
ಬಂಟ್ವಾಳ: ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನಕ್ಕೆ ರೂ .1 ಲಕ್ಷ ಮೊತ್ತದ ದೇಣಿಗೆ ಚೆಕ್ ಭಾನುವಾರ ಸಂಜೆ ಹಸ್ತಾಂತರಿಸಲಾಯಿತು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಮಂಜೂರುಗೊಳಿಸಿದ ದೇಣಿಗೆ ಚೆಕ್ಕನ್ನು ವಗ್ಗ ವಲಯ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೇಲ್ವಿಚಾರಕಿ ಸುಜಾತ ಪಿ. ಮತ್ತು ಸೇವಾ ನಿರತೆ ರೇಖಾ ಕಾಡಬೆಟ್ಟು ಹಸ್ತಾಂತರಿಸಿದರು.
ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಅರ್ಚಕ ಶ್ರೀಪತಿ ಉಡುಪ ಕೆಳಮಂಗಲ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಪ್ರಮುಖರಾದ ಪುರುಷೋತ್ತಮ ಬಂಗೇರ ನಾಟಿ, ಅಭಿಷೇಕ್ ಗಾಣಿಗ, ಹರೀಶ್ ಪಿಲಿಂಗಾಲು, ಡೊಂಬಯ ಸಪಲ್ಯ ಮತ್ತಿತರರು ಇದ್ದರು.