ಬಂಟ್ವಾಳ: ಈ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ನೆಲಸಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎಂದು ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಶುಂಠಿಕೊಪ್ಪ ತಿಳಿಸಿದರು. ಅವರು ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ರಮನಾಥ ರೈ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ೯ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ, ಅವರು ಮಾತ್ರ ಈ ತಾಲೂಕಿನ ನಿವಾಸಿಯಾಗಿದ್ದಾರೆ ಉಳಿದ ಅಭ್ಯರ್ಥಿಗಳು ಹೊರಗಿನವರು. ಈ ಕ್ಷೇತ್ರದ ಜನರ ನಾಡಿ ಮಿಡಿತ ಅವರಿಗೆ ತಿಳಿದ್ದಿದ್ದು ಸುಮಾರು 40 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದಾರೆ. ಕಳೆದ ಬಾರಿ ಯಾವುದೋ ಕಾರಣಕ್ಕೆ ಸೋತಿದ್ದರು, ಆದರೆ ಈ ಬಾರಿ ಬಹುಮತದಿಂದ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ಎಲ್.ರೋಡ್ರಿಗಸ್, ಪ್ರಮುಖರಾದ ಬಿ. ಮೋಹನ್, ಪರಮೇಶ್ವರ ಮೂಲ್ಯ, ಅಬ್ಬಾಸ್ ಅಲಿ, ಜಯಂತಿ ವಿ. ಪೂಜಾರಿ, ಲೋಲಾಕ್ಷ ಶೆಟ್ಟಿ, ನಾರಾಯಣ ನಾಯ್ಕ,
ಜೋಸ್ಪಿನ್ ಡಿಸೋಜಾ, ಜೆಸಿಂತಾ ಡಿಸೋಜಾ, ಶಬೀರ್ ಸಿದ್ದಕಟ್ಟೆ ಉಪಸ್ಥಿತರಿದ್ದರು.