Author: admin

ಬಂಟ್ವಾಳ: ಕಾರ್ಮಿಕರ ಕೊರತೆ, ಅಕಾಲಿಕ ಮಳೆ, ಪ್ರಾಣಿ, ಪಕ್ಷಿಗಳ ಕಾಟ, ಸರಕಾರದ ಪ್ರೋತ್ಸಾಹ ಹಾಗೂ ಬೆಂಬಲ ಬೆಲೆಯ ಕೊರತೆಯಿಂದ ತುಳುನಾಡಿನಲ್ಲಿ ಹೆಕ್ಟೇರ್‌ಗಟ್ಟಲೆ ಭತ್ತ ಬೇಸಾಯದ ಗದ್ದೆಗಳು ಹಡಿಲು ಬೀಳುತ್ತಿವೆ. ಇನ್ನೂ ಹಲವು ಗದ್ದೆಗಳು ಅಡಿಕೆ ತೋಟಗಳಾಗಿ ಬದಲಾಗಿವೆ. ಇಂತಹ ಕಾಲಘಟ್ಟದಲ್ಲಿ ಲಾಭದ ಉದ್ದೇಶವಿಲ್ಲದೆ, ತುಳುನಾಡಿನ ಸಾಂಪ್ರದಾಯಿಕ ಭತ್ತದ ಬೇಸಾಯವನ್ನು ಉಳಿಸಿ ಬೆಳೆಸಬೇಕೆನ್ನುವ ಸದುದ್ದೇಶದಿಂದ ಮಹಿಳೆಯೊಬ್ಬರು ಕಳೆದ ಹಲವು ವರ್ಷಗಳಿಂದ ಭತ್ತದ ಬೇಸಾಯ ಮಾಡಿ ಗಮನ ಸೆಳೆಯುತ್ತಿದ್ದಾರೆ. ಮಂಗಳೂರು ತಾಲೂಕು ವ್ಯಾಪ್ತಿಯ ಕುಪ್ಪೆಪದವು ಬಳಿಯ ನೋಣಾಲುವಿನ ಪ್ರತಿಭಾ ಹೆಗ್ಡೆ ಕಳೆದ ಹಲವು ವರ್ಷಗಳಿಂದ ತಮ್ಮ ಗದ್ದೆಯ ಜೊತೆಗೆ ಇತರ ಗದ್ದೆಗಳಲ್ಲೂ ಬೇಸಾಯ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಕುಳವೂರು ಗುತ್ತಿನ ಸದಾನಂದ ಶೆಟ್ಟಿ ಎಂಬವರಿಗೆ ಸೇರಿದ ಮೂರುವರೆ ಎಕರೆ ವಿಸ್ತೀರ್ಣದ ವಿಶಾಲವಾದ ಕಂಬಳ ಗದ್ದೆಯಲ್ಲಿ ಭತ್ತದ ಸಾಗುವಳಿ ಮಾಡಿದ್ದಾರೆ. ಬಿಳಿ ಜಯ ತಳಿಯ ನೇಜಿಯನ್ನು ನಾಟಿ ಮಾಡಲಾಗಿದ್ದು ಇನ್ನೂ ಎರಡೂವರೆ ಎಕರೆ ಗದ್ದೆಯಲ್ಲಿ ಎಣೆಲು ಸಾಗುವಳಿ ಮಾಡುವ ಸಿದ್ಧತೆಯಲ್ಲಿದ್ದಾರೆ.ರಾಯಚೂರಿನ ಕಾರ್ಮಿಕರು:ಅವಿಭಜಿತ ದಕ್ಷಿಣ ಕನ್ನಡ…

Read More

ಕುಪ್ಪೆಪದವು: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ರಾಜನ್ ದೈವ ಶ್ರೀ ಕೊಡಮಣಿತ್ತಾಯ ಹಾಗೂ ಮಹಿಸಂತಾಯ ಮತ್ತು ಪರಿವಾರ ದೈವಗಳಿಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ಕುಪ್ಪೆಪದವಿನ ಪಡಿಲ್‌ಪದವು ಮೂಡಾಯಿಗಡಿಯಲ್ಲಿ ಪುರಾತನ ವೈಭವದಿಂದ ನಡೆದುಕೊಂಡು ಬರುತ್ತಿದ್ದ ದೊಂಪದ ಬಲಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.ನೇಮೋತ್ಸವಕ್ಕಿಂತ ಪೂರ್ವಭಾವಿಯಾಗಿ ನೇಮೋತ್ಸವ ನಡೆಯುವ ಸ್ಥಳಕ್ಕೆ ದೈವದ ಭಂಡಾರ ಬರುವುದು ಅತ್ಯಂತ ವಿಶೇಷವಾಗಿತ್ತು. ಕಿಲೆಂಜಾರು ಅರೆಮನೆಯಿಂದ ಶ್ರೀ ಕೊಡಮಣಿತ್ತಾಯ, ಮಹಿಸಂತಾಯ ಸಹಿತ ಪರಿವಾರ ದೈವಗಳ ಭಂಡಾರವೂ ಕೊಂಬು, ವಾದ್ಯದ ಹಿಮ್ಮೆಳದೊಂದಿಗೆ ಪಲ್ಲೆಕಿಯಲ್ಲಿ ಹೊರಟು, ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಬರುವ ದೃಶ್ಯ ಅಪೂರ್ವವಾದುದು. ರಸ್ತೆಯನ್ನು ನೀರಿನಿಂದ ಶುಚಿಗೊಳಿಸಿ, ಅಲ್ಲಲ್ಲಿ ಧರಿಗಳನ್ನು ನಿರ್ಮಿಸಿ ಹಣತೆಯ ದೀಪಗಳನ್ನು ಹಚ್ಚಿ, ಗುತ್ತು, ಬಾಳಿಕೆಯವರು, ಗ್ರಾಮಸ್ಥರು ಗ್ರಾಮ ದೈವದ ಭಂಡಾರವನ್ನು ಭಕ್ತಿ ಶ್ರದ್ದೆಯಿಂದ ಸ್ವಾಗತಿಸುವ ಸಂಪ್ರದಾಯ ವಿಶೇಷವಾದುದು. ಕುಪ್ಪೆಪದವು ಮುಖ್ಯ ರಸ್ತೆಗೆ ಭಂಡಾರ ಬರುವ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಾರೆ. ಅಲ್ಲಿಂದ ನೇಮೋತ್ಸವ ನಡೆಯುವ ಸ್ಥಳಕ್ಕೆ ತೆರಳಿ ಭಂಡಾರ ಏರಿ ದೈವದ ದೊಂಪದ ಬಲಿ ನೇಮೋತ್ಸವ…

Read More

ಬಂಟ್ವಾಳ: ರೋಟರಿ ಮೀನ್ಸ್ ಬ್ಯುಸಿನೆಸ್ ಫೆಲೋಶಿಪ್ ಮಂಗಳೂರು ಕ್ಲಬ್ ನ 2025 ಸಾಲಿನ ನೂತನ ಅಧ್ಯಕ್ಷ ಜಯರಾಜ್ ಎಸ್ ಬಂಗೇರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.4 ರಂದು ಬಿ.ಸಿ.ರೋಡಿನ ರೋಟರಿ ಗೋಲ್ಡನ್ ಜುಬಿಲಿ ಹಾಲ್ ನಲ್ಲಿ‌ನಡೆಯಲಿದೆ.ಬುಧವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ನೀಡಿದ ಅಧ್ಯಕ್ಷ ಜಯರಾಜ್ ಬಂಗೇರ ಅವರು ಮಂಗಳೂರು ಕೆನರಾ ವಾಣಿಜ್ಯ ಮತ್ತು‌ಕೈಗಾರಿಕೆಗಳ ಸಂಸ್ಥೆಯ ಅಧ್ಯಕ್ಷ ಆನಂದ ಜಿ.ಪೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು,ರೋಟರಿ‌ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರು ಪದಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.2013 ರಲ್ಲಿ ಆರಂಭವಾದ ಫೆಲೋಶಿಫ್ ಗುಂಪು ಇದೀಗ ಎಲ್ಲಾ ಖಂಡಗಳಿಗೆ ವಿಸ್ತರಿಸಿದೆ.ಪ್ರಸ್ತುತ 300 ಕ್ಕು ಹೆಚ್ಚು ಕ್ಲಬ್ ಗಳಿವೆ.ಭಾರತದಲ್ಲೇ 100 ಕ್ಲಬ್ ಗಳನ್ನು ಹೊಂದಿದೆ ಎಂದ ಅವರು 2021 ರಂದು ರೋಟರಿಯನ್ ಕಿರಣ್ ಕುಮಾರ್ ಅವರು ಮಂಗಳೂರು ಕ್ಲಬ್ ನ್ನು ಆರಂಬಿಸಿದ್ದರು ಎಂದರು.ಕ್ಲಬ್ ನ ನೂತನ ಕಾರ್ಯದರ್ಶಿಯಾಗಿ ನೆಲ್ಸನ್ ಕ್ಯಾಸ್ಟಲಿನೋ,ಖಜಾಂಚಿಯಾಗಿ…

Read More

ಎಡಪದವು: ಉಡುಪಿಯ ನಂದಿಕೂರಿನಿಂದ ಕಾಸರಗೋಡಿಗೆ 400 ಕೆ.ವಿ ವಿದ್ಯುತ್ ತಂತಿ ಅಳವಡಿಸಲು ಟವರ್ ನಿರ್ಮಾಣಕ್ಕೆ ಎಸ್‌ಒಪಿ ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಜಮೀನು ಮಾಲಿಕರ ಒಪ್ಪಿಗೆಯನ್ನು ಪಡೆಯದೆ, ಗುತ್ತಿಗೆ ಸಂಸ್ಥೆ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಿ, ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು, ಟವರ್ ನಿರ್ಮಿಸಲು ಹೊಂಡಗಳನ್ನು ತೋಡಿದ ಘಟನೆ ಮಂಗಳೂರು ತಾಲೂಕು ವ್ಯಾಪ್ತಿಯ ಎಡಪದವಿನ ಕೋರ್ಡಲ್ ಎಂಬಲ್ಲಿ ನಡೆದಿದೆ. ಟವರ್ ನಿರ್ಮಿಸುವ ಬಗ್ಗೆ ಯಾವುದೇ ನೋಟೀಸ್ ನೀಡದೆ, ತಮ್ಮ ಅನುಮತಿಯನ್ನು ಪಡೆಯದೇ ಖಾಸಗಿ ಜಮೀನಿನಲ್ಲಿ ಹೊಂಡ ತೋಡಿ, ಖಾಸಗಿ ಜಮೀನಿಗೆ ಸೇರಿದ ಖದೀಂ ಕುಮ್ಕಿ ಜಮೀನಿನಲ್ಲಿ ರಸ್ತೆ ನಿರ್ಮಿಸಿರುವುದರಿಂದ ಜಮೀನಿನ ಮಾಲಕರು ಹೊಂಡಗಳನ್ನು ಮುಚ್ಚಿ ಕಂಪೆನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಡಪದವಿನ ಕೋರ್ಡೆಲ್ ನಿವಾಸಿಗಳಾದ ಶಿವಪ್ರಸಾದ್ ಹಾಗೂ ಜಯಚಂದ್ರ ಸಂತ್ರಸ್ತ ರೈತರು. ಶಿವಪ್ರಸಾದ್ ಅವರ ಖಾಸಗಿ ಜಮೀನಿನಲ್ಲಿ ಅವರ ಅನುಮತಿಯನ್ನು ಪಡೆಯದೇ ಮರಗಳನ್ನು ಕಡಿದು, ಟವರ್ ನಿರ್ಮಿಸಲು ಹೊಂಡಗಳನ್ನು ತೋಡಿದ್ದಾರೆ. ಜಯಚಂದ್ರ ಅವರ ಖದೀಂ ಕುಮ್ಕಿ ಜಮೀನಿನಲ್ಲಿ ಯಾವುದೇ ಅನುಮತಿಯನ್ನು ಪಡೆಯದೆ…

Read More

ಬಂಟ್ವಾಳ: ಪುತ್ತೂರು ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರದ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ನೃತ್ಯ ಧಾರ ಸಮಾರಂಭದಲ್ಲಿ ಯಕ್ಷಗಾನದ ಹಾಸ್ಯ ಕಲಾವಿದ ರಸಿಕರತ್ನ ದಿ| ನಯನಕುಮಾರ್ ಸ್ಮರಣಾರ್ಥ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಮರಣೋತ್ತರ ಕಲಾನಯನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮಂಗಳೂರಿನ ಧ್ವನಿ ಮತ್ತು ಬೆಳಕು ಸಂಯೋಜಕ ಮೋಹನ್ ದಂಪತಿಯನ್ನು ಸಮ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಮಾತನಾಡಿ, ನೃತ್ಯ, ಸಂಗೀತ, ಯಕ್ಷಗಾನ ಹಾಗೂ ಭಜನೆಯು ಭಾರತೀಯ ಸಂಸ್ಕೃತಿಯ ಪ್ರಮುಖ ಕಲೆಗಳಾಗಿದ್ದು, ಇದನ್ನು ಮಕ್ಕಳಿಗೆ ಕಲಿಸಿದಾಗ ಅವರು ಸಂಸ್ಕಾರಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಕ್ಕಳ ಕಲಿಕೆಯನ್ನು ಪೋಷಕರು ಯಾವತ್ತೂ ಕೂಡ ಅರ್ಧದಲ್ಲಿ ನಿಲ್ಲಿಸದೆ ಉತ್ತಮ ಕಲಾವಿದರಾಗಿ ರೂಪಿಸಿ ರಂಗಪ್ರವೇಶ ಮಾಡಿಸಬೇಕು. ಜತೆಗೆ ಮಕ್ಕಳನ್ನು ನಿರಂತರವಾಗಿ ದೇವಸ್ಥಾನಕ್ಕೆ ಹೋಗುವಂತೆ ಪ್ರೇರಣೆ ನೀಡಬೇಕು ಎಂದರು. ಮುಖ್ಯಅತಿಥಿಗಳಾದ ಪತ್ರಿಕೋದ್ಯಮಿ ವಾಲ್ಟರ್ ನಂದಳಿಕೆ ಹಾಗೂ ಬಂಟ್ವಾಳದ ಯುವ ಉದ್ಯಮಿ ಅವಿನಾಶ್ ಕಾಮತ್…

Read More

ಬಂಟ್ವಾಳ: ಮಧುರ ಮನಸ್ಸುಗಳ ಮಿಲನವೇ ಸಹಮಿಲನ ಎಂದು ಕೃಷಿ ವಿಜ್ಞಾನಿ ಹರೀಶ್ ಶೆಣೈ ಹೇಳಿದರು.ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ಆಶ್ರಯದಲ್ಲಿ ನಡೆದ 29ನೇ ವರ್ಷದ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಾಗರಿಕ ಕ್ರಿಯಾ ಸಮಿತಿಯ ಮೂಲಕ ಸಂಚಯಗಿರಿ ಅಭಿವೃದ್ದಿ ಕಾಣುತ್ತಿದೆ, ಇಂತಹ ಸಂಘಟನೆಗಳು ಇದ್ದಾಗ ಸಮಾಜಕ್ಕೆ ಒಳಿತಾಗುತ್ತದೆ ಎಂದರುಪ್ರಾಧ್ಯಪಕ ಡಾ. ದಾಮೋದರ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕನಸು, ಗುರಿ,‌ಸತತ ಪ್ರಯತ್ನ ಇದ್ದಾಗ ಸಾಧನೆ ಮಾಡಲು ಸಾಧ್ಯವಿದೆ. ಕನಸನ್ನು‌ ನನಸು ಮಾಡುವತ್ತ ನಮ್ಮ ಗುರಿಯಿರಬೇಕು. ಅವಕಾಶವನ್ನು ಸದುಪಯೋಗಪಡಿಸಿಕೊಂಡಾಗ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಪುರುಷೋತ್ತಮ ಹೆಬ್ಬಾರ್ ಮರಕಡ ಭಾಗವಹಿಸಿದ್ದರು. ನಾಗರಿಕ ಕ್ರಿಯಾ ಸಮಿತಿ ಗೌರವಾಧ್ಯಕ್ಷ ನರಸಿಂಹ ರಾಜ್ ಹೊಳ್ಳ, ಉಪಾಧ್ಯಕ್ಷೆ ಪ್ರಿಯಾಲತಾ, ಕ್ರೀಡಾ ಕಾರ್ಯದರ್ಶಿ ಪುರಂದರ ಶೆಟ್ಟಿ ಉಪಸ್ಥಿತರಿದ್ದರು. 75 ವರ್ಷ ದಾಟಿದ ಹಿರಿಯರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಧಕರನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ…

Read More

ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ವಾರ್ಷಿಕೋತ್ಸವ ಗುರುವಾರ ವೈಭವದಿಂದ ನಡೆಯಿತು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಅರ್ಚಕ ಸುದರ್ಶನ್ ಬಲ್ಲಾಳ್ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗದೇವರಿಗೆ ನಾಗತಂಬಿಲ, ಆಶ್ಲೇಷ ಬಲಿ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಶ್ರೀ ಓಂಕಾರೇಶ್ವರೀ ದೇವಿಗೆ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಮಂಗಳ, ರಾತ್ರಿ ಶ್ರೀ ಓಂಕಾರೇಶ್ವರೀ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಹಾಗೂ ಸತ್ಯಜಿತ್ ಸುರತ್ಕಲ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಹಾಗೂ ರಾಮ ಧರ್ಮ ಶಿಕ್ಷಣದ ಮನೋಹರ್ ಕಲ್ಲಡ್ಕ ಅವರನ್ನು ಗೌರವಿಸಲಾಯಿತು.ರಾತ್ರಿ ಸಸಿಹಿತ್ಲು ಮೇಳದಿಂದ ಮಹಾಶಕ್ತಿ ಮಂತ್ರದೇವತೆ ಯಕ್ಷಗಾನ ಬಯಲಾಟ ನಡೆಯಿತು.

Read More

ಬಂಟ್ವಾಳ: ಶ್ರೀರಾಮ ಮತ್ತು ಶ್ರೀ ಕೃಷ್ಣ ದೇಶದ ಮಣ್ಣಿನ ಚಿಂತನೆಯನ್ನು ಕೊಟ್ಟವರು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಶ್ರೀ ಕೃಷ್ಣ ಮಂದಿರ ಅಮ್ಟೂರು ಇದರ 25ನೇ ವರ್ಷದ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೂ ಸಮಾಜ ಅಸಂಘಟಿತ ವಾಗಿದ್ದಾಗ ಈ ದೇಶಕ್ಕೆ ಮುಸಲ್ಮಾನರ ಆಕ್ರಮಣವಾಗಿತ್ತು. ಇದು ಶ್ರೀರಾಮ, ಶ್ರೀ ಕೃಷ್ಣರ ಭೂಮಿ ಹೊರತು ಇದು ಬೇರ್‍ಯಾರಿಗೂ ಸೇರಿದ್ದಲ್ಲ. ಈ ಬಗ್ಗೆ ಹಿಂದೂ ಸಮಾಜ ಜಾಗೃತವಾಗಿರಬೇಕು ಎಂದು ತಿಳಿಸಿದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ ಆಶೀರ್ವಚನ ನೀಡಿ 25 ವರ್ಷಗಳ ಹಿಂದೆ ಶ್ರೀ ಕೃಷ್ಣ ಮಂದಿರ ಮಂದಿರ ನಿರ್ಮಿಸುವ ಮೂಲಕ ಇಲ್ಲಿ ಧರ್ಮ ಬಿತ್ತುವ ಕೆಲಸ ಆಗಿದೆ ಎಂದರು. ಭಗವದ್ಗೀತೆಯನ್ನು ಅಳವಡಿಸಿಕೊಂಡು ಬೇರೆ ದೇಶಗಳು ಸದೃಢವಾಗಿದೆ. ಆದರೆ ಭಾರತ ಅಳವಡಿಸಿಕೊಳ್ಳದೆ ಇರುವುದರಿಂದ ಸದೃಡವಾಗಿಲ್ಲ. ಸ್ಮಾರ್ಟ್ ಸಿಟಿ ಮಂಗಳೂರು ಡ್ರಗ್ ಸಿಟಿಯಾಗುತ್ತಿದೆ. ಹಿಂದೂ ಸಮಾಜ ಸದೃಢವಾಗಬೇಕಾದರೆ ಜಾತಿಯಿಂದ ಹೊರ ಬಂದು ಹಿಂದೂ ಎನ್ನುವ…

Read More

ಬಂಟ್ವಾಳ: ನಮ್ಮ ದೈನಂದಿನ ಆಹಾರ ಪದ್ದತಿ ಸರಿ ಇದ್ದಾಗ, ಆಯಾಯ ಋತುವಿಗೆ ಸರಿಯಾದ ಆಹಾರ ಸೇವನೆ ಮಾಡಿದಾಗ ಸಕಲ ರೋಗದಿಂದ ದೂರವಿರಬಹುದು ಎಂದು ಗೋವಿನತೋಟ ರಾಧಸುರಭಿ ಗೋ ಮಂದಿರದ ಅಧ್ಯಕ್ಷ ಭಕ್ತಿಭೂಷಣ್ ಪ್ರಭುಜಿ ಹೇಳಿದರು. ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇದರ ಅಮೃತ ಮಹೋತ್ಸವದ ಏಕಹ ಭಜನೆ, ರುದ್ರಯಾಗದ ಪ್ರಯುಕ್ತ ಭಾನುವಾರ ಮಂದಿರದ ಆವರಣದಲ್ಲಿ ನಡೆದ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮಂಗಳೂರು ವಿವಿ ಉಪನ್ಯಾಸಕಿ ವಿನುತ ಸಾಲೆತ್ತೂರು ಮಾತನಾಡಿ ಸಂಸ್ಕಾರ ಹಾಗೂ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮಲ್ಲಿರುವ ಸಂಸ್ಕಾರ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ., ಮಕ್ಕಳ ನಡವಳಿಕೆಯ ಬಗ್ಗೆ ಪೋಷಕರು ಸದಾ ಗಮನ ಹರಿಸಿಕೊಂಡು ಮಕ್ಕಳು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಅಮೃತ ಮಹೋತ್ಸವ ಸಮಿತಿ ಐತಪ್ಪ ಆಳ್ವ ಸುಜೀರುಗುತ್ತು, ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಭಜನಾ ಂಮದಿರ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಗೌರವ ಸಲಹೆಗಾರ ಕಮಲಾಕ್ಷ ಗಂಧಗಾಡು, ಹಿರಿಯರಾದ…

Read More

ಬಂಟ್ವಾಳ: ಪುದು ಗ್ರಾಮದ ಸುಜೀರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಶನಿವಾರ ನಡೆಯಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಯೊತಿಷಿ ಅನಿಲ್ ಪಂಡಿತ್ ಮಾತನಾಡಿದೇವರ ನಾಮ ಸ್ಮರಣೆಯಿಂದ ಪಾಪಗಳು ಪರಿಹಾರವಾಗುತ್ತದೆ. ನಿತ್ಯ ದೇವತಾ ಕಾರ್ಯಕ್ರಮಗಳ ಮೂಲಕ ನಮ್ಮನ್ನು ನಾವು ತೊಡಗಿಸಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಮುದರ ಸುಜೀರು ದೈಯ್ಯಡ್ಕ, ಯತೀನ್, ದಾಮೋದರ ಸಪಲ್ಯತಾರಾನಾಥ ಕುಲಾಲ್ ಅವರನ್ನು ಗೌರವಿಸಲಾಯಿತು.ಉದ್ಯಮಿ ಜಗದೀಶ್ ರೈ, ಗೌರವಾಧ್ಯಕ್ಷ ಆಶಿತ್ ಶೆಟ್ಟಿ, ಪ್ರಸಾದ್ ಸುಜೀರು, ಜಗದೀಶ್ ಕುಮ್ಡೇಲು , ಅಧ್ಯಕ್ಷ ರಾಮಕೃಷ್ಣ ಶೆಟ್ಟಿ ಸುಜೀರು ಹೊಸಮನೆ, ವಿಶು ಕುಮಾರ್, ಸುಂದರ ಗುರಿಕಾರ ಭಾಗವಹಿಸಿದ್ದರು.ಕೋಶಾಧಿಕಾರಿ ನಾಗೇಶ್ ಅಮೀನ್ ಸ್ವಾಗತಿಸಿದರು, ದತ್ತನಗರ ವೀರ ಹನುಮಾನ್ ಮಂದಿರದ ಅಧ್ಯಕ್ಷ ಸುರೇಂದ್ರ ಕಂಬಳಿ ಸುಜೀರು ಬೀಡು ಪ್ರಾಸ್ತವಿಕವಾಗಿ ಮಾತನಾಡಿದರು. ಗಣೇಶ್ ದತ್ತನಗರ ಕಾರ್ಯಕ್ರಮ ನಿರೂಪಿಸಿದರು.ವೇದಮೂರ್ತಿ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಸಾಮುಹಿಕ ಶನೈಶ್ಚರ ಪೂಜೆ ನಡೆಯಿತು. ಬಳಿಕ ಮಹಾಪೂಜೆ ನಡೆದು ಅನ್ನಸಂರ್ಪಣೆ ನಡೆಯಿತು.

Read More