ಬಂಟ್ವಾಳ: ಸೋಮಯ್ಯ ವಿದ್ಯಾವಿಹಾರ್ ಯೂನಿವರ್ಸಿಟಿ ಸ್ಪೋರ್ಟ್ಸ್ ಅಕಾಡೆಮಿಯ ವತಿಯಿಂದ ಫೆ. 9 ರಂದು ಮುಂಬೈನಲ್ಲಿ ಜರುಗಿದ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಬಂಟ್ವಾಳ ತಾಲೂಕಿನ ದ.ಕ. ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆತ್ತರಕೆರೆ ಇಲ್ಲಿಯ ವಿದ್ಯಾರ್ಥಿನಿ ಹಂಸಿಕಾ ಇವರು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ . ಇವರು ರಾಜೇಶ್ ಹಾಗು ಶೋಭಾ ದಂಪತಿಯ ಸುಪುತ್ರಿಯಾಗಿದ್ದು ಪೊಳಲಿ ಶ್ರೀ ರಾಮಕೃಷ್ಣ ಆಶ್ರಮ ತಪೋವನದಲ್ಲಿ ತರಬೇತುದಾರರಾದ ಎನ್ ಐ ಟಿ ಕೆ ವಿದ್ಯಾರ್ಥಿನಿ ವೆನಿಲ್ಲಾ ಮಣಿಕಂಠ ಇವರ ಬಳಿ ತರಬೇತಿಯನ್ನು ಪಡೆಯುತಿದ್ದರೆ. ವಿದ್ಯಾರ್ಥಿನಿಯ ಸಾಧನೆಯನ್ನು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿಯವರು ಅಭಿನಂದಿಸಿದ್ದಾರೆ.
Advertisement
Advertisement
Advertisement
Advertisement