


ಬಂಟ್ವಾಳ: ನೂತನ ಬಂಟ್ವಾಳ ತಾಲೂಕು ಹೊಟೇಲ್ ಅಸೋಸಿಯೇಷನ್ (BTHA) ಅಸ್ತಿತ್ವಕ್ಕೆ ಬಂದಿದ್ದು ಇದರ ಸ್ಥಾಪಕ ಅಧ್ಯಕ್ಷರಾಗಿ ಹೊಟೇಲ್ ರಂಗೋಲಿಯ ಮಾಲೀಕ ಚಂದ್ರಹಾಸ ಡಿ. ಶೆಟ್ಟಿ ಆಯ್ಕೆಯಾಗಿದ್ದಾರೆ.




ಉಪಾಧ್ಯಕ್ಷರಾಗಿ ಮತ್ಯಸಾಗರ್ ಹೊಟೇಲ್ ನ ನಾರಾಯಣ್ ಸಿ. ಪೆರ್ನೆ, ಕಾರ್ಯದರ್ಶಿಯಾಗಿ ಆನಿಯಾ ದರ್ಬಾರ್ ಹೊಟೇಲ್ ನ ಹಂಝ ಬಸ್ತಿಕೋಡಿ, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ರೈಯವರು , ಕೋಶಾಧಿಕಾರಿಯಾಗಿ ಚಂದ್ರ ವಿಲಾಸ ಹೊಟೇಲ್ ನ ಬಿ. ಧರ್ಮೇಂದ್ರ ಬಂಟ್ವಾಳರವರು ಆಯ್ಕೆಯಾದರು. ವಲಯ ಸಂಚಾಲಕರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಟ್ಟು 27 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು