ಬಂಟ್ವಾಳ: ಬಡವರು ಹಾಗೂ ಮಧ್ಯಮ ವರ್ಗದ ಜನರ ಅಭಿವೃದ್ದಿಗಾಗಿ ಬಿ. ರಮಾನಾಥ ರೈಯವರು ಅಧಿಕಾರಕ್ಕೆ ಬರಬೇಕು, ಆದ್ದರಿಂದ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮನವಿ ಮಾಡಿದರು.
ಬಿ.ಸಿ.ರೋಡಿನಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ರೂ. ೨ ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆ, ಯುವಕರಿಗೆ ಯುವನಿಧಿ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ರೂ. ಡಿಪ್ಲೊಮಾದಾರರಿಗೆ 15೦೦ ರೂ. ನಿರುದ್ಯೋಗ ಭತ್ಯೆ,
ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ, ಮಹಿಳೆಯರಿಗೆ ಉಚಿತ ಸರಕಾರಿ ಬಸ್ ಪ್ರಯಾಣ, ವಿಧವಾ ಪಿಂಚಣಿ ರೂ. 2500ಕ್ಕೆ ಹೆಚ್ಚಳ, ದುಡಿಯುವ ಮಹಿಳೆಯರಿಗಾಗಿ 100 ಹಾಸ್ಟೆಲ್ಗಳ ನಿರ್ಮಾಣ, ಕೈಗಾರಿಕಾ ಪಾರ್ಕ್ಗಳಲ್ಲಿ ಶೇ. 20ರಷ್ಟು ನಿವೇಶನ ಮಹಿಳೆಯರು ಮುನ್ನಡೆಸುವ ಉದ್ಯಮಗಳಿಗೆ ಮೀಸಲು,
5ವರ್ಷಗಳಲ್ಲಿ 5ಸಾವಿರ ಸ್ತ್ರೀ ಶಕ್ತಿ ಕಿರು ಉದ್ಯಮಗಳಿಗೆ ಪೋಷಣೆ, 21ನೇ ಶತಮಾನದ ಅಗತ್ಯಗಳಾದ ಆಹಾರ ಸಂಸ್ಕರಣೆ, ಕೇಟರಿಂಗ್, ಮೊಬೈಲ್ ಕ್ಯಾಂಟೀನ್, ಘನ ತ್ಯಾಜ್ಯ ನಿರ್ವಹಣೆ, ಪಾರ್ಕಿಂಗ್ ನಿರ್ವಹಣೆಯಂತಹ ಕ್ಷೇತ್ರಗಳಿಗೆ ಉತ್ತೇಜನ, ನಿರ್ಭಯ ವಾಹಿನಿ – ಹೈಸ್ಕೂಲ್, ಪಿಯುಸಿ ಹಂತದಲ್ಲಿ ಶಾಲೆಗಳಿಂದ ಹೊರಗುಳಿದ ಮಹಿಳೆಯರಿಗೆ ಆರ್ಟಿಒಗಳಲ್ಲಿ ಉಚಿತ ವಾಹನ ಚಾಲನೆ ತರಬೇತಿ ಹಾಗೂ ಅವರಿಗೆ ಸಬ್ಸಿಡಿಯಲ್ಲಿ ಆಟೊರಿಕ್ಷಾ
ಕಾರು ಕೊಡುಗೆ, ಮೀಸಲಾತಿ ಹೊರತುಪಡಿಸಿ ಮಹಿಳೆ ಅಧ್ಯಕ್ಷೆಯಾಗಿರುವ ಗ್ರಾಮ ಪಂಚಾಯತ್ ಗಳಿಗೆ ರೂ.50 ಲಕ್ಷ ವಿಶೇಷ ಅನುದಾನ, ಸ್ತ್ರೀ ಶಕ್ತಿ ಸಂಘಗಳಿಗೆ ಅನುದಾನ ಹೆಚ್ಚಳ, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ದಾದಿಯರು, ಅಂಗನವಾಡಿ, ಆಶಾ
ಕಾರ್ಯಕರ್ತೆಯರಿಗೆ ಎಲೆಕ್ಟಿಕ್ ಸ್ಕೂಟರ್ ಕೊಳ್ಳಲು ಶೇ.50 ಸಹಾಯಧನ, ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ. 11,500ರಿಂದ 15,೦೦೦ ರೂ.ಗೆ ಹೆಚ್ಚಳ, ವಿಶ್ರಾಂತಿ ವೇತನ 3 ಲಕ್ಷ ರೂ., ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ. 7500ರಿಂದ ರೂ.10ಸಾವಿರಕ್ಕೆ ಹೆಚ್ಚಳ ಮತ್ತು ವಿಶ್ರಾಂತಿ ವೇತನ 2 ಲಕ್ಷ ರೂ, ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ಗೌರವಧನ ರೂ.5 ಸಾವಿರದಿಂದ ರೂ.8ಸಾವಿರಕ್ಕೆ ಹೆಚ್ಚಳ, ಬಿಸಿಯೂಟ ಅಡುಗೆಯವರಿಗೆ ಮಾಸಿಕ ಗೌರವ ವೇತನ ರೂ. 3600ರಿಂದ 6 ಸಾವಿರಕ್ಕೆ ಹೆಚ್ಚಳ, ಒಟ್ಟು ಪೊಲೀಸ್ ಬಲದಲ್ಲಿ ಶೇ.33ರಷ್ಟು ಮಹಿಳಾ ಪೊಲೀಸ್ ಬಲ ಇರುವಂತೆ ನೇಮಕಾತಿ, ಮಹಿಳಾ ದೌರ್ಜನ್ಯಗಳನ್ನು ತಡೆಯಲು ಕಾನೂನಿನಲ್ಲಿ ಕಠಿಣ ಕ್ರಮದ ತಿದ್ದುಪಡಿ, ಮಹಿಳೆಯರಿಗೆ ಯಾವುದೇ ಭದ್ರತೆ ಪಡೆಯದೆ ಗರಿಷ್ಠ ಎರಡು ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಬಡ್ಡಿರಹಿತ ಸಾಲ, ಮೀನುಗಾರಿಕಾ ಮಹಿಳೆಯರಿಗೆ ರೂ.1 ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಮಹಿಳೆಯರು ಮತ್ತು ಯುವ ಉದ್ಯಮಿಗಳು ಚರ್ಮೇತರ ಪಾದರಕ್ಷೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ಮತ್ತು ಸಾಗಣೆ ವ್ಯವಸ್ಥೆ ಮೊದಲಾದ ಮಹಿಳಾ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬರಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನ ಮೋರಸ್
ಪಕ್ಷದ ಮಹಿಳಾ ಮುಖಂಡರಾದ ಜೋಸ್ಫಿನ್ ಡಿಸೋಜಾ, ದನವಂತಿ, ಪ್ಲೋಸಿ ಡಿಸೋ
ಜೆಸಿಂತಾ ಡಿಸೋಜಾ, ವಲಾರ, ಪೌಝೀಯಾ, ಶೋಭಾ ಶೆಟ್ಟಿ ಉಪಸ್ಥಿತರಿದ್ದರು.