Author: admin
ಬಂಟ್ವಾಳ: ಪುದು ಗ್ರಾಮದ ಸುಜೀರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಕಾರ್ಯಕ್ರಮವು ಡಿ.28 ಶನಿವಾರ ಮತ್ತು ಡಿ.29 ಭಾನುವಾರ ನಡೆಯಲಿದೆ.ಡಿ.27 ರಂದು ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಳು ಆರಂಭಗೊಳ್ಳಲಿದೆ. ಡಿ.28 ರಂದು ಬೆಳಿಗ್ಗೆ 7.30 ಕ್ಕೆ ಗಣಹೋಮ, 8.30 ಕ್ಕೆ ದೈವದ ಭಂಡಾರ ಏರಲಿದೆ. 9.30ಕ್ಕೆ ಸಾಮೂಹಿಕ ಶನೈಶ್ಚರ ಪೂಜೆ ನಡೆಯಲಿದೆ. 11 ಗಂಟೆಗೆ ಮಹಾಪೂಜೆ ನಡೆದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿತರಣೆಯಾಗಿ ಅನ್ನದಾನ ನಡೆಯಲಿದೆ. ಅಂದು ರಾತ್ರಿ 10 ಗಂಟೆಗೆ ಶ್ರೀದೈವರಾಜ ಕೋರ್ದಬ್ಬು ತನ್ನಿಮಾನಿಗ ದೈವಕ್ಕೆ ನೇಮ ನಡೆಯಲಿದೆ. ಡಿ.29 ರಂದು ಸಂಜೆ 5 ಗಂಟೆಗೆ ರಾಹು ಗುಳಿಗ ದೈವಕ್ಕೆ ಹಾಗೂ ರಾತ್ರಿ 9 ಗಂಟೆಗೆ ಗುಳಿಗ ಪಂಜುರ್ಲಿ ದೈವಕ್ಕೆ ನೇಮ ನಡೆಯಲಿದೆ.
ಬಂಟ್ವಾಳ: ವಿದ್ಯಾರ್ಥಿಗಳಲ್ಲಿ ಬೇರೆ ಬೇರೆ ಪ್ರತಿಭೆಗಳಿರುತ್ತದೆ, ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿಯಿರುತ್ತದೆ. ಅವುಗಳನ್ನು ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಿದಾಗ ವಿದ್ಯಾರ್ಥಿಗಳು ಪ್ರತಿಭಾವಂತರಾಗುತ್ತಾರೆ ಎಂದು ಹಿರಿಯ ರಂಗ ಭೂಮಿ ಕಲಾವಿದೆ ಸರೋಜಿನಿ ಶೆಟ್ಟಿ ಹೇಳಿದರು.ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಏರ್ಯ ಆಳ್ವ ಫೌಂಡೇಶನ್ ಮೊಡಂಕಾಪು ಇದರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವರವರ ಸ್ಮರಣಾರ್ಥ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ 2ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣಾಂಜಲಿ 2024ನ್ನು ಉದ್ಘಾಟಿಸಿ ಮಾತನಾಡಿದರು.ಸೇವಾಂ ಜಲಿ ಸಂಸ್ಥೆಯ ಮೂಲಕ ಕೃಷ್ಣಕುಮಾರ್ ಪೂಂಜ ಅವರು ಬಡವರಿಗೆ, ರೋಗಿಗಳಿಗೆ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಸೇವೆ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಚಿತ್ರಕಲೆಯಂತಹ ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡರೆ ಅವರ ಕಲಿಕೆಗೆ ಅಡ್ಡಿಯಾಗುವುದಿಲ್ಲ ಬದಲಾಗಿ ಕಲಿಕೆಗೆ ಪೂರಕವಾಗಲಿದೆ ಎಂದರು.ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕ ದೇವದಾಸ್ ವಂದಿಸಿದರು,…
ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ವಾರ್ಷಿಕೋತ್ಸವ ಡಿ.26ರಂದು ಗುರುವಾರ ನಡೆಯಲಿದೆ.ಆ ದಿನ ಬೆಳಿಗ್ಗೆ ಗಂಟೆ 5ಕ್ಕೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಅರ್ಚಕ ಸುದರ್ಶನ್ ಬಲ್ಲಾಳ್ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 11ರಿಂದ ನಾಗದೇವರಿಗೆ ನಾಗತಂಬಿಲ, ಆಶ್ಲೇಷ ಬಲಿ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಶ್ರೀ ಓಂಕಾರೇಶ್ವರೀ ದೇವಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಭಜನಾ ಮಂಗಳ, ರಾತ್ರಿ 8.30ಕ್ಕೆ ಶ್ರೀ ಓಂಕಾರೇಶ್ವರೀ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 9.30ರಿಂದ ಸಸಿಹಿತ್ಲು ಮೇಳದಿಂದ ಮಹಾಶಕ್ತಿ ಮಂತ್ರದೇವತೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ ಆಶ್ರಯದಲ್ಲಿ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಸಂಭ್ರಮದಿಂದ ನಡೆಯಿತು.ತೊಡಂಬಿಲ ಚರ್ಚಿನ ಧರ್ಮ ಗುರುಗಳಾದ ವಂ. ಆಂಟೋನಿ ಲೋಬೊ ಕ್ರಿಸ್ಮಸ್ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ ಪರರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ನಮ್ಮಲ್ಲಿ ಸಂತೃಪ್ತಿ ಕಾಣಬಹುದು. ನಮ್ಮ ಮನೋಸ್ಥಿತಿ, ಹಣಸ್ಥಿತಿ ಹಾಗೂ ಪರಿಸ್ಥಿತಿ ಯನ್ನು ಅರಿತುಕೊಂಡು, ಹತೋಟಿಯಲ್ಲಿಟ್ಟುಕೊಂಡು ಮುಂದುವರಿದಾಗ ಬದುಕಿಗೆ ಹೊಸ ರೂಪವನ್ನು ಕೊಡಲು ಮತ್ತು ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ . ಮಾತ್ರವಲ್ಲದೆ, ಜೀವನದ ಯಶಸ್ಸಿಗೆ ಒಂದಷ್ಟು ಸೂತ್ರಗಳನ್ನು ಹೇಳುವ ಮುಖೇನ ಕ್ರಿಸ್ಮಸ್ ಸಂದೇಶ ನೀಡಿ ಆಶೀರ್ವದಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರಿಸ್ಮಸ್ ಪ್ರಧಾನ ಸಂಯೋಜಕ ಅರುಣ್ ಪೀಟರ್ ಪಿಂಟೋ ಶುಭ ಹಾರೈಸಿದರು. ವಾಲ್ಟರ್ ನೊರಾನ್ಹಾ ಮತ್ತು ಡೊನಾಲ್ಡ್ ಬಂಟ್ವಾಳ್ ಅತಿಥಿಗಳ ಪರಿಚಯ ಮಾಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಗೋಳ್ತಮಜಲು ಮೊಹಮ್ಮದ ಹನೀಫ್ ಅವರನ್ನು ಅಭಿನಂದಿಸಲಾಯಿತು.ಪೂರ್ವ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.…
ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಇಲ್ಲಿನ ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಗುರುವಾರ ಶಾಲೆಯ ಜ್ಞಾನಜ್ಯೋತಿ ವೇದಿಕೆಯಲ್ಲಿ ವಿಜ್ರಂಭಣೆಯಿಂದ ನಡೆಯಿತು.ಶಾಲಾ ಎಸ್ ಡಿಎಂಸಿ ಕಾರ್ಯಧ್ಯಕ್ಷ ಜಯಪ್ರಕಾಶ್ ಪೆರ್ವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶವನ್ನು ಸದುಪಯೋಗಿಸಿಕೊಂಡಾಗ ತಮ್ಮೊಳಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಿದೆ. ಕಲಿಕೆಯ ಜೊತೆಗೆ ಇನ್ನಿತರ ಸಹಪಠ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು. ಹಿರಿಯರಾದ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದರು.ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶಾರಾದ ಎಸ್. ರಾವ್, ಯಕ್ಷಗುರು ಕರ್ಗಲ್ ವಿಶ್ವೇಶ್ವರ ಭಟ್, ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿ ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಸಜೀಪಮೂಡ ಗ್ರಾ.ಪಂ. ಸದಸ್ಯರಾದ ವಿಶ್ವನಾಥ ಬೆಳ್ಚಾಡ ಕೂಡೂರು, ಹಮೀದ್ ಕೊಳಕೆ, ಆಯುಷ್…
ಬಂಟ್ವಾಳ: ರಾರಾಸಂ ಫೌಂಡೇಷನ್ ಬಂಟ್ವಾಳ ಇದರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಇದರ ಸಹಯೋಗದೊಂದಿಗೆ ರಾರಸಂಭ್ರಮ 14ನೇ ವರ್ಷದ ಸಾಂಸ್ಕೃತಿಕ ಕಲರವ ಡಿ.25ರಂದು ಬೆಳಿಗ್ಗೆ ಗಂಟೆ 9ರಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು, ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಸಂತ ಅಲೋಷಿಯಸ್ ಕಾಲೇಜಿನ ಪ್ರಾಧ್ಯಪಕಿ ಡಾ. ದಿವ್ಯ ವಿ.ಶೆಟ್ಟಿ, ಪತ್ರಕರ್ತ ಹರೀಶ್ ಮಾಂಬಾಡಿ, ಸುರಿಬೈಲು ಶಾಲೆಯ ಶಿಕ್ಷಕ ಗೋಪಾಲ ಎಸ್., ಜೆಸಿಐ ಬಂಟ್ವಾಳದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಭಾಗವಹಿಸುವರು. ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷ ಜಯರಾಜ್ ಪ್ರಕಾಶ್, ಲಯನ್ಸ್ ಕ್ಲಬ್ ಪೂರ್ವ ಪ್ರಾಂತ್ಯಾಧ್ಯಕ್ಷ ರಮಾನಂದ ನೂಜಿಪ್ಪಾಡಿ, ಉದ್ಯಮಿ ಮಂಜುನಾಥ ಆಚಾರ್ಯ, ಜೆಸಿಐ ಮಡಂತ್ಯಾರಿನ ನಿಯೋಜಿತ ಅಧ್ಯಕ್ಷೆ ಅಮಿತಾ ಅಶೋಕ್, ಸದ್ಯಮಿ ಸದಾನಂದ ಬಂಗೇರ ಉಪಸ್ಥಿತರಿರುವರು.ಇಂಡಿಯಾ ಮತ್ತು ಏಷ್ಯಾಬುಕ್ ಆಪ್ ರೆಕಾರ್ಡ್‌ನಲ್ಲಿ ದಾಖಲಾದ ಪ್ರತಿಭೆ ಅನ್ವೇಶ್ ಅಂಬೆಕಲ್ಲು ಅವರಿಗೆ…
ಬಂಟ್ವಾಳ: ಶ್ರೀಮತಿ ಲಕ್ಷ್ಮಿ ದೇವಿ ನರಸಿಂಹ ಪೈ ವಿದ್ಯಾಲಯ ಪಾಣೆ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಾದ ಶಮಿತಾ ಯು. ಇವರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಿರಿಯ ವಿಭಾಗದ ಭಕ್ತಿಗೀತೆ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ಸಮರ್ಥ್ ವೈ ಇವರು ಹಿರಿಯ ವಿಭಾಗದ ಭಕ್ತಿ ಗೀತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೊಡಂಕಾಪುವಿನ ದೀಪಿಕಾ ಪ್ರೌಢಶಾಲೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಜ್ರಮಹೋತ್ಸವನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ಸಂಭ್ರಮದಿಂದ ಆಚರಿಸಿದರು.ಎರಡನೇ ದಿನದ ಕಾರ್ಯಕ್ರಮದಲ್ಲಿ ತಮಗೆ ವಿದ್ಯೆ ನೀಡಿದ ಗುರು ಶ್ರೇಷ್ಠರನ್ನು ಗೌರವಿಸಿ ಕೃತಾರ್ಥರಾದರು. ಈ ಎಲ್ಲಾ ಕಾರ್ಯಕ್ರಮಗಳ ಪೈಕಿ ವಿಶೇಷವಾಗಿ ಗಮನ ಸೆಳೆದಿದ್ದು ಇಬ್ಬರು ಐಸ್ ಕ್ಯಾಂಡಿ ವ್ಯಾಪರಿಗಳಾದ ಖಾದ್ರಿಯಕ್ಕ ಹಾಗೂ ದಾಮೋದರ್ ಅವರನ್ನು ಗೌರವಿಸಿದ ಕ್ಷಣ!ಮೂವತ್ತು ನಲವತ್ತು ವರ್ಷಗಳ ಹಿಂದಿನ ಶಾಲಾ ವಿದ್ಯಾರ್ಥಿಗಳ ಜೀವನ ಈಗಿನ ವಿದ್ಯಾರ್ಥಿಗಳಂತಿರಲ್ಲ. ಈಗಿನ ವಿದ್ಯಾರ್ಥಿಗಳು ಐವತ್ತು, ನೂರು ರೂಪಾಯಿಯನ್ನು ಒಂದು ಕ್ಷಣಕ್ಕೆ ಖರ್ಚು ಮಾಡಿದರೆ ಕೇವಲ 50 ಪೈಸೆ ಕೊಟ್ಟು ಒಂದು ಐಸ್ ಕ್ಯಾಂಡಿ ಕೊಳ್ಳುವಷ್ಟು ಹಣ ಆಗ ಜೇಬಲ್ಲಿ ಇರುತ್ತಿರಲಿಲ್ಲ. ಸಂಜೆ ಶಾಲೆಯ ಗಂಟೆ ಬಾರಿಸಿದಾಗ ಶಾಲೆಯ ಅಂಗಳದಲ್ಲಿ ಖಾದ್ರಿಯಕ್ಕನ ಐಸ್ ಕ್ಯಾಂಡಿಯ ಗಂಟೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿತ್ತು. ಹಣವಿದ್ದವರು ಕ್ಯಾಂಡಿ ಖರೀದಿಸುತ್ತಿದ್ದರು. ಹಣವಿಲ್ಲದ ಕೆಲ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳು ಕ್ಯಾಂಡಿ ತಿನ್ನುತ್ತಿರುವುದನ್ನು ದೂರದಿಂದ ನೋಡಿ ಆಸೆ…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿ ಸಂಗೀತ ತರಗತಿಯ ವಾರ್ಷಿಕೋತ್ಸವ ಭಾನುವಾರ ಸಂಜೆ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಶಿವಾಂಜಲಿ ಕಲಾ ಕೇಂದ್ರ ಪೇರ್ಲದ ನಿರ್ದೇಶಕಿ ವಿದೂಷಿ ಕಾವ್ಯಭಟ್ ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ವೇದಿಕೆಯಾಗಿದೆ. ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಸಿಗದೇ ಹೋದಾಗ ಅವರಲ್ಲಿ ಕಲಿಯುವ ಆಸಕ್ತಿ ಕಡಿಮೆಯಾಗುತ್ತದೆ. ಆಸಕ್ತಿ ನಿರಂತರವಾಗಿಬೇಕಾದರೆ ಇಂತಹ ವೇದಿಕೆಯ ಅವಕಾಶ ಸಿಗಬೇಕಾಗಿದೆ ಎಂದರು.ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮಾತನಾಡಿ ಕಾವ್ಯಭಟ್ ಅವರು ಉದ್ಯೋಗದ ಜೊತೆ ಭರತನಾಟ್ಯವನ್ನು ಕಲಿಸುವ ಮೂಲಕ ದೇಶಿಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.ವೇದಿಕೆಯಲ್ಲಿ ಗಾಯಕಿ ಪವಿತ್ರ ವಿನಯ ಮಯ್ಯ ತುಪ್ಪೆಕಲ್ಲು, ಸಂಗೀತ ವಿದ್ವಾನ್ ಕೃಷ್ಣಾಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದೇವರ ನಾಮ, ವಿದ್ವಾನ್ ಕೃಷ್ಣಾಚಾರ್ಯ ಅವರಿಂದ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಗೀತೆ ನಡೆಯಿತು.
ಬಂಟ್ವಾಳ: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ ೩೧೭ ಡಿ ಇದರ ಆಶ್ರಯದಲ್ಲಿ ಲಯನ್ಸ್ ಜಿಲ್ಲಾ ಕ್ರೀಡೋತ್ಸವ ಬಂಟ್ವಾಳದ ಎಸ್‌ವಿಎಸ್ ಮೈದಾನದಲ್ಲಿ ನಡೆಯಿತು.ಲಯನ್ಸ್ ಜಿಲ್ಲಾ ಸ್ಪೋರ್ಟ್ಸ್ ಪ್ರಧಾನ ಸಂಯೋಜಕ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ ಲಯನ್ಸ್ ಕುಟುಂಬದ ಸದಸ್ಯರು ತಮ್ಮ ಕೆಲಸ, ಒತ್ತಡಗಳನ್ನು ಬದಿಗಿಟ್ಟು ಈ ದಿನವನ್ನು ಸಂಭ್ರಮಿದಿಂದ ಕಳೆಯುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಎಲ್ಲರು ಸಕ್ರಿಯವಾಗಿ ಆಟೋಟಗಳಲ್ಲಿ ಭಾಗವಹಿಸುವಂತೆ ತಿಳಿಸಿದರು.ಅಕ್ಷರ ದಾಸೋಹ ಉಪಕಾರ್ಯದರ್ಶಿ ಎಂ.ಪಿ. ಜ್ಞಾನೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಪ್ರಜ್ವಲಿಸಿ ಮಾತನಾಡಿ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ಅಪೂರ್ವವಾದುದು. ಶಾಲೆಗಳಿಗೂ ಹಲವಾರು ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದೆ. ಇದು ತಮ್ಮ ಸಂತೋಷಕ್ಕಾಗಿ ಮಾಡುವ ಕರ್ಮಯೋಗವಿದ್ದಂತೆ ಎಂದು ತಿಳಿಸಿದರು. ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ. ಭಾರತಿ ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಈ ಸಂದರ್ಭ ವಿವಿಧ ವಲಯಗಳಿಂದ ಆಗಮಿಸಿದ ಲಯನ್ಸ್ ಕ್ರೀಡಾಪಟುಗಳ ಫತಸಂಚಲನ ನಡೆದು ಗವರ್ನರ್ ಸಹಿತ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು.ಜಿಲ್ಲಾ…








