Author: admin
ಬಂಟ್ವಾಳ: ತಾಲೂಕಿನ ಚುನಾವಣೆ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್. ನಾರಾಯಣ ಗೌಡ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಬುಧವಾರ ತಾಲೂಕು ಆಡಳಿತ ಸೌಧದಲ್ಲಿ ಗೌರವಾಭಿನಂದನೆ ಸಲ್ಲಿಸಲಾಯಿತು. ಬಿ.ಸಿ. ರೋಡಿನಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಎಸ್. ಬಿ ಕೂಡಲಗಿ ಅವರು ಸರಳ ವ್ಯಕ್ತಿತ್ವದ, ನೇರ ನಡೆ ನುಡಿಯ ನಾರಾಯಣ ಗೌಡರು ಚುನಾವಣೆಯ ವಿಷಯ ನಿರ್ವಾಹಕರಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್ ನಾರಾಯಣ ಗೌಡ ಅವರು ಕರ್ತವ್ಯ ನಿರ್ವಹಣೆಯಲ್ಲಿ ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸಿದರು. Advertisement ಸಹೋದ್ಯೋಗಿಗಳು, ಗ್ರಾಮ ಆಡಳಿತ ಆಧಿಕಾರಿಗಳು, ಕಚೇರಿ ಸಿಬ್ಬಂದಿಗಳು, ಗ್ರಾಮ ಸಹಾಯಕರು ನಾರಾಯಣ ಗೌಡ ಅವರಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು,ವಿಜಯ್ ವಿಕ್ರಮ್, ದಿವಾಕರ ಮುಗುಳಿಯ ಕಂದಾಯ ನಿರೀಕ್ಷಕರಾದ ವಿಜಯ್ ಆರ್,…
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭದ ಸಂಭ್ರಮ ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 2023-24ನೇ ಶೈಕ್ಷಣಿಕ ವರ್ಷದ ಶಾಲಾರಂಭವನ್ನು ಸಂಸ್ಥೆಯ ಸಂಸ್ಥಾಪಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಭಾರತಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮಾಡಲಾಯಿತು. Advertisement ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತಾನಾಡಿ ಶ್ರೀರಾಮ ಸಂಸ್ಥೆಯು ಕಲಿಕೆ, ಆಚಾರ- ವಿಚಾರ, ಸಂಸ್ಕೃತಿ, ಜೀವನ ಮೌಲ್ಯಗಳನ್ನು ಕಲಿಸುವ ಮೂಲಕ ಭಿನ್ನವಾದ ಶಿಕ್ಷಣ ಪದ್ಧತಿಯನ್ನು ಹೊಂದಿದೆ. ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋಭವ ಹಾಗೂ ಗುರುದೇವೋಭವ ಎನ್ನುವ ನಾಲ್ಕು ನಿಯಮಗಳನ್ನು ಪಾಲಿಸುತ್ತಾ, ತಂದೆ, ತಾಯಿ ಪ್ರತ್ಯಕ್ಷ ದೇವರಿದ್ದಂತೆ, ಹಾಗಾಗಿ ದಿನನಿತ್ಯ ಶಾಲೆಗೆ ಬರುವ ಮುನ್ನ ತಂದೆ ತಾಯಿಗೆ ನಮಸ್ಕರಿಸಿ ಬರುವಂತೆ ಕಿವಿ ಮಾತು ಹೇಳಿದರು. ಹಾಗೆಯೇ ಮುಂದಿನ ವಿದ್ಯಾರ್ಥಿ ಜೀವನ ಉತ್ತಮವಾಗಿರಲಿ, ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ನೂತನವಾಗಿ ಸೇರ್ಪಡೆಯಾದ ಪುಟಾಣಿಗಳಿಗೆ ಸಂಸ್ಥೆಯ ಹಿರಿಯರು ತಿಲಕಧಾರಣೆ ಮಾಡಿ ಆಶೀರ್ವದಿಸಿದರು. Advertisement ನಂತರ ಶಿಕ್ಷಕರು…
ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಗಾರ ಬಂಟ್ವಾಳ: ಸಮನ್ವಯ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಮಹಿಳೆಯರಿಗೆ 6 ತಿಂಗಳ ಉಚಿತ ಹೊಲಿಗೆ ತರಬೇತಿಯನ್ನು ಮೈಂದಾಳದಲ್ಲಿ ನಡೆಯಿತು.ಫರ್ಲಾ ಚರ್ಚ್ ನ ಧರ್ಮಗುರು ವಂ.ಸುನೀಲ್ ಮಿರಾಂದಾರವರು ಉದ್ಘಾಟಿಸಿ ಮಾತನಾಡಿ ಮಹಿಳೆ ಸಬಲೆಯಾದರೆ , ಕುಟುಂಬ ಮತ್ತು ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು. Advertisement ಸಂಸ್ಥೆಯ ನಿರ್ದೇಶಕರಾದ ವಂ. ಡಾ ರೊನಾಲ್ಡ್ ಕುಟಿನ್ಹೊರವರು ಸಂಸ್ಥೆಯ ಹಾಗೂ ತರಬೇತಿಯ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ನವೀನ್ ಮಿನೇಜಸ್, ಹಿಲ್ಡಾ ಪಿರೇರಾ, ಹೊಲಿಗೆ ಶಿಕ್ಷಕಿ ವಿನಯ ಹಾಗೂ ಐರಿನ್ ಡಿಸೋಜ ಉಪಸ್ಥಿತರಿದ್ದರು. ಜೋಯ್ಸ್ ಡಿಸೋಜರವರು ಸ್ವಾಗತಿಸಿ, ಐರಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ನೂತನ ಪುತ್ತೂರು ಶಾಖೆ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ
ಪುತ್ತೂರು: ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ನೂತನ ಪುತ್ತೂರು ಶಾಖೆ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯು ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಶಿವ ಆರ್ಕೇಡ್‌ನಲ್ಲಿ ಮಂಗಳವಾರ ಶುಭಾರಂಭಗೊಂಡಿತು. Advertisement ನೂತನ ಶಾಖೆಯನ್ನು ಸರಸ್ವತಿ ಕ್ರೆಡಿಟ್ ಸೌಹಾರ್ದಸಹಕಾರಿ ನಿ. ಅಧ್ಯಕ್ಷ ಎಸ್. ಆರ್ ಸತಿಶ್ಚಂದ್ರ ಉದ್ಘಾಟಿಸಿದರು. ಅವರು ಮಾತನಾಡಿ ಎಲ್ಲಾ ಸದಸ್ಯರಿಗೆ ಏಕ ರೂಪದಲ್ಲಿ ಲಾಭಾಂಶ ಹಂಚುವ ವ್ಯವಸ್ಥೆ ಸಹಕಾರಿ ಸಂಘಗಳಲ್ಲಿ ಮಾತ್ರ ಇದೆ. ಇದು ಸಮಾಜದ ಆಸ್ತಿ, ಎಲ್ಲರೂ ಜೊತೆಯಾಗಿ ಬೆಳೆಯುವ ಸಾಧನ. ಪಾರದರ್ಶಕವಾಗಿ ಕೆಲಸ ಮಾಡುವ ವ್ಯವಸ್ಥೆಯಾಗಿದೆ ಎಂದರು. ನಾವು ಬೆಳೆದಿದ್ದೇವೆ, ಇನ್ನೂ ಬೆಳೆಯಬೇಕಾಗಿದೆ. ಇದರ ಜೊತೆಗೆ ಸಮಾಜವನ್ನು ಬೆಳೆಸಬೇಕಾಗಿದೆ. ದೇಶ ಅಭಿವೃದ್ಧಿ ಕಾಣಲು ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ ಇದೆ ಎಂದ ಅವರು ಸವಿತಾ ಸೌಹಾರ್ದ ಸಹಕಾರಿ ಸಂಘ ಹೆಚ್ಚು ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಸಹಕಾರಿ ಸಂಘಗಳು ಕೇವಲ…
ಜನಾರ್ದನ ಪೂಜಾರಿಯನ್ನು ಭೇಟಿಯಾದ ಯು.ಟಿ. ಖಾದರ್ ಬಂಟ್ಚಾಳ:: ಮಂಗಳೂರು ಶಾಸಕ, ವಿಧಾನಸಭೆಯ ನೂತನ ಸಭಾಪತಿ ಯು.ಟಿ.ಖಾದರ್ ಅವರು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು.ಸ್ಪೀಕರ್ ಹುದ್ದೆಗೆ ಖಾದರ್ ಸೂಕ್ತ ವ್ಯಕ್ತಿಯಾಗಿದ್ದು, ಅವರ ಭಾಷಣವನ್ನು ಪೂರ್ತಿ ಕೇಳಿದ್ದೇನೆ. ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಪೂಜಾರಿ ಬೆನ್ನು ತಟ್ಟಿದರು.ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಖಾದರ್, ಜನಾರ್ದನ ಪೂಜಾರಿ ಹಾಗೂ ಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು, ಹಿರಿಯರಾದ ವೈಕುಂಠ ಬಾಳಿಗಾ ಮತ್ತು ಕೆ.ಎಸ್.ಹೆಗ್ಡೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಿಕೊಂಡು ಜಿಲ್ಲೆಯ ಹಾಗೂ ಕ್ಷೇತ್ರದ ಮತದಾರರ ಗೌರವವನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. Advertisement ಪ್ರಮುಖರಾದ ಈಶ್ವರ್ ಉಳ್ಳಾಲ್, ಮಹಮದ್ ಮೋನು ,ಸದಾಶಿವ ಉಳ್ಳಾಲ್, ದೀಪಕ್ ಪಿಲಾರ್ , ಹಾಶೀರ್ ಪೆರಿಮಾರ್,ದಿನೇಶ್ ಪೂಜಾರಿ, ಪುರುಷೋತ್ತಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು Advertisement
ಬಂಟ್ವಾಳ: ಮಳೆಗಾಲದ ಸಂದರ್ಭದಲ್ಲಿ ಪಂಚಾಯತಿ ಪಿಡಿಓಗಳು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಕಾರ್ಯನಿರ್ವಹಿಸಬೇಕು, ಪೋನ್ ಸ್ವಿಚ್ ಆಫ್ ಮಾಡಿಕೊಳ್ಳದೆ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು, ಯಾವುದೇ ಸಮಸ್ಯೆ, ಅವಘಡಗಳು ಎದುರಾದರೂ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿ.ಸಿ.ರೋಡಿನ ಎಸ್‌ಜೆಎಸ್‌ಆರ್.ವೈ ಸಭಾಂಗಣದಲ್ಲಿ ನಡೆದ ಮುಂಗಾರು ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಜೀವಹಾನಿ, ಜಾನುವಾರು ಹಾನಿ, ನೆರೆ ಹಾವಳಿ, ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓಗಳು, ವಿಎಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೇ. 31ರಿಂದ ಶಾಲೆಗಳು ಪುನಾರಂಭಗೊಳ್ಳಲಿದ್ದು ಬಂಟ್ವಾಳ ತಾಲೂಕಿನ 64 ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಸಭೆಯ ಗಮನಕ್ಕೆ ತಂದರು. ಚುನವಣೆಯ ಸಂಧರ್ಭ ಪುಚ್ಚೇರಿಯ ಡ್ಯಾಂನಿಂದ ನೀರನ್ನು ಸಂಪೂರ್ಣವಾಗಿ ಹೊರ ಹರಿಯಲು ಬಿಟ್ಟಿರುವ ಡ್ಯಾಂ ಅಧಿಕಾರಿಗಳ ಬಗ್ಗೆ…
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಶಾಸಕರ ಕಚೇರಿ ಉದ್ಘಾಟನೆ ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಶಾಸಕರ ಕಚೇರಿ ಉದ್ಘಾಟನೆ ಬಿ.ಸಿ.ರೋಡಿನಲ್ಲಿ ಸೋಮವಾರ ನಡೆಯಿತು. ಈ ಸಂದರ್ಭ ಹಿರಿಯ ಆರೆಸ್ಸೆಸ್ ಮುಖಂಡ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಚೇರಿಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರಾಜೇಶ್ ನಾಯ್ಕ್ ಅವರನ್ನು ಜನರು ಇಷ್ಟಪಟ್ಟ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ಶಾಸಕರಾಗಿದ್ದಾರೆ. ಜನ ಅಪೇಕ್ಷೆ ಪಡುವವರೇ ನಾಯಕರಾಗಬೇಕು ಎಂದು ಹೇಳಿದರು. Advertisement Advertisement ಎಲ್ಲ ಕಾರ್ಯಕರ್ತರ ಪರಿಶ್ರಮದಿಂದ ಕಳೆದ ಐದು ವರ್ಷಗಳಲ್ಲಿ ರಾಜೇಶ್ ನಾಯ್ಕ್ ಮಾಡಿದ ಸಮಾಜಮುಖಿ ಕೆಲಸಗಳಿಂದ ಜನ ಬಿಜೆಪಿಯನ್ನು ರಾಜೇಶ್ ನಾಯ್ಕ್ ಅವರನ್ನು ಒಪ್ಪಿಕೊಂಡಿದ್ದಾರೆ ಎಂದರು. ಜನ ಅಪೇಕ್ಷೆ ಮಾಡಿದಂಥವನೇ ನಾಯಕನಾಗಬೇಕು. ಯಾರನ್ನೂ ಮೇಲಿಂದ ಹೊರಿಸುವಂಥದ್ದಲ್ಲ, ಅದನ್ನು ಒಪ್ಪಿಕೊಳ್ಳುವುದಿಲ್ಲ ಜನ. ಯಾರು ಜನ ಅಪೇಕ್ಷೆ ಮಾಡುತ್ತಾರೆ, ಅಂಥವರು ಆದರೆ ಜನರು ಪೂರ್ಣ ಮನಸ್ಸಿನಿಂದ ಆಯ್ಕೆ ಮಾಡುತ್ತಾರೆ. ರಾಜೇಶ್ ನಾಯ್ಕ್ ಅವರನ್ನು ಜನರು…
ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಬಂಟ್ವಾಳ: ಶ್ರೀ ಕ್ಷೇತ್ರ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ಇಲ್ಲಿ ಸಾಮೂಹಿಕ ಶ್ರೀ ಆಶ್ಲೇಷ ಬಲಿಹೋಮ, ಶ್ರೀ ಆಶ್ಲೇಷ ಬಲಿ ಪೂಜೆ ಸಜೀ ಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯಭಟ್ ನೇತೃತ್ವದಲ್ಲಿ ಜರಗಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್. ಕೆ.ಟಿ. ಸುಧಾಕರ, ಶಂಕರ, ಗಣಪತಿ ಭಟ್, ಕಿಶನ್ ಸೇಣವ. ರಾಮಕೃಷ್ಣ ಭಟ್, ಸುಭಾಷ್, ಗುರುರಾಜ್ ಭಟ್, ಗಣಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು Advertisement Advertisement
ಬಂಟ್ವಾಳ,: ಕಲಾವಿದರು ಯಾವ ರೀತಿ ಬದುಕಬೇಕು ಎನ್ನುವುದಕ್ಕೆ ಆದರ್ಶ ಪಟ್ಲ ಸತೀಶ್ ಶೆಟ್ಟಿ. ಕಲಾವಿದರ ಕಷ್ಟ ತಿಳಿದು ಅವರ ಕಷ್ಟದಲ್ಲಿ ತಾನು ಭಾಗಿಯಾಗುವ ನಿಟ್ಟಿನಲ್ಲಿ ಇಂತಹ ಫೌಂಡೇಷನ್ ಹಾಕಿ ಕೊಂಡುವಿಶ್ವವ್ಯಾಪಿಯಾಗಿ ಕೆಲಸ ನಿರ್ವಹಿಸುವ ಈ ಫೌಂಡೇಶನ್ ಇನ್ನಷ್ಟು ಸಮಾಜ ಮುಖಿ ಸೇವೆ ನೀಡಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. Advertisement ಅವರು ಶುಕ್ರವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿ ಪದಗ್ರಹಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇವರ ಅನುಗ್ರಹ ಇದ್ದಾಗ ಎಂತಹ ಯೋಗ ಭಾಗ್ಯಗಳು ನಮ್ಮನ್ನು ಅರಸಿಕೊಂಡು ಬರುತ್ತದೆ ಎನ್ನುವುದಕ್ಕೆ ಪಟ್ಲ ಸತೀಶ್ ಶೆಟ್ಟಿ ಉದಾಹರಣೆ. ಅವರ ದೂರದೃಷ್ಟಿ ಯೋಜನೆಗಳು ಎಲ್ಲರಿಗೂ ಮಾದರಿಯಾದುದು. ಕಲಾವಿದರಿಗೆ ಮಾತ್ರವಲ್ಲದೆ, ವಿದ್ಯಾರ್ಥಿಗಳು, ರೋಗಿಗಳಿಗೂ ಸೇವೆ ನೀಡುತ್ತಿರುವುದು ವಿಶೇಷ ಎಂದರು. Advertisement ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು…
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ನೂತನವಾಗಿ ಅಸ್ತಿತ್ವಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ವತಿಯಿಂದ ನೂತನ ‘ಪದಾಧಿಕಾರಿಗಳ ಪದಗ್ರಹಣ’ ಕಾರ್ಯಕ್ರಮ ಮೇ.೨೬ರಂದು ಶುಕ್ರವಾರ ಸಂಜೆ ೩ ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ನೆರವೇರಲಿದೆ.ಅಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸಭಾ ಕಾರ್ಯಕ್ರಮ ಉದ್ಘಾಟಿಸುವರು. Advertisement Advertisement ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಕೂಳೂರು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ತಿಳಿಸಿದ್ದಾರೆ.








