ಬಂಟ್ವಾಳ:
ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನಕ್ಕೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಸಂಜೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಅವರು ವಗ್ಗ ಕಾರಿಂಜ ದ್ವಾರ ಬಳಿ ಮೆರಣಿಗೆಗೆ ಚಾಲನೆ ನೀಡಿದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಭ ಹಾರೈಸಿದರು.
ಭಜನೆ ತರಬೇತುದಾರ ಯೋಗೀಶ ಪೊಯ್ತಾಜೆ ನೇತೃತ್ವದಲ್ಲಿ ಆಕರ್ಷಕ ನೃತ್ಯ ಭಜನೆ, ಚೆಂಡೆ, ವಾದ್ಯ, ಕೊಂಬು, ಗೊಂಬೆ ಕುಣಿತ, ಕಲಶ ಹೊತ್ತ ನಾರಿಯರು ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸ್ಸಹಾಯ ಸಂಘ, ಒಡಿಯೂರು ಸ್ವಸಹಾಯ ಸಂಘ ಮತ್ತಿತರ ಸಂಘಟನೆ ಸದಸ್ಯರು ಪಾಲ್ಗೊಂಡರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ಪಾಣೆಮಂಗಳೂರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಸಮಿತಿ ಉಪಾಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಎಂ.ಬೂಬ ಸಪಲ್ಯ ಮುಂಡಬೈಲು, ಉಮೇಶ ಬೋಳಂತೂರು, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಕೆ.ಬಾಬು ಸಪಲ್ಯ ವಗ್ಗ, ಪ್ರಧಾನ ಕಾರ್ಯದರ್ಶಿ ನಾಗೇಶ ಕಲ್ಲಡ್ಕ, ಮೋಹನ್ ಕೆ.ಶ್ರೀಯಾನ್ ರಾಯಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್ ವಗ್ಗ, ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಜಗದೀಶ ಕುಂದರ್, ಜಯರಾಮ ಕುಲಾಲ್ ಉರುಡಾಯಿ, ನವೀನ್ ಕೋಟ್ಯಾನ್ ಬಿ.ಸಿ.ರೋಡು, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಧರ್ಮಸ್ಥಳ ಯೋಜನೆ ಮೇಲ್ವಿಚಾರಕಿ ಸುಜಾತ, ಸೇವಾ ಪ್ರತಿನಿಧಿ ರೇಖಾ, ವಲಯಾಧ್ಯಕ್ಷ ಉಮೇಶ್ , ಪ್ರಮುಖರಾದ ಯಶೋಧರ ಶೆಟ್ಟಿ ದಂಡೆ, ದಾಮೋದರ ಮೆಲ್ಕಾರ್, ಎಂ.ಎನ್.ಮೆಲ್ಕಾರ್, ಪದ್ಮನಾಭ ಇಡ್ಕಿದು, ಕೃಷ್ಣಪ್ಪ ಕೆಮ್ಮನಾಜೆ, ಸಂಜೀವ ಸಪಲ್ಯ ಕೇದಗೆ, ಅಭಿಷೇಕ್ ಗಾಣಿಗ ಪಿಲಿಂಗಾಲು, ಹರೀಶ ಪಿಲಿಂಗಾಲು, ಚಂದಪ್ಪ ಮೂಲ್ಯ ಮತ್ತಿತರರು ಇದ್ದರು.