ಬಂಟ್ವಾಳ: ಬಿ.ಸಿ. ರೋಡ್ನಲ್ಲಿ ಕಾರ್ಯಾಚರಿಸುತ್ತಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಅತ್ಯಾಧುನಿಕ ಶೈಲಿಯ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು ಭಾನುವಾರ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ.
ಪ್ರತಿಷ್ಠಿತ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನಗಳು ವಿವಿಧ ವಿನ್ಯಾಸ ಮತ್ತು ಆತ್ಯಾಕರ್ಷಕ ಶೈಲಿ ಹಾಗೂ ದ್ವಿಚಕ್ರ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಬಿ.ಸಿ ರೋಡ್ನಲ್ಲಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು ಬಿಡುಗಡೆಗೊಳ್ಳಲಿದೆ.
ಪ್ರಥಮ ಗ್ರಾಹಕರಿಗೆ ಬಿಎಚ್ಬಿ ಸಂಸ್ಥೆಯ ಮಾಲೀಕರಾದ ಮೊಹಮ್ಮದ್ ಸಾದಿಕ್ ರವರು ಕೀ ಯನ್ನು ಹಸ್ತಾಂತರ ಮಾಡಲಿದ್ದಾರೆ. ಅಂಜು ಹೋಮ್ ಇಂಡಸ್ಟ್ರೀಸ್ನ ಮಾಲಕರಾದ ಮಹಮ್ಮದ್ ಫಾರೂಕ್ ಅವರು ಟಿವಿಎಸ್ ರೋನಿನ್ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದಾರೆ. ಬಿ.ಸಿ ರೋಡ್ನ ಸೋನಾ ಟಿವಿಎಸ್ ಶೋರೂಂ ಶುಭಾರಂಭದ ಪ್ರಯುಕ್ತ ನಿಮಗಾಗಿ ಒಂದು ಕೊಳ್ಳಿರಿ, ನಿಮ್ಮವರಿಗಾಗಿ ಒಂದು ಗೆಲ್ಲಿರಿ ಎಂಬ ಲಕ್ಕಿ ಕೂಪನ್ನ್ನ ಆಯೋಜಿಸಿದ್ದು, ಇದರ ಡ್ರಾ ಕಾರ್ಯಕ್ರಮವು ನಾಳೆ ಶೋರೂಂನಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಲಕ್ಕಿ ಡ್ರಾ ವಿಜೇತರು ಟಿವಿಎಸ್ ಝುಪಿಟರ್ ವಾಹನವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
ತೊಕ್ಕೊಟ್ಟಿನಲ್ಲಿ ಸೋನಾ ಟಿವಿಎಸ್ ಶೋರೂಂ ಕಳೆದ 6 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಗ್ರಾಹಕರ ಅಚ್ಚುಮೆಚ್ಚಿನ ಶೋರೂಂ ಆಗಿದೆ. ಇದೀಗ ಬಿ.ಸಿ. ರೋಡ್ನಲ್ಲಿಯೂ ಕೂಡ ಸೋನಾ ಟವಿಎಸ್ ಶೋರೂಂ ಕಾರ್ಯಾಚರಿಸುತ್ತಿದೆ. ಪ್ರೀತಿ ಸ್ಟುಡಿಯೋದ ಮಾಲಕ ಕಿಶೋರ್, ಭಾರತ್ ಸ್ಯಾನಿಟರ್ ಮತ್ತು ಬಿಹೆಚ್ಬಿ ಕಾಂಪ್ಲೆಕ್ಸ್ ಕೈಕಂಬದ ಮಾಲಕ ಮೊಹಮ್ಮದ್ ಸಾದಿಕ್, ಸೋನಾ ಮೋಟಾರ್ಸ್ನ ಮಾಲಕ ರೊ. ದೇಜಪ್ಪ ಪೂಜಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449920789 ಸಂಪರ್ಕಿಸಬಹುದು.