
ಬಂಟ್ವಾಳ: ಬೈದ್ಯ ಶ್ರೀ ಟ್ರೋಫಿ 2024 ಕ್ರಿಕೆಟ್ ಪಂದ್ಯಾಟಕ್ಕೆ ಟೀಮ್ ನಮ್ಮ ಬಿರುವೆರ್ ರಾಯಿ ಇದರ ಜೆರ್ಸಿ ಬಿಡುಗಡೆ ಕಾರ್ಯಕ್ರಮ ನಾಗೇಶ್ ಕುಲಾಲ್ ಮಾಲಕತ್ವದ ಸೌತಡ್ಕ ಪರ್ನಿಚರ್ಸ್ ಬಂಟ್ವಾಳದಲ್ಲಿ ನಡೆಯಿತು.

ಮುಖ್ಯ ಅತಿಥಿ ಗಳಾಗಿ ಸೌತಡ್ಕ ಫರ್ನಿಚರ್ಸ್ ಮಾಲಕ ನಾಗೇಶ್ ಭಾಗವಹಿಸಿ ಶುಭ ಹಾರೈಸಿದರು. ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ರಾಯಿ ಕೊಯಿಲ ಅರಳ ಇದರ ಅಧ್ಯಕ್ಷ ಶೇಖರ್ ಅಂಚನ್, ಜೈನ್ ಫೈಬರ್ ಡೋರ್ ಮಾಲಕ ರಾಜೇಶ್ ಜೈನ್ ಪಡ್ರಯಿ, ಕುಡ್ಲ ಬಿಲ್ದರ್ಸ್ ಮಾಲಕ ಸುರೇಶ್ ಅಲ್ಲಿಪಾದೆ, ಯುವ ವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಬೆಟ್ಟು, ನಮ್ಮ ಬಿರುವೆರ್ ಟೀಮ್ ನ ಮಾಲಕ ಸಮಿತ್ ರಾಯಿ, ಧನ್ವಿ ಎಲೆಕ್ಟ್ರಿಕಲ್ ಮಾಲಕ ನಿತೇಶ್ ರಾಯಿ ಭಾಗವಹಿಸಿದ್ದರು. ತಂಡದ ಆಟಗಾರರು ಉಪಸ್ಥಿತರಿದ್ದರು.
