ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮವನ್ನು ಮಂಗಳವಾರ ಕಿನ್ನಿಬೆಟ್ಟುವಿನಲ್ಲಿ ಆಚರಿಸಲಾಯಿತು. ಜೆಸಿಐ ವಲಯ 15ರ ವಲಯ ಕಾರ್ಯಕ್ರಮ ವಿಭಾಗದ ನಿರ್ದೆಶಕಿ ಅಕ್ಷತಾ ಗಿರೀಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೋಗ್ರೀನ್ ವಿಭಾಗದ ವಲಯಾಧಿಕಾರಿ ನವೀನ್ ಕೋಡ್ಲಕ್ಕೆ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಜೇನು ಕೃಷಿ ತರಬೇತುದಾರ ಲಕ್ಷಣ ಗೌಡ ಹಾಗೂ ಭೂ ಸೇನೆಯ ಯೋಧ ಸುಧಾಕರ ಶೆಟ್ಟಿ ಅವರನ್ನು ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಾವೂರು ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಜೆಸಿಯ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಘಟಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ಕಾರ್ಯಕ್ರಮ ಸಂಯೋಜಕ ಲೋಕೇಶ್ ಸುವರ್ಣ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಕೋಶಾಧಿಕಾರಿ ಶ್ರೀನಿವಾಸ್ ಅರ್ಬಿಗುಡ್ಡೆ ಉಪಸ್ಥಿತರಿದ್ದರು. ಬಳಿಕ ಕಲಾವಿದ ಸಂದೀಪ್ ಶೆಟ್ಟಿ ರಾಯಿ ಅವರಿಂದ ವಿವಿಧ ಮನೋರಂಜನಾ ಆಟಗಳು ನಡೆಯಿತು. ಜೆಸಿ ಸದಸ್ಯರು ಮನೆಯಲ್ಲಿ ತಯಾರಿಸಿ ತಂದ ಆಟಿ ತಿಂಗಳ ಖಾದ್ಯದೊಂದಿಗೆ ಸಹಭೋಜನ ನಡೆಯಿತು.