Author: admin

ಕಾರ್ಮೆಲ್ ವಿದ್ಯಾರ್ಥಿ ಸಂಘ ಉದ್ಘಾಟನೆ ಮೊಡಂಕಾಪು: ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮೋಡಂಕಾಪು ಇದರ 2023-24 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಸಂಸ್ಥೆಯ ಹಳೆ ವಿದ್ಯಾರ್ಥಿನಿ ಜೋಶ್ನ ವಾಸ್ ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡು ಬರಬೇಕು ಎಂದು ಅಭಿಪ್ರಾಯಪಟ್ಟರು. Advertisement Advertisement ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ನವೀನ ಎ.ಸಿ ಪ್ರತಿಜ್ಞಾ ವಿಧಿ ಬೋಧಿಸಿದರು.ವಿದ್ಯಾರ್ಥಿ ಸಂಘದ ಸಲಹೆಗಾರರಾದ ಭಗಿನಿಫೆಲ್ಸಿಟ ಎ.ಸಿ, ಶ್ರೀ ವಿದ್ಯಾ ಹಾಗೂ ಸುರೇಶ್ ನಂದೊಟ್ಟು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಾನ್ಸ್ ಸನ್ ಸ್ವಾಗತಿಸಿ, ಕಾರ್ಯದರ್ಶಿ ಕೃಪಾ ವಂದಿಸಿದರು.

Read More

ಬಂಟ್ವಾಳ: ನಾಗರಹಾವಿನ ಹೊಟ್ಟೆ ಸೇರಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದು 15 ದಿನಗಳ ಆರೈಕೆಯ ಬಳಿಕ ಯಶಸ್ವಿಯಾಗಿ ಅರಣ್ಯ ಬಿಡಲಾಗಿದೆ. ಉರಗ ತಜ್ಞ ಸ್ನೇಕ್ ಕಿರಣ್ ಹಾಗೂ ಪಶುವೈದ್ಯ ಡಾ. ಯಶಸ್ವಿ ನಾರಾವಿ ಹಾಗೂ ಅರಣ್ಯ ಇಲಾಖೆಯ ಸಕಾಲಿಕ ಕಾರ್ಯಚರಣೆಯಿಂದ ಪಾಣ ಸಂಕಟದಲ್ಲಿ ನರಳುತ್ತಿದ್ದ ನಾಗರ ಹಾವು ಬದುಕುಳಿದಿದೆ. ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ವಗ್ಗದಲ್ಲಿರುವ ಸಾಲು ಮರ ತಿಮ್ಮಕ್ಕ ಉದ್ಯಾನವನ ಸಮೀಪದಲ್ಲಿರುವ ಕಾವಳಪಡೂರು ಗ್ರಾ,.ಪಂ. ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿಯ ಬಿಲವೊಂದರಲ್ಲಿ ಒಳನುಗ್ಗಿದ ನಾಗರ ಹಾವು ಹೊರಬರಲಾಗದೆ ಒದ್ದಾಡುತ್ತಿತ್ತು. ಮೂರು ದಿನಗಳಿಂದ ಅದನ್ನು ಗಮನಿಸುತ್ತಿದ್ದ ಮನೆಯವರು ಕಳೆದ ಜೂ. 6ರಂದು ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಿರಣ್ ಅವರು ಹಾವನ್ನು ಬಿಲದಿಂದ ಹೊರ ತೆಗೆದು ಮೂರು ದಿನಗಳ ಕಾಲ ಪ್ರಾಥಮಿಕ ಆರೈಕೆ ನೀಡಿ ರಕ್ಷಿಸಿದ್ದಾರೆ. Advertisement Advertisement ಹಾವಿನ ತಲೆ ಭಾಗದಲ್ಲಿ ಗಾಯಗಳಾಗಿರುವುದು ಹಾಗೂ ಚರ್ಮ ಹರಿದಿರುವುದನ್ನು ಗಮನಿಸಿ ಮಂಗಳೂರಿನ…

Read More

ಬಂಟ್ವಾಳ: ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಜಿಲ್ಲಾ ಸಮಿತಿ ಹಾಗೂ ಬಂಟ್ವಾಳ ತಾಲೂಕು ಸಮಿತಿಯ ರಚನೆಯ ಸಭೆ ಪಾಣೆಮಂಗಳೂರಿನ ಸಜೀಪ ವೆಂಕಪ್ಪ ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆಯಿತು. ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ರವೀಂದ್ರ ಆಚಾರ್ಯ ಕಾವಲುಕಟ್ಟೆ ಉಪಾಧ್ಯಕ್ಷರಾಗಿ ಯಶೋಧರ ಆಚಾರ್ಯ ಮಾಣಿ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಆಚಾರ್ಯ ಬಂಟ್ವಾಳ ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಕಲ್ಲಡ್ಕ ಕೋಶಾಧಿಕಾರಿಯಾಗಿ ಜಯಕರ ಆಚಾರ್ಯ ಮಾಣಿ ಸಂಚಾಲಕರಾಗಿ ಹರೀಶ್ ಆಚಾರ್ಯ ಮಿತ್ತೂರು ನಿರ್ದೇಶಕರಾಗಿ ಶಿವ ಆಚಾರ್ಯ ಕಾವಲುಕಟ್ಟೆ, ಸಂತೋಷ ಆಚಾರ್ಯ ಪೆರ್ನೆ, ಸತೀಶ್ ಆಚಾರ್ಯ ಬಂಟ್ವಾಳ, ಶ್ರೀನಿವಾಸ ಆಚಾರ್ಯ ಮಿತ್ತಡ್ಕ, ಸಂತೋಷ ಆಚಾರ್ಯ ವೀರಕಂಬ ಆಯ್ಕೆಯಾದರು. Advertisement

Read More

ತುಂಬೆ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ತುಂಬೆ ದಿವಿಶ್ ಪ್ರಿ ಪ್ರೈಮರಿ ಶಾಲೆಯ ಪುಟಾಣಿಗಳು ಯೋಗಾಭ್ಯಾಸ ಮಾಡಿದರು. ವಿದ್ಯಾಸಂಸ್ಥೆಯ ಎಲ್ ಕೆ ಜಿ ಹಾಗೂ ಯುಕೆಜಿ ವಿಭಾಗದ ಮಕ್ಕಳು ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಸಂಸ್ಥೆಯ ಸಂಚಾಲಕಿ ಉಷಾಲತಾ ಚಂದ್ರಪ್ರಕಾಶ್ ಶೆಟ್ಟಿ, ಶಿಕ್ಷಕಿಯರಾದ ಸ್ವಾತಿಶ್ರೀ, ಉಷಾ ಉಪಸ್ಥಿತರಿದ್ದರು. Advertisement

Read More

ಬಂಟ್ವಾಳ: ಸೀನಿಯರ್ ಛೇಂಬರ್ ಇಂಟರ್ ನೇಶನಲ್ ಇದರ ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್ ಅಧ್ಯಕ್ಷರಾಗಿ ಇಂಜಿನಿಯರ್ ಡಾ. ಆನಂದ್ ಬಂಜನ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ನಿವೃತ್ತ ಶಿಕ್ಷಕ ಬಿ.ರಾಮಚಂದ್ರ ರಾವ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರುಕಾರ್ಯದರ್ಶಿಯಾಗಿ ವಕೀಲೆ ಶೈಲಜಾ ರಾಜೇಶ್ ಮತ್ತು ಖಜಾಂಜಿಯಾಗಿ ಸತ್ಯನಾರಾಯಣ ರಾವ್, ಉಪಾಧ್ಯಕ್ಷರಾಗಿ ಆದಿರಾಜ ಜೈನ್, ಡಾ.ಎ ಮನೋಹರ್ ರೈ, ನಾಗೇಶ್ ಬಾಳೆಹಿತ್ಲು, ಅಹಮದ್ ಮುಸ್ತಾಫ, ಸಂದೇಶ್ ಕುಮಾರ್ ಡಿ, ವಸಂತ್ ಪಿ, ಜೊತೆ ಕಾರ್ಯದರ್ಶಿಯಾಗಿ ಮಲ್ಲಿಕ ಆಳ್ವ, ನಿರ್ದೇಶಕರುಗಳಾಗಿ ಬಿ.ರಾಮಚಂದ್ರ ರಾವ್(ಟ್ರೈನಿಂಗ್ ಏರಿಯ), ಡಾ.ರಾಜೇಶ್ ಪೂಜಾರಿ(ಹೆಲ್ತ್ ಕೇರ್), ಕೃಷ್ಣರಾಜ ಭಟ್( ಕಲ್ಚರಲ್ ಎಂಟರ್ಟೈನ್ಮೆಂಟ್), ರವೀಂದ್ರ ಕುಕ್ಕಾಜೆ(ಲೀಗಲ್ ಅಡ್ವಯಿಸರ್), ಲೊಕೇಶ್ ಕುಲಾಲ್(ಮೊರಲ್ ಎಜುಕೇಶನ್), ತಾರಾನಾಥ ಕೊಠ್ಠಾರಿ( ಇಂಜಿನಿಯರಿಂಗ್ ಎಡ್ವಯಿಸರ್), ಪಿ.ಮಹಮ್ಮದ್ ( ಸೆಲ್ಫ್ ಎಂಪ್ಲಾಯ್ಮೆಂಟ್), ಸಚ್ಚಿದಾನಂದ ಸಾಲಿಯಾನ್( ಎಲೆಕ್ಟ್ರಿಕಲ್ ಎನರ್ಜಿ), ನಾಗೇಶ್ ಮಾರ್ತಾಜೆ( ರೂರಲ್ ಡೆವಲಪ್ ಮೆಂಟ್), ಸುಜಾತ(ಪಬ್ಲಿಕ್ ರಿಲೇಶನ್), ಹರಿಶ್ಚಂದ್ರ ಆಳ್ವ( ಎಗ್ರಿಕಲ್ಚರಲ್ ಕನ್ಸಲ್ಟೆಂಟ್), ಯೋಗೀಶ್ ಬಂಗೇರ(ಬಿಸಿನೆಸ್ ಎರಿಯ),…

Read More

ಬದುಕಿಗಾಗಿ ಸಂಪತ್ತು ಇರಬೇಕೆ ವಿನಃ ಸಂಪತ್ತಿಗಾಗಿ ಬದುಕಿರಬಾರದು- ಎನ್. ಪ್ರಕಾಶ್ ಕಾರಂತ್ ಬಂಟ್ವಾಳ: ವಿನಯ ಇದ್ದಾಗ ಯೋಗ್ಯತೆ ಬರುತ್ತದೆ, ಯೋಗ್ಯತೆ ಇದ್ದಾಗ ದಾನಧರ್ಮ ಮಾಡಬೇಕೆನಿಸುತ್ತದೆ. ದಾನಧರ್ಮದಿಂದ ಆತ್ಮ ತೃಪ್ತಿ ಸಿಗುತ್ತದೆ. ಆಗ ಮನುಷ್ಯ ಸುಖಿಯಾಗುತ್ತಾನೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಎನ್. ಪ್ರಕಾಶ್‌ಕಾರಂತ್ ಹೇಳಿದರು.ರೋಟರಿ ಬಿ.ಎ.ಸೋಮಯಾಜಿ ಮೆಮೋರಿಯಲ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ರೋಟರಿ ಕ್ಲಬ್ ಬಂಟ್ವಾಳ ಕ್ಕೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಪತ್ತು ಇರುವುದು ಹರಿಯಲು, ಬದುಕಿಗಾಗಿ ಸಂಪತ್ತು ಇರಬೇಕೆ ವಿನಃ ಸಂಪತ್ತಿಗಾಗಿ ಬದುಕಿರಬಾರದು. ಅದನ್ನು ರೋಟರಿ ಸಂಸ್ಥೆ ಕಲಿಸಿಕೊಡುತ್ತದೆ ಎಂದರು. ಜಿಲ್ಲಾ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಮಾತನಾಡಿ ರೋಟರಿ ಕ್ಲಬ್ ಬಂಟ್ವಾಳದ ಸದಸ್ಯ ರೋಟರಿ ಜಿಲ್ಲೆಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವುದು ನಮಗೆ ಹೆಮ್ಮೆ ಎಂದು ತಿಳಿಸಿದರು. ಪ್ರಥಮ ಮಹಿಳೆ ವಾಣಿ ಕಾರಂತ್ ಉಪಸ್ಥಿತರಿದ್ದರು. Advertisement Advertisement ಈ ಸಂದರ್ಭ ಫಲಾನುಭವಿಗಳಿಗೆ ಆರ್ಥಿಕ ಸಹಕಾರ ನೀಡಲಾಯ. ಮೇಜರ್ ಡೋನರ್ ಮತ್ತಿತರ ದೇಣಿಗೆ…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಜೆಸಿಐ ಬಂಟ್ವಾಳ ಇದರ ಆಶ್ರಯದಲ್ಲಿ, ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಂಯೋಗದೊಂದಿಗೆ 123 ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ, ರಿಕ್ಷಾ ಚಾಲಕರ ಸಂಘದ ನೀಲನ್ ಡಿಸೋಜ, ಪೊಲೀಸ್ ಸಿಬ್ಬಂದಿ ಪ್ರಮೋದ್, ನೃತ್ಯಗುರು,‌ ವಿದೂಷಿ ಮಂಜುಳಾ ಸುಬ್ರಹ್ಮಣ್ಯ ಸ್ವಯಂ ರಕ್ತದಾನ ಮಾಡುವ ಶಿಬಿರಕ್ಕೆ ಚಾಲನೆ ನೀಡಿದರು.ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಸಂಜೀವ ಪೂಜಾರಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ವು ಕಳೆದ 29 ವರ್ಷಗಳಿಂದ ರಕ್ತದಾನ ಶಿಬಿರ ನಡೆಸಿಕೊಂಡು ಬರುತ್ತಿದ್ದು ಈವರೆಗೆ 123 ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು. ಪ್ರತಿಯೊಬ್ಬ ವ್ಯಕ್ತಿಯ ಮೈಯಲ್ಲಿ ಹರಿಯುವ ರಕ್ತ ಒಂದೇ. ಆದ್ದರಿಂದ ಜಾತಿ ಧರ್ಮದ ಬೇಧವಿಲ್ಲದೆ ಎಲ್ಲರೂ ಈ ರಕ್ತದಾನ ಮಾಡಬೇಕು, ಇದು ದೇವರು ಮೆಚ್ಚುವ ಕೆಲಸ ಎಂದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ಕೃಷ್ಣ ಕುಮಾರ್ ಪೂಂಜ ಅವರ…

Read More

ಕರ್ನಾಟಕ ರಾಜ್ಯದಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ರಾಷ್ಟ್ರ ಪ್ರೇಮ ಮೂಡಬೇಕು, ರಾಷ್ಟಿಯತೆ ಜಾಗೃತಿ ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಎಳೆಯ ವಯಸ್ಸಿನ ಮಕ್ಕಳಿಂದಲೇ ಇದು ಪ್ರೇರಣೆ ಗೊಳ್ಳಬೇಕು ಎಂಬುದಾಗಿ ಮನಗಂಡ ಬಿಜೆಪಿ ಸರಕಾರವು ರಾಷ್ಟ್ರ ಭಕ್ತರಾದ ವೀರ ಸಾವರ್ಕರ್ ಕುರಿತು ಚಕ್ರವರ್ತಿ ಸೂಲಿಬೆಲೆ ರಚಿಸಿದ ಪಾಠ ರಾಜಗುರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಡಗೇವಾರ್ ಭಾಷಣದ ತುಣುಕಾದ “ಆದರ್ಶ ಪುರುಷ ಯಾರಾಗಬೇಕು ಸುಖ್ ದೇವ್, ಭಗತ್ ಸಿಂಗ್ ಕುರಿತಾದ ತಾಯಿ ಭಾರತೀಯರ ಅಮರ ಪುತ್ರರು ಮತ್ತು ಶತಾವಧಾನಿ ಗಣೇಶ್ ರವರ ಯಜ್ಞಯುಗಾದಿಇಂತದೆಲ್ಲ ಭಾರತೀಯ ಪರಂಪರೆ ಯನ್ನು ರಾಜ್ಯದ ಜನರಿಗೆ ಪುನರಪಿ ತಿಳಿಯ ಪಡಿಸುವ ಬಹುಜನಪಯೋಗಿ ಅಭಿವ್ಯಕ್ತಿತ್ವದ ಪಾಠಗಳನ್ನು ಕೈ ಬಿಡುವ ನಿರ್ಧಾರ ಮಾಡಿರುವುದು ರಾಷ್ಟ್ರ ದ್ರೋಹ ವಲ್ಲದೇ ಬಹು ಸಂಖ್ಯಾತ ಹಿಂದುಗಳ ಮನೋ ಭಾವನೆಗಳಿಗೆ ದಕ್ಕೆ ತರುವ ಕೆಲಸವಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ರವರು ಪತ್ರಿಕಾ ಹೇಳಿಕೆ ಮೂಲಕ ಕರ್ನಾಟಕ ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.…

Read More

ಸರ್ಕಾರದ ಉಚಿತ ಪ್ರಯಾಣದಿಂದ ಗ್ರಾಮೀಣ ಭಾಗದ ಮಹಿಳೆಯರು ವಂಚಿತ : ಎಂ. ತುಂಗಪ್ಪ ಬಂಗೇರ ಬಂಟ್ವಾಳ: ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದರಿಂದ ಇತರ ಖಾಸಗಿ ವಾಹನಗಳ ಮಾಲಕರು ಕಂಗಲಾಗಿ ಹೋಗಿದ್ದಾರೆ. ಕಾರು, ರಿಕ್ಷಾ, ಇನ್ನಿತರ ಖಾಸಗಿ ವಾಹನ ಮಾಲೀಕರ ಬದುಕಿಗೆ ಈ ಯೋಜನೆ ಮಾರಕವಾಗಿದೆ. ಸರ್ಕಾರ ಅವರ ಬದುಕಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು ಅಥವಾ ಮಾಸಿಕ ಪರಿಹಾರ ಹಣವನ್ನು ನೀಡಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ಸರಕಾರವನ್ನು ಆಗ್ರಹಿಸಿದರು. Advertisement Advertisement ಶನಿವಾರ ಬಿ.ಸಿ. ರೋಡು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಸಂಚರಿಸುವ ಶ್ರೀಮಂತ ಮಹಿಳೆಯರಿಗೆ ಮಾತ್ರ ಲಭಿಸಿದೆ. ಗ್ರಾಮೀಣ ಭಾಗದ ಮಹಿಳೆಯರು ಇದರಿಂದ ವಂಚಿತರಾಗಿದ್ದಾರೆ. ತಾಲೂಕಿನ ಗ್ರಾಮೀಣ ಭಾಗಗಳಾದ ಬಿ.ಸಿ.ರೋಡಿನಿಂದ ಪೊಳಲಿ, ಸಿದ್ದಕಟ್ಟೆ, ವಾಮದಪದವು, ಶಂಬೂರು, ಮಂಚಿ, ಸಜೀಪ, ಚೇಳೂರು ಇತರ ಕಡೆಗೂ ಸರ್ಕಾರಿ ಬಸ್ಸು…

Read More

ಮತಾಂತರ ನಿಷೇಧ ಕಾಯ್ದೆ ಹಿಂಪಡೆದ ಸರ್ಕಾರದ ನಿರ್ಧಾರ ಖಂಡನೀಯ: ರಾಜೇಶ್ ನಾಯ್ಕ್ ಬಂಟ್ವಾಳ: ಬಲತ್ಕಾರದ ಮತಾಂತರವನ್ನು ತಡೆಗಟ್ಟುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಜನಪರವಾದ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದತಿ, ಶಾಲಾ ಪಠ್ಯಪುಸ್ತಕದಿಂದ ಸಾವರ್ಕರ್ ಹಾಗೂ ಹೆಗಡೇವಾರ ಅವರ ವಿಷಯವನ್ನು ಕೈ ಬಿಟ್ಟಿರುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಖಂಡಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದರು. Advertisement Advertisement ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿಒರ್ವ ವ್ಯಕ್ತಿ ತನ್ನ ಸ್ವ ಇಚ್ಛೆಯಿಂದ ಕಾನೂನು ಬದ್ದವಾಗಿ ಯಾವುದೇ ಧರ್ಮಕ್ಕೆ ಮತಾಂತರ ಹೊಂದುವ ಅವಕಾಶ ಇದೆ. ಆದರೆ ಬಲತ್ಕಾರ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ಜಾರಿಗೆ ತಂದಿತ್ತು. ಇದೀಗ ಅದನ್ನು ಈಗಿನ ಸರಕಾರ ಹಿಂಪಡೆದಿರುವುದರಿಂದ ಸಮಾಜದಲ್ಲಿ ಮತ್ತೆ ಅಶಾಂತಿಯ ವಾತಾವರಣ ನಿರ್ಮಾಣವಾಗಬಹುದು. ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು…

Read More