ಬಂಟ್ವಾಳ :ತಾಲೂಕು ಕುಲಾಲ ಸುಧಾರಕ ಸಂಘ ಇದರ ಪ್ರಸ್ತುತ ಸಾಲಿನ ಅಧ್ಯಕ್ಷರಾಗಿ ಯುವ ನಾಯಕ ರಾಧಾಕೃಷ್ಣ ಬಂಟ್ವಾಳ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘದ ಸಭಾಭವನದಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು ಭಾನುವಾರ ನಡೆದ ಮೊದಲ ಸಭೆಯಲ್ಲಿ 2023-24 ನೇ ಸಾಲಿಗೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಉಪಾಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿಯಾಗಿ ಕೇಶವ ಮಾಸ್ಟರ್ ಮಾರ್ನಬೈಲ್ ಕೋಶಾಧಿಕಾರಿ ರಮೇಶ್ ಸಾಲಿಯಾನ್ ಗುರುಕೃಪಾ, ಜೊತೆಕಾರ್ಯದರ್ಶಿಯಾಗಿ ಮಾಧವ ಕುಲಾಲ್ ಹಾಗೂ ಜಲಜಾಕ್ಷಿ ಕುಲಾಲ್ ಸಂಘಟನಾ ಕಾರ್ಯದರ್ಶಿಯಾಗಿ ಮೀನಾಕ್ಷಿ ಪದ್ಮನಾಭ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಾಲತಿ ಮಚೇಂದ್ರನಾಥ್, ಸೇವಾದಳಪತಿ ರಾಜೇಶ್ ಕುಲಾಲ್ ಆಯ್ಕೆಯಾದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಧಕೃಷ್ಣ ಬಂಟ್ವಾಳ್ ಅವರು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದು ಬಂಟ್ವಾಳ ತಾಲೂಕು ಕುಲಾಲ ಸಂಘದ ಸಕ್ರಿಯ ಸದಸ್ಯರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕುಲಾಲ ಸೇವಾದಳದ ದಳಪತಿಯಾಗಿ ಸೇವಾದಳವನ್ನು ಮುನ್ನಡೆಸಿದವರು. ರಾರಾಸಂ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಬಂಟ್ವಾಳದ ಉಪಾಧ್ಯಕ್ಷರಾಗಿ, ಪೊಯಿಲೋಡಿ ಬಂಜನ್ ಕುಟುಂಬಸ್ಥರು ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿ, ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರಾಗಿ, ಜೇಸಿ ವಲಯ 15 ರ ವಲಯ ಉಪಾಧ್ಯಕ್ಷರಾಗಿ ಸಮಾಜ ಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ