
ಬಂಟ್ವಾಳ: ಶ್ರೀ ವಿಜಯಲಕ್ಷ್ಮೀ ಯುವಕ ಸಂಘ ನರಿಕೊಂಬು ಇದರ ೩೦ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ನಾರಿಕೊಂಭೇಶ್ವರ ದೇವಸ್ಥಾನದಲ್ಲಿ ಸಂಘದ ಹಿರಿಯ ಸದಸ್ಯ ಪ್ರೇಮನಾಥ ಶೆಟ್ಟಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಜಗದೀಶ್, ಅಧ್ಯಕ್ಷ ಹರೀಶ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗಾಣಿಗ, ಕೋಶಾಧಿಕಾರಿ ಕೃಷ್ಣಪ್ಪ ಗಾಣಿಗ, ಜತೆ ಕಾರ್ಯದರ್ಶಿ ಸುರೇಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಗಿರೀಶ್ ಪೂಜಾರಿ ಹಾಗೂ ಸಂಘದ ಹಿರಿಯ ಸದಸ್ಯರಾದ ಶ್ರೀಶ ರಾಯಸ, , ಬಾಲಕೃಷ್ಣ, ಪ್ರಸಾದ್ ಬೋರುಗುಡ್ಡೆ, ಚಂದ್ರ ಕುಲಾಲ್, ಕೂಸಪ್ಪ ಅಂತರ, ಕೊರಗಪ್ಪ, ವಸಂತ ಅಂತರ, ರಾಜೇಶ್ ಕೆದ್ದೇಲು ಉಪಸ್ಥಿತರಿದ್ದರು.
