ಮಂಗಳೂರು: ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಮಂಗಳೂರು ಆಶ್ರಯದಲ್ಲಿ ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್ ಸಾರಥ್ಯದಲ್ಲಿ ಫೆ.19ರಂದು ಮಧ್ಯಾಹ್ನ 3ರಿಂದ ಬಂಗ್ರಕೂಳೂರು ಗೋಲ್ಡ್ಫಿಂಚ್ ಮೈದಾನದಲ್ಲಿ 8+2 ಜನರ ಪುರುಷರ ಹಾಗೂ ಮಹಿಳೆಯರ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಲೆವೆಲ್ ಮಾದರಿಯ ಹಗ್ಗಜಗ್ಗಾಟ ಸ್ಪರ್ಧೆ ಕೋಟಿ ಚೆನ್ನಯ ಟ್ರೋಫಿ -2023 ಹಮ್ಮಿಕೊಳ್ಳಲಾಗಿದೆ.
ಪುರುಷರ ವಿಭಾಗದಲ್ಲಿ ಪ್ರಥಮ 30,000 ರೂ. ನಗದು ಹಾಗೂ ಟ್ರೋಫಿ, ದ್ವಿತೀಯ 20,000 ರೂ. ನಗದು ಹಾಗೂ ಟ್ರೋಫಿ, ತೃತೀಯ 10,000 ರೂ. ನಗದು ಹಾಗೂ ಟ್ರೋಫಿ, ಚತುರ್ಥ 5,000 ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು. ಮಹಿಳೆಯರ ವಿಭಾಗದಲ್ಲಿ 20,000 ರೂ. ನಗದು ಹಾಗೂ ಟ್ರೋಫಿ, ದ್ವಿತೀಯ 15,000 ರೂ. ನಗದು ಹಾಗೂ ಟ್ರೋಫಿ, ತೃತೀಯ 10,000 ರೂ. ನಗದು ಹಾಗೂ ಟ್ರೋಫಿ, ಚತುರ್ಥ 5,000 ರೂ. ನಗದು ಹಾಗೂ ಟ್ರೋಫಿ ಬಹುಮಾನ ನೀಡಲಾಗುವುದು. ಭಾಗವಹಿಸುವ ತಂಡಗಳಿಗೆ ಉಚಿತ ಪ್ರವೇಶ. ಎಲ್ಲ ತಂಡಗಳಿಗೂ ಗೌರವ ಫಲಕ ನೀಡಲಾಗುವುದು. ಭಾಗವಹಿಸುವ ತಂಡಗಳು ಫೆ.15ರೊಳಗೆ ಹೆಸರು ನೋಂದಾಯಿಸಬೇಕು. ಆಟಗಾರರ ಗುರುತಿಗಾಗಿ ಆಧಾರ್ ಕಾರ್ಡ್ ತರುವುದು ಕಡ್ಡಾಯ. ಮಾಹಿತಿಗೆ 9845323590 (ಉಮೇಶ್ ಮಲರಾಯಸಾನ) ಮತ್ತು 8095179418 (ವಿವೇಕ್ ದಂಬೆಲ್ ) ನಂಬರ್ ಸಂಪರ್ಕಿಸಬಹುದು.