.
ಬಂಟ್ವಾಳ: ಬೊಳ್ಳಾಯಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 10 ನೇ ಕಾವಳಮೂಡೂರು ಶಾಖೆಯು ಕಾವಳಮೂಡೂರು ಗ್ರಾಮದ ಎನ್.ಸಿ. ರೋಡಿನಲ್ಲಿರುವ ತೌಹೀದ್ ಕಾಂಪ್ಲೆಕ್ಸ್ ನಲ್ಲಿ ಫೆ.12ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ.

ಈಗಾಗಲೇ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಘದ ಒಂಭತ್ತು ಶಾಖೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇದೀಗ ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಗಣಕೀಕೃತಗೊಂಡ, ಮೂರ್ತೆದಾರರ ಸಾಲ, ಆಭರಣ ಸಾಲ, ವಾಹನ ಸಾಲ, ಗೃಹಸಾಲ, ವ್ಯಾಪಾರ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ಕೃಷಿಯೇತರ ಸಾಲ, ಸ್ವ-ಸಹಾಯ ಸಾಲ ಸೌಲಭ್ಯಗಳೊಂದಿಗೆ ನೂತನ ಶಾಖೆ ಆರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
