Author: admin
ಬಂಟ್ವಾಳ: ಸಜೀಪ ಮಾಗಣೆಗೊಳಪಟ್ಟ ಸಜೀಪಮೂಡ ಗ್ರಾಮದ ಸಂಕೇಶದಲ್ಲಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ನಡೆಯುವ ಪುದ್ದಾರ್ ಮೆಚ್ಚಿ ಜಾತ್ರೆಯ ಪ್ರಯುಕ್ತ ಜ.8ರಿಂದ ಜ.16ರವರೆಗೆ ಪಣೋಲಿಬೈಲು ಶ್ರೀ ಕಲ್ಲುರ್ಟಿ ಕ್ಷೇತ್ರದಲ್ಲಿ ಅಗೇಲು ಮತ್ತು ಕೋಲ ಸೇವೆ ಇರುವುದಿಲ್ಲ. ಜ.17ರಿಂದ ಎಂದಿನಂತೆ ಅಗೇಲು ಮತ್ತು ಕೋಲ ಸೇವೆ ನಡೆಯುತ್ತದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ಧರ್ಮ ಹಾಗೂ ಸಂಸ್ಕೃತಿ ಜೊತೆಗೆ ಸಾಗಬೇಕಾದರೆ ಸಂಸ್ಕಾರ ಬೇಕು. ಅದನ್ನು ಸಾಧಿಸಲು ಇರುವ ಸುಲಭದ ದಾರಿ ಭಜನೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.ಶ್ರೀ ಮೂಕಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ 53ನೇ ವರ್ಷದ ಏಕಹಾ ಭಜನಾ ಮಹೋತ್ಸವದ ಪ್ರಯುಕ್ತ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ವೇದ, ಉಪನಿಷತ್ತಿನ ಸಾರವನ್ನು ಭಜನೆಯಿಂದ ತಿಳಿಯಲು ಸಾಧ್ಯವಿದೆ. ರಾಮನ ಆದರ್ಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ಸಂಸ್ಕಾರ, ಸಂಸ್ಕೃತಿ ಉಳಿಯಲು ಸಾಧ್ಯವಿದೆ.ರಾಮರಸ ತುಂಬಿದಾಗ ಸಮಾಜದಲ್ಲಿ ಪರಿವರ್ತನೆಯಾಗಲು ಸಾಧ್ಯವಿದೆ. ಮೊದಲು ನಾವು ಪರಿವರ್ತನೆಯಾಗಿ ಸಮಾಜವನ್ನು ಪರಿವರ್ತಿಸಬೇಕು ಭಗವಂತನ ಅನುಸಂಧಾನವಾಗಲು ಭಜನೆಯಿಂದ ಸಾಧ್ಯ ಎಂದು ತಿಳಿಸಿದರು. ಮುಖ್ಯ ಅತಿಥಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಭಜನೆಯಿಂದ ಸಾಮಾನ್ಯ ವ್ಯಕ್ತಿಗೂ ದೇವರನ್ನು ಒಲಿಸಲು ಸಾಧ್ಯವಿದೆ. ಜ್ಞಾನದ ಕೊರತೆ ಇದ್ದವನಿಗೆ ದೇವರ ಭಯ ಭಕ್ತಿ ಹೆಚ್ಚು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜನರು ಯಕ್ಷಗಾನದ…
ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪ ಮೂಡ ಇದರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಶ್ರೀಕಾಂತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ಸಜಿಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು, ಸಂಯಮ, ಶ್ರದ್ಧೆ, ವಿನಯ ತಾಳ್ಮೆಯಿಂದ ವಿದ್ಯೆ ಕಲಿತು ಹೆತ್ತವರಿಗೆ ಹಾಗೂ ಕಲಿತ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರುವಂತೆ ಹಿತವಚನ ನೀಡಿದರು.ಕಾಲೇಜು ಪ್ರಾಚಾರ್ಯ ಸುರೇಶ್ ಬಿ. ಐತಾಳ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪಗೊಳ್ಳುವಂತೆ ತಿಳಿಸಿದರು. ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ವಿಶ್ವನಾಥ ಕೊಟ್ಟಾರಿ, ಸುರೇಶ್ ಶೆಟ್ಟಿ ಕೊಯಮಜಲು ಉಪಸ್ಥಿತರಿದ್ದರು. ಉಪನ್ಯಾಸಕಕರಾದ ಬಾಲಕೃಷ್ಣ ನಾಯ್ಕ್ ಕೆ. ಬೆಳ್ಳಾರೆ ವರದಿ ವಾಚಿಸಿದರು, ಬಾಲಕೃಷ್ಣ ಎನ್.ವಿ. ಸನ್ಮಾನ ಪತ್ರ ವಾಚಿಸಿ, ವಂದಿಸಿದರು. ಶೋಭಾ ಕೆ., ಸ್ಪೂರ್ತಿ…
ಬಂಟ್ವಾಳ: ತಾಲೂಕು ಮರಾಟಿ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ಶ್ರೀ ಮಹಮ್ಮಯಿ ದೇವಿ ಅಮ್ಮನವರ ಸಾಮೂಹಿಕ ಗೋಂದೊಲು ಪೂಜೆ, ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಜ.10ರಂದು ಶುಕ್ರವಾರ ಕಲ್ಲಡ್ಕ ಪೂರ್ಲಿಪಾಡಿಯಲ್ಲಿರುವ ಮರಾಟಿ ಭವನದಲ್ಲಿ ನಡೆಯಲಿದೆ.ಬೆಳಿಗ್ಗೆ 8.30ರಿಂದ ದೇವತಾ ಪ್ರಾರ್ಥನೆ, ಮಧ್ಯಾಹ್ನ 12 ಕ್ಕೆ ಪೂಜಾ ಸಿದ್ಧತೆ, ಮಧ್ಯಾಹ್ನ 1ಕ್ಕೆ ಅನ್ನಪ್ರಸಾದ, ಸಂಜೆ 4 ಗಂಟೆಗೆ ಭೈರವ ಆರಾಧನೆ ನಡೆದು ೬ ಗಂಟೆಗೆ ಶ್ರೀ ಮಹ್ಮಮಾಯಿ ದೇವಿ ಅಮ್ಮನವರ ಸಾಮೂಹಿಕ ಗೋಂದೊಲು ಪೂಜೆ ಆರಂಭಗೊಳ್ಳಲಿದೆ. ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ. ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಪೆರ್ನೆ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಕಾರ್ಪೋರೆಟ್ ಅಫೇರ್‍ಸ್ ಮಿನಿಸ್ಟ್ರಿ ನಿವೃತ್ತ ಪ್ರಾದೇಶಿಕ ನಿರ್ದೆಶಕ ಬಿ.ಎನ್. ಹರೀಶ್, ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿ, ಲೋಕೋ ಪೈಲಟ್ ವನಿತಾ ಭಾಗವಹಿಸುವರು. ಸಂಜೆ 9 ರಿಂದ ಭಜನಾ ಸಂಕೀರ್ತನೆ ನಡೆಯಲಿದೆ, ರಾತ್ರಿ 12.30ಕ್ಕೆ ಸಾಮೂಹಿಕ…
ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯಕ್ಕೆ ನೂತನ ಜಿಲ್ಲಾಧ್ಯಕ್ಷ ದಿನಕರ ಕುಲಾಲ್ ಭೇಟಿ ಕಾರ್ಯಕ್ರಮ ಭಾನುವಾರ ನಡೆಯಿತು. ಗಾಣದಪಡ್ಪುವಿನ ಆಟೋಲೈನ್ಸ್ ಗ್ಯಾರೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ದಿನಕರ ಕುಲಾಲ್ ಮಾತನಾಡಿ ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯ ಜಿಲ್ಲೆಯ ಇತರ ಸಂಘಗಳಿಗೆ ಮಾದರಿಯಾಗಿದೆ. ಅಶಕ್ತರಿಗೆ ನೆರವು, ವಿದ್ಯಾಪ್ರೋತ್ಸಾಹದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು.ದ.ಕ. ಗ್ಯಾರೇಜ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯಿಂದ ದೇವರು ಸಂತೃಪ್ತನಾಗುತ್ತಾನೆ. ಕೊಡವಂತಹ ನಿರ್ಮಲ ಮನಸ್ಸು ನಮಗೆ ಇರಬೇಕು ಎಂದರು. ಸ್ವಂತ ಭವನ ನಿರ್ಮೊಸುವ ಕನಸು ಅತೀ ಶೀಘ್ರದಲ್ಲಿ ನನಸಾಗಲಿ ಎಂದರು. ಬಂಟ್ವಾಳ ವಲಯದ ಅಧ್ಯಕ್ಷ ಸುಧೀರ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ದುಡಿಮೆಯ ಒಂದು ಭಾಗವನ್ನು ಅಶಕ್ತರಿಗೆ ನೀಡಿ ಅವರ ಕಣ್ಣೀರೊರೆಸುವ ಕಾರ್ಯವನ್ನು ಬಂಟ್ವಾಳ ವಲಯ ನಿರಂತರವಾಗಿ…
ಬಂಟ್ವಾಳ: ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ಮಾಡುವ ಸೇವೆ ದೇವರಿಗೆ ಮಾಡಿದ ಸೇವೆಯಂತೆ. ಇಂತಹ ಸೇವೆ ಮಾಡುವ ಅವಕಾಶವನ್ನು ದೇವರು ನಮಗೆ ಕರುಣಿಸಿದ್ದು ಅದನ್ನು ಸೇವಾಂಜಲಿ ಸಂಸ್ಥೆಯ ಮೂಲಕ ಮಾಡೋಣ ಎಂದು ರೋಟರಿ ಕ್ಲಬ್ 3181ನ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಹೇಳಿದರು. ಕ್ಷಯ ಮುಕ್ತ ಭಾರತ ನಿರ್ಮಾಣದಂಗವಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಭಾನುವಾರ ನಡೆದ ಆಹಾರ ದವಸಧಾನ್ಯ ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿಕ್ಷಯ್ ಮಿತ್ರ ಯೋಜನೆ ಆರಂಭಗೊಂಡಂದಿನಿಂದ ಇಲ್ಲಿಯವರೆಗೆ ನಿರಂತರವಾಗಿ ಸೇವಾಂಜಲಿ ರೋಗಿಗಳಿಗೆ ಆಹಾರದ ಕಿಟ್ ವಿತರಿಸಿಕೊಂಡು ಬಂದಿದೆ, ಇದೊಂದು ಶ್ರೇಷ್ಠ ಕಾರ್ಯ ಎಂದರು.ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಮಾಜಿ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಶಕ್ತರಿಗೆ ನೆರವಾಗುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ. ಕ್ಷಯ ರೋಗ ಸ್ವಯಂಕೃತ ಅಪರಾಧದಿಂದ ಬರುವಂತದಲ್ಲ, ಸರಿಯಾದ…
ಬಂಟ್ವಾಳ: ರೋಟರಿ ಮೀನ್ಸ್ ಬ್ಯುಸಿನೆಸ್ ಫೆಲೋಶಿಪ್ ಮಂಗಳೂರು ಇದರ ನೂತನ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆಯಿತು.ಭಾರತ್ ಬೀಡಿ ವರ್ಕ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಆನಂದ ಜಿ.ಪೈ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.ರೋಟರಿ ಬಂಟ್ಚಾಳ ಟೌನ್ ನ ಮಾಜಿ ಅಧ್ಯಕ್ಷ ಜಯರಾಜ್ ಎಸ್. ಬಂಗೇರ, ಅಧ್ಯಕ್ಷರಾಗಿ, ನೆಲ್ಸನ್ ಕ್ಯಾಸ್ಟಲಿನೋ ಕಾರ್ಯದರ್ಶಿಯಾಗಿ, ಪ್ರಸನ್ನ ರಾವ್ ಕೋಶಾಧಿಕಾರಿಯಾಗಿ ಶ್ಯಾಮ್ ಲಾಲ್ ಉಪಾಧ್ಯಕ್ಷರಾಗಿ, ಕಿರಣ್ ಕುಮಾರ್, ಬ್ರಿಯಾನ್ ಪಿಂಟೋ, ಕಿಶನ್ ಕುಮಾರ್ ಮತ್ತು ಸಾಯಿಬಾಬ ರಾವ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.ನೂತನ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ಆಶಯ ಭಾಷಣ ಮಾಡಿ ಮೂರು ವರ್ಷಗಳ ಹಿಂದೆ ಆರ್ ಎಂ ಬಿ ಸ್ಥಾಪಿಸಿ ರೋಟರಿ ಸದಸ್ಯರಲ್ಲಿಯೇ ವ್ಯವಹಾರ ಉಳಿಸಿಕೊಂಡಿದೆ ಎಂದರು. ವ್ಯವಹಾರಕ್ಕಿಂತಲೂ ಮಿಗಿಲಾಗಿ ನಾವು ಮಾಡುವ ಕೆಲಸದಲ್ಲಿ ಸಂತೃಪ್ತಿ ಭಾವ ಮುಖ್ಯವಾಗುತ್ತದೆ. ಘಟಕದ ಯಶಸ್ಸಿಗೆ ಎಲ್ಲರ ಬೆಂಬಲ, ಸಲಹೆ ಸಹಕಾರ ನೀಡುವಂತೆ ವಿನಂತಿಸಿದರು.ಈ ಸಂದರ್ಭ ನೂತನ ಸದಸ್ಯರನ್ನು ಘಟಕಕ್ಕೆ ಸೇರ್ಪಡೆಗೊಳಿಸಲಾಯಿತು.ಮುಖ್ಯ…
ಬಂಟ್ವಾಳ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದವರು ನಡೆಸಿದ ವಿಶೇಷ, ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಯಲ್ಲಿ ಪುತ್ತೂರಿನ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಬಿ.ಸಿ. ರೋಡ್ ಶಾಖೆಗೆ ಶೇ.100 ಪಲಿತಾಂಶ ಬಂದಿರುತ್ತದೆ. ಜೂನಿಯರ್ ನೃತ್ಯ ವಿಭಾಗದಲ್ಲಿ 10 ವಿದ್ಯಾರ್ಥಿಗಳು, ವಿದ್ವತ್ ಪೂರ್ವ ದಲ್ಲಿ ಓರ್ವ ವಿದ್ಯಾರ್ಥಿ ಹಾಗು ವಿದ್ವತ್ ಅಂತಿಮದಲ್ಲಿ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿ ಗಳು ತೇರ್ಗಡೆ ಹೊಂದಿ ಕಲಾಕೇಂದ್ರಕ್ಕೆ ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಜೂನಿಯರ್ ವಿಭಾಗದ ಕುಮಾರಿ ಹಶಿಕಾ ಜೆ. ಶೇಕಡಾ 98 ಅಂಕಗಳನ್ನು ಗಳಿಸಿದ್ದು ಉತ್ತಮ ಸಾಧನೆ ಮಾಡಿರುತ್ತಾಳೆ ಎಂದು ಕಲಾಕೇಂದ್ರದ ನೃತ್ಯ ಗುರು ವಿದುಷಿ ರೋಹಿಣಿ ಉದಯ್ ತಿಳಿಸಿರುತ್ತಾರೆ.
ಬಂಟ್ವಾಳ : ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಅವರು ಕಂಬಳದ ಕರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ಮಾತನಾಡಿ, ತುಳು ನಾಡಿನ ಕೃಷಿಕರ ಜಾನಪದ ಕ್ರೀಡೆಯಾಗಿರುವ ಕಂಬಳ ನಿರಂತರವಾಗಿ ನಡೆಯುವಂತಾಗಲು ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.ಸಿದ್ದಕಟ್ಟೆ ವೈದ್ಯ ಡಾ.ಸುದೀಪ್ ಕುಮಾರ್ ಜೈನ್, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ರಾಜ್ಯ ಭಾಲ ಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಭಟ್ ಜಿ.ಕೆ. ಅವರು ಶುಭ ಹಾರೈಸಿದರು.ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನ ಕುಮಾರ ಚೌಟ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಮೂಡುಬಿದಿರೆ ಉದ್ಯಮಿ…
ಬಂಟ್ವಾಳ :ಇಡಿ ಅಧಿಕಾರಿಗಳೆಂದು ನಂಬಿಸಿ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶದ ಉದ್ಯಮಿಯ ಮನೆಗೆ ದಾಳಿ ನಡೆಸಿದ ತಂಡವೊಂದು ಬರೋಬ್ಬರಿ 30 ಲಕ್ಷ ರೂ. ದೋಚಿದ ಘಟನೆ ಜ.3 ರ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ.ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡವೊಂದು ದಾಳಿ ನಡೆಸಿದಂತೆ ನಟಿಸಿದೆ.ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದ ನಾಟಕ ಮಾಡಿ ಮನೆಯಲ್ಲಿ ಸಿಕ್ಕಿದ ಸುಮಾರು 30 ಲಕ್ಷ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸ್ ಉನ್ನತ ಅಧಿಕಾರಿಗಳು ಭೇಟಿ ಪರಿಶೀಲಿಸುತ್ತಿದ್ದಾರೆ.








