Author: admin

ಬಂಟ್ವಾಳ: ಖ್ಯಾತ ಸಾಹಿತಿ, ಚಿಂತಕ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಾಬ್ದಿ ಕಾರ್ಯಕ್ರಮಕ್ಕೆ ಆಗಸ್ಟ್ 28ರಂದು ಚಾಲನೆ ನೀಡುವುದಾಗಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎ. ವಿವೇಕ್ ರೈ ಹಾಗೂ ಏರ್ಯ ಬಾಲಕೃಷ್ಣ ಹೆಗ್ಡೆ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಹಿತ್ಯ, ಶೈಕ್ಷಣಿಕ, ಧಾರ್ಮಿಕ, ಸಹಕಾರ, ಕೃಷಿ, ಸಹಿತ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು 1926 ಮಾರ್ಚ್ 19ರಂದು ಜನಿಸಿದ್ದು ಮುಂದಿನ 2026ಕ್ಕೆ ಜನ್ಮಶತಮಾನೋತ್ಸವ ವರ್ಷವಾಗಲಿದೆ. ಈ ನಿಟ್ಟಿನಲ್ಲಿ ಅವರ 100ನೇ ಜನ್ಮದಿನದ ಸವಿನೆನೆಪಿಗಾಗಿ ವಿವಿಧ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸ್ಮರಣೀಯಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆ. 28ರಂದು ಗುರುವಾರ ಏರ್ಯಬೀಡಿನಲ್ಲಿ ಅವರ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡಿ ಬಳಿಕ ಮುಂದಿನ ಒಂದು ವರ್ಷಗಳ ಕಾಲ ಏರ್ಯ ಅವರ ನೆನೆಪಿನ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ: ಏರ್ಯ…

Read More

ಬಂಟ್ವಾಳ: ಸಜೀಪನಡು ಗ್ರಾಮದಲ್ಲಿ ದಾರಿದೀಪ ದುರಸ್ತಿ, ಚರಂಡಿ ಹೂಳೆತ್ತುವ ಬಗ್ಗೆ ಮಾಡಿದ ಮನವಿಗೆ ಪಂಚಾಯತಿ ನಿರ್ಲಕ್ಷ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ಪಂಚಾಯತಿನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಹಮ್ಮದ್ ನಾಸೀರ್ ಪಂಚಾಯತಿ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ಪಂಚಾಯತಿಯ ಜಗಲಿಯಲ್ಲಿಯೇ ಚಾಪೆ ಹಾಸಿ ಧರಣಿ ಆರಂಭಿಸಿರುವ ಮಹಮ್ಮದ್ ನಾಸೀರ್ ಬೇಡಿಕೆ ಈಡೇರುವ ವರೆಗೂ ಧರಣಿ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಜೀಪ ನಡು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ದಾರಿದೀಪ ದುರಸ್ತಿ ಹಾಗೂ ಚರಂಡಿ ಹೂಳೆತ್ತುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಇಲ್ಲಿನ ದಾರಿ ದೀಪದ ವ್ಯವಸ್ಥೆ ತೀರಾ ಕೆಟ್ಟದಾಗಿದೆ. ಇತ್ತೀಚೆಗೆ ದೇರಾಜೆ ಪರಿಸರದಲ್ಲಿ ಅಹಿತಕರ ಘಟನೆ ನಡೆದಿದ್ದು ಪೊಲೀಸ್ ಠಾಣೆಯಿಂದ ಸೂಚನೆ ಬಂದ ಬಳಿಕ 3 ದಾರಿ ದೀಪಗಳನ್ನು ದುರಸ್ತಿ ಮಾಡಲಾಗಿದೆ. ಇತರ ಭಾಗಗಳಲ್ಲೂ ಬೀದಿ ದೀಪ ದುರಸ್ತಿ ಪಡಿಸುವಂತೆ 2 ಬಾರಿ ಅಧ್ಯಕ್ಷರು ಹಾಗೂ ಪಿಡಿಓ ಅವರಿಗೆ ಮನವಿ…

Read More

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಪುಂಜಾಲಕಟ್ಟೆಯಲ್ಲಿ ರೂ.18 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ನಾರಾಯಣ ಗುರು ವಸತಿ ಶಾಲೆಯ ಕಟ್ಟಡವನ್ನು ಪರಿಶೀಲಿಸಿ ಸುದ್ದಿಗಾರರ ಜೊತೆ ಮಾತನಾಡಿದರು. ಹಾಲಿ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ವಸತಿ ಕೊರತೆಯಿದ್ದು, ಈಗಾಗಿ ಸ್ಥಳಾಂತರ ತುರ್ತು ಅಗತ್ಯವಾಗಿದೆ. ಈಗಾಗಿ ಶೀಘ್ರವಾಗಿ ಪೂಜೆ ನೆರವೇರಿಸಿ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಮೇಲ್ದರ್ಜೆಗೇರಿರುವ ಪುಂಜಾಲಕಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುಮಾರು ರೂ. 12 ಕೋಟಿ ಅನುದಾನದಲ್ಲಿ ನಿರ್ಮಾಣವಾಗುವ ಕಟ್ಟಡವನ್ನು ಪರಿಶೀಲಿಸಿ , ಕಾಮಗಾರಿಗಳ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇಂಜಿನಿಯರ್ ಅವರಿಂದ ಮಾಹಿತಿ ಪಡೆದುಕೊಂಡರು. ಬಂಟ್ವಾಳ ಹಾಗೂ…

Read More

ಬಂಟ್ವಾಳ: ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ ಜು.27ರಂದು ಆದಿತ್ಯವಾರ ಏರ್ಯಬೀಡು ಮನೆಯಲ್ಲಿ ನಡೆಯಲಿದ್ದು ಇದರ ಅಂಗವಾಗಿ ಮಿನಿಕಥೆ ರಚನಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆ ನಡೆಯಲಿದೆ. ಮಿನಿಕಥೆ ರಚನೆಗೆ 100 ಪದಗಳ ಒಳಗಿನ ಸ್ವರಚಿತ ಕಥೆಯಾಗಿರಬೇಕು. ಕವನ ಸ್ಪರ್ಧೆಗೆ ಪ್ರಾಥಮಿಕ ವಿಭಾಗಕ್ಕೆ ಬಾಲ್ಯ, ಪ್ರೌಢ ವಿಭಾಗಕ್ಕೆ ಪ್ರಕೃತಿ, ಕಾಲೇಜು ವಿಭಾಗಕ್ಕೆ ಕಾಮನ ಬಿಲ್ಲು ಎನ್ನುವ ವಿಷಯವನ್ನು ನೀಡಲಾಗಿದ್ದು ಸ್ಪರ್ಧಾಳುಗಳು ಜು.24ರೊಳಗಾಗಿ ತಮ್ಮ ಕಥೆ ಹಾಗೂ ಕವನವನ್ನು ದಾಮೋದರ್ ಏರ್ಯ ಇವರ ದೂರವಾಣಿ ಸಂಖ್ಯೆ 9449645537ಗೆ ಕಳುಹಿಸಿ ಕೊಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಂಟ್ವಾಳ: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆ ವತಿಯಿಂದ ಪ್ರಥಮ ಬಾರಿಗೆ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಸಹಕಾರ ದೊಂದಿಗೆ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರಲ್ಲಿ ಜುಲೈ 20 ರಂದು ಆದಿತ್ಯವಾರ ನಡೆಯಲಿದೆ. ಶ್ರೀ ರಕ್ತೇಶ್ವರೀ ದೇವೀ ದೇವಸ್ಥಾನ ದ ಸೇವಾ ಸಮಿತಿ ಯ ಅಧ್ಯಕ್ಷ ವಿಶ್ವನಾಥ್ ಬಿ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ . ಮುಖ್ಯ ಅತಿಥಿ ಯಾಗಿ ಉದ್ಯಮಿ ಬಿ. ಸಂಜೀವ ಪೂಜಾರಿ. ಗುರು ಕೃಪಾ, ಅತಿಥಿಗಳಾಗಿ ಸ್ವರ್ಣೋದ್ಯಮಿ ಸುನೀಲ್ ಆಚಾರ್ಯ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ರಾದ ಮ್ಯಾಥ್ಯೂ ಫ್ರಾನ್ಸಿಸ್. ಡಿ ಕುನ್ಹಾ. ಸವಿತಾ ಅರುಣ್ ಪ್ರಕಾಶ್ ಅಭಿಲಾಶ್ ಭಟ್, ಜ್ಞಾನೇಶ್ ಜಿ ರಾವ್. ಅಧ್ಯಕ್ಷೆ ತೇಜಸ್ವಿನಿ ಪೂಜಾರಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಐತಪ್ಪ ಪೂಜಾರಿ ವಹಿಸಲಿದ್ದು ,ಕ್ರೀಡಾಕೂಟ ದ ಮೇಲ್ವಿಚಾರಕರಾಗಿ ರಾಜೇಶ್ ಅಮಿನ್, ಸುಂದರ್ ಎನ್, ಜಯಶ್ರೀ ಹಾಗೂ ರಕ್ಷಕ ಶಿಕ್ಷಕ ಸಂಘದ ಎಲ್ಲಾ ಸದಸ್ಯರು, ಶಿಕ್ಷಕರು…

Read More

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾವಳಪಡೂರು‌ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ “ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ” ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾಲು ಮಹತ್ವದ್ದು ಎಂದ‌ ಅವರು,ನಿಮ್ಮ ಕಾರ್ಯದಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಪರಿಸರದ ಇನ್ನಷ್ಟು ಸಮಸ್ಯೆಗಳು ಪರಿಹಾರವಾಗಲಿ, ನಿಮ್ಮ ಮೂಲಕ ಉತ್ತಮ ಕಾರ್ಯಗಳಿಗೆ ಹೆಚ್ಚು ಪ್ರಚಾರ ದೊರೆತು,ಸಾರ್ವಜನಿಕರಿಗೆ ಪ್ರಯೋಜನ ವಾಗಲಿ ಎಂದರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ಶೇಖ್ ಆದಂ ಸಾಹೇಬ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಿದರೆ, ಪತ್ರಕರ್ತರು ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತಿದ್ದಾರೆ,…

Read More

ಬಂಟ್ವಾಳ: ಪ್ರೇಮಿಯೊಬ್ಬ ಪ್ರೀಯತಮೆಯ ಹಲ್ಲೆ ಮಾಡಿ ಆ ಬಳಿಕ ನೇಣಿಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಸುಜೀರು ದೈಯಡ್ಕ ಎಂಬಲ್ಲಿ ಇಂದು ಮಧ್ಯಾಹ್ನದ ವೇಳೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಡ್ಮಾನ್ ಕಾಂಜೀರ ಕೋಡಿ ಸುಧೀರ್ ಎಂದು ಗುರುತಿಸಲಾಗಿದೆ. ಯುವತಿ ದಿವ್ಯ ಎಂಬಾಕೆ ಗಂಭೀರ ಸ್ಥಿತಿಯಲ್ಲಿ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇವರಿಬ್ಬರು ಕಳೆದ ೮ ವರ್ಷಗಳಿಂದ ಪ್ರೀತಿಸುತ್ತಾ ಇದ್ದರು ಎನ್ನಲಾಗಿದ್ದು ಯಾವುದೋ ಕ್ಷುಲ್ಲಕ ಕಾರಣಕ್ಕೆ ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಸುಧೀರ್ ದಿವ್ಯ ಮೇಲೆ ಮನಬಂದಂತೆ ಥಳಿಸಿದ್ದು ಯುವತಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ಗಾಯಾಳು ದಿವ್ಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಅನ್ನುವ ಮಾಹಿತಿ ಇದೆ. ಇತ್ತ ಯುವಕ ಸುಧೀರ್ ಈ ಹಿಂದೆ ಕೂಡ ಟವರ್ ಹತ್ತಿ ಈಕೆಯನ್ನು ಹೆದರಿಸಿದ್ದ ಅನ್ನುವ ಮಾಹಿತಿ ಇದೆ. ಬಂಟ್ವಾಳ ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನಿಜ ಹೇಳಬೇಕೆಂದರೆ ನನಗಾಗೊಂದು ಉದ್ಯೋಗದ ಅವಶ್ಯಕತೆಯೂ ಇತ್ತು. ಆಚಾರಕ್ಕೂ ಆಯಿತು ಸುಖಕ್ಕೂ ಆಯಿತು; ಸರಿ, ಮಂಗಳೂರಿಗೆ ಹೋದೆ. ಆಗ ನಮ್ಮ ದೊಡ್ಡಮ್ಮನ ಮಗಳೊಬ್ಬರು ಕಮರ್ಷಿಯಕ್ ಟ್ಯಾಕ್ಸ್ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ದುಂಬಾಲು ಬಿದ್ದು ಅವರಲ್ಲಿ ಕೇಳಿಕೊಂಡೆ, ಹೇಗಾದರೂ ಮಾಡಿ ಒಂದು ಉದ್ಯೋಗ ದೊರಕಿಸಿ ಕೊಡಿ ಎಂಬುದಾಗಿ. ಆಗ ಅವರ ಕಛೇರಿಯಲ್ಲಿ ಟ್ಯಾಕ್ಸ್ ಆಫೀಸರ್ ಆಗಿದ್ದವರು ಮಂಜ ಅಂಪಾರ್ ಅನ್ನುವವರು. ನಮ್ಮ ಅಕ್ಕ ಅವರಿಗೆ ನನ್ನನ್ನು ಪರಿಚಯಿಸಿ ನನ್ನ ಆಶೆಯನ್ನು ಅವರ ಮುಂದಿಟ್ಟರು. ಎರಡು ದಿನ ಕಳೆದು ಮಂಗಳೂರಿನ ಸುಚಿತ್ರ ಟಾಕೀಸಿನಲ್ಲಿ ಬುಕ್ಕಿಂಗ್ ಕ್ಲರ್ಕ್ ಆಗಿ ನೇಮಕಗೊಂಡೆ. ಆಗ ನನಗೆ ಸಿಗುತ್ತಿದ್ದ ಸಂಬಳ ಕೇವಲ ನೂರು ರೂಪಾಯಿಗಳು ಮಾತ್ರ. ಸಮಯ ಬೆಳಗ್ಗಿನ ದೇಖಾವೆಯಿಂದ ಸಂಜೆಯ ದೇಖಾವೆ ಮುಗಿಯುವವರೆಗೆ ಅಥವಾ ಮಧ್ಯಾಹ್ನದಿಂದ ರಾತ್ರೆ ಹನ್ನೆರಡು ಗಂಟೆವರೆಗೆ. ಉಳಕೊಳ್ಳುವ ವ್ಯವಸ್ಥೆ ತಲಪಾಡಿಯ ದೊಡ್ಡಮ್ಮನ ಮನೆಯಲ್ಲಿ. ಬೆಳಗ್ಗಿನ ತಿಂಡಿ ಹೇಗಿದ್ದರೂ ಅಲ್ಲೇ ಆಗುತ್ತಿತ್ತು, ಉಳಿದ ಅವಧಿಗೆ ಬುತ್ತಿ ಕಟ್ಟಿಕೊಂಡು ಬರುವುದು. ಮಧ್ಯಾಹ್ನದಿಂದ ಡ್ಯೂಟಿ ಆದರೆ ಮಲಗಲು ಟಾಕೀಸೇ…

Read More

ಬಂಟ್ವಾಳ : ತಾಲೂಕನ 18 ಗ್ರಾಮಗಳು ಕ್ಷಯ ಮುಕ್ತ ಗ್ರಾಮಗಳಾಗಿದ್ದು 30 ಗ್ರಾಮಗಳನ್ನು ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ತಿಳಿಸಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಸಹಕಾರದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ರೋಗಿಗಳಿಗೆ ಔಷಧಿಯ ಜೊತೆ ಪೌಷ್ಟಿಕಾಹಾರ ಅತ್ಯಂತ ಅಗತ್ಯವಾಗಿದ್ದು ಅದನ್ನು 34 ತಿಂಗಳುಗಳಿಂದ ನೀಡುತ್ತಿರುವುದು ಸೇವಾಂಜಲಿ ಪ್ರತಿಷ್ಠಾನದ ದೊಡ್ಡ ಕಾರ್ಯ . ಇದು ಇನ್ನಿತರ ಸಂಘ ಸಂಸ್ಥೆಗಳಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು. ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತನ್ಯ ಕೆ.ಎಸ್ ಮಾತನಾಡಿ ಪೌಷ್ಟಿಕಾಹಾರ ಸೇವನೆ ಮಾಡಿದಾಗ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ ರೋಗ ಗುಣಮುಖವಾಗಲು ಸಾಧ್ಯವಿದೆ. ಇಲ್ಲಿ ನೀಡುವ ಪೌಷ್ಟಿಕಾಹಾರವನ್ನು ಮನೆಮಂದಿಗೆ ಅಥವಾ ಬೇರೆಯವರಿಗೆ ನೀಡದೆ ತಾವೇ ಸೇವಿಸಿ ಜೊತೆಗೆ ಸರಿಯಾದ ಔಷಧಿ…

Read More

ಬಂಟ್ವಾಳ: ರೋಟರಿ ಕ್ಲಬ್ ಮೊಡಂಕಾಪು ಇದರ 2025-26ನೇ ಸಾಲಿನ ನೂತನ ಅಧ್ಯಕ್ಷೆ ಪ್ರೀಮಾ ವಿ. ಫೆರ್ನಾಂಡೀಸ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಕೈಕಂಬದ ಸೂರ್ಯವಂಶ ಕಟ್ಟಡದ ಕೆ.ಎಲ್.ರಾವ್ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಮಾಜಿ ಗವರ್ನರ್ ಪ್ರಕಾಶ್ ಕಾರಂತ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಕ್ಲಬ್ ಲೆಫ್ಟಿನೆಂಟ್ ಆಗಿ ಎಲಿಯಾಸ್ ಸ್ಯಾಂಕ್ತಿಸ್ಟ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಬಳಿಕ ನೂತನ ಅಧ್ಯಕ್ಷರಾಗಿ ಕ್ಲಬ್ ನ ಪ್ರಥಮ ಮಹಿಳಾ ಅಧ್ಯಕ್ಷೆ ಪ್ರೀಮಾ ವಿ. ಫೆರ್ನಾಂಡೀಸ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ‌ಕಾರ್ಯದರ್ಶಿಯಾಗಿ ಪಸನ್ನ ರಾವ್ ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನಡೆಯಿತು. ಬಳಿಕ ಪ್ರಕಾಶ್ ಕಾರಂತ್ ಮಾತನಾಡಿ ರೋಟರಿ ಸದಸ್ಯರಿಗೆ ಜುಲೈ ತಿಂಗಳು ಹೊಸ ವರ್ಷವಿದ್ದಂತೆ. ಆ ತಿಂಗಳು ರೋಟರಿ ಸದಸ್ಯರಿಗೆ ವಿಶೇಷ ಚೈತನ್ಯ ನೀಡುತ್ತದೆ. ಒಳ್ಳೆಯದ್ದಕ್ಕಾಗಿ ಒಗ್ಗಟ್ಟಾಗಬೇಕು ಎನ್ನುವ ಅಂತರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ಕೆಲಸ ನಿರ್ವಹಿಸಿ ಈ ವರ್ಷ ಡೈಮಂಡ್ ಪ್ಲಸ್ ಪುರಸ್ಕಾರವನ್ನು ಗೆಲ್ಲಬೇಕು ಎಂದರು.…

Read More