Author: admin

ಕಾರ್ಮಿಕ ವಿರೋಧಿ ಬಿ.ಜೆ.ಪಿಯನ್ನು ಸೋಲಿಸಿ ಕರ್ನಾಟಕ ಉಳಿಸಿ- ಕಾಮ್ರೇಡ್ ಶಂಕರ್ ಬಂಟ್ವಾಳ : ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ದ.ಕ ಜಿಲ್ಲಾ ಸಮಿತಿ ಸಭೆ ಬಿ.ಸಿ.ರೋಡಿ ನಲ್ಲಿ ನಡೆಯಿತು. Advertisement ಸಭೆಯನ್ನುದ್ದೇಶಿಸಿ ಮಾತನಾಡಿದ ಎ.ಐ.ಸಿ‌.ಸಿ.ಟಿ.ಯು ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಿ.ಪಿ.ಐ.ಎಂ.ಎಲ್ (ಲಿಬರೇಷನ್ ) ಕೇಂದ್ರ ಸಮಿತಿ ಸದಸ್ಯರಾದ ಕಾಮ್ರೇಡ್ ಶಂಕರ್ ಮಾತನಾಡಿಇಂದು ಕಾರ್ಮಿಕ ವರ್ಗ ಅತ್ಯಂತ ಸಂಕಷ್ಟದ ಪರಿಸ್ಥಿತಿ ಯಲ್ಲಿ ಇದ್ದು ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರದ ನೀತಿ ಗಳು ಕಾರ್ಮಿಕ ವಿರೋಧಿಯಾಗಿದ್ದು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರವು ಕಾರ್ಮಿಕರ ಪಾಲಿಗೆ ಮರಣ ಶಾಸನವನ್ನು ಬರೆದಿಡುತ್ತಿದೆ ,ಇಂದೆಂದೂ ಇಲ್ಲ ದಂತಹ ಭ್ರಷ್ಟಾಚಾರ,ಬೆಲೆ ಏರಿಕೆ, ಶೈಕ್ಷಣಿಕ ,ವೈದ್ಯಕೀಯ ಮೂಲ ಸೌಕರ್ಯಗಳ ನಾಶ, ಯುವಜನರ ಬದುಕಿಗೆ ಮಾರಕವಾಗಿರುವ ನಿರುದ್ಯೋಗ, ಮಹಿಳೆಯರ ಮೇಲೆ ,ಅಲ್ಪಸಂಖ್ಯಾತ ರ ಮೇಲಿನ ದಾಳಿ ಇವುಗಳಿಂದ ಜನತೆ ತತ್ತರಿಸಿದ್ದು‌ ಈ ಪರಿಸ್ಥಿತಿ ತಂದ ರಾಜ್ಯ ಬಿ.ಜೆ.ಪಿ ಸರಕಾರವನ್ನು ಸೋಲಿಸಿ ಸಂವಿಧಾನ ಪ್ರಜಾಪ್ರಭುತ್ವ…

Read More

ಬಂಟ್ವಾಳ ಪೇಟೆಯಲ್ಲಿ ರಾಜೇಶ್ ನಾಯ್ಕ್ ಮತಯಾಚನೆ ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮತಯಾಚನೆ ನಡೆಸಿದರು.ಬಳಿಕ ಮಾತನಾಡಿದ ಅವರು ಗೌರವಯುತವಾದ ಮತ್ತು ಶಾಂತಿಯುತ ಬದುಕಿಗಾಗಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ಬಂಟ್ವಾಳ ಕ್ಷೇತ್ರದಲ್ಲಿ 2 ಸಾವಿರ ಕೋಟಿಗಿಂತಲೂ ಅಧಿಕ ಅನುದಾನದ ಮೂಲಕ ಸರ್ವ ವ್ಯಾಪಿ ಮತ್ತು ಸರ್ವಸ್ಪರ್ಶಿಯಾದ ಅಭಿವೃದ್ಧಿ ಮಾಡಿದ್ದೇನೆ ಎಂಬ ಸಂತೋಷ ಇದೆ, ಅಭಿವೃದ್ಧಿ ಜೊತೆಗೆ ಶಾಂತಿಯುತ ಬಂಟ್ವಾಳವಾಗಿ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದರು. Advertisement ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರವಾಗಿ ಸುಧಾರಣೆ ತರಲು ನಾನು ಮಾಡಿದ ಪ್ರಯತ್ನಕ್ಕೆ ಬೆಲೆ ಸಿಕ್ಕಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಕಲ ವ್ಯವಸ್ಥೆ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದ ಜನರ ಮನೆಬಾಗಿಲಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಉದ್ದೇಶದಿಂದ ಸಂಚಾರಿ ಐಸಿಯು ಬಸ್, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ, ಐಸಿಯು ಬೆಡ್ ಹೀಗೆ ಹತ್ತಾರು ಯೋಜನೆಗಳನ್ನು ನೀಡಿದ್ದೇನೆ, ಇದರ ಜೊತೆಗೆ ಪುಂಜಾಲಕಟ್ಟೆ…

Read More

Advertisement Advertisement ಬಂಟ್ವಾಳ: ಅಕ್ರಮ ಗೋಸಾಗಾಟದ ವಾಹನವನ್ನು ಪತ್ತೆ ಮಾಡಿರುವ ಬಂಟ್ವಾಳ ಪೊಲೀಸರು ದನ ಹಾಗೂ ಕರುವನ್ನು ರಕ್ಷಣೆ ಮಾಡಿ ಟೆಂಪೋ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ಗೋಳ್ತಮಜಲು ಗ್ರಾಮದ ಗಣೇಶ ನಗರದಲಿ ಗುರುವಾರ ನಡೆದಿದೆ.ಆರೋಪಿಗಳಾದ ಪುದು ಗ್ರಾಮದ ಅಮ್ಮಮಾರ್ ನಿವಾಸಿ ಬಶೀರ್ ಕೆ. (32) ಹಾಗೂ ಒಕ್ಕೆತ್ತೂರುವಿನ ಜೆರಾಲ್ಡ್ ಮಸ್ಕರೇನಸ್ (48) ಎಂಬವರನ್ನು ಬಂಧಿಸಿದ್ದಾರೆ.ಬಂಟ್ವಾಳ ನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗೋಳ್ತಮಜಲು ಗ್ರಾಮದ ಗಣೇಶ್ ನಗರ ಎಂಬಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11 ಗಂಟೆಯ ವೇಳೆಗೆ ವಿಟ್ಲ ಕಡೆಯಿಂದ ಬಂದ ಟೆಂಪೋ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ದರಲ್ಲಿ ಪರವಾನಿಗೆ ಇಲ್ಲದೇ ವಧೆ ಮಾಡಲು ಸಾಗಾಟ ಮಾಡುತ್ತಿದ್ದ ದನ ಹಾಗೂ ಕರು ಕಂಡು ಬಂದಿದೆ. ರೂ.13ಸಾವಿರ ಮೌಲ್ಯದ ದನ, ರೂ.3ಸಾವಿರ ಮೌಲ್ಯದ ದನದ ಕರು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ರೂ.75 ಸಾವಿರ ಟೆಂಪೋವನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. Advertisement

Read More

ಬಂಟ್ವಾಳ: ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿಸಜೀಪ ಮಾಗಣೆ ನಾಲ್ಕೈತ್ತಾಯ ದೈವದ ಮೆಚ್ಚಿ ಜಾತ್ರೆ ಪ್ರಯುಕ್ತ ಮೇ. 9ರಂದು ಅಗೇಲು ಸೇವೆ ಮತ್ತು ಕೋಲ ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಟಣೆ ತಿಳಿಸಿದೆ. Advertisement

Read More

Advertisement ಬಂಟ್ವಾಳ: ಬಿಎಲ್‌ಓ ಆಗಿ ಕರ್ತವ್ಯ ನಿರ್ವಹಿಸಿಲ್ಲ ಎನ್ನುವ ಕಾರಣಕ್ಕೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಫರ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಲತಾ ಅವರ ಅಮಾನತು ಆದೇಶವನ್ನು ದ.ಕ. ಜಿಲ್ಲಾಧಿಕಾರಿ ಹಿಂಪಡೆದುಕೊಂಡಿದ್ದು ಕರ್ತವ್ಯಕ್ಕೆ ಪುನರ್ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಲತಾ ಅವರು ಗುರುವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ತಿಳಿದು ಬಂದಿದೆ.ಲತಾ ಅವರು ಬಿಎಲ್‌ಒ ಕೆಲಸ ನಿರ್ವಹಿಸಲು ಅಸಾಧ್ಯವಾಗುತ್ತಿರುವ ಬಗ್ಗೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆಲ್ಲರಿಗೂ ಲಿಖಿತವಾಗಿ ಮತ್ತು ಖುದ್ದಾಗಿ ಪರಿಸ್ಥಿತಿಯನ್ನು ವಿವರಿಸಿದ್ದರೂ, ಜಿಲ್ಲಾಧಿಕಾರಿಯವರು ಅವರನ್ನು ಅಮಾನತು ಮಾಡಿದ್ದರು. ಇದರಿಂದಾಗಿ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಸಂಘ ಲತಾ ಅವರ ಬೆಂಬಲಕ್ಕೆ ನಿಂತು ಸಂಘದ ಮೂಲಕ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ದಾಖಲೆ ಸಹಿತ ಅವರಿಗೆ ವಿವರಣೆ ನೀಡಿ ಬಡಪಾಯಿ ಲತಾ ಅವರ ಅಮಾನತು ಆದೇಶ ವಾಪಾಸ್ ಪಡೆದು ಹುದ್ದೆಯಲ್ಲಿ ಮುಂದುವರಿಸಲು ಒತ್ತಾಯಿಸಿತ್ತು. ತಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಎಲ್ಲಾ ಬಿಎಲ್‌ಓ ಗಳು ಕರ್ತವ್ಯ ರಾಜಿನಾಮೆ ನೀಡುವ ಎಚ್ಚರಿಕೆಯನ್ನು…

Read More

ಮೇ.6ರಂದು ಬಿ.ಸಿ.ರೋಡಿನಲ್ಲಿ ಯೋಗಿ ಆದಿತ್ಯನಾಥ್ ಬೃಹತ್ ರೋಡ್ ಶೋ ಬಂಟ್ವಾಳ: ಇಲ್ಲಿನ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ, ಸ್ಟಾರ್ ಪ್ರಚಾರಕ್ ಆಗಿರುವ ಯೋಗಿ ಆದಿತ್ಯನಾಥ್ ಅವರು ಮೇ.6ರಂದು ಶನಿವಾರ ಬಿ.ಸಿ.ರೋಡಿಗೆ ಆಗಮಿಸಲಿದ್ದು ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದರು.ಅವರು ಗುರುವಾರ ಬಿಜೆಪಿ ಕಚೇರಿಯುಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಅಂದು ಸಂಜೆ 4ಗಂಟೆಗೆ ಯೋಗಿಜೀ ಆಗಮಿಸಲಿದ್ದು ಸಂಜೆ 6 ಗಂಟೆಯವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. Advertisement Paid advertisement ಕೈಕಂಬದ ಪೊಳಲಿ ದ್ವಾರದ ಬಳಿಯಿಂದ ಬಿ.ಸಿ.ರೋಡು ಬಸ್ಸು ನಿಲ್ದಾಣದವರೆಗೆ ಬೃಹತ್ ರೋಡ್ ಶೋ ಮೆರವಣಿಗೆ ನಡೆಯಲಿದ್ದು ಬಳಿಕ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ, ಒಂದು ಬೂತ್‌ಗಳಿಂದ ಕನಿಷ್ಠ 100 ಮಂದಿ ಕಾರ್ಯಕರ್ತರು ಭಾಗವಹಿಸುವ ಬಗ್ಗೆ ನಿರ್ಧರಿಸಲಾಗಿದ್ದು ಬಂಟ್ವಾಳ ಕ್ಷೇತ್ರದಿಂದ ಸುಮಾರು 30 ರಿಂದ 40…

Read More

ಬಜರಂಗದಳವನ್ನು ನಿಷೇಧಿಸುವವರನ್ನು ಸಮಾಜ ನಿಷೇಧಿಸುತ್ತದೆ: ಪ್ರಸಾದ್ ಕುಮಾರ್ ರೈ ಬಂಟ್ವಾಳ: ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸಲು ಹೊರಟಿರುವುದು ತೀವ್ರ ಖಂಡನೀಯ ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದರು.ಅವರು ಗುರುವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಿಟಿಷರು ಹೇಗೆ ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದರೋ ಅದೇ ರೀತಿ ಕಾಂಗ್ರೆಸ್ ಕೂಡ ಒಡೆದು ಆಳುವ ನೀತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಈ ದೇಶದ ಅಸ್ಮಿತೆಯಯಾಗಿರುವ ಹಿಂಧೂ ಧರ್ಮವನ್ನು ಜಾತ್ಯಾತೀತತೆ, ತುಷ್ಠೀಕರಣ ಹೆಸರಿನಲ್ಲಿ ಮೆಟ್ಟುವ ಪ್ರಯತ್ನ ಮಾಡಿದೆ. ಬಹುಸಂಖ್ಯಾತರಾಗಿರುವ ಹಿಂದೂಗಳು ತಮ್ಮ ಧರ್ಮದ ಉಳಿವಿಗೆ ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದೊಡ್ಡಿದೆ ಎಂದು ಆರೋಪಿಸಿದರು. Advertisement Advertisement Advertisement ಈ ದೇಶದ ಹಿಂದೂಗಳ ರಕ್ಷಣೆಗೋಸ್ಕರ ಹನುಮಂತನ ಹೆಸರಿನಲ್ಲಿ ಬಜರಂಗದಳ ಪ್ರಾರಂಭಗೊಂಡಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ನಿರಂತರವಾದ ಹೋರಾಟವನ್ನು ಮಾಡಿಕೊಂಡು ಬಂದಿರುವ ಭಜರಂಗದಳವನ್ನು ಕಾಂಗ್ರೆಸ್ ನಿಷೇಧಿಸಲು ಹೊರಟಿದೆ. ಬಜರಂಗದಳವೆಂದರೆ ಗಲಾಟೆ…

Read More

ಬಂಟ್ವಾಳ : ವಾಮಮಾರ್ಗದಲ್ಲಿ ಗೆಲ್ಲುವ ಬಿಜೆಪಿ ತಂತ್ರಕ್ಕೆ ಈ ಬಾರಿ ಯಶಸ್ಸು ಸಿಗಲಾರದು ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಪುಂಜಾಲಕಟ್ಟೆ ಮತ್ತು ಪಿಲಾತಬೆಟ್ಟುವಿನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿಯದ್ದು ಸುಳ್ಳು ವದಂತಿಗಳ ಮೂಲಕ ಚುನಾವಣೆ ಗೆಲ್ಲುವ ತಂತ್ರ : ರಮಾನಾಥ ರೈ ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಅಭಿವೃದ್ಧಿ ಶೂನ್ಯವಾಗಿದೆ. ಜನರ ಮುಂದೆ ಮಾತನಾಡುವುದಕ್ಕೆ ಅವರ ಬಳಿ ವಿಷಯಗಳಿಲ್ಲ. ಹೀಗಾಗಿ ಈ ಬಾರಿ ಕೂಡ ಅವರು ಸುಳ್ಳು, ವದಂತಿಗಳ ಮೂಲಕವೇ ಚುನಾವಣೆ ಗೆಲ್ಲುವ ತಂತ್ರ ಹೂಡಿದ್ದಾರೆ. ಆದರೆ, ಜನರು ಬಿಜೆಪಿಯ ಇಂತಹ ಕುತಂತ್ರಗಳನ್ನು ಮೆಟ್ಟಿನಿಂತು ಕಾಂಗ್ರೆಸ್ ಅನ್ನು ಭಾರೀ ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ರೈ ಭರವಸೆ ವ್ಯಕ್ತಪಡಿಸಿದರು. Advertisement ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳ ನೇತೃತ್ವ ನಾನು ವಹಿಸಿದ್ದೇನೆ. ಅನೇಕ ದೇವಸ್ಥಾನಗಳಿಗೆ ಧ್ವಜಸ್ಥಂಭ ನೀಡಿ ಸೇವೆ ಸಲ್ಲಿಸಿದ್ದೇನೆ. ಆದರೂ ನನ್ನ ವಿರುದ್ಧ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ…

Read More

ಜ್ಯೋತಿಗುಡ್ಡೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು ತುಂಬೆ: ಬಿಜೆಪಿಯ ತತ್ವ ಸಿದ್ದಾಂತ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಸಾಧನೆಯನ್ನು ಮೆಚ್ಚಿ ತುಂಬೆ ಗ್ರಾಮದ ಜ್ಯೋತಿಗುಡ್ಡೆಯಲ್ಲಿ ಹಲವು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ಬಿಜೆಪಿ ಪಕ್ಷ ಸೇರಿದರು. ಬಿಜೆಪಿ ಮಂಗಳೂರು ಕ್ಷೇತ್ರದ ಅಭ್ಯರ್ಥಿ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಪ್ರಮುಖರಾದ ಆರ್ ಎಸ್. ಜಯ ರಾಮಲ್ ಕಟ್ಟೆ, ರೂಪೇಶ್ ಜ್ಯೋತಿ ಗುಡ್ಡೆ, ಹರೀಶ್ ಜ್ಯೋತಿಗುಡ್ಡೆ, ಕೃಷ್ಣಪ್ಪ ಜ್ಯೋತಿ ಗುಡ್ಡೆ ಪ್ರಜ್ವಲ್, ಪ್ರತೀಕ್, ಕಿರಣ್ ಜ್ಯೋತಿಗುಡ್ಡೆ ಬಿಜೆಪಿ ಸೇರಿದರು.ಬಳಿಕ ಬಿಜೆಪಿ ಮಂಗಳೂರು ಮಂಡಲ ವಾರ್ಡ್ 87ರ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಅಭ್ಯರ್ಥಿಸತೀಶ್ ಕುಂಪಲ ಮಾತನಾಡಿ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದೆ. Advertisement ಪ್ರಧಾನಿ…

Read More

ಬಂಟ್ವಾಳ ಬಿಜೆಪಿಯ ದ್ವೇಷ ರಾಜಕಾರಣದ ಪ್ರಯೋಗಶಾಲೆಯಾಗಿದೆ: ಮುನೀರ್ ಕಾಟಿಪಳ್ಳ ಬಂಟ್ವಾಳ: ಭ್ರಷ್ಟ, ಕೋಮುವಾದಿ ಬಿಜೆಪಿ ಆಡಳಿತದಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ. ಬೆಲೆಯೇರಿಕೆ, ಕಾರ್ಮಿಕ ವಿರೋಧಿ ನೀತಿಗಳಿಂದ ದುಡಿಯುವ ಜನರ ಬದುಕಿನ ಮೇಲೆ ಗಧಾ ಪ್ರಹಾರವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಕಾರ್ಮಿಕ ವರ್ಗದ ಆದ್ಯತೆ, ರೈತ, ಕಾರ್ಮಿಕರ ಚಳವಳಿಗಳ ಕೇಂದ್ರವಾಗಿದ್ದ ಬಂಟ್ವಾಳವನ್ನು ಬಿಜೆಪಿ ಇಂದು ದ್ವೇಷ ರಾಜಕಾರಣದ ಪ್ರಯೋಗ ಶಾಲೆಯಾಗಿ ಪರಿವರ್ತಿಸಿದೆ. ಬದುಕಿನ ಪ್ರಶ್ನೆಗಳನ್ನು ಕಡೆಗಣಿಸಿ, ಮತಾಂಧತೆಗೆ ಒತ್ತು ನೀಡುತ್ತಿರುವ ಬಿಜೆಪಿಯನ್ನು ಸೋಲಿಸಲು ಬಂಟ್ವಾಳದಲ್ಲಿ ಸಿಪಿಐಎಂ ಶ್ರಮಿಸಲಿದೆ ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. Advertisement ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಆಡಳಿತದ ಅಡಿಯಲ್ಲಿ ಎಲ್ಲಾ ರಂಗಗಳಲ್ಲಿಯೂ ಹಿನ್ನಡೆ ಅನುಭವಿಸಿದೆ. ಸಾರ್ವಜನಿಕ ಶಿಕ್ಷಣ, ಆರೋಗ್ಯ ಕ್ಷೇತ್ರವನ್ನು ಪೂರ್ತಿಯಾಗಿ ಕಡೆಗಣಿಸಿ ವ್ಯಾಪಾರೀಕರಣಕ್ಕೆ ಪೂರ್ಣ ಅವಕಾಶ ಒದಗಿಸಲಾಗಿದೆ. ಹೊಸದಾಗಿ ಯಾವುದೇ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರುವುದು, ಹೊಸ ತಾಲೂಕುಗಳಿಗೆ ಆಸ್ಪತ್ರೆಗಳನ್ನು…

Read More