ಬಂಟ್ವಾಳ: ತುಳುನಾಡಿನ ಶೈಲಿಯ ತಿಂಡಿ ತಿನಿಸುಗಳಿಗೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ಬಂಟ್ವಾಳ ತಾಲೂಕಿನ ಕೈಕಂಬದ ಪೊಳಲಿ ದ್ವಾರದ ಬಳಿಯಿರುವ ಸಾಯಿಲೀಲಾ ಶುದ್ದ ಸಸ್ಯಹಾರಿ ಹೋಟೇಲ್ ನಲ್ಲಿ ಶ್ರೀ ಲಕ್ಷ್ಮೀ ಪೂಜೆ ವಿಜ್ರಂಭಣೆಯಿಂದ ನಡೆಯಿತು.
ಸಂಜೆ ಅರ್ಚಕ ವೃಂದದ ಪೌರೋಹಿತ್ಯದಲ್ಲಿ ಶ್ರೀ ಲಕ್ಷ್ಮೀ ಪೂಜೆ ನೆರೆವೇರಿದ್ದು ಹೊಟೇಲ್ ಮಾಲಕ ಸದಾನಂದ ಬಂಗೇರ, ಅವರ ಕುಟುಂಬ ವರ್ಗ, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಬಳಿಕ ಖ್ಯಾತ ಗಾಯಕ ಕೆ.ಜೆ. ಏಸುದಾಸ್ ಅವರ ಶಿಷ್ಯ ವೆಂಕಟಕೃಷ್ಣ ಬಳಗದಿಂದ ನಡೆದ ಭಕ್ತಿಗಾನ ವೈಭವ ನೆರೆದ ಪ್ರೇಕ್ಷಕರ ಮನ ಸೂರೆಗೊಳಿಸಿತು.
ಸದಾನಂದ ಬಂಗೇರ ಅವರ ಮಾಲಕತ್ವದ ಹೊಟೇಲ್ ಸಾಯಿಲೀಲಾ ತುಳು ಚಿತ್ರನಟ ಭೋಜರಾಜ್ ವಾಮಂಜೂರು ಅವರಿಂದ ಉದ್ಘಾಟನೆಗೊಂಡು ಯಶಸ್ವಿ ಏಳು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ತುಳುನಾಡು ಶೈಲಿಯ ಮನೆ ತಿಂಡಿಗಳು ಇಲ್ಲಿನ ವಿಶೇಷತೆಯಾಗಿದ್ದು ಊರ ಪರವೂರ ಗ್ರಾಹಕರು ವಿಶೇಷ ತಿಂಡಿ, ತಿನಿಸು ಖಾದ್ಯಗಳನ್ನು ಸವಿಯಲು ಇಲ್ಲಿಗೆ ಆಗಮಿಸುತ್ತಾರೆ. ಪತ್ರೋಡೆ, ಬಸಳೆ ಪುಂಡಿ, ಎಣ್ಣೆ ರಹಿತ ಓಡುರೊಟ್ಟಿ, ರಾಗಿ ಮಣ್ಣಿ, ಬಾಳೆ ಎಲೆ ಗಟ್ಟಿ, ಗೋಳಿ ಎಲೆ ಗಟ್ಟಿ ಮತ್ತಿತರ ತಿಂಡಿಗಳು ಇಲ್ಲಿ ಲಭ್ಯವಿರುತ್ತದೆ. ಶುಚಿ ರುಚಿಯಾದ ಮಧ್ಯಾಹ್ನದ ಊಟ, ವಿವಿಧ ಬಗೆಯ ಚಟ್ನಿ, ನಾನಾ ತರದ ದೋಸೆ ಐಟಂಗಳು, ಹಣ್ಣಿನ ಜ್ಯೂಸ್, ಐಸ್ ಕ್ರೀಂಗಳನ್ನು ಕುಟುಂಬ ಸಮೇತರಾಗಿ ಸವಿಯುವ ಅವಕಾಶ ಇಲ್ಲಿದೆ. ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡುವ ಮೂಲಕ ಸಾಯಿಲೀಲಾ ಹೊಟೇಲ್ ಮನೆಮಾತಾಗಿದೆ. ಚಲನ ಚಿತ್ರ ನಟ, ನಟಿಯರು, ರಾಜಕಿಯ ಗಣ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಹೊಟೇಲ್ ಸಾಯಿಲೀಲಾಕ್ಕೆ ಭೇಟಿ ನೀಡಿ ಶುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಸವಿದು ಇಲ್ಲಿನ ಗ್ರಾಹಕ ಸ್ನೇಹಿ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.