Author: admin

ಬಂಟ್ವಾಳ: ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ ಇವರ ನೂತನ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಬಿ.ಸಿ.ರೋಡಿನ ಸ್ಮಾರ್ಟ್‌ಸಿಟಿ ಕಟ್ಟಡದ ನೆಲ ಅಂತಸ್ತಿನಲ್ಲಿ ಶುಭಾರಂಭಗೊಂಡಿತು. ಬಿ ಸಿ.ರೋಡಿನಲ್ಲಿ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ ಬಿ.ಸಿ.ರೋಡಿನಲ್ಲಿ ಈಗಾಗಲೇ ಆನಿಯಾ ದರ್ಬಾರ್ ಹೋಟೇಲ್ ಕಾರ್ಯಚರಿಸುತ್ತಿದ್ದು ಶುಚಿ ರುಚಿಯಾದ ಊಟೋಪಚಾರ ಹಾಗೂ ಗ್ರಾಹಕ ಸ್ನೇಹಿ ಸೇವೆಯಿಂದಾಗಿ ತಾಲೂಕಿನಾದ್ಯಂತ ಮನೆಮಾತಾಗಿದೆ. ಇದೀಗ ಇದೇ ಸಂಸ್ಥೆಯ ಹವಾನಿಯಂತ್ರಿತ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಗ್ರಾಹಕ ಸೇವೆಗಾಗಿ ಸ್ಮಾರ್ಟ್‌ಸಿಟಿ ಕಟ್ಟಡದಲ್ಲಿ ಕಾರ್ಯರಂಭಗೊಂಡಿದೆ. Advertisement Advertisement ಸಯ್ಯದ್ ಹುಸೈನ್ ಬಹಲವಿ ತಂಙಲ್ ಕುಕ್ಕಾಜೆ ನೂತನ ಹೊಟೇಲ್ ಉದ್ಘಾಟಿಸಿದರು. ಈ ಸಂದರ್ಭ ಧರ್ಮಗುರುಗಳಾದ ಇರ್ಷಾದ್ ದಾರಿಮಿ ಅಲ್ ಜಝಾರಿ ಮಿತ್ತಬೈಲ್, ಅಶ್ರಫ್ ಫೈಝಿ, ಖತೀಬರು ಮಿತ್ತಬೈಲ್, ಎಂ.ಕೆ. ಅಝೀಝ್ ಹಮ್ಜದಿ ಮಾವಿನಕಟ್ಟೆ, ಡಾ. ಹಝ್ರತ್ ಫಾಝಿಲ್ ರಝ್ವಿ, ಕಾವಲಕಟ್ಟೆ , ಅಬ್ದುಲ್ ರಝಾಕ್ ಸಖಾಫಿ, ಮಡಂತ್ಯಾರ್, ಹುಸೈನ್ ಸಹದಿ…

Read More

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಇದರ ಬಿ. ವೋಕ್ ವಿಭಾಗದ ಆಶ್ರಯದಲ್ಲಿ ರಾಜ್ಯ ಮಟ್ಟದ ಎಜು ಕಲ್ಚರಲ್ ಫೆಸ್ಟ್ ಬಿ. ವೋಕ್ ಉತ್ಸವ ಜೂನ್ 22 ಹಾಗೂ 23 ರಂದು ಉಜಿರೆಯಲ್ಲಿ ನಡೆಯಲಿದೆ.ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದ್ದು, ಆಕರ್ಷಕ ಬಹುಮಾನಗಳನ್ನೂ ಗೆಲ್ಲಬಹುದು.ಮಾರ್ಕೆಟಿಂಗ್, ಸ್ಟಾರ್ಟ್‌ಅಪ್ ಪಿಚ್, ಬೆಸ್ಟ್ ಸಿ.ಇ.ಓ, ಮೂವಿ ಕ್ವಿಜ್, ಮೂವಿ ಸ್ಪೂಫ್, ಮೂವಿ ಆಕ್ಷನ್, ಮೋಟರ್ ಮೌತ್, ಬಗ್ ಎಪಿಕ್ಸ್, ಟೆಕ್ ಇಟ್ ಔಟ್, ಫ್ಯಾಶನ್ ಶೋ, ಬಿಜಿಎಂಐ ಹಾಗೂ ಗ್ರೂಪ್ ಡ್ಯಾನ್ಸ್ ಸ್ಪರ್ಧೆಗಳು ನಡೆಯಲಿವೆ. ಅದಲ್ಲದೇ, ಬಿ. ವೋಕ್ ಉತ್ಸವದ ಅಂಗವಾಗಿ ರಾಜ್ಯಮಟ್ಟದ ಮುಕ್ತ ಕಿರುಚಿತ್ರ ಸ್ಪರ್ಧೆ, ಸಿನಿಮೋತ್ಸವವೂ ನಡೆಯಲಿಕ್ಕಿದೆ.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 8310545772 / 8618097459 / 9019872866 Advertisement Advertisement

Read More

ಜೂ.20: ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸ್ವತ್ವದ ಆಧಾರದ ಮೇಲೆ ಪುನರುತ್ಥಾನ ಎನ್ನುವ ರಾಷ್ಟ್ರೀಯ ವಿಚಾರ ಸಂಕಿರಣ ಜೂ.20ರಂದು ಮಂಗಳವಾರ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.ಅವರು ಬಿ.ಸಿ.ರೋಡು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿಅಂದು ಬೆಳಿಗ್ಗೆ 10 ಗಂಟೆಗೆ ಪತ್ರಕರ್ತ ಅಜಿತ್ ಹನುಮಕ್ಕನವರ್ ವಿಚಾರ ಸಂಕಿರಣ ಉದ್ಘಾಟಿಸುವರು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸುವರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತವಿಕವಾಗಿ ಮಾತನಾಡುವರು. ಬಳಿಕ 10.45 ರಿಂದ 11.45 ರವರೆಗೆ ಸ್ವತ್ವಯುತ ಭಾರತ ಒಂದು ವಿವೇಚನೆ ಬಗ್ಗೆ ಪತ್ರಕರ್ತ ಅಜೀತ್ ಹನುಮಕ್ಕನವರು, 12 ರಿಂದ 1 ಗಂಟೆಯವರೆಗೆ ಭಾರತೀಯ ಅಭಿವೃದ್ಧಿ ಮಾದರಿಗಳು ವಿಚಾರದ ಬಗ್ಗೆ ಶಿವಮೊಗ್ಗದ ವಿಶ್ರಾಂತ ಪ್ರಾಚಾರ್ಯ ಪ್ರೊ. ಎಂ.ಬಿ. ಕುಮಾರಸ್ವಾಮಿ, 1.45 ರಿಂದ 2.45ರವರೆಗೆ ಆಡಳಿತ ಮತ್ತು…

Read More

ಬಂಟ್ವಾಳ: ಸಬ್ ರಿಜಿಸ್ಟ್ರಾರ್ಕಚೇರಿಗಳಲ್ಲಿನ ಮಧ್ಯವರ್ತಿಗಳ ಹಾವಳಿ ಮತ್ತು ಲಂಚಾವತಾರ ತಪ್ಪಿಸಲು ಕಂದಾಯ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶದ ಉದ್ಘಾಟನಾ ಸಮಾರಂಭ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿರುವ ಉಪನೋಂದಾಣಿ ಕಚೇರಿಯಲ್ಲಿ ಗುರುವಾರ ನಡೆಯಿತು.ದ.ಕ ಜಿಲ್ಲಾ ನೋಂದಣಾಧಿಕಾರಿ ಸೈಯದ್ ನೂರ್ ಪಾಷಾ ಎಸ್. ಕಾವೇರಿ 2.0 ತಂತ್ರಾಂಶ ಉದ್ಘಾಟಿಸಿದರು.ಬಂಟ್ವಾಳ ಉಪನೋಂದಣಾಧಿಕಾರಿ ಕವಿತಾ ಎ.ಸಿ. ಉಪಸ್ಥಿತರಿದ್ದರು. ಪ್ರಥಮ ನೋಂದಣಿಯನ್ನು ಆಶಿಕ್ ಕುಕ್ಕಾಜೆ ಅವರು ಶೌಕತ್ ಅಲಿ ಅವರಿಗೆ ದಸ್ತಾವೇಜು ನೋಂದಾಯಿಸಿದರು. ಈ ಸಂದರ್ಭ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. Advertisement Advertisement

Read More

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಈ ವರ್ಷದಲ್ಲಿ ಸಾಧಿಸಿದ ಅತ್ಯುತ್ತಮ ಸೇವಾ ಕಾರ್ಯಗಳಿಗೆ ಪ್ಲಾಟಿನಂ ಪ್ಲಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಇತ್ತೀಚೆಗೆ ಮಂಗಳೂರಿನ ಸೈಂಟ್ ಸೆಬೆಸ್ಟಿಯನ್ ಹಾಲ್ ನಲ್ಲಿ ನಡೆದ ಸಂಪ್ರಾಪ್ತಿ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಚಿತ್ರನಟಿ ನಿರೀಕ್ಷಾ ರೈ ಅವರಿಂದ ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಜಿಲ್ಲಾ ಪ್ರಥಮ ಮಹಿಳೆ ವಾಣಿ ಕಾರಂತ್, ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ನಿಕಟಪೂರ್ವ ಗವರ್ನರ್ ರವೀಂದ್ರ ಭಟ್, ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಕ್ಲಬ್ ಕಾರ್ಯದರ್ಶಿ ಭಾನುಶಂಕರ್ ಬನ್ನಿಂತ್ತಾಯ, ಸದಸ್ಯರಾದ ಮಹಮ್ಮದ್ ವಳವೂರು, ಸಂಜೀವ ಪೂಜಾರಿ, ರಿತೇಶ್ ಬಾಳಿಗ, ವಸಂತ ಪ್ರಭು, ಮುರಳೀಧರ ಪ್ರಭು, ಕರುಣಾಕರ ಶೆಟ್ಟಿ, ಸದಾಶಿವ ಬಾಳಿಗ, ಡಾ. ಆತ್ಮರಂಜನ್ ರೈ, ರಾಮಣ್ಣ ರೈ, ಡಾ. ಪ್ರತಿಭಾ ರೈ, ಮಾಧವ ಶೆಣೈ, ಸ್ಟೀವನ್ ಉಪಸ್ಥಿತರಿದರು. Advertisement Advertisement

Read More

ಬಂಟ್ವಾಳ: ಈ ಹಿಂದೆ ಬಂಟ್ವಾಳ ಸೇರಿದಂತೆ ಐದು ಬಾರಿ ವೈಶಿಷ್ಟ್ಯಪೂರ್ಣ ಹಲಸು ಮೇಳ ಯಶಸ್ವಿಯಾಗಿ ನೆರವೇರಿಸಿ ಜೂ. 17 ರಿಂದ 18ರತನಕ ಪುತ್ತೂರು ಜೈನ ಭವನ ದಲ್ಲಿ ಜಿಲ್ಲಾ ಮಟ್ಟದ 6 ನೇ ‘ಹಲಸು ಹಣ್ಣು ಮೇಳ’ ಆಯೋಜಿಸಲಾಗಿದೆ ಎಂದು ಪುತ್ತೂರು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ಹೇಳಿದ್ದಾರೆ. Advertisement ಇಲ್ಲಿನ ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರು ನವತೇಜ ಟ್ರಸ್ಟ್ ಸಹಿತ ಜೆಸಿಐ ಪುತ್ತೂರು ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು ಇದರ ಸಹಭಾಗಿತ್ವದಲ್ಲಿ ನಡೆಯುವ ಈ ಮೇಳದಲ್ಲಿ ಸುಮಾರು ೩೦ಕ್ಕೂ ಮಿಕ್ಕಿ ಮಳಿಗೆಗಳಲ್ಲಿ ತಾಜಾ ಹಲಸಿನ ಉತ್ಪನ್ನಗಳ ಮಾರಾಟವಿದೆ. ಯಾವುದೇ ಕೃತಕ ಬಣ್ಣ ಬಳಸದೆ ಹಲಸಿನ ಗಟ್ಟಿ, ಹಲ್ವ, ದೋಸೆ, ಮಂಚೂರಿ, ಕಬಾಬ್, ಪಾಯಸ, ಐಸ್ ಕ್ರೀಂ, ಫಿಜಾ, ಬರ್ಗರ್ ಮತ್ತಿತರ ವೈಶಿಷ್ಟ್ಯಪೂರ್ಣ ತಿಂಡಿ ತಿನಿಸು ಗ್ರಾಹಕರನ್ನು ಆಕರ್ಷಿಸಲಿದೆ ಎಂದರು. ಇದೇ ವೇಳೆ ವಿವಿಧ ಬಗೆಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ಆಹಾರ…

Read More

ಇಲ್ಲಿನ ಆಹಾರ ಇಲಾಖೆಯಲ್ಲಿ ಜೂ. 28ರಂದು ಸರ್ವರ್ ನಿರ್ವಹಣಾ ಕಾರ್ಯ ನಡೆಯಲಿದೆ. ಆದುದರಿಂದ ಅರ್ಹ ಪಡಿತರ ಚೀಟಿದಾರರು ಈ ತಿಂಗಳ ಪಡಿತರ ಸಾಮಾಗ್ರಿಗಳನ್ನು ಆಯಾಯ ನ್ಯಾಯಬೆಲೆ ಅಂಗಡಿಗಳಲ್ಲಿ ಜೂ. 27ರೊಳಗೆ ಪಡೆದುಕೊಳ್ಳಬೇಕು. ಆ ಬಳಿಕ ಪಡಿತರ ಸಾಮಾಗ್ರಿ ಪಡೆದುಕೊಳ್ಳಲು ಅವಕಾಶ ಇಲ್ಲ ಎಂದು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ. Advertisement Advertisement

Read More

ಕಥೊಲಿಕ್ ಸಭಾ ಕೇಂದ್ರೀಯ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಆಯ್ಕೆ. ಮಂಗಳೂರು: ಇಲ್ಲಿನ ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ 2023-24 ನೇ ಸಾಲಿಗೆ ವಾರ್ಷಿಕ ಚುನಾವಣೆಯು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಯಿತು. Advertisement Advertisement ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ಬಹುಮತದಿಂದ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ವಿಲ್ಮಾ ಮೊಂತೆರೊ ದೆರೆಬೈಲ್, ಉಪಾಧ್ಯಕ್ಷರಾಗಿ ನೊರ್ಬರ್ಟ್ ಮಿಸ್ಕಿತ್ ಸುರತ್ಕಲ್ ಮತ್ತು ಲೋರೆನ್ಸ್ ಡಿಸೋಜ ಸುರತ್ಕಲ್, ಸಹ ಕಾರ್ಯದರ್ಶಿಯಾಗಿ ರೋಷನ್ ಬೊನಿಫಾಸ್ ಮಾರ್ಟಿಸ್ ಸೂರಿಕುಮೇರು, ಖಜಾಂಚಿಯಾಗಿ ಫ್ರಾನ್ಸಿಸ್ ಮೊಂತೆರೊ ತಲಪಾಡಿ, ಸಹ ಖಜಾಂಚಿಯಾಗಿ ಸಂತೋಷ್ ಡಿಸೋಜ ಬಜ್ಪೆ, ನಿಕಟ ಪೂರ್ವ ಅಧ್ಯಕ್ಷರಾಗಿ ಸ್ಟ್ಯಾನಿ ಲೋಬೊ ಹಾಗೂ ಆಧ್ಯಾತ್ಮಿಕ ನಿರ್ದೇಶಕರಾಗಿ ಅತೀ ವಂದನೀಯ ಜೆ.ಬಿ.ಸಲ್ಡಾನ್ಹಾರವರು ಆಯ್ಕೆಯಾಗಿರುತ್ತಾರೆ. ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷರಾದ ರೊಲ್ಫಿ ಡಿಕೋಸ್ತರವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Read More

ಬಂಟ್ವಾಳ: ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀಕಲ್ಲುರ್ಟಿ ದೈವಸ್ಥಾನದಲ್ಲಿ ಜೂ.18ರಂದು ಆದಿತ್ಯವಾರ ಅಮವಾಸ್ಯೆ ಇರುವುದರಿಂದ ಅಗೇಲು ಹಾಗೂ ಕೋಲ ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ. Advertisement

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಹಾಗೂ ಜೆಸಿಐ ಬಂಟ್ವಾಳದ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ 123ನೇ ರಕ್ತದಾನ ಶಿಬಿರ ಜೂ.18ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ. Advertisement Advertisement ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶೇಕ್ ಕಬೀರ್ ಅಹಮದ್, ಉದ್ಯಮಿ ಬಿ. ಸಂಜೀವ ಪೂಜಾರಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವಂತೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಹಾಗೂ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More