
ಬಂಟ್ವಾಳ: ರೈತ ಪರ ನಿರ್ಧಾರ ತೆಗೆದುಕೊಳ್ಳುವ ಸಂವೇದನಾ ಶೀಲ ಸರಕಾರ ಬೇಕು ಆದ್ದರಿಂದ ಜಾತ್ಯಾತೀತ ಪಕ್ಷಗಳಿಗೆ ನಮ್ಮ ಬೆಂಬಲ ಎಂದು ರೈತ ಸಂಘದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಹೇಳಿದರು.



ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಡವರು, ರೈತರು, ಕಾರ್ಮಿಕರ ಬೇಡಿಕೆಗಳಿಗೆ ಈ ಹಿಂದಿನ ಸರಕಾರ ಕಿವಿಗೊಡಲಿಲ್ಲ. ರೈತರ ಆದಾಯ ದುಪ್ಪಟ್ಟ ಮಾಡುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಸರಕಾರ ಕಿಸನ್ ಸಮ್ಮಾನ್ ಅನ್ನು ರೈತರಿಗೆ ನೀಡಿದರೆ ಇತ್ತ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹಾಗು ಜೆಡಿಎಸ್ ಸರಕಾರ ರೈತರ ಸಾಲ ಮನ್ನ ಮಾಡಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಸುದ್ದಿಗೋಷ್ಟಿಯಲ್ಲಿ ಸಿಪಿಐಎಂಎಲ್ ಮುಖಂಡ ರಾಮಣ್ಣ ವಿಟ್ಲ, ಬಿ.ಕೆ.ಸಾಹುಲ್ ಹಮೀದ್, ತುಳಸಿದಾಸ್, ಉಪಸ್ಥಿತರಿದ್ದರು.