ಬಂಟ್ವಾಳ: ಕೋಮು ಪಕ್ಷಗಳಾದ ಎಸ್ ಡಿ ಪಿ ಐ ಮತ್ತು ಬಿಜೆಪಿಗೆ ಮತ ಹಾಕಬಾರದು. ಧರ್ಮದ ಹೆಸರಿನಲ್ಲಿ ಮತ ಯಾಚನೆ ರಾಜಕೀಯ ನಡೆಯಬಾರದು,ಬಿಜೆಪಿ ಜಾತಿ ಧರ್ಮದ ಹೆಸರಿನಲ್ಲಿ ಮತಯಾಚನೆ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಚಂದ್ರಶೇಖರ್ ಪೂಜಾರಿ ಆರೋಪಿಸಿದರು.
ಅವರು ಬಿ.ಸಿ.ರೋಡಿನ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಾತ್ಯಾತೀತ ಪಕ್ಷಗಳು ಒಟ್ಟಾಗಿ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು ಎಂದು ಅವರು ಮತದಾರರಿಗೆ ಮನವಿ ಮಾಡಿದ್ದು,ಕೋಮುವಾದಿ ಪಕ್ಷಗಳಾದ ಬಿಜೆಪಿ ಮತ್ತು ಎಸ್.ಡಿ.ಪಿ. ಈ ಎರಡು ಪಕ್ಷಕ್ಕೆ ಮತ ಹಾಕಿದರೆ ಕೊeಮು ಶಕ್ತಿಗಳೇ ಪ್ರಬಲವಾಗುವುದು ಎಂದರು.
135 ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿ ಮೂಲಕ ಜನಮನ್ನಣೆ ಗಳಿಸಿರುವ ಕಾಂಗ್ರೇಸ್ ಪಕ್ಷ ಮಾತ್ರ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ತಾಕತ್ತು ಇದೆ ಎಂದು ಅವರು ತಿಳಿಸಿದರು.
ಕಣ್ಣಿಗೆ ಕಾಣುವ ದೇವತಾ ಮನುಷ್ಯ, ಜನಸೇವೆ ಮಾಡುವ ಅಭಿವೃದ್ಧಿಯ ಹರಿಕಾರ ಬಿ. ರಮಾನಾಥ ರೈ ಅವರನ್ನು ಬೆಂಬಲಿಸುವ ಎಂದು ಮನವಿ ಮಾಡಿದರು.
ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಬಿಜೆಪಿ ಎಂದು ಲೇವಡಿ ಮಾಡಿದ ಅವರು ಬಂಟ್ವಾಳದಲ್ಲಿ ಬಿಜೆಪಿ ಬೇಡ ಎಂಬ ನಿರ್ಧಾರಕ್ಕೆ ಮತದಾರರು ಬಂದಿದ್ದು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮಾನಾಥ ರೈ ಅವರಿಗೆ ಮತನೀಡಲು ಕಾದುಕುಳಿತಿದ್ದಾರೆ.
ಜನಸಾಮಾನ್ಯರಿಗೆ ಸಹಾಯ ಮಾಡುವ ಪಕ್ಷಕ್ಕೆ ಬಂಟ್ವಾಳದಲ್ಲಿ ಬಾರಿ ಜನಬೆಂಬಲವಿದೆ ಎಂದು ಅವರು ತಿಳಿಸಿದರು.
ಅಭಿವೃದ್ದಿ ಮಾಡಿದ್ದೇವೆ ಹೇಳುವ ಬಿಜೆಪಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಟ್ಟಿ ನೀಡಲಿ , ರೈ ಅವಧಿಯಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳ ಪಟ್ಟಿ ನೀಡುತ್ತೇವೆ ಎಂದು ಬಿಜೆಪಿಗೆ ಸವಾಲು ಹಾಕಿದರು.
ಕನ್ನಡ ಗೊತ್ತಿಲ್ಲದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ನಿಂದ ಕಾಂಗ್ರೆಸಿಗೆ ಬೋಧನೆ ಮಾಡಬೇಕಾದ ಅಗತ್ಯವಿಲ್ಲ ಎಂದು ಪೂಜಾರಿ ತಿಳಿಸಿದರು.
ತಮಿಳುನಾಡಿನಲ್ಲಿ ಇವರ ಪಕ್ಷ ದೂಳಿಪಟವಾಗಿದೆ. ಅಲ್ಲಿ ಅವರನ್ಬು ಹೊರಗೆ ಹಾಕಲಾಗಿದೆ, ಹಾಗಾಗಿ ಆಶ್ರಯ ಪಡೆಯಲು ಕರ್ನಾಟಕಕ್ಕೆ ಬಂದಿದ್ದಾರೆ.
ಬಿಜೆಪಿಗೆ ಕರ್ನಾಟಕದಲ್ಲಿ ನಾಯಕರಿಲ್ಲವಾ? ಕಾಂಗ್ರೆಸಿಗೆ ಬೈಯಲು ಅವರನ್ನು ಕರ್ನಾಟಕಕ್ಕೆ ಕರೆಸಲಾಗಿದಾ? ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿದ ಬಿಜೆಪಿ ನಾಯಕರು ಕ್ಷಮೆ ಕೇಳಬೇಕು.
ಬಿಜೆಪಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಕೆ ಮಾಡಿಲ್ಲ, ಆದರೆ ಕಾಂಗ್ರೆಸ್ ಬಹುತೇಕ ಎಲ್ಲವನ್ನು ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು. ಹಾಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
ಬಿಜೆಪಿಯವರ ಮಾನ ಹರಾಜು ಮಾಡಲು ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿಸುತ್ತಿದ್ದು, ಹರಿಕೃಷ್ಣ ಓರ್ವ ಸುಳ್ಳುಗಾರ, ಎಲ್ಲೂ ಸಲ್ಲದವರು ಅಲ್ಲಿ ಸಲ್ಲುವರೆ ಎಂಬ ಪರಿಸ್ಥಿತಿ ಹರಿಕೃಷ್ಣ ಬಂಟ್ವಾಳ ಅವರದ್ದು ಎಂದು ಲೇವಡಿ ಮಾಡಿದರು.
ಬಿಜೆಪಿಯವರಿಗೆ ತಾಕತ್ತು ಇದ್ದರೆ ಎಸ್.ಡಿ.ಪಿ.ಪಕ್ಷವನ್ನು ನಿಷೇಧ ಮಾಡಲಿ, ಮತ ವಿಭಜನೆ ಮಾಡಲು ಎಸ್.ಡಿ.ಪಿ.ಪಕ್ಷ ಬಿಜೆಪಿಗೆ ಬೇಕು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ಜೊಸ್ಫಿನ್ ಡಿಸೋಜ, ರಿಯಾಜ್ ಹುಸೇನ್, ಜೆಸಿಂತಾ ಡಿ.ಸೋಜ, ನಾರಾಯಣ ನಾಯ್ಕ್, ಸದಾಶಿವ ಬಂಗೇರ, ಉಮೇಶ್ ಸಪಲ್ಯ, ಪರಮೇಶ್ವರ ಮೂಲ್ಯ ,ಮಹಮ್ಮದ್ ನಂದರಬೆಟ್ಟು ಉಪಸ್ಥಿತರಿದ್ದರು.