದನ್ನು ಗಮನಿಸಿ ಮಂಗಳೂರಿನ…

Read More

ಬಂಟ್ವಾಳ: ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಜಿಲ್ಲಾ ಸಮಿತಿ ಹಾಗೂ ಬಂಟ್ವಾಳ ತಾಲೂಕು ಸಮಿತಿಯ ರಚನೆಯ ಸಭೆ ಪಾಣೆಮಂಗಳೂರಿನ ಸಜೀಪ ವೆಂಕಪ್ಪ ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆಯಿತು. ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ರವೀಂದ್ರ ಆಚಾರ್ಯ ಕಾವಲುಕಟ್ಟೆ ಉಪಾಧ್ಯಕ್ಷರಾಗಿ ಯಶೋಧರ ಆಚಾರ್ಯ ಮಾಣಿ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಆಚಾರ್ಯ ಬಂಟ್ವಾಳ ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಕಲ್ಲಡ್ಕ ಕೋಶಾಧಿಕಾರಿಯಾಗಿ ಜಯಕರ ಆಚಾರ್ಯ ಮಾಣಿ ಸಂಚಾಲಕರಾಗಿ ಹರೀಶ್ ಆಚಾರ್ಯ ಮಿತ್ತೂರು ನಿರ್ದೇಶಕರಾಗಿ ಶಿವ ಆಚಾರ್ಯ ಕಾವಲುಕಟ್ಟೆ, ಸಂತೋಷ ಆಚಾರ್ಯ ಪೆರ್ನೆ, ಸತೀಶ್ ಆಚಾರ್ಯ ಬಂಟ್ವಾಳ, ಶ್ರೀನಿವಾಸ ಆಚಾರ್ಯ ಮಿತ್ತಡ್ಕ, ಸಂತೋಷ ಆಚಾರ್ಯ ವೀರಕಂಬ ಆಯ್ಕೆಯಾದರು. Advertisement

Read More

ತುಂಬೆ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ತುಂಬೆ ದಿವಿಶ್ ಪ್ರಿ ಪ್ರೈಮರಿ ಶಾಲೆಯ ಪುಟಾಣಿಗಳು ಯೋಗಾಭ್ಯಾಸ ಮಾಡಿದರು. ವಿದ್ಯಾಸಂಸ್ಥೆಯ ಎಲ್ ಕೆ ಜಿ ಹಾಗೂ ಯುಕೆಜಿ ವಿಭಾಗದ ಮಕ್ಕಳು ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಸಂಸ್ಥೆಯ ಸಂಚಾಲಕಿ ಉಷಾಲತಾ ಚಂದ್ರಪ್ರಕಾಶ್ ಶೆಟ್ಟಿ, ಶಿಕ್ಷಕಿಯರಾದ ಸ್ವಾತಿಶ್ರೀ, ಉಷಾ ಉಪಸ್ಥಿತರಿದ್ದರು. Advertisement

Read More

ಬಂಟ್ವಾಳ: ಸೀನಿಯರ್ ಛೇಂಬರ್ ಇಂಟರ್ ನೇಶನಲ್ ಇದರ ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್ ಅಧ್ಯಕ್ಷರಾಗಿ ಇಂಜಿನಿಯರ್ ಡಾ. ಆನಂದ್ ಬಂಜನ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ನಿವೃತ್ತ ಶಿಕ್ಷಕ ಬಿ.ರಾಮಚಂದ್ರ ರಾವ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರುಕಾರ್ಯದರ್ಶಿಯಾಗಿ ವಕೀಲೆ ಶೈಲಜಾ ರಾಜೇಶ್ ಮತ್ತು ಖಜಾಂಜಿಯಾಗಿ ಸತ್ಯನಾರಾಯಣ ರಾವ್, ಉಪಾಧ್ಯಕ್ಷರಾಗಿ ಆದಿರಾಜ ಜೈನ್, ಡಾ.ಎ ಮನೋಹರ್ ರೈ, ನಾಗೇಶ್ ಬಾಳೆಹಿತ್ಲು, ಅಹಮದ್ ಮುಸ್ತಾಫ, ಸಂದೇಶ್ ಕುಮಾರ್ ಡಿ, ವಸಂತ್ ಪಿ, ಜೊತೆ ಕಾರ್ಯದರ್ಶಿಯಾಗಿ ಮಲ್ಲಿಕ ಆಳ್ವ, ನಿರ್ದೇಶಕರುಗಳಾಗಿ ಬಿ.ರಾಮಚಂದ್ರ ರಾವ್(ಟ್ರೈನಿಂಗ್ ಏರಿಯ), ಡಾ.ರಾಜೇಶ್ ಪೂಜಾರಿ(ಹೆಲ್ತ್ ಕೇರ್), ಕೃಷ್ಣರಾಜ ಭಟ್( ಕಲ್ಚರಲ್ ಎಂಟರ್ಟೈನ್ಮೆಂಟ್), ರವೀಂದ್ರ ಕುಕ್ಕಾಜೆ(ಲೀಗಲ್ ಅಡ್ವಯಿಸರ್), ಲೊಕೇಶ್ ಕುಲಾಲ್(ಮೊರಲ್ ಎಜುಕೇಶನ್), ತಾರಾನಾಥ ಕೊಠ್ಠಾರಿ( ಇಂಜಿನಿಯರಿಂಗ್ ಎಡ್ವಯಿಸರ್), ಪಿ.ಮಹಮ್ಮದ್ ( ಸೆಲ್ಫ್ ಎಂಪ್ಲಾಯ್ಮೆಂಟ್), ಸಚ್ಚಿದಾನಂದ ಸಾಲಿಯಾನ್( ಎಲೆಕ್ಟ್ರಿಕಲ್ ಎನರ್ಜಿ), ನಾಗೇಶ್ ಮಾರ್ತಾಜೆ( ರೂರಲ್ ಡೆವಲಪ್ ಮೆಂಟ್), ಸುಜಾತ(ಪಬ್ಲಿಕ್ ರಿಲೇಶನ್), ಹರಿಶ್ಚಂದ್ರ ಆಳ್ವ( ಎಗ್ರಿಕಲ್ಚರಲ್ ಕನ್ಸಲ್ಟೆಂಟ್), ಯೋಗೀಶ್ ಬಂಗೇರ(ಬಿಸಿನೆಸ್ ಎರಿಯ),…

Read More

ಬದುಕಿಗಾಗಿ ಸಂಪತ್ತು ಇರಬೇಕೆ ವಿನಃ ಸಂಪತ್ತಿಗಾಗಿ ಬದುಕಿರಬಾರದು- ಎನ್. ಪ್ರಕಾಶ್ ಕಾರಂತ್ ಬಂಟ್ವಾಳ: ವಿನಯ ಇದ್ದಾಗ ಯೋಗ್ಯತೆ ಬರುತ್ತದೆ, ಯೋಗ್ಯತೆ ಇದ್ದಾಗ ದಾನಧರ್ಮ ಮಾಡಬೇಕೆನಿಸುತ್ತದೆ. ದಾನಧರ್ಮದಿಂದ ಆತ್ಮ ತೃಪ್ತಿ ಸಿಗುತ್ತದೆ. ಆಗ ಮನುಷ್ಯ ಸುಖಿಯಾಗುತ್ತಾನೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಎನ್. ಪ್ರಕಾಶ್‌ಕಾರಂತ್ ಹೇಳಿದರು.ರೋಟರಿ ಬಿ.ಎ.ಸೋಮಯಾಜಿ ಮೆಮೋರಿಯಲ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ರೋಟರಿ ಕ್ಲಬ್ ಬಂಟ್ವಾಳ ಕ್ಕೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಪತ್ತು ಇರುವುದು ಹರಿಯಲು, ಬದುಕಿಗಾಗಿ ಸಂಪತ್ತು ಇರಬೇಕೆ ವಿನಃ ಸಂಪತ್ತಿಗಾಗಿ ಬದುಕಿರಬಾರದು. ಅದನ್ನು ರೋಟರಿ ಸಂಸ್ಥೆ ಕಲಿಸಿಕೊಡುತ್ತದೆ ಎಂದರು. ಜಿಲ್ಲಾ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಮಾತನಾಡಿ ರೋಟರಿ ಕ್ಲಬ್ ಬಂಟ್ವಾಳದ ಸದಸ್ಯ ರೋಟರಿ ಜಿಲ್ಲೆಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವುದು ನಮಗೆ ಹೆಮ್ಮೆ ಎಂದು ತಿಳಿಸಿದರು. ಪ್ರಥಮ ಮಹಿಳೆ ವಾಣಿ ಕಾರಂತ್ ಉಪಸ್ಥಿತರಿದ್ದರು. Advertisement Advertisement ಈ ಸಂದರ್ಭ ಫಲಾನುಭವಿಗಳಿಗೆ ಆರ್ಥಿಕ ಸಹಕಾರ ನೀಡಲಾಯ. ಮೇಜರ್ ಡೋನರ್ ಮತ್ತಿತರ ದೇಣಿಗೆ…

Read More