ಮೆಲ್ಕಾರ್: ಇಲ್ಲಿನ ಮೆಲ್ಕಾರ್ ಮಹಿಳಾ ಕಾಲೇಜಿನ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಬಿ.ಕೆ. ಅಬ್ದುಲ್ ಲತೀಫ್ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಮಹತ್ವದ ಕುರಿತು ವಿವರಿಸಿದರು.
Advertisement
ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವ ತಯಾರಿಯ ಬಗ್ಗೆ ಇತಿಹಾಸ ಉಪನ್ಯಾಸಕ ಅಬ್ದುಲ್ ಮಜೀದ್ ಎಸ್ ಮಾಹಿತಿ ನೀಡಿದರು. ಉಪ ಪ್ರಾಂಶುಪಾಲೆ ಆಂಜಲಿನ ಸುನಿತಾ ಪಿರೇರಾ ಸದ್ರಿ ಶೈಕ್ಷಣಿಕ ವರ್ಷದ ಉತ್ತಮ ವಿದ್ಯಾರ್ಥಿನಿಯರಾದ ಹವ್ವಾ ನೌಫಾ ಹಾಗೂ ಫಾತಿಮಾ ಸ್ವಾಲಿಹ ರವರ ಹೆಸರು ಘೋಷಣೆ ಮಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪನ್ಯಾಸಕಿ ಮಮತಾ ರಾವ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕಿಯರಾದ ಫಿದಾ ನಹಿಮಾ, ಹವ್ವಾ ನೌಫಾ, ಆಯಿಷಾ ತಮ್ಮ ಎರಡು ವರ್ಷದ ಕಾಲೇಜಿನ ಸವಿನೆನಪುಗಳನ್ನು ಹಂಚಿ ಕೊಂಡರು.ಆಯಿಷಾ ಶೈಬಾ ಸ್ವಾಗತಿಸಿ, ರಫಾ ಮರಿಯಮ್ ಧನ್ಯವಾದವಿತ್ತರು. ಆಯಿಷಾ ಝುಲ್ಫ ಕಾರ್ಯಕ್ರಮ ನಿರೂಪಿಸಿದರು.
Advertisement