
ಸಾಹಿತಿ ಸಂಘಟಕ ಬಿ.ತಮ್ಮಯ್ಯ ಅವರ ನೆನಪಿನ ರಾಜ್ಯಮಟ್ಟದ “ಅತೀ ಸಣ್ಣ ಕಥೆ” ಹಾಗೂ ಲಲಿತ ಪಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆಯು ನಡೆಯಲಿದೆ. ಅತೀ ಸಣ್ಣ ಕಥೆ ಸ್ಪರ್ಧೆಯು ಕಥೆಗಾರರಲ್ಲಿರುವ ಕಥಾ ಕೌಶಲವನ್ನು ಪ್ರಕಟಪಡಿಸುವ ವೇದಿಕೆಯಾಗಿದ್ದು, 250 ಪದಮಿತಿಯಲ್ಲಿ ಕಥೆಯನ್ನು ಬರೆದು ಕಳುಹಿಸಬೇಕು.
ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಆಯ್ಕೆಯ ಯಾವುದಾದರೂ ಒಂದು ವಿಷಯದ ಮೇಲೆ 5 ಪುಟ ಮೀರದಂತೆ ಲಲಿತ ಪ್ರಬಂಧ ಬರೆದು ಕಳುಹಿಸಬಹುದು. ಎರಡೂ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ಕಳುಹಿಸುವ ಬರಹಗಳು ಸ್ವಂತ ರಚನೆಯಾಗಿದ್ದು, ಎಲ್ಲಿಯೂ ಪ್ರಕಟಗೊಂಡಿರಬಾರದು. ತಮ್ಮ ಬರಹಗಳನ್ನು ನುಡಿ ಅಥವಾ ಯುನಿಕೋಡ್ ನಲ್ಲಿ 12 ಫಾಂಟ್ ನಲ್ಲಿ ಬರೆದು ಕಳುಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಪ್ರಥಮ:3000, ದ್ವಿತೀಯ: 2000 ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಬರಹಗಾರರಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಬರಹಗಾರರು ತಮ್ಮ ಸ್ವವಿಳಾಸವನ್ನು ಮೊಬೈಲ್ ಸಂಖ್ಯೆಯೊಂದಿಗೆ ಸ್ಪಷ್ಟವಾಗಿ ನಮೂದಿಸತಕ್ಕದ್ದು. ತಮ್ಮ ಬರವಣಿಗೆಗಳನ್ನು ಡಿಸಂಬರ್ 10, 2024ರ ಮುಂಚಿತವಾಗಿ , ದಿನೇಶ್ ಸುವರ್ಣ ರಾಯಿ, ಅಧ್ಯಕ್ಷರು, ಯುವವಾಹಿನಿ ರಿ. ಬಂಟ್ವಾಳ ತಾಲೂಕು ಘಟಕ, ಸುವರ್ಣ ಕೇದಗೆ ರಾಯಿ, ರಾಯಿ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು 574211 ಇಲ್ಲಿಗೆ ಅಂಚೆ ಮೂಲಕ ಹಾಗೂ ಇಮೇಲ್ ಐಡಿ
yuvavahinibantwal@gmail.com ಕಳುಹಿಸಿಕೊಡಲು ಯುವವಾಹಿನಿ ಈ ಪ್ರಕಟನೆಯಲ್ಲಿ ತಿಳಿಸಿದೆ.
Advertisement







