ಬಂಟ್ವಾಳ: ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ಧವಸ ಧಾನ್ಯ ವಿತರಣ ಕಾರ್ಯಕ್ರಮ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಶುಕ್ರವಾರ ನಡೆಯಿತು.
ನಿಟ್ಟೆ ವಿವಿಯ ಉಪ ಕುಲಪತಿ ಡಾ. ಸತೀಶ್ ಭಂಡಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರಧಾನಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಾರೆ. ಆದರೆ ಅದನ್ನು ಅನುಷ್ಠಾನ ಮಾಡಲು ಸೇವಾಸಕ್ತರು ಸೇಕು. ಅಂತಹ ಕೆಲಸವನ್ನು ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು. ಕ್ಷಯ ಅತ್ಯಂತ ಹಳೆಯ ರೋಗ, ಕ್ಷಯ ರೋಗಿಗಳಿಗೆ ಔಷಧಿಯ ಜೊತೆಗೆ ಪೋಷಕಾಂಶಯುಕ್ತ ಆಹಾರವು ಅಗತ್ಯ. ಆದ್ದರಿಂದ ಇಲ್ಲಿ ನೀಡುವ ಆಹಾರ ಧವಸ ಧಾನ್ಯವನ್ನು ಸೇವಿಸಿ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭ ಪ್ರಮುಖರಾದ ಬಿ. ನಾರಾಯಣ ಮೇರಮಜಲು, ಕೇಶವ ದೋಟ ಮೇರಮಜಲು, ಕುಚ್ಚೂರು ಸಂತೋಷ್ ಆಳ್ವ, ಕಿಶೋರ್ ಸುಜೀರು ವೇದಿಕೆಯಲ್ಲಿದ್ದರು. ಅರುಣ್ ಕುಮಾರ್ ನೀರೋಲ್ಬೆ, ಸುಧೀರ್ ಶೆಟ್ಟಿ, ಕೃಷ್ಣ ತುಪ್ಪೆಕಲ್ಲು, ಸತೀಶ್ ಅಚಾರ್ಯ
ರಾಮಚಂದ್ರ ಆಚಾರ್ಯ ಸುಜೀರು ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಕಾರ್ಯಕ್ರಮ ನಿರೂಪಿಸಿದರು. 61 ಮಂದಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ನೀಡಲಾಯಿತು.