ಬಂಟ್ವಾಳ: ಇಲ್ಲಿನ ಬೆಳ್ಳೂರು ನಿವಾಸಿ, ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ಮಾಜಿ ಅಧ್ಯಕ್ಷ ದಯಾನಂದ ಬೆಳ್ಳೂರು(62) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾದರು. ಬಿ.ಸಿ.ರೋಡಿನಿಂದ ಕಟೀಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ಶ್ರೀ ಶಾರದ ಬಸ್ಸಿನ ಮಾಲಕರಾಗಿದ್ದ ಅವರು ಮೂಲತಃ ಬೆಳ್ಳೂರಿನವರಾಗಿದ್ದರೂ ಇತ್ತೀಚಿನ ಕೆಲ ವರ್ಷಗಳಿಂದ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲುವಿನಲ್ಲಿ ವಾಸವಾಗಿದ್ದರು. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
Advertisement