ಬೆಂಗಳೂರು: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೆನರಾ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಇತ್ತೀಚೆಗೆ ಆಟಿಡೊಂಜಿ ಕೂಟವನ್ನು ಆಚರಿಸಲಾಯಿತು.
ಹಿಂಗಾರ ಅರಳಿಸಿ, ದೀಪ ಬೆಳಗಿಸುವ ಮೂಲಕ ಸಂಘದ ಹಿರಿಯ ಸದಸ್ಯ ಆರ್. ಎಸ್. ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸತೀಶ್ ಸುವರ್ಣ ಆಟಿ ಅಮಾವಾಸ್ಯೆ ಹಾಗೂ ಆಟಿ ತಿಂಗಳಿನ ವಿಶೇಷತೆಯ ಬಗ್ಗೆ ಮಾತನಾಡಿ ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಡಾ. ಸುಹಾಸ್ ಸಾಗರ್ ರವರು ವೈದ್ಯಕೀಯ ತುರ್ತು ಪರಿಸ್ಥಿತಿ ಯ ಬಗ್ಗೆ ವಿವರ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಯಂ.ವಿಜಯ್ ಕುಲಾಲ್ ಸ್ವಾಗತಿಸಿದರು. ಕೋಶಾಧಿಕಾರಿ ವಿಠ್ಠಲ್ ಗೊಲ್ಲ ಸಂಘದ 2022-23 ಸಾಲಿನ ಲೆಕ್ಕ ಪತ್ರ ಮಂಡನೆ ಮಾಡಿದರು. ಉಪಾಧ್ಯಕ್ಷ ನವೀನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ವಂದಿಸಿದರು.
ಮಕ್ಕಳಿಗೆ ಕೃಷ್ಣ,ರಾಧೆ ಛದ್ಮವೇಷ ಸ್ಪರ್ಧೆ
ಏರ್ಪಡಿಸಲಾಗಿತ್ತು. ಪುಟ್ಟ ಮಕ್ಕಳು ಕೃಷ್ಣ ರಾಧೆ ವೇಷ ಧರಿಸಿ ಪ್ರೇಕ್ಷಕರ ಮನಗೆದ್ದರು.
ಆಟಿಗೆ ಸಂಬಂಧಿಸಿದ ಕರಾವಳಿ ಭಕ್ಷ್ಯಗಳ ವಿಶೇಷ ಭೋಜನವನ್ನು ಸಂಘದ ಮಹಿಳಾ ಸದಸ್ಯರ ಸಹಕಾರದೊಂದಿಗೆ ಏರ್ಪಡಿಸಲಾಗಿತ್ತು.
ಸಂಘಟನಾ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ವಂದಿಸಿದರು. ಕಾರ್ಯಕಾರಿ ಮಂಡಳಿ ಸದಸ್ಯೆ ರೂಪ ಮಂಜುನಾಥ್ ರವರು ಕಾರ್ಯಕ್ರಮ ನಿರೂಪಿಸಿದರು.
ಸಂಘದ ಸದಸ್ಯರು ಕರಾವಳಿಯ ಕ್ರೀಡೆಗಳಾದ ಲಗೋರಿ, ಮಡಿಕೆ ಹೊಡೆಯುವುದು, ಮುಂಕುಬೀಜ ಮುಂತಾದ ಆಟಗಳನ್ನೂ ಆಡಿ ಸಂಭ್ರಮಿಸಿದರು. ಸಂಘದ ಉಪಾಧ್ಯಕ್ಷ ಶೀನಪ್ಪ ಗೌಡ, ಜತೆಕಾರ್ಯದರ್ಶಿ ಯೋಗೀಶ್ ದೇರಾಜೆ, ಕಾರ್ಯಕಾರಿ ಮಂಡಳಿ ಸದಸ್ಯರಾದ ವಸಂತ್ ಪೂಜಾರಿ, ಲಿವಿಂಗ್ಸ್ಟನ್, ಸಚಿನ್ ರೈ, ಮಮತಾ ಲೋಕೇಶ್ ಮತ್ತು ಇತರ ಸದಸ್ಯರು ಸಹಕರಿಸಿದರು.