ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಇದರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಸೆ. 3ರಂದು ಆದಿತ್ಯವಾರ ಮರಿಯಲದ ನೆಂಪು ಹಿರಿಯರ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು ಈ ಪ್ರಯುಕ್ತ ಪರಬೇರ್ ಪೊಸ ತೆಗ್ಲ್ ಎನ್ನುವ ಜಿಲ್ಲಾ ಮಟ್ಟದ ಪೋಟೊ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ವಜಾತಿ ಸಮಾಜ ಬಾಂಧವರು ವೃದ್ದರೊಂದಿಗೆ ತೆಗೆದ ಪೊಟೋಗಳನ್ನು ಆ. 27ರಂದು ಸಂಜೆ 4 ಗಂಟೆಯ ಒಳಗಾಗಿ ಕಳಹಿಸತಕ್ಕದ್ದು.
ಹಳ್ಳಿ ಸೊಗಡಿನ, ಮಳೆಗಾಲದ ನಮ್ಮ ಹಿರಿಯರ ಜೀವನ ಶೈಲಿಯ ಮಾದರಿ ಪೋಟೋಗಳಿರಬೇಕು. ಒಬ್ಬ ಸ್ಪರ್ಧಿಗೆ ಒಂದು ಪೊಟೋ ಮಾತ್ರ ಕಳುಹಿಸಲು ಅವಕಾಶವಿದ್ದು, 9964280079 ದೂರವಾಣಿಯ ವಾಟ್ಸಪ್ಗೆ ಕಳುಹಿಸಬೇಕು. ತೀರ್ಪುಗಾರರ ನಿರ್ಣಯವೇ ಅಂತೀಮ ತೀರ್ಮಾನವಾಗಿದ್ದು ವಿಜೇತರಿಗೆ ಸೆ. 3 ರಂದು ನಡೆಯುವ ಮರಿಯಾಲದ ನೆಂಪು ಹಿರಿಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ ( 9739390080) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.