Author: admin

ಬಂಟ್ವಾಳ: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸಹಕಾರಿ-ಸಮಾಜ ಸೇವಾ ಕ್ಷೇತ್ರದ ಸಾಧಕ ಕೆ.ಸಂಜೀವ ಪೂಜಾರಿ ಅವರಿಗೆ ಕೆ.ಸಂಜೀವ ಪೂಜಾರಿ ಅಭಿನಂದನಾ ಸಮಿತಿ, ಬಿ.ಸಿ.ರೋಡಿನ ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ, ಮೆಲ್ಕಾರಿನ ಶ್ರೀಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಶಿವಗಿರಿ ಮಹಿಳಾ ಸಹಕಾರಿ ಸಂಘ ಹಾಗೂ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ರವಿವಾರ ಸಜೀಪಮೂಡ ಸುಭಾಷ್‌ನಗರ ಶ್ರೀಗುರು ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಅಭಿಮಾನದ ಸಾಧಕನಿಗೆ ಹುಟ್ಟೂರ ಗೌರವ ನೀಡಿ ಸಮ್ಮಾನಿಸಲಾಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾರಾಯಣ ಗುರುಗಳ ಆದರ್ಶದೊಂದಿಗೆ ಸಂಜೀವಣ್ಣ ಸಹಕಾರಿ ಚಳುವಳಿಯಲ್ಲಿ ಸಾಧನೆ ತೋರಿದ್ದು, ಸಾಮಾಜಿಕ ಬದುಕಿನ ಜತೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿದ್ದು, ಜನಪ್ರತಿನಿಽಯಾಗಿ ಸಮುದಾಯ ಏಳಿಗೆಯ ಕುರಿತು ಚಿಂತನೆ ನಡೆಸಿದ್ದರು. ಸರಕಾರವು ನಾರಾಯಣ ಗುರು ಜಯಂತಿ ಆಚರಿಸುವ ಘೋಷಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ಸಜೀಪಮೂಡದ ಗುರುಮಂದಿರದಲ್ಲಿ ಮಾಡಿದ್ದು, ಇದರಲ್ಲಿ ಸಂಜೀವಣ್ಣನ ಪ್ರಯತ್ನವಿರುವುದು ಸ್ಮರಣೀಯ ಎಂದರು.ಅಭಿನಂದನಾ ಸಮಿತಿಯ…

Read More

ಬಂಟ್ವಾಳ: ಜೆಸಿಐ ಬಂಟ್ವಾಳ ಇದರ 2025ನೇ ಸಾಲಿನ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.ನೂತನ ತಂಡವನ್ನು ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಜೆಸಿಐ ಭಾರತದ ಎಲ್ಲಾ ಘಟಕಗಳು ಮೌನವಹಿಸಿದ್ದಾಗ ವಲಯ 15 ಸದ್ದು ಮಾಡುತ್ತಿತ್ತು. ಈ ಸಂದರ್ಭ ವಲಯಕ್ಕೆ ಬೆನ್ನಲುಬಾಗಿ ನಿಂತು ಕಾರ್ಯಕ್ರಮ ಸಂಘಟಿಸಿದ ಕೀರ್ತಿ ಜೆಸಿಐ ಬಂಟ್ವಾಳಕ್ಕೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ಕಷ್ಟದ ಕಾಲದಲ್ಲೂ ವ್ಯವಹಾರ ಸಮ್ಮೇಳನವನ್ನು ನಿಶುಲ್ಕವಾಗಿ ಆಯೋಜಿಸಿದ ಹೆಗ್ಗಳಿಕೆ ಜೆಸಿಐ ಬಂಟ್ವಾಳಕ್ಕಿದೆ. ಇಂತಹ ಘಟಕದ ಮೇಲೆ ಪ್ರೀತಿ ಅಭಿಮಾನವಿದ್ದು ಮುಂದಿನ ದಿನಗಳಲ್ಲಿ ಅತ್ಯುತ್ತಮ ಕಾರ್ಯಗಳ ಮೂಲಕ ಮಾದರಿ ಘಟಕವಾಗಿ ಹೊರ ಹೊಮ್ಮಲಿ ಎಂದು ಆಶಿಸಿದರು. 2025ನೇ ಸಾಲಿನ ಚುನಾಯಿತ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಘಟಕ ರೈಸ್ ಅಪ್ ಆಗಬೇಕಾದರೆ ಎಲ್ಲರ ಸಹಕಾರ ಬೇಕು. ಮುಂದಿನ ವರ್ಷದಲ್ಲಿ ವಲಯದ ಅಭಿವೃದ್ದಿಗೆ…

Read More

ಬಂಟ್ವಾಳ: ಪುತ್ತೂರು ವಿವೇಕಾನಂದ ಪ್ರೌಢಶಾಲೆ ಯಲ್ಲಿ ನಡೆದ ರಾಷ್ಟ್ರಿಯ ಮಟ್ಟದ ಕರಾಟೆ ಮತ್ತು ಎಲೈಡ್ ಮಾರ್ಷಲ್ ಆರ್ಟ್ ಜೂನಿಯರ್ ವಿಭಾಗದ ಸ್ಪರ್ಧೆ ಯಲ್ಲಿ ಉಡುಪಿ ಅಜ್ಜರ ಕಾಡು ಸೈಂಟ್ ಸಿಸಿಲಿಯ ಪ್ರೌಢಶಾಲೆ ಯ ಆರನೇ ತರಗತಿ ವಿದ್ಯಾರ್ಥಿನಿ ತನಿಷ್ಕ ಪವನ್ ಕುಮಾರ್ ಚಿನ್ನದ ಪದಕ ಹಾಗೂ ಕಟಾ ವಿಭಾಗದ ಸ್ಪರ್ಧೆ ಯಲ್ಲಿ ರಜತ ಪದಕ ಪಡೆದಿದ್ದಾರೆ.ಈಕೆಭಾರತೀಯ ರೈಲ್ವೆ ಇಲಾಖೆಯ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪವನ್ ಕುಮಾರ್ ಮತ್ತು ಅಕ್ಷತಾ ಪವನ್ ಕುಮಾರ್ ದಂಪತಿಯ ಸುಪುತ್ರಿ

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಸೇವಾಂಜಲಿ ಸಂಗೀತ ತರಗತಿಯ ವಾರ್ಷಿಕೋತ್ಸವ ಡಿ.15ರಂದು ಭಾನುವಾರ ಸಂಜೆ 4ಗಂಟೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಶಿವಾಂಜಲಿ ಕಲಾಕೇಂದ್ರ ಪೆರ್ಲ ಇದರ ನಿರ್ದೇಶಕಿ ವಿದುಷಿ ಕಾವ್ಯ ಭಟ್ ಉದ್ಘಾಟಿಸುವರು, ಗಾಯಕಿ ಪವಿತ್ರ ವಿನಯ ಮಯ್ಯ ಉಪಸ್ಥಿತರಿರುವರು. ಸಂಜೆ 4.30ರಿಂದ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದೇವರ ನಾಮಗಳು, ಸಂಜೆ 5.30ರಿಂದ ವಿದ್ವಾನ್ ಕೃಷ್ಣಾಚಾರ್ಯ ಇವರಿಂದ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಗೀತೆ ನಡೆಯಲಿದೆ ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. —

Read More

ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ಜ.19 ರಂದು ನಡೆಯಲಿರುವ ಬಂಟ್ವಾಳ ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡೋತ್ಸವ- 2025ರ ಲಾಂಛನ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆಯಿತು. ಕುದ್ರೋಳಿ ಗೋಕರ್ಣ ದೇವಸ್ಥಾನದ ಟ್ರಸ್ಟಿ, ಉದ್ಯಮಿ ಜಗದೀಪ್ ಸುವರ್ಣ ಲಾಂಛನ ಬಿಡುಗಡೆಗೊಳಿಸಿದರು. ಬಳಿಕ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಬಿಲ್ಲವ ಸಮಾಜದ ಸರ್ವರು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಬೇಕು. ಈ ಮೂಲಕ ಸಮಾಜದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ರಾರಾಜಿಬೇಕು ಎಂದು ಶುಭ ಹಾರೈಸಿದರು. ಬಳಿಕ ಅವರು ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನ ಬಿಲ್ಲವರು ಸಂಘಟಿತರಾಗುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡಾಕೂಟವನ್ನು ಶಿಸ್ತುಬದ್ದವಾಗಿ, ಯಶಸ್ವಿಯಾಗಿ ನಡೆಸಲು ಬಿಲ್ಲವ ಸಮುದಾಯದ ಪ್ರತಿಯೊಬ್ಬರು ಸಹಕಾರ ನೀಡುವಂತೆ ಮನವಿ ಮಾಡಿದರು. ಕೋಟಿ ಚೆನ್ನಯ ಕ್ರೀಡೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಕ್ರೀಡಾಕೂಟದ…

Read More

ಬಂಟ್ವಾಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನವಪೀಳಿಗೆಯು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಅವರಿಗೆ ಕೌಶಲ್ಯಭರಿತ ಮತ್ತು ಮೌಲ್ಯಯುತವಾದ ಶಿಕ್ಷಣ ನೀಡುವ ಅಗತ್ಯವಿದೆ‌ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.ಅವರು ಗೋಳ್ತಮಜಲು ಜೆಮ್ ಪಬ್ಲಿಕ್ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು . ಬಡತನ,‌ ನಿರುದ್ಯೋಗ, ಅಸಮಾನತೆ ಇವೇ ಮೊದಲಾದ ಪಿಡುಗುಗಳಿಗೆ ಗುಣಮಟ್ಟದ ಶಿಕ್ಷಣವು ಒಂದು ಅತ್ಯುತ್ತಮ ಪರಿಹಾರ ಕ್ರಮವಾಗಿದ್ದು ಅಂತಹ ಗುಣಮಟ್ಟದ ಶಿಕ್ಷಣವನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನೀಡುತ್ತಾ ಬಂದಿರುವ ಜೆಮ್ ಶಾಲೆಯ ಯಶಸ್ಸಿನ ಹಾದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳ್ಳಿಹಬ್ಬದ ಪ್ರಯುಕ್ತ ಹೊರತರಲಾದ ರಜತರತ್ನ ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಬಿಡುಗಡೆಗೊಳಿಸಿ , ಜೆಮ್ ಶಿಕ್ಷಣ ಸಂಸ್ಥೆಯ ಸ್ಥಾಪಕ ದಿವಂಗತ ಗೋಳ್ತಮಜಲು ಅಬ್ದುಲ್ ಖಾದರ್ ಹಾಜಿಯವರ ಶಿಕ್ಷಣ ಪ್ರೇಮ ಮತ್ತು ಅವರ ಸಾಮಾಜಿಕ ಕಳಕಳಿಯನ್ನು ಸ್ಮರಿಸಿದರು. ಮೀಫ್ ಸಂಸ್ಥೆಯ ದಕ್ಕಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ…

Read More

ಬಂಟ್ವಾಳ: ಜೆಸಿಐ ಬಂಟ್ವಾಳದ 2025ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ ಅಧ್ಯಕ್ಷತೆಯಲ್ಲಿ, ನಿಟಕಪೂರ್ವಾಧ್ಯಕ್ಷ ರಾಜೇಂದ್ರ ಕೆ. ಉಪಸ್ಥಿತಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ನೂತನ ಸಾಲಿನ ನಿಕಟಪೂರ್ವ ಅಧ್ಯಕ್ಷೆಯಾಗಿ ರಶ್ಮಿ ಶೆಟ್ಟಿ, ಕಾರ್ಯದರ್ಶಿಯಾಗಿ ಕಿಶೋರ್ ಆಚಾರ್ಯ, ಕೋಶಾಧಿಕಾರಿಯಾಗಿ ಜೀವಿತಾ ಯತೀಶ್ ಕರ್ಕೆರಾ, ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಶ್ರೀನಿವಾಸ ಅರ್ಬಿಗುಡ್ಡೆ, ಉಮೇಶ್ ಪೂಜಾರಿ, ಮನೋಜ್ ಕನಪಾಡಿ, ಕಿರಣ್, ವಚನ್ ಶೆಟ್ಟಿ, ವಿಮಲ ಶ್ರೀನಿವಾಸ್, ಲೇಡಿ ಜೇಸಿ ಸಂಯೋಜಕಿಯಾಗಿ ಬಬಿತಾ ಗಣೇಶ್, ಜೆಜೆಸಿ ಸಂಯೋಜಕರಾಗಿ ಸಂತೋಷ್ ಜೈನ್, ನಿರ್ದೇಶಕರಾಗಿ ವೆಂಕಟೇಶ್, ಅಕ್ಷಯ್, ನಾಗೇಶ್ ಸಜೀಪ, ರವೀಣಾ ಬಂಗೇರ, ಆಶಾಮಣಿ ರೈ, ಶಿವರಾಮ ಮರ್ತಾಜೆ, ನಾರಾಯಣ ಪೆರ್ನೆ, ದೀಪ್ತಿ ರೈ ಆಯ್ಕೆಗೊಂಡರು.

Read More

ಬಂಟ್ವಾಳ: ಕ್ಷಯ ರೋಗಕ್ಕೆ ಭಯಪಡುವ ಅಗತ್ಯವಿಲ್ಲ,‌ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸುವುದರ ಜೊತೆಗೆ ಪೌಷ್ಢಿಕ ಆಹಾರ ಸೇವನೆ ಹಾಗೂ‌ ಜೀವನದಲ್ಲಿ ಶಿಸ್ತು ಕಾಪಾಡಿಕೊಳ್ಳುವುದರಿಂದ ಬೇಗ ರೋಗ ಮುಕ್ತರಾಗಲು ಸಾಧ್ಯವಿದೆ ಎಂದು ಸಂಚಯಗಿರಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಹೇಳಿದರುಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಶ್ರಯದಲ್ಲಿ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಕ್ಷಯ ರೋಗಿಗಳಿಗೆ ಆಹಾರ ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರೋಗ ಬಂದ ಬಳಿಕ ಮತ್ತೊಬ್ಬರಿಗೆ ಹರಡದಂತೆ ಎಚ್ಚರ‌ವಹಿಸುವ ಜವಬ್ದಾರಿ ರೋಗಿಗಳಲ್ಲಿ ಇದ್ದು ಮಕ್ಕಳು, ಹಿರಿಯರ ಜೊತೆ ಹಾಗೂ ಸಾರ್ವಜನಿಕ ಕಾರ್ಯಕ್ತಮದಲ್ಲಿ ಭಾಗವಹಿಸುವ ಸಂದರ್ಭ ಜಾಗ್ರತೆ ವಹಿಸುವಂತೆ ತಿಳಿಸಿದರು. ದ..ಕ. ಜಿಲ್ಲಾ ಕೃಷಿ ಅಭಿವೃದ್ಧಿ ರವೀಂದ್ರ ಕಂಬಳಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ಧಾರ್ಮಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಸೇವೆಯನ್ನು ನಿರಂತರವಾಗಿ ನೀಡುತ್ತಾ ಬರುತ್ತಿದ್ದು, ಕೃಷ್ಣ ಕುಮಾರ್ ಪೂಂಜ ಅವರ ಒಳ್ಳೆಯ ಕೆಲಸದೊಂದಿಗೆ ನಾವೂ ಕೈ ಜೋಡಿಸೋಣ ಎಂದರು.ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ…

Read More

ಬಂಟ್ವಾಳ: ವಾಮದಪದವು ಹಾಗೂ ಚೆನ್ನೈತ್ತೋಡಿಯಲ್ಲಿರುವ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಹಾಸ್ಟೆಲ್ ಡೇ ಶನಿವಾರ ನಡೆಯಿತು.ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಬಿಂದಿಯಾ ನಾಯಕ್ ಉದ್ಘಾಟಿಸಿದರು. ಚೆನ್ನೈತ್ತೋಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವನಿತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆಸಿಐ ವಿಟ್ಲದ ಅಧ್ಯಕ್ಷ ಸಂತೋಷ್ ಕುಮಾರ್, ವಾಮದಪದವು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪ್ರಮುಖರಾದ ಪ್ರಕಾಶ್ ಆಳ್ವ, ನವೀನ್ ಶೆಟ್ಟಿ, ಶಶಿಕಲಾ ಶೆಟ್ಟಿ, ಪುಷ್ಪಲತಾ ಉಪಸ್ಥಿತರಿದ್ದರು.ನಿಲಯಪಾಲಕಿ ಭವಾನಿ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಯಕ್ಷಿತಾ ವಂದಿಸಿ ತನುಶ್ರೀ ಕಾರ್ಯಕ್ರಮ ನಿರೂಪಿಸಿದರು.

Read More

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ ಕೌಡೇಲು ಪ್ರದೇಶದಲ್ಲಿ ಕುಡಿಯುವ ನೀರಿನ ಮುಖ್ಯ ಕೊಳವೆಯು ಒಡೆದು ನೀರಿನ ಸೋರಿಕೆಯಾಗುತ್ತಿರುವುದರಿಂದ ದುರಸ್ತಿ ಕಾರ್ಯ ಕೈಗೊಳ್ಳಲಾvದೆ. ಆದ್ದರಿಂದ ರೆಂಗೇಲು ಶಾಂತಿಗುಡ್ಡೆ ವ್ಯಾಪ್ತಿಗೆ ಎರಡು ದಿನಗಳಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗಲಿದೆ ಎಂದು ಬಂಟ್ವಾಳ ಪ್ಮರಸಭೆಯ ಪ್ರಕಟಣೆ ತಿಳಿಸಿದೆ. —

Read More