ಬಂಟ್ವಾಳ: ಮೆಲ್ಕಾರಿನ ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 6ನೇ ಶಾಖೆಯು ರವಿವಾರ ವಿಟ್ಲ ಅರಮನೆ ರಸ್ತೆಯ ರಸ್ಕಿನ್ಹಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಕಚೇರಿಯನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಹಕಾರಿ ಸಂಘಗಳು ಶ್ರದ್ಧೆ, ಆರ್ಥಿಕ ಶಿಸ್ತು, ಪ್ರಾಮಾಣಿಕತೆಯ ಮೂಲಕ ನಮ್ಮ ಜಿಲ್ಲೆಗೆ ಸಹಕಾರಿ ಕಾಶಿ ಎಂಬ ಗೌರವವನ್ನು ತಂದುಕೊಟ್ಟಿದೆ. ಪ್ರತಿ ಸಂಘಗಳ ಆಡಳಿಕ ಮಂಡಳಿ, ಸಿಬಂದಿಯ ನಿಷ್ಠೆ ರಾಷ್ಟ್ರೀಕೃತ ಬ್ಯಾಂಕಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಬೆಳೆಯಲು ಕಾರಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ನಾರಾಯಣ ಗುರುಗಳ ಸ್ಮರಣೆಯಲ್ಲಿ ಅವರ ಚಿಂತನೆಗೆ ಪೂರಕವಾಗಿ ಈ ಸಹಕಾರಿಯು ಪ್ರಾರಂಭಗೊಂಡಿದ್ದು, ಕಳೆದ ಸಾಲಿನಲ್ಲಿ 65 ಕೋ.ರೂ.ವ್ಯವಹಾರ ನಡೆಸಿ 21.88 ಲಕ್ಷ ರೂ. ಲಾಭಗಳಿಸಿದೆ. 100 ಸ್ವಸಹಾಯ ಗುಂಪುಗಳ ಮೂಲಕ ಸದಸ್ಯರಿಗೆ ನೆರವಾಗುತ್ತಿದ್ದು, ಮಹಿಳೆಯರಿಗೆ ವಿಶೇಷವಾಗಿ ವೈಯಕ್ತಿಕ ಸಾಲ ಯೋಜನೆ ಕಲ್ಪಿಸಲಾಗಿದೆ. ಗ್ರಾಹಕರೇ ದೇವರೆಂಬ ಕಲ್ಪನೆಯಲ್ಲಿ ಸೊಸೈಟಿ ವ್ಯವಹರಿಸುತ್ತಾ ಬಂದಿದೆ ಎಂದರು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಿಟ್ಲ ಅರಮನೆಯ ಬಂಗಾರು ಅರಸರು, ದೇಲಂತಬೆಟ್ಟು ಸಂತ ಪೌಲರ ಚರ್ಚಿನ ಧರ್ಮಗುರು ಫಾ| ಸುನೀಲ್ ಪ್ರವೀಣ್ ಪಿಂಟೋ, ಕಡಂಬು ಸಾಯಿಗಣೇಶ್ ಇಂಡೇನ್ ಗ್ಯಾಸ್ ಸರ್ವೀಸಸ್ನ ಮಾಲಕ ಬಿ.ಸತೀಶ್ಕುಮಾರ್ ಆಳ್ವ, ವಿಟ್ಲ ಶ್ರೀನಿವಾಸ ಟ್ರೇಡರ್ಸ್ ಮಾಲಕ ಸುಭಾಶ್ಚಂದ್ರ ನಾಯಕ್, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಎಚ್, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ಅವರು ಶುಭಹಾರೈಸಿದರು.
ಸೊಸೈಟಿಯ ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ, ನಿರ್ದೇಶಕರಾದ ಕೆ.ಸಂಜೀವ ಪೂಜಾರಿ, ಉಮೇಶ್ ಸುವರ್ಣ ತುಂಬೆ, ರತ್ನಾಕರ ಪೂಜಾರಿ ಮೆಲ್ಕಾರ್, ತುಳಸಿ ಇರಾ, ಲಕ್ಷ್ಮೀ ಪೆರ್ವ, ಮುಖ್ಯಕಾರ್ಯನಿರ್ವಹಣಾಽಕಾರಿ ಪ್ರವೀಣ್, ಶಾಖಾ ವ್ಯವಸ್ಥಾಪಕ ಹೇಮಂತ್ಕುಮಾರ್ ಹಾಗೂ ಸಿಬಂದಿ ಉಪಸ್ಥಿತರಿದ್ದರು.
ಕೆಲ ದಿನಗಳ ಹಿಂದೆ ನಿಧನರಾದ ಬ್ಯಾಂಕಿನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರಿಗೆ ಸಮಾರಂಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಿರ್ದೇಶಕ ರತ್ನಾಕರ ಪೂಜಾರಿ ನಾಡಾರ್ ವಂದಿಸಿದರು. ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರ್ವಹಿಸಿದರು.