Author: admin

ಬಂಟ್ವಾಳ: ತಾಲೂಕಿನ ವಾಮದಪದವು ಹಾಗೂ ಚೆನ್ನೈತ್ತೋಡಿಯಲ್ಲಿರುವ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಕಳೆದ ಸೆ.5 ರಂದು ಕೃಷಿ ಕಲಿ -ನಲಿ ಕಾರ್ಯಕ್ರಮದ ಮೂಲಕ ಸ್ಥಳೀಯ ವಾಂಬೆಟ್ಟುವಿನ ಯಜ್ಞನಾರಾಯಣ ಎಂಬವರ ಅರ್ಧ ಎಕರೆ ವಿಸ್ತೀಣ್ದ ಗದ್ದೆಯಲ್ಲಿ ಭತ್ತದ ಸಾಗುವಳಿ ಮಾಡಿದ್ದರು. ವಿದ್ಯಾರ್ಥಿಗಳಿಗೆ ಭತ್ತದ ಬೇಸಾಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಅದರ ಪ್ರಾಯೋಗಿಕ ಅನುಭವವೂ ಆಗಬೇಕು ಎನ್ನುವ ಉದ್ದೇಶದಿಂದ ನಿಲಯದ ಮೇಲ್ವಿಚಾರಕಿ ಭವಾನಿ ಅವರ ಮುತುವರ್ಜಿಯಲ್ಲಿ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ಅವರ ಮಾರ್ಗದರ್ಶನದಂತೆ ಸ್ಥಳೀಯ ಕೃಷಿಕ ಯಜ್ಞ ನಾರಾಯಣ ಅವರ ಸಹಕಾರದೊಂದಿಗೆ ಕೃಷಿ ಚಟುವಟಿಕೆ ನಡಸಲಾಗಿತ್ತು. ಮೂರು ಹಾಸ್ಟೆಲ್‌ಗಳ 300 ಮಂದಿ ವಿದ್ಯಾರ್ಥಿಗಳು ಅಂದು ಈ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಬಳಿಕ ವಿದ್ಯಾರ್ಥಿಗಳೇ ಮೇಲುಸ್ತುವರಿ ವಹಿಸಿಕೊಂಡು ಗದ್ದೆಯ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಇದೀಗ ಭತ್ತದ ಪೈರು ಕೊಯ್ಲಿಗೆ ಬಂದಿದ್ದು ಅದೇ ವಿದ್ಯಾರ್ಥಿಗಳು ಹಾಗೂ ಇಲಾಖಾ ಅಧಿಕಾರಿಗಳು ಭಾಗವಹಿಸಿ ಭಾನುವಾರ ಪೈರನ್ನು ಕಟಾವು ಮಾಡಿ, ತೆನೆಯನ್ನು ಬಡಿದು…

Read More

ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರಾಗಿರುವ ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಆಗಮಿಸಲಿದ್ದಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಸೋಮವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು.ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪದವಿಕಾಲೇಜು, ಸೆಕೆಂಡರಿ ಸ್ಕೂಲ್, ಪದವಿಪೂರ್ವ ಕಾಲೇಜು, ಹೈಸ್ಕೂಲು ಹಾಗೂ ಪ್ರಾಥಮಿಕ ಶಾಲೆ ಜೊತೆಗೆ ಶಿಶುಮಂದಿರವಿದೆ. 3338 ವಿದ್ಯಾರ್ಥಿಗಳು ಹಾಗೂ 230 ಶಿಕ್ಷಕರು, ಸಿಬ್ಬಂದಿ ವರ್ಗ ಇದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದ ಜೊತೆ ದೇಶಭಕ್ತಿ, ಸಂಸ್ಕೃತಿಯನ್ನು ಮೂಡಿಸುವುದು ಹಾಗೂ ರಾಷ್ಟ್ರೀಯ ದೃಷ್ಟಿಕೋನದ ಶಿಕ್ಷಣ ನೀಡುವುದನ್ನು ಕಳೆದ ನಾಲ್ಕು ದಶಕಗಳಿಂದ ಮಾಡುತ್ತಿದ್ದೇವೆ. ಮೂರುವರೆ ದಶಕಗಳಿಂದ ನಡೆಸುತ್ತಿರುವ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಎಲ್ಲ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಾರೆ. ಈ ಬಾರಿ 20 ವಿಶೇಷಚೇತನ ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ. ಪ್ರತಿ ಬಾರಿಯೂ ರಾಜ್ಯ, ರಾಷ್ಟ್ರಮಟ್ಟದ ಗಣ್ಯರು ಆಗಮಿಸುವುದು ಇಲ್ಲಿನ ವಿಶೇಷ.…

Read More

ಬಂಟ್ವಾಳ :ಎಲ್ಲರಿಗೂ ಒಳಿತು ಮಾಡುವ ಧರ್ಮವೊಂದಿದ್ದಾರೆ ಅದು ಹಿಂದೂ ಧರ್ಮ, ವಿಶಾಲ ದೃಷ್ಟಿಕೋನವಿರುವ ಹಿಂದೂ ಸಮಾಜಕ್ಕೆ ಸಾವಿರಾರು ವರುಷಗಳ ಇತಿಹಾಸ ಇದೆ, ಶ್ರೀ ರಾಮನನ್ನು ಆದರ್ಶವಾಗಿಟ್ಟುಕೊಂಡು ಗ್ರಾಮ ವಿಕಾಸದ ಮೂಲಕ ರಾಮ ರಾಜ್ಯದ ಕನಸು ಸಾಕಾರಗೊಳಿಸೋಣ . ಈ ಪುಣ್ಯ ಭೂಮಿ ನಮ್ಮದು, ಇಲ್ಲಿ ಜಾತಿ, ವರ್ಣ, ಸಂಪತ್ತು ಇವೆಲ್ಲವನ್ನೂ ಮೀರಿ ನಿಂತು ನಮ್ಮ ಸಮಾಜವು ಇನ್ನಷ್ಟು ಬಲಗೊಳ್ಳಲು ಹಾಗೂ ಬದಲಾವಣೆಗೆ ಶನಿ ಪೂಜೆಯಂತ ಧಾರ್ಮಿಕ ಕಾರ್ಯಕ್ರಮಗಳು ಪ್ರೇರಣೆಯಾಗಲಿ ಶನಿ ದೇವರು ನಮ್ಮಲ್ಲಿರುವ ಕೆಡುಕನ್ನು ಅಳಿಸಿ ಒಳಿತನ್ನು ಮಾಡಲಿ, ಎಂದು ಆರ್ ಎಸ್ ಎಸ್ ಮುಖಂಡ ಡಾ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಅವರು ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಶನೈಶ್ಚರ ಪೂಜಾ ಸೇವಾ ಸಮಿತಿ ನೆತ್ತರಕೆರೆ ಇದರ ಆಶ್ರಯದಲ್ಲಿ ನ. 30ರಂದು ಶನಿವಾರ ಸಂಜೆ ನಡೆದ ಸಾಮೂಹಿಕ ಶನೈಶ್ಚರ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮ ಅಧ್ಯಕ್ಷತೆಯನ್ನು ದ. ಕ. ಜಿಲ್ಲಾ ಕೊಟ್ಟಾರಿ ಸಮಾಜದ ಸುಧಾರಕ ಸಂಘದ ಅಧ್ಯಕ್ಷ…

Read More

ಬಂಟ್ವಾಳ: ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಅಮಾವಾಸ್ಯೆಯ ಪ್ರಯುಕ್ತ ಡಿ.೧ರಂದು ಅಗೇಲು ಸೇವೆ ಮತ್ತು ಕೋಲ ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ “ದೀಪಾವಳಿ ಸಂಭ್ರಮ” ಕಾರ್ಯಕ್ರಮ ಲಯನ್ಸ್ ಸೇವಾ ಮಂದಿರದಲ್ಲಿ ಇತ್ತೀಚಿಗೆ ನಡೆಯಿತು.ತುಳಸಿ ಪೂಜೆ , ಲಕ್ಷ್ಮೀ ಪೂಜೆ , ಬಲೀಂದ್ರ ಪೂಜೆ ಹಾಗೂ ಗೋ ಪೂಜೆ ಮೊದಲಾದ ಕಾರ್ಯಕ್ರಮಗಳು ರಾಘವೇಂದ್ರ ಕಾರಂತ್ ನೇತೃತ್ವದಲ್ಲಿ ನಡೆಯಿತು. ಲಯನ್ಸ್ ಸದಸ್ಯರಿಗೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ , ಮಕ್ಕಳಿಗೆ ಗೂಡುದೀಪ ಸ್ಪರ್ಧೆ ಮುಂತಾದವುಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ದೀಪಾವಳಿ ಮುಖ್ಯ ಸಂಯೋಜಕ ಲೋಕೇಶ್ ಉಳ್ಳಾಲ್ , ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಎಂ ಹರ್ಷ ಸಂಪಿಗೆತ್ತಾಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ನಿಕಟಪೂರ್ವ ರೋಟರಿ ಸಹಾಯಕ ರಾಜ್ಯಪಾಲ ರಾಘವೇಂದ್ರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೀಪಾವಳಿ ಹಬ್ಬ ಆಚರಣೆಯ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಪೀಸ್ ಪೋಸ್ಟರ್ ಸ್ಪರ್ಧೆಯಲ್ಲಿ ವಿಜೇತ ಐದು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸೇವಾ ಕಾರ್ಯಕ್ರಮವಾಗಿ ರಾಯಿ ಲಕ್ಷ್ಮೀ ಕೋಡಿ ನಿವಾಸದ ಬಡ ಕುಟುಂಬದ ವಿದ್ಯಾರ್ಥಿನಿಗೆ…

Read More

ಬಂಟ್ವಾಳ: ಸಮಾಜಸೇವಾ ಸಹಕಾರಿ ಸಂಘ ನಿ. ಬಂಟ್ವಾಳ ಇದರ ವತಿಯಿಂದ 2024-25ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಭಾನುವಾರ ಸಂಘದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ದೂರದೃಷ್ಟಿಯ ಫಲವಾಗಿ ಸಮಾಜಸೇವಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಿದೆ. ಬಡಜನರಿಗೆ ಆರ್ಥಿಕ ಸಹಕಾರವನ್ನು ನೀಡುವುದರ ಜೊತೆಗೆ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವ ಉದ್ದೇಶದಿಂದ ಡಾ. ಬಾಳಪ್ಪ ಅವರ ಆಶಯದಂತೆ ಸಂಘ ನಿರಂತರವಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳ ಶ್ರಮ, ಗ್ರಾಹಕರ ಸಹಕಾರದಿಂದಾಗಿ ಸಮಘ ಲಾಭದಾಯಕವಾಗಿ ನಡೆಯುತ್ತಿದ್ದು ಅದರ ಒಂದಂಶವನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತಿದ್ದು ವಿದ್ಯಾರ್ಥಿಗಳು ಈ ಮೊತ್ತವನ್ನು ವಿದ್ಯಾಭ್ಯಾಸಕ್ಕೆ ಸದುಪಯೋಗ ಪಡಿಸಬೇಕೆಂದು ತಿಳಿಸಿದರು. ಕೆಐಸಿಎಂ ಮೂಡಬಿದಿರೆ ಇದರ ಪ್ರಥಮದರ್ಜೆ ಸಹಾಯಕ ಹೊನ್ನಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 160 ಮಂದಿ ಸ್ನಾತಕ್ಕೋತರ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳಿಗೆ ಒಟ್ಟು 6.88 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.…

Read More

ಬಂಟ್ವಾಳ: 400 ಕೆ.ವಿ.ವಿದ್ಯುತ್ ಪ್ರಸರಣ ತಂತಿಗಳನ್ನು ಅಳವಡಿಸಲು ಟವರ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೆ ಕಲ್ಲಡ್ಕದ ಪೂರ್ಲಿಪಾಡಿಯ ಬಳಿ ಬಾಯಿಲ ಎಂಬಲ್ಲಿನ ಖಾಸಗಿ ಜಮೀನಿನಲ್ಲಿ ಮರಗಳನ್ನು ಕಡಿಯುತ್ತಿದ್ದ ವೇಳೆ ರೈತ ಸಂಘ ಹಸಿರು ಸೇನೆಯ ಮುಖಂಡರು ಮುತ್ತಿಗೆ ಹಾಕಿ ಕೆಲಸವನ್ನು ತಡೆದ ಘಟನೆ ಮಂಗಳವಾರ ನಡೆದಿದೆ. ರಾಜಾರೋಷವಾಗಿ ಯಂತ್ರದ ಮೂಲಕ ಮರಗಳನ್ನು ಉರುಳಿಸುತ್ತಿದ್ದ ವೇಳೆ ರೈತ ಸಂಘದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆಯೇ ಮರಕಡಿಯುತ್ತಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ರೈತರು ಹಾಗೂ ಸ್ಥಳೀಯರ ವಿರೋಧದ ನಡುವೆಯು ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಸ್ಟೆರ್‌ಲೈಟ್ ಪವರ್ ಕಂಪನಿ ಬಂಟ್ವಾಳ ತಾಲೂಕಿನಲ್ಲಿ ಹಂತಹಂತವಾಗಿ ಟವರ್ ನಿರ್ಮಿಸುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳ ಕಸ್ಬ ಗ್ರಾಮದ ದರ್ಬಳಿಕೆಯಲ್ಲಿ ಟವರ್ ನಿರ್ಮಿಸಲು ರೈತ ಮುಖಂಡರು ಹಾಗೂ ಗ್ರಾಮಸ್ಥರು ಹೋರಾಟ ನಡೆಸಿ ವಿರೋಧ ವ್ಯಕ್ತಪಡಿಸಿದರೂ ಅಂತಿಮವಾಗಿ ಕಂಪೆನಿ ಟವರ್ ನಿರ್ಮಿಸುತ್ತಿದೆ. ಇದೀಗ ಬಾಯಿಲದಲ್ಲೂ ಸ್ಥಳೀಯ ರೈತರಿಗೆ ಯಾವುದೇ ಮಾಹಿತಿ ಹಾಗೂ ನೋಟೀಸ್ ನೀಡದೆ ಟವರ್…

Read More

ಬಂಟ್ವಾಳ: ದ.ಕ. ಜಿಲ್ಲೆಯ ಕಾರಣಿಕದ ದೈವಸ್ಥಾನ ಪಣೋಲಿಬೈಲು ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ಕೋಲ ಭಾನುವಾರ ರಾತ್ರಿ ನಡೆಯಿತು.ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಕಲ್ಲಡ್ಕ ವಿಠಲ್ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಹಾಗೂ ನಾಟಕ ನಡೆಯಿತು. ಭಂಡಾರದ ಮನೆಯಿಂದ ದೈವಗಳ ಭಂಡಾರ ಬಂದು ವರ್ಷಾವಧಿ ಕೋಲ ನಡೆಯಿತು.ದೈವಸ್ಥಾನದ ಆಡಳಿತಾಧಿಕಾರಿ, ಕಾರ್ಯನಿರ್ವಹಣಾಧಿಕಾರಿ ಅರ್ಚಕ ವರ್ಗ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೈವದ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

Read More

ಬಂಟ್ವಾಳ: ಮಹರ್ಷಿ ಆನಂದ ಗುರೂಜಿ ಅವರ ಬೆಂಗಳೂರಿನ ಭೂವರಹ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲು 11 ಅಡಿ ಎತ್ತರದ ಶ್ರೀ ಭೂವರಹ ಸ್ವಾಮಿಯ ಬೃಹತ್ ಫೈಬರ್ ಕಲಾಕೃತಿ ಬಂಟ್ವಾಳ ತಾಲೂಕಿನ ಕಳ್ಳಿಗೆಯ ಕಲಾವಿದ ಮನೋಜ್ ಕನಪಾಡಿಯವರ ಕೈ ಚಳಕದಲ್ಲಿ ನಿರ್ಮಾಣಗೊಂಡಿದ್ದು ಕುಂಚದ ಅಂತಿಮ ಸ್ಪರ್ಶಕ್ಕೆ ಕಾಯುತ್ತಿದೆ.

Read More

ಬಂಟ್ವಾಳ: ಜಿ.ಎಚ್.ಎಮ್ ಫೌಂಡೇಶನ್ (ರಿ) ಮೂಲರಪಟ್ಣ ಇದರ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ ಮೌಲಾನ ಅಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಮೂಲರಪಟ್ಣ ಇಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಶಾಲಿ ಎಮ್ ಎಸ್ ವಹಿಸಿದ್ದರು.ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಂಝ ಗುತ್ತು,ಗೌರವ ಸಲಹೆಗಾರ ಎಮ್.ಬಿ.ಅಶ್ರಫ್, ಮೌಲಾನ ಅಝಾದ್ ಮಾದರಿ ಶಾಲೆಯ ಪ್ರಭಾರ ಪ್ರಾಂಶುಪಾಲ ಭರತ್, ಅಬ್ದುಲ್ ಸಮದ್ ಅರಳ,ಎಮ್ ಪಿ ಅಬ್ದುಲ್ ಜಬ್ಬಾರ್ ಸಂಸ್ಥೆಯ ಸದಸ್ಯರಾದ ಶಾರೂಕ್ ಎಂ ಬಿ, ಅಬ್ದುಲ್ ರಶೀದ್ ಎಂ ಬಿ ಹಾಗೂ ವಿಧ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜ! ಅಬ್ದುಲ್ ಖಾದರ್ ನಾವೂರು ವಿಧ್ಯಾರ್ಥಿಗಳ ಹಾಗೂ ಪೋಷಕರ ಜೊತೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶಲೀಲ ವಿಟ್ಲ ಇವರು ವಿಧ್ಯಾರ್ಥಿಗಳ ಕಲಿಕೆಯ ಬೆಳವಣಿಗೆಯನ್ನು ಉತ್ತೇಜಿಸಲು ಪಠ್ಯವಾರು ವಿಷಯವನ್ನು ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರರಿಗೆ ಮನದಟ್ಟು ಮಾಡಿಕೊಟ್ಟರು.ಇದರ ಜೊತೆಗೆ ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರರಿಗೆ ಮಾದಕ ದ್ರವ್ಯ ಮುಕ್ತ ಸಮಾಜ ಮತ್ತು ಅಪರಾಧ ಮುಕ್ತ…

Read More