
ಬಂಟ್ವಾಳ : ತಾಲೂಕಿನ ತುಂಬೆಯ ರಂಗ ಕಲಾವಿದ ಕಲಾ ಪೋಷಕ ಸಾಮಾಜಿಕ ಧಾರ್ಮಿಕ ಮುಂದಾಳು ಸದಾಶಿವ ಡಿ ತುಂಬೆ ಈ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇಂಚರ ಕಲಾವಿದರು ತುಂಬೆ ಎಂಬ ನಾಟಕ ತಂಡವನ್ನು ಕಟ್ಟಿಆ ಮೂಲಕ ನಾಟಕವನ್ನು ಪ್ರದರ್ಶಿಸಿ, ಕಲಾವಿದರನ್ನು ಬೆಳೆಸುವ ಹಾಗೂ ಕಲಾ ತಂಡಗಳನ್ನು ಪೋಷಿಸುವ ಕಾರ್ಯ ಮಾಡುತಿದ್ದರು, ಅಲ್ಲದೆ ಅನೇಕ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು, ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿತ್ತು. ಕಲಾ ಕ್ಷೇತ್ರದ ಇವರ ಸೇವೆ ಗುರುತಿಸಿ ಈ ಸಲದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
