Author: admin
ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಬಂಟ್ವಾಳದ ಮುಡಿಗೆ 9 ಪ್ರಶಸ್ತಿಗಳ ಗರಿ ಬಂಟ್ವಾಳ: ಭಾನುವಾರ ನಡೆದ ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಬಂಟ್ವಾಳ ಹಲವಾರು ಪುರಸ್ಕಾರಗಳನ್ನು ಬಾಚಿಕೊಂಡಿದೆ. ಜೆಸಿಐ ನೇತ್ರಾವತಿ ಜೋಡುಮಾರ್ಗ ಆತಿಥ್ಯದಲ್ಲಿ ಬೆಂಜನಪದವಿನ ಶುಭಾ ಆಡಿಟೋರಿಯಂನಲ್ಲಿ ನಡೆದ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರಿಂದ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಪ್ರಶಸ್ತಿ ಸ್ವೀಕರಿಸಿದರು. Advertisement Advertisement ಈ ವರ್ಷ ನಡೆಸಿದ ಅತ್ಯುತ್ತಮ ಚಟುವಟಿಕೆಗಳಿಗೆ ಈ ಪುರಸ್ಕಾರಗಳು ಜೆಸಿಐ ಬಂಟ್ವಾಳಕ್ಕೆ ಒಲಿದು ಬಂದಿದ್ದು, ಅತ್ಯುತ್ತಮ ಘಟಕಾಧ್ಯಕ್ಷ ರನ್ನರ್ ಅಪ್ ಪುರಸ್ಕಾರ, ಅತ್ಯುತ್ತಮ ವಿಭಿನ್ನ ಕಾರ್ಯಕ್ರಮ ರನ್ನರ್ ಅಪ್ ಪುರಸ್ಕಾರ, ಡೈಮಂಡ್ ಘಟಕ ಪುರಸ್ಕಾರ, ತರಬೇತಿ ವಿಭಾಗದ ಪುರಸ್ಕಾರ ಸೇರಿದಂತೆ ಒಟ್ಟು 9 ಪುರಸ್ಕಾರಗಳು ಜೆಸಿಐ ಬಂಟ್ವಾಳಕ್ಕೆ ಲಭಿಸಿದೆ.ಈ ಸಂದರ್ಭ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ಕೆ., ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಅಕ್ಷತಾ ಗಿರೀಶ್, ಜೆಸಿಐ ಬಂಟ್ವಾಳದ ಕಾರ್ಯದರ್ಶಿ ರಶ್ಮಿ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಉಪಾಧ್ಯಕ್ಷ ಕಿಶೋರ್…
ಬಂಟ್ವಾಳ: ನಾಗಶ್ರೀ ಮಿತ್ರವೃಂದ ಕಮ್ಮಾಜೆ ತೆಂಕಬೆಳ್ಳೂರು ಇದರ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಕಮ್ಮಾಜೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮಪ್ಪ ಕಮ್ಮಾಜೆ ಆಯ್ಕೆಯಾಗಿದ್ದಾರೆ.ಇದರ ವಾರ್ಷಿಕ ಮಹಾಸಭೆಯು ಭಾನುವಾರ ತೆಂಕಬೆಳ್ಳೂರು ನಾಗಶ್ರೀ ವಿವೇಕ ಭವನದಲ್ಲಿ ಜರುಗಿತು. ೨೦೨೨-೨೩ ನೇ ಸಾಲಿನ ಕಾರ್ಯಕ್ರಮಗಳ ಅವಲೋಕನ ಮತ್ತು ವಾರ್ಷಿಕ ವರದಿ ಮಂಡಿಸಲಾಯಿತು. Advertisement Advertisement ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಮತ್ತು ೨೦೨೩-೨೪ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು,೨೦೨೩ -೨೪ ನೇ ಸಾಲಿನ ಗೌರವ ಅಧ್ಯಕ್ಷರಾಗಿ ಅನಂತರಾಮ್ ಹೇರಳೆ, ಗೌರವ ಮಾರ್ಗದರ್ಶಕರಾಗಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಅಧ್ಯಕ್ಷರಾಗಿ ಪುಷ್ಪರಾಜ್ ಕಮ್ಮಾಜೆ ಉಪಾಧ್ಯಕ್ಷರಾಗಿ ಸಂದೀಪ್ ಕಮ್ಮಾಜೆ ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮಪ್ಪ ಕಮ್ಮಾಜೆ, ಜೊತೆ ಕಾರ್ಯದರ್ಶಿಯಾಗಿ ದಿತೇಶ್ ಕಮ್ಮಾಜೆ, ಕೋಶಾಧಿಕಾರಿಯಾಗಿ ದೀಕ್ಷಿತ್ ಕಮ್ಮಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಯತೀಶ್ ಕಮ್ಮಾಜೆ, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಕಮ್ಮಾಜೆ, ಕಾನೂನು ಸಲಹೆಗಾರರಾಗಿ ತೀರ್ಥ ಕಮ್ಮಾಜೆ, ಸಂಘಟನಾ ಕಾರ್ಯದರ್ಶಿಗಳಾಗಿತಿರುಮಲೇಶ್ ಕಮ್ಮಜೆ, ಹರೀಶ್ ಮುಡೈಕೋಡಿ, ದಿನೇಶ್ ಕಮ್ಮಾಜೆ, ಪ್ರಜ್ವಲ್ ಕಮ್ಮಾಜೆ, ತಿಲಕ್…
ಬಂಟ್ವಾಳ: ಬಿ.ಸಿ.ರೋಡಿನ ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಶ್ರೀ ನಾಗದೇವರ ಸಾನಿಧ್ಯದಲ್ಲಿ ಪುನರ್ ನವೀಕರಣಗೊಳ್ಳುತ್ತಿರುವ ಮಹಾಗಣಪತಿ ಮತ್ತು ಶಾಸ್ತಾರ ದೇವರ ಗರ್ಭಗುಡಿಯೊಂದಿಗೆ ಸುತ್ತುಪೌಳಿಯ ನಿರ್ಮಾಣಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಲಾಯಿತು. ದೇವಸ್ಥಾನದ ತಂತ್ರಿಗಳಾದ ಅರವತ್ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಳದ ಪ್ರಧಾನ ಅರ್ಚಕರಾದ ಈಶ್ವರ ಭಟ್ ಅವರು ವಿವಿಧ ವೈಧಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿ,ನಿಗದಿತ ಸಮಯದಲ್ಲಿ ದೇವಳದ ಎಲ್ಲಾ ಜೀರ್ಣೋದ್ದಾರ ಕಾರ್ಯಗಳು ಸಾಂಗವಾಗಿ ನೆರವೇರಲಿ ಎಂದು ಆಶೀರ್ವದಿಸಿದರು. Advertisement ವಾಸ್ತು ಶಿಲ್ಪಿ ಮಹೇಶ್ ಭಟ್ ಮುನಿಯಂಗಳ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಮಾಜಿ ಸಚಿವ ರಮಾನಾಥ ರೈ,ಬಂಟ್ವಾಳ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್,ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷರಾದ ಆನಂದ .ಕೆ,ಕೇಪುಗೌಡ, ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ…
ಶಕ್ತಿ ಯೋಜನೆಗೆ ಚಾಲನೆ: ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ವತಿಯಿಂದ ರವಿವಾರ ಬಿ.ಸಿ.ರೋಡ್‌ನಲ್ಲಿ ಸಂಭ್ರಮಾರಣೆ ನಡೆಯಿತು.ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಘೊಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆಯಲಾಗಿದೆ. ಇನ್ನು ನಾಲ್ಕು ಗ್ಯಾರಂಟಿಗಳು ಶೀಘ್ರವೇ ಜಾರಿಯಾಗಲಿದೆ. ಆ ಮೂಲಕ ದೇಶದಲ್ಲಿ ಕರ್ನಾಟಕ ಇಂದು ಮಾದರಿ ರಾಜ್ಯವಾಗಿದೆ ಎಂದರು. Advertisement Advertisement ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯರಾದ ಜಯಂತಿ ವಿ.ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಜಿ.ಪಂ. ಮಾಜಿ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಪುರಸಭೆ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್, ಮಾಜಿ ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮಾಜಿ ಸದಸ್ಯರಾದ ವಾಸು ಪೂಜಾರಿ…
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ಬಂಟ್ವಾಳ: ಕೆಎಸ್ಆರ್ ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಬಿ.ಸಿ.ರೋಡ್ ಘಟಕದಲ್ಲಿ ರವಿವಾರಬಂಟ್ವಾಳ ತಹಶೀಲ್ದಾರ್ ವಿ.ಎಸ್.ಕೂಡಲಗಿ ಅವರು ಚಾಲನೆ ನೀಡಿದರು.ಬಳಿಕ ಮಾತನಾಡಿಸ ಅವರು ಯೋಜನೆಯಡಿ ಆರು ವರ್ಷದ ಹೆಣ್ಣು ಮಗುವಿನಿಂದ ಹಿಡಿದು ಹಿರಿಯ ಮಹಿಳೆಯರವರೆಗೂ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ತಾಲೂಕಿನ ಮಹಿಳೆಯರು ಸರಕಾರದ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಶಕ್ತಿ ಯೋಜನೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಹಿಳೆಯರ ಸಬಲೀಕರಣಕ್ಕೆ ಹೊಸ ಅವಕಾಶ ಕೊಟ್ಟಂತಾಗಿದೆ. ದೈನಂದಿನ ಪ್ರಯಾಣದಲ್ಲಿ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ. ರಾಜ್ಯ ಸರಕಾರ ಘೋಷಿಸಿದ್ದ ೫ ಗ್ಯಾರಂಟಿಗಳಲ್ಲಿ ಒಂದು ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದರು. Advertisement ಬಂಟ್ವಾಳ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಪ್ರತಾಪ್ ಸಿಂಗ್ ಥೋರಟ್ ಅವರು ಮಾತನಾಡಿ, ವಿದ್ಯಾರ್ಥಿನಿಯರು, ಶಿಕ್ಷಕಿಯರು, ಹಿರಿಯ ಮಹಿಳೆಯರಿಗೆ ಯೋಜನೆ ಹೆಚ್ಚು ಅನುಕೂಲವಾಗಿದೆ. ಒಂದು ಉತ್ತಮ ಕಾರ್ಯಕ್ರಮವಾಗಿದ್ದು,…
ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿನಿತಿನ್ ಪೂಜಾರಿ ನಂದರಬೆಟ್ಟು ಆಯ್ಕೆ ಬಂಟ್ವಾಳ : ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ 2023-24 ನೇ ಸಾಲಿನವಾರ್ಷಿಕ ಮಹಾ ಸಭೆಯು ಭಾನುವಾರ ಅಲೆತ್ತೂರು ಮಂಗಳಾ ಭವನದಲ್ಲಿ ನೇಮಿರಾಜ ಶೆಟ್ಟಿ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ನಿತಿನ್ ಪೂಜಾರಿ ನಂದರಬೆಟ್ಟು ಉಪಾದ್ಯಕ್ಷರಾಗಿ ದಿನೇಶ್ ಸುವರ್ಣ , ಕಾರ್ಯದರ್ಶಿಯಾಗಿ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಪವನ್ ಕುಲಾಲ್, ಸಂಘಟನನಾ ಕಾರ್ಯದರ್ಶಿಯಾಗಿ ಪುಪ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಅಕ್ಷಯ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಲೋಹಿತ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ್ ಕುಮಾರ್ ಭಾಸ್ಕರ್ ಕುಲಾಲ್, ವಾಸುದೇವ, ವಿಶ್ವನಾಥ ಪೈ ಆಯ್ಕೆಯಾದರು. Advertisement ಈ ಸಂದರ್ಭದಲ್ಲಿ ಅತಿಥಿಗಳಾಗಿ ಮೋನಪ್ಪ ಪೂಜಾರಿ ಅಲೆತ್ತೂರು, ಅಶ್ವಥ್ ಶೆಟ್ಟಿ, ಹಿಮಕರ ಪೂಜಾರಿ, ವಿಶ್ವನಾಥ ಪೂಜಾರಿ, ನಾರಾಯಣ ಪೂಜಾರಿಉಪಸ್ಥಿತರಿದ್ದರು. Advertisement
ಬಂಟ್ವಾಳ: ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ಇಲ್ಲಿ ಸಮಾಜ ವಿಜ್ಞಾನ ಹಾಗೂ ಚುನಾವಣಾ ಸಾಕ್ಷರತಾ ಸಂಘದ ಆಶ್ರಯದಲ್ಲಿ ಮಾದರಿ ಚುನಾವಣೆ ಪ್ರಕ್ರಿಯೆ ಮೂಲಕ ನೂತನ ಶಾಲಾ ಸರಕಾರವನ್ನು ರಚಿಸಲಾಯಿತು. ವಿದ್ಯಾರ್ಥಿಗಳೆಲ್ಲರೂ ಆಧಾರ್ ಕಾರ್ಡ್ ಆಧಾರದಲ್ಲಿ ಮತ ಚಲಾಯಿಸಿ ಚುನಾವಣೆ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಮಂತ್ರಿಯಾಗಿ ಸಿಯಾಬುದ್ದೀನ್ ತಾಳಿತ್ತನೂಜಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಅನ್ಸಿರಾ ನಾರ್ಶ ಆಯ್ಕೆಗೊಂಡರು.ಶಾಲಾ ಮುಖ್ಯ ಶಿಕ್ಷಕಿ ಲತಾ ಮಂಗಳೂರು ಇವರು ಪ್ರಮಾಣ ವಚನ ಬೋಧಿಸಿದರು. ಸಮಾಜ ವಿಜ್ಞಾನ ಸಂಘದ ನೋಡಲ್ ಸರೋಜಮ್ಮ ಬಿ.ಸಿ.ರೋಡ್ ರವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸಹಶಿಕ್ಷಕರಾದ ಅಬ್ದುಲ್ ರಫೀಕ್ ಉಪ್ಪಿನಂಗಡಿ , ಗೋಪಾಲಕೃಷ್ಣ ನೇರಳಕಟ್ಟೆ , ಶರತ್ ಕುಮಾರ್ ಚೌಟ ದೇವಸ್ಯ, ಶುಭ ಮೊಡಂಕಾಪು , ಭಾರತಿ ಸಿ ಕೈರಂಗಳ , ಅನಿಲ್ ಕುಮಾರ್ ಕಲ್ಲಡ್ಕ ಸಹಕರಿಸಿದರು. 2023 – 24 ನೇ ಸಾಲಿನ ಮಂತ್ರಿಮಂಡಲಕ್ಕೆ ಸ್ಪೀಕರ್ – ನಿಹಾಲ್ ಬೋಳಂತೂರು , ವಿರೋಧ ಪಕ್ಷದ ನಾಯಕಿ -ರಾಯಿಸಾ ತಾಳಿತ್ತನೂಜಿ…
ಅಂತರರಾಷ್ಟ್ರೀಯ ಮಟ್ಟದ ಸಿಲಂಬಂ ಸ್ಪರ್ಧೆಯಲ್ಲಿ ವೆನಿಲ್ಲಾ ಮಣಿಕಂಠಗೆ ಚಿನ್ನದ ಪದಕ ಬಂಟ್ವಾಳ: ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಿಲಂಬಂ ಸ್ಪರ್ಧೆಯಲ್ಲಿ ಡಬಲ್ ಸ್ಟಿಕ್ ಹಾಗು ವಾಲ್ ವೇಚೂ ವಿಭಾಗದಲ್ಲಿ ವೆನಿಲ್ಲಾ ಮಣಿಕಂಠ ಇವರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.ಈ ಸ್ಪರ್ಧಾ ಕೂಟದಲ್ಲಿ ಸ್ವಿಟ್ಜರ್ಲ್ಯಾಂಡ್, ದುಬೈ, ಸಿಂಗಾಪುರ, ಶ್ರೀಲಂಕಾ ಸೇರಿದಂತೆ ಒಟ್ಟು 10 ರಾಷ್ಟ್ರಗಳ ಪರಿಣಿತ ಮಾರ್ಷಲ್ ಆರ್ಟ್ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಪೈಕಿ ಭಾರತವನ್ನು ಪ್ರತಿನಿಧಿಸಿದ್ದ ವೆನಿಲ್ಲಾ ಮಣಿಕಂಠ ಡಬಲ್ ಸ್ಟಿಕ್ ಹಾಗು ವಾಲ್ ವೇಚೂ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಗೆದ್ದುಕೊಂಡು ದೇಶಕ್ಕೆ ಕೀರ್ತಿ ತಂದಿದ್ದಾರೆ. ಮುಡಿಪು ನವಗ್ರಾಮ ಸೈಟ್ ನ ದಿ.ನೀಲಕಂಠ ಹಾಗು ಸುಮತಿ ದಂಪತಿಗಳ ಪುತ್ರಿಯಾದ ವೆನಿಲ್ಲಾ ಮಣಿಕಂಠ ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಕರಾಟೆ, ಜೂಡೋ, ಸಿಲಂಬಂ, ಸ್ಕೇಟಿಂಗ್ ಮೊದಲಾದ ಮಾರ್ಷಲ್ ಆರ್ಟ್‌ನಲ್ಲಿ ಪರಿಣತಿಯನ್ನು ಪಡೆದುಕೊಂಡಿದ್ದಲ್ಲದೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ತನ್ನ ಪ್ರೌಢಶಿಕ್ಷಣವನ್ನು ಕಲ್ಲಡ್ಕದ ಶ್ರೀ ರಾಮ ಪ್ರೌಢ ಶಾಲೆಯಲ್ಲಿ…
ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಅಮೃತ್‌ಕುಮಾರ್ ಸಿ.ಆರ್ ಗೆ ಬೀಳ್ಕೊಡುಗೆ ಬಂಟ್ವಾಳ : ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 19 ವರ್ಷ ಸರಕಾರಿ ಸೇವೆ ಸಲ್ಲಿಸಿ ಇದೀಗ ಬಂಟ್ವಾಳ ಲೋಕೋಪಯೋಗಿ ಉಪವಿಭಾಗದಲ್ಲಿ ನಿವೃತ್ತಿ ಹೊಂದಿರುವ ಸಹಾಯಕ ಇಂಜಿನಿಯರ್ ಅಮೃತ್‌ಕುಮಾರ್ ಸಿ.ಆರ್ ರವರ ಬೀಳ್ಕೊಡುಗೆ ಸಮಾರಂಭವು ಬಂಟ್ವಾಳದ ಲೋಕೋಪಯೋಗಿ ಉಪವಿಭಾಗದ ಸಭಾಂಣದಲ್ಲಿ ಜರಗಿತು. Advertisement ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೈಪ್ರಕಾಶ್‌ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿ.ಆರ್.ಇ.ಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರನಾಥ ಸಾಲಿಯಾನ್, ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಸಹಾಯಕಕಾರ್ಯ ನಿರ್ವಾಹಕ ಅಭಿಯಂತರರಾದ ಜಿ.ಕೆ.ನಾಕ್, ಸಹಾಯಕ ಅಭಿಯಂತರುಗಳಾದ ಪ್ರೀತಂ, ಮನೋಜ್, ವಿವೇಕಾನಂದರೆಡ್ಡಿ , ಅಮೃತ್‌ಕುಮಾರ್‌ರ ಪತ್ನಿ ಕಲೈವಾಣಿ , ಪಿ.ಆರ್.ಇ.ಡಿ ಉಪವಿಭಾಗ ಅಭಿಯಂತರರಾದ ಕೃಷ್ಣ, ಜಗದೀಶ, ಕುಶಕುಮಾರ್, ನಾಗೇಶ್, ಲೋಕೋಪಯೋಗಿ ಕಚೇರಿ ಸಿಬ್ಬಂದಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.ಅರುಣ್‌ಪ್ರಕಾಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮನೋಜ್ ವಂದಿಸಿದರು. Advertisement
ಪಾಣೆಮಂಗಳೂರಿನಲ್ಲಿ ರೈತ ಸಂಘದ ಸಭೆ ಬಂಟ್ವಾಳ: ಪಾಣೆಮಂಗಳೂರಿನ ಬಂಗ್ಲೆಗುಡ್ಡೆ ಶ್ರೀ ಕಲ್ಲುರ್ಟಿ- ಕಲ್ಕುಡ ದೈವಸ್ಥಾನದ ಸಭಾಂಗಣದಲ್ಲಿ ರೈತ ಸಂಘದ ಸಭೆ ಬಂಟ್ವಾಳ ತಾಲೂಕುಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರುಗಿತು. ರೈತರ ಕುಮ್ಕಿ ಹಕ್ಕು, ರಾಜ ಕಾಲುವೆ ಒತ್ತುವರಿ ತೆರವು, ರೈತರ ಹಾಲಿನ ಪ್ರೋತ್ಸಾಹಧನ ಬಾಕಿ ಪಾವತಿ, ನಿಯಮಿತವಾಗಿ ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ರೈತರ ಕುಂದು ಕೊರತೆ ಸಭೆ ಈ ಎಲ್ಲ ವಿಚಾರಗಳ ಬಗ್ಗೆ ಕರ್ನಾಟಕ ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಅವರನ್ನು ರೈತರ ನಿಯೋಗ ಶೀಘ್ರವೇ ಭೇಟಿಯಾಗಿ ಚರ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. Advertisement Advertisement ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳ ಗುತ್ತು, ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ, ಸದಸ್ಯರಾದ ದಿಲೀಪ್ ರೈ, ಭೋಜ, ಲಕ್ಷ್ಮ, ಸುದೇಶ ಶೆಟ್ಟಿ. ಸೋಮನಾಥ ಭಂಡಾರಿ. ಮೊದಲಾದವರು ಉಪಸ್ಥಿತರಿದ್ದರು.








