Author: admin
ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯಲ್ಲಿರುವ ನಂದನಹಿತ್ಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಎ.1ರಿಂದ 3 ರವರೆಗೆ ಕಾಲಾವಧಿ ನೇಮೋತ್ಸವ ನಡೆಯಲಿರುವ ಹಿನ್ನಲೆಯಲ್ಲಿ ಸೋಮವಾರ ದೈವ ಕ್ಷೇತ್ರದಲ್ಲಿ ಕೋಳಿಗುಂಟ ಸಾಂಪ್ರದಾಯಿಕವಾಗಿ ನೆರವೇರಿತು.ಈ ಸಂದರ್ಭ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಕೋಳಿಗುಂಟ ವಿಧಿವಿಧಾನಗಳನ್ನು ನೆರವೇರಿಸಿದರು. ಪೊಣ್ಣಂಗಿಲ ಗುತ್ತುವಿನ ವಿಶ್ವನಾಥ ಪೂಜಾರಿ, ಬಾಳಿಗ ಮನೆತನದ ಸುಧೀರ್ ಬಾಳಿಗ, ಗಾಣದಪಡ್ಪು ಮನೆತನದ ಲೋಕೇಶ್ ಬಂಗೇರ, ಸಂಜೀವ ಪೂಜಾರಿ ಪೆಲತ್ತಿಮಾರ್, ಬಡಕೊಟ್ಟು ಮನೆತನದ ಲೋಕನಾಥ ಪೂಜಾರಿ, ಪ್ರಮುಖರಾದ ಬಾಬು ಶೆಟ್ಟಿ ತುಂಬೆ, ಶ್ರೀಧರ ಪೂಜಾರಿ, ದೇವದಾಸ್ ಅಮೀನ್, ಜಗನ್ನಾಥ ಬಂಟ್ವಾಳ, ಜಯಸುವರ್ಣ, ಶಿವಪ್ರಸಾದ್ ಬಂಟ್ವಾಳ, ಮತ್ತಿತರರು ಭಾಗವಹಿಸಿದ್ದರು. ಎ.೧ ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ, ನವಕ ಕಲಶಾಭಿಷೇಕ,ಅನ್ನಸಂತರ್ಪಣೆ, ರಾತ್ರಿ ೯ ಗಂಟೆಗೆ ಭಂಡಾರ ಅಗಮಿಸಿ ,ಧ್ವಜಾರೋಹಣ ನಡೆದು ಶ್ರೀ ಅರಸು ದೈವದ ನೇಮೋತ್ಸವ ಎ.೨ ರಂದು ರಾತ್ರಿ ೯ ಗಂಟೆಗೆ ಶ್ರೀ ಜುಮಾದಿ ಬಂಟ ದೈವಗಳ ನೇಮೋತ್ಸವ, ಎ. ೩ ರಂದು…
ಬಂಟ್ವಾಳ: ಜೋಡುಮಾರ್ಗ ಜೇಸಿ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಟಿ.ವಿ.ಯನ್ನು ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಲಾಯಿತು.ಜೇಸಿ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಎಸ್.ಎನ್. ವರ್ಮಾ ಅವರು ಮುಖ್ಯ ಶಿಕ್ಷಕಿ ಲಕ್ಷ್ಮೀ ಹಾಗೂ ಶಿಕ್ಷಕವೃಂದಕ್ಕೆ ಹಸ್ತಾಂತರಿಸಿ ಮಾತನಾಡಿ, ಶಾಲಾ ಮಕ್ಕಳಿಗೆ ಇದು ಅನುಕೂಲವಾಗಲಿದೆ ಎಂದು ಶುಭ ಹಾರೈಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ್ ಮಾಂಬಾಡಿ ಜೋಡುಮಾರ್ಗ ಜೇಸಿಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭ ಜೇಸಿ ವಲಯಾಧ್ಯಕ್ಷ ಅಭಿಲಾಷ್ ಬಿ.ಎ, ವಲಯ ಉಪಾಧ್ಯಕ್ಷರಾದ ರಂಜಿತ್ ಎಚ್.ಡಿ, ವಲಯ ನಿರ್ದೇಶಕ ಅಜಿತ್ ರೈ, ವಿಘ್ನೇಶ್ ಪ್ರಸಾದ್ ರಾವ್, ಕಾಶಿನಾಥ್ ಗೋಗಟೆ, ವಲಯ ಸಂಯೋಜಕರಾದ ಸುಮಾ ಆಚಾರ್ಯ, ವಿನೀತ್ ಶಗ್ರಿತ್ತಾಯ, ಮಂಜುನಾಥ್, ಪ್ರಚಿತ್, ಗಾಯತ್ರಿ ಲೋಕೇಶ್, ಜೋಡುಮಾರ್ಗ ಜೇಸಿ ಅಧ್ಯಕ್ಷೆ ತೃಪ್ತಿ, ಪಿ, ನಿಕಟಪೂರ್ವಾಧ್ಯಕ್ಷ ಎಂ.ಸುಬ್ರಹ್ಮಣ್ಯ ಪೈ, ಪೂರ್ವಾಧ್ಯಕ್ಷರಾದ ಅಹಮದ್ ಮುಸ್ತಾಫ, ಜೋಡುಮಾರ್ಗ ಜೇಸಿಯ ನಿಕೇಶ್ ಕೆ, ಕಿಶೋರ್, ಸಮತಾ ಕಿಶೋರ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವಿನೋದಾ, ಹಿರಿಯ ಶಿಕ್ಷಕರಾದ ತಾಹಿರಾ, ಸುಶೀಲಾ, ಹೇಮಾವತಿ, ಶಿಕ್ಷಕರಾದ ನಿಶ್ಮಿತಾ, ಪೂರ್ಣಿಮಾ,…
ಬಂಟ್ವಾಳ: ಪುರತನ ದೈವ ಕ್ಷೇತ್ರವಾಗಿರುವ ಸಜೀಪಮಾಗಣೆಯ ಮಿತ್ತಮಜಲು ಕ್ಷೇತ್ರ ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದ್ದು 3 ಗೋಪುರಗಳ ಪುನರ್ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದು ಸಜೀಪಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಹೇಳಿದರು.ಅವರು ಭಾನುವಾರ ಮಾರ್ನಬೈಲು ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆದ ಸಜೀಪ ಮಾಗಣೆಯ ಮಿತ್ತಮಜಲು ಶ್ರೀ ನಡಿಯೇಲು ದೈಯ್ಯಂಗುಲು, ಶ್ರೀ ಉಳ್ಳಾಲ್ತಿ ಹಾಗೂ ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರದ ನವೀಕೃತ ಗೋಪುರಗಳ ಲೋಕಾರ್ಪಣೆ, ಸಾನಿಧ್ಯ ಕಲಶಾಧಿ ಕಾರ್ಯಕ್ರಮಗಳ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಎ. 2 ಮತ್ತು 3 ರಂದು ಈ ಕಾರ್ಯಕ್ರಮಗಳು ನಡೆಯಲಿದ್ದು ಹೊರೆಕಾಣಿಕೆ, ಅನ್ನದಾನ ಸ್ವಚ್ಚತೆಯ ಕಾರ್ಯದಲ್ಲಿ ಗ್ರಾಮಸ್ಥರೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು. ಇದೇ ಸಂದರ್ಭ ಅವರು ಅಯ್ಯಪ್ಪ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಸಂಕಲ್ಪದ ಸಾಕಾರಕ್ಕಾಗಿ ಶ್ರೀ ದೇವರಿಗೆ ೧೮ ಗುರುವಾರಗಳ ಪರ್ಯಂತ ನಡೆಯಲಿರುವ ಪಂಚಾರತಿ ಸೇವೆಯ ಆಮಂತ್ರಣ ಬಿಡುಗಡೆಗೊಳಿಸಿದರು. ಹೊರೆಕಾಣಿಕೆ ಸಮರ್ಪಣೆ…
ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ಪಲ್ಲಮಜಲುವಿನಲ್ಲಿ ನಿರ್ಮಾಣಗೊಂಡ ಕಮಲಜ್ಜಿಯ ಕುಟೀರವನ್ನು ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜಿ. ಸೂರ್ಯನಾರಾಯಣ ವರ್ಮ ಉದ್ಘಾಟಿಸಿ ಕಮಲಜ್ಜಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಜೆಸಿಐ ಬಂಟ್ವಾಳದ ಸದಸ್ಯರು ಅಗತ್ಯ ಹಾಗೂ ಅರ್ಥಪೂರ್ಣ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಸಮಾಜದ ದುರ್ಬಲರಿಗೆ, ಅಶಕ್ತರಿಗೆ ಉಪಯೋಗವಾಗುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶ್ರೇಷ್ಠವಾದ. ಕಾರ್ಯ ಅದನ್ನು ಜೆಸಿಐ ಬಂಟ್ವಾಳ ಮಾಡಿದೆ. ಈ ಯೋಜನೆ ತುಂಬಾ ಇಷ್ಟವಾಗಿದ್ದು ಇಂತಹ ಸೇವಾ ಕಾರ್ಯವನ್ನು ಮುಂದುವರೆಸಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಮಾತನಾಡಿ ಜೆಸಿಐ ಬಂಟ್ವಾಳದ ಶಾಶ್ವತ ಯೋಜನೆ ವೃದ್ದ ಮಹಿಳೆಗೆ ಆಸರೆಯಾಗಿದೆ. ಇದೊಂದು ಅತ್ಯುತ್ತಮ ಕಾರ್ಯ ಎಂದು ತಿಳಿಸಿದರು.ಕಾರ್ಮೆಲ್ ಪದವಿ ಕಾಲೇಜಿನ ಪ್ರಾಂಶುಪಾಲೆ ವಂ.ಭ.ಡಾ. ಲತಾ ಫೆರ್ನಾಂಡೀಸ್ ಅನಿಸಿಕೆ ವ್ಯಕ್ತಪಡಿಸಿ ಯುವ ಸಮುದಾಯಕ್ಕೆ ಪ್ರೇರಣೆ ನೀಡುವಂತಹ ಕೆಲಸವನ್ನು ಜೆಸಿಐ ಬಂಟ್ವಾಳ ಮಾಡಿದೆ. ಬಡವರ, ಹಿರಿಯ ಜೀವಗಳ ಕಣ್ಣೊರೆಸುವ ಕಾರ್ಯವನ್ನು ಮುಂದುವರೆಸಿ ಎಂದು ಆಶಿಸಿದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.…
ಬಂಟ್ವಾಳ: ಹಳದಿ ಬಣ್ಣದ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಜನಾಕರ್ಷಣೆ ಪಡೆದುಕೊಂಡಿದೆ. ಹಸಿರು ಬಣ್ಣದ ತೈವಾನ್ ಕಲ್ಲಂಗಡಿಗಳ ಮಧ್ಯೆ ಹಳದಿ ಬಣ್ಣದ ಕಲ್ಲಂಗಡಿ ಗ್ರಾಹಕರ ಗಮನ ಸೆಳೆಯುತ್ತಿದೆ. ಹಸಿರು ಕಲ್ಲಂಗಡಿ ಕೆಜಿಗೆ ೨೦ ರೂ.ಗೆ ಮಾರಾಟವಾಗುತಿದ್ದರೆ ಹಳದಿ ಕಲ್ಲಂಗಡಿಗೆ ಕೆಜಿಗೆ ೩೦ ರೂಪಾಯಿ ಇದೆ. ಬಣ್ಣದ ಆಕರ್ಷಣೆಯಿಂದ ಜನರು ಎರಡೂ ಬಣ್ಣದ ಕಲ್ಲಂಗಡಿಯನ್ನು ಮನೆಗೆ ಒಯ್ಯುತ್ತಿದ್ದಾರೆ. —
ಮಂಗಳೂರು: ಹ್ಯಾಮರ್ ಥ್ರೋನಲ್ಲಿ ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಖುಷಿ ಸಾಲ್ಯಾನ್ ನೂತನ ದಾಖಲೆ ನಿರ್ಮಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ಯುನಿವರ್ಸಿಟಿ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನಡೆದ 26ನೇ ರಾಜ್ಯ ಮಟ್ಟದ ಅಂತರ್‌ಕಾಲೇಜು ಅಥ್ಲೆಟಿಕ್ ಮೀಟ್ 2024-25ರಲ್ಲಿ ಹ್ಯಾಮರ್ ಥ್ರೋನಲ್ಲಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಗೆದ್ದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಹಮ್ಮದ್ ಹ್ಯಾರೀಸ್ ಅವರಿಂದ ತರಬೇತಿ ಪಡೆಯುತ್ತಿರುವ ಇವರು ಉಮೆಶ್ ಕೆಲಿಂಜ ಹಾಗೂ ಭವಾನಿ ಉಮೇಶ್ ಅವರ ಸುಪುತ್ರಿ
ಬಂಟ್ವಾಳ: ಬಿ.ಸಿ.ರೋಡಿನ ಕೇಂದ್ರಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ಎ.4ರಿಂದ ಎ.9ರ ವರಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ದೇವಸ್ಥಾನದ ಬಳಿಯ ಸಮತಟ್ಟುಗೊಳಿಸಿದ ವಿಶಾಲ ಗದ್ದೆ ಪ್ರದೇಶದಲ್ಲಿ ದೇವಸ್ಥಾನದ ತಂತ್ರಿ ಪಳನೀರು ಶ್ರೀ ಅನಂತಭಟ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಶ್ರೀ ರಕ್ತೇಶ್ವರೀ ದೇವಿ ಸನ್ನೀದಿ ಸೇವಾಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ಉಪಾಧ್ಯಕ್ಷ ಬಿ. ಸಂಜೀವ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಪಂಜಿಕಲ್ಲು, ಬೂಡ ಅಧ್ಯಕ್ಷ ಬೇಬಿ ಕುಂದರ್, ವಿವಿಧ ಸಮಿತಿಯ ಪ್ರಮುಖರಾದ ಅಶ್ವನಿ ಕುಮಾರ್ ರೈ, ಭುವನೇಶ್ ಪಚ್ಚಿನಡ್ಕ, ಐತಪ್ಪ ಪೂಜಾರಿ, ಚಂದ್ರಹಾಸ ಡಿ. ಶೆಟ್ಟಿ, ರವೀಂದ್ರ ಕಂಬಳಿ, ದೇವದಾಸ್ ಶೆಟ್ಟಿ, ನಾರಾಯಣ ಹೆಗ್ಡೆ, ಉಮೇಶ್ ಕುಮಾರ್ ವೈ, ಕಿಶೋರ್ ಕುಮಾರ್, ಸತೀಶ್ ಕುಮಾರ್, ಬಿ. ಮೋಹನ್, ಸದಾಶಿವ ಕೈಕಂಬ, ಗೋಪಾಲ ಸುವರ್ಣ, ನೇಮಿರಾಜ ಶೆಟ್ಟಿ ಕೊಡಂಗೆ,…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜ| ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ 130ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.ರೋಟರಿ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಶಿಬಿರ ಉದ್ಘಾಟಿಸಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನದ ಮೂಲಕ ನಿರಂತರವಾಗಿ ರಕ್ತದಾನ ಶಿಬಿರ ನಡೆಯುತ್ತಿರುವುದು ಅಭಿನಂದನೀಯ. ಇದರ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಅವರು ಎಲ್ಲಾ ಸಮಯದಲ್ಲೂ ಜನರ ಸೇವೆಗೆ ಲಭ್ಯವಿರುವುದು ಅವರ ಸೇವಾತತ್ಪರತೆಗೆ ಸಾಕ್ಷಿ ಎಂದರು.ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಅವರು ಪ್ರಾಸ್ತವಿಕವಾಗಿ ಮಾತನಾಡಿ ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ 4 ಮಂದಿಯ ಜೀವ ಉಳಿಸಲು ಸಾಧ್ಯವಿದೆ ಎಂದರು. ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿದರು.ಸದಾನಂದ ಟೈಲರ್ ತುಂಬೆ ಹಾಗೂ ಪ್ರಶಾಂತ್ ಸುಜೀರ್ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.ಜ.ಕೆ.ಎಸ್. ಹೆಗ್ಡೆ. ಆಸ್ಪತ್ರೆಯ ವೈದ್ಯೆ ಡಾ. ಮಂಜುಶ್ರೀ, ಸೇವಾಂಜಲಿಯ ಉಮಾ ಚಂದ್ರಶೇಖರ್…
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬಂಟ್ವಾಳ ಇದರ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಕಾಲ ಹೊಲಿಗೆ ತರಬೇತಿಯನ್ನು ವಗ್ಗ ವಲಯದ ವಾಮದಪದವು ಪ್ರೇರಣಾ ಜ್ಞಾನವಿಕಾಸ ಕೇಂದ್ರದಲ್ಲಿ ನಡೆಸಲಾಗಿದ್ದು ಅದರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಪುಂಜಾಲಕಟ್ಟೆ ವಲಯದ ಜನಜಾಗೃತಿ ವೇದಿಕೆ ಸದಸ್ಯ ಹರೀಂದ್ರ ಪೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರ ಏಳಿಗಾಗಿ ಜ್ಞಾನವಿಕಾಸ ಕೇಂದ್ರದಡಿಯಲ್ಲಿ ನಡೆದಂತಹ ಹೊಲಿಗೆ ತರಬೇತಿ ಯಶಸ್ವಿಯಾಗಿದೆ ಎಂದರು.ಮಾತೃಶ್ರೀ ಅಮ್ಮ ಕಾರ್ಯಕ್ರಮ ದಡಿಯಲ್ಲಿ ಕಲಿತಂತಹ ಹೊಲಿಗೆ ವೃತ್ತಿ ನಿಂತ ನಿರಾಗದೆ ಮುಂದುವರಿಸುವ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಬಂಟ್ವಾಳ ತಾಲೂಕು ಯೋಜನಾಧಿಕಾರ ಜಯಾನಂದ ಪಿ. ಮಾಹಿತಿ ನೀಡಿದರು.ಅತೀ ಹೆಚ್ಚು ಸಾಲ ನೀಡುವ ಸಂಸ್ಥೆ ಹಾಗೂ ಅತಿ ಹೆಚ್ಚು ಸಮಾಜಕಕ್ಕೆ ಅನುದಾನ ವಿತರಣೆ ಮಾಡುವ ಸಂಸ್ಥೆ ಎಂದರೆ ಅದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ.ತೆಗೆದ ಸಾಲವನ್ನು ಸರಿಯಾಗಿ ವಿನಿಯೋಗಿಸಿ ಕೊಂಡು ಸದುಪಯೋಗ ಪಡೆಸಿ ಕೊಳ್ಳಿ ಹಾಗೂ ಸಾಲದ ಕಂತು ಬಾಕಿ ಮಾಡದೆ…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜ| ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ 130ನೇ ರಕ್ತದಾನ ಶಿಬಿರ ಮಾ.16ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯ ಪ್ರಸಾದ್ ಶಿಬಿರ ಉದ್ಘಾಟಿಸುವರು, ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಉಪಸ್ಥಿತರಿರುವರು ಎಂದು ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








